ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೋಂ ಗಾರ್ಡ್ ಹುದ್ದೆಗಳ ನೇಮಕಾತಿ ಶೀಘ್ರದಲ್ಲಿ..!

IMG 20240801 WA0003

ಕರ್ನಾಟಕದಲ್ಲಿ ಹೊಸ ಉದ್ಯೋಗಾವಕಾಶಗಳು: ಪೊಲೀಸ್ ಇಲಾಖೆ(Police Department) ಮತ್ತು ಇತರ ಇಲಾಖೆಗಳ 5,987 ಹುದ್ದೆಗಳ ನೇಮಕಾತಿ(Recruitment)

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಹಲವಾರು ಇಲಾಖೆಗಳಲ್ಲಿ 5,987 ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿ ಪೊಲೀಸ್ ಇಲಾಖೆಯಲ್ಲಿ 4115 ಹುದ್ದೆಗಳನ್ನು ಒಳಗೊಂಡಂತೆ ಗೃಹ ಇಲಾಖೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು (Fire and Emergency Services), ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ(Soldier Welfare and Rehabilitation Department)ಗಳ ಹುದ್ದೆಗಳನ್ನು ಒಳಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪೊಲೀಸ್ ಇಲಾಖೆಯಲ್ಲಿ 4,115 ಹುದ್ದೆಗಳ ಭರ್ತಿ:

ಹೊಸ ಅಧಿಸೂಚನೆಯ ಪ್ರಕಾರ, ಪೊಲೀಸ್ ಇಲಾಖೆ 4,115 ಕಾನ್ಟೇಬಲ್ (Constable)ಮತ್ತು ಪೊಲೀಸ್ ಸಬ್‌ಇನ್ಸ್‌ ಪೆಕ್ಟರ್ (Police sub-inspector) ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. 2022-23 ಮತ್ತು 2023-24 ನೇ ಸಾಲಿನ PSI ಹುದ್ದೆಗಳಿಗೆ ತಲಾ 300 ಹುದ್ದೆಗಳನ್ನು ಮೀಸಲಿಡಲಾಗಿದೆ. ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (KSRP) ಹುದ್ದೆಗಳ 1,500 ಸ್ಥಾನಗಳು ಭರ್ತಿಯಾಗುತ್ತಿವೆ.

ಗೃಹ ಇಲಾಖೆ 1,872 ಹುದ್ದೆಗಳ ನೇಮಕಾತಿ:

ಗೃಹ ಇಲಾಖೆ 1,872 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಹುದ್ದೆಗಳು ರಾಜ್ಯದ ಭದ್ರತೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೆ ಮಹತ್ವಪೂರ್ಣ ಪಾತ್ರ ವಹಿಸಲಿವೆ.

ವಿಶೇಷ ತನಿಖಾಧಿಕಾರಿ ಹುದ್ದೆಗಳು:

ರಾಜ್ಯದಲ್ಲಿ ವಿಶೇಷ ತನಿಖಾಧಿಕಾರಿ ಹುದ್ದೆಗಳ 15 ಸ್ಥಾನಗಳು ಲಭ್ಯವಿವೆ, ಈ ಹುದ್ದೆಗಳು ಅಪರಾಧ ಸಂಶೋಧನೆ ಮತ್ತು ವಿಶೇಷ ತನಿಖೆಗಳಲ್ಲಿ ನಿರ್ಣಾಯಕ ಪಾತ್ರವನ್ನು ನಿಭಾಯಿಸಲಿವೆ.

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ:

ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮತ್ತು ಇತರ ತುರ್ತು ಸೇವಾ ವಿಭಾಗಗಳ ಹುದ್ದೆಗಳ ನೇಮಕಾತಿಯು ಶೀಘ್ರದಲ್ಲೇ ಪ್ರಕ್ರಿಯೆಗೊಳಿಸಲ್ಪಡುತ್ತದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಈ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಗೆ ಶೀಘ್ರವೇ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಈ ಅಧಿಸೂಚನೆ ಹೊರಬೀಳುತ್ತಿದ್ದಂತೆ ಅರ್ಜಿ ಆರಂಭವಾಗಲಿದೆ. ಹುದ್ದೆಗಳ ವಿವರಗಳು, ಅರ್ಜಿ ನಮೂನೆ ಮತ್ತು ಶುಲ್ಕದ ವಿವರಗಳು ಮುಂದಿನ ಅಧಿಸೂಚನೆಗಳಲ್ಲಿ ಪ್ರಕಟವಾಗಲಿವೆ.

ಈ ನೇಮಕಾತಿಯು ರಾಜ್ಯದ ಯುವಕರಿಗೆ ಉನ್ನತ ಉದ್ಯೋಗಾವಕಾಶಗಳನ್ನು ಹೊಂದಿದೆ. ಎಲ್ಲಾ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!