12,692 ಮಂದಿ ಕಾಯಂ ನೇಮಕಾತಿ (Permanent appointment) ಪಟ್ಟಿ ಪ್ರಕಟ: ಅವಿನಾಶ್ ಮೆನನ್ ರಾಜೇಂದ್ರನ್(Avinash Menon Rajendran).
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವಂತಹ ಗುತ್ತಿಗೆ ಪೌರಕಾರ್ಮಿಕರ ಕೆಲಸವನ್ನು ಕಾಯಂಗೊಳಿಸುವುದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಕರಡು ಪಟ್ಟಿ ಸಿದ್ಧಪಡಿಸಿದೆ. ಹಾಗೂ ಆ ಕರಡು ಪಟ್ಟಿಯನ್ನು ಬುದುವಾರ ಪ್ರಕಟಿಸಲಾಗಿದೆ. ಹಾಗೂ ಅಕ್ಟೋಬರ್ 9ರಂದು ಕರಡು ಆಯ್ಕೆ ಪಟ್ಟಿಯನ್ನು ಪಾಲಿಕೆಯ https://bbmp.gov.in ವೆಬ್ಬೆಟ್ ಅಲ್ಲಿ ಪ್ರಕಟಿಸಲಾಗಿದೆ ಎಂದು ಪಾಲಿಕೆ ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿಯ ಹುದ್ದೆಗಳನ್ನು ಹೇಗೆ ಭರ್ತಿ ಮಾಡಿಕೊಳ್ಳಲಾಗುತ್ತದೆ :
ನೇರ ಪಾವತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ (Civil servants) ನೇಮಕಾತಿ ಪ್ರಕ್ರಿಯೆಯನ್ನು ಎರಡು ಹಂತದಲ್ಲಿ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ 3673, ಎರಡನೇ ಹಂತದಲ್ಲಿ 11,307 ಸೇರಿ 14,980 ಪೌರಕಾರ್ಮಿಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕಿದೆ.
ನೇಮಕಾತಿಗಾಗಿ (recruitment) ಅರ್ಜಿಗಳನ್ನು ಆಹ್ವಾನಿಸಲಾಗಿತ್ತು :
ಹೌದು ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಒಟ್ಟಾರಿಯಾಗಿ 15,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ವಿವಿಧ ಮಾನದಂಡಗಳ ಆಧಾರದ ಮೇಲೆ ಅಂದರೆ ದೀರ್ಘಾವಧಿ ಸೇವೆ, ರೋಸ್ಟರ್ ಪದ್ಧತಿ ಹೀಗೆ ಹಲವು ಮಾನದಂಡಗಳ ಆಧಾರದ ಮೇಲೆ ಪರಿಶೀಲನೆ ನಡೆಸಲಾಗಿದೆ.
ಎಷ್ಟು ಅರ್ಜಿಗಳನ್ನು ಪರಿಗಣಿಸಲಾಗಿದೆ :
ಹಲವು ಮಾನದಂಡಗಳ ಆಧಾರದ ಮೇಲೆ ಪರಿಶೀಲನೆ ನಡೆಸಿದ ಬಳಿಕ ಬಿಬಿಎಂಪಿ (BBMP)ಅಧಿಕಾರಿಗಳು 14,980 ಹುದ್ದೆಗಳಿಗೆ 12,692 ಪೌರಕಾರ್ಮಿಕರನ್ನು ಅಂತಿಮಗೊಳಿಸಲಾಗಿದೆ.
ಅಕ್ಟೋಬರ್ 9 ರಂದು ಕರಡು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ :
ಅಕ್ಟೋಬರ್ 9ರಂದು ಪಾಲಿಕೆಯ ವೆಬ್ಸೈಟ್ ನಲ್ಲಿ https://bbmp.gov.in ಕರಡು ಪಟ್ಟಿಯನ್ನು(Draft list) ಪ್ರಕಟಿಸಲಾಗಿದೆ. ಇದರ ಹೊರತಾಗಿಯೂ ಆಯಾ ವಲಯ ಜಂಟಿ ಆಯುಕ್ತರ ಕಚೇರಿ, ಘನ ತ್ಯಾಜ್ಯ ವಿಭಾಗದ ಸಹಾಯಕ ಕಾರ್ಯ ಪಾಲಕ ಅಭಿಯಂತರದ ಕಚೇರಿಯಲ್ಲಿಯೂ ಪ್ರಕಟಿಸಲಾಗುವುದು.
ತಾತ್ಕಾಲಿಕ ಆಯ್ಕೆ ಪಟ್ಟಿ (Provisional selection list) ಕುರಿತ ಆಕ್ಷೇಪಣೆಯನ್ನು ಹೇಗೆ ಸಲ್ಲಿಸಬೇಕು :
ತಾತ್ಕಾಲಿಕ ಆಯ್ಕೆ ಪಟ್ಟಿ ಪರಿಶೀಲಿಸಿದ ನಂತರ ಸಂಬಂಧಿಸಿದ ಜಂಟಿ ಆಯುಕ್ತರ ಕಚೇರಿ, ಘನತ್ಯಾಜ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗಳಿಗೆ ಭೇಟಿ ನೀಡಿ ಅಕ್ಟೋಬರ್ 21ರ ಸಂಜೆ 5.30 ರೊಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಗಮನಿಸಿ :
ಪೌರಕಾರ್ಮಿಕರ ಹುದ್ದೆಗೆ ಆಯ್ಕೆಯಾದವರು ಯಾವುದೇ ಆಸೆ ಆಮಿಷಗಳಿಗೆ ಮಧ್ಯವರ್ತಿಗಳ ಮಾತನ್ನು ಕೇಳಿ ವಂಚನೆಗೆ ಒಳಗಾಗಬಾರದು ಎಂದು ಹೇಳಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.