ರಾಜ್ಯದ ರೈತರಿಗೆ ಸಂತೋಷದ ಸುದ್ದಿ. ಕರ್ನಾಟಕ ಸರ್ಕಾರವು, ಅತಿಯಾದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಅನಾಹುತಗಳ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರವನ್ನು ನೀಡಲು(Crop Damage Compensation Deposit) ಮುಂದಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಅಕ್ಟೋಬರ್ ತಿಂಗಳಿನಲ್ಲಿ ಬೆಳೆಯ ಹಾನಿ ಅಧಿಕವಾಗಿದ್ದರಿಂದ ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ(FRUITS ID) ಹೊಂದಿರುವ ರೈತರಿಗೆ ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸರ್ಕಾರವು ಆದೇಶವನ್ನು ನೀಡಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ :
ಪ್ರವಾಹ ಪರಿಸ್ಥಿತಿಯಿಂದಾಗಿ ಉಂಟಾಗಿರುವ ಹಾನಿಗೆ ಕೇಂದ್ರ ಸರ್ಕಾರವು 560 ಕೋಟಿ ರೂ. ಪರಿಹಾರವನ್ನು ಈಗಾಗಲೇ ಒದಗಿಸಿದೆ. ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಮೊದಲ ಮತ್ತು ಎರಡನೇ ಹಂತದಲ್ಲಿ ಇಲ್ಲಿಯವರೆಗೆ ಒಟ್ಟಾರೆಯಾಗಿ ಧಾರವಾಡ ಜಿಲ್ಲೆಯ ಏಳು ತಾಲ್ಲೂಕಿನ 69,573 ರೈತ ಫಲಾನುಭವಿಗಳಿಗೆ 48.45 ಕೋಟಿ ರೂ.ಗಳನ್ನು ಒಟ್ಟು ಕ್ಷೇತ್ರ 55,809.19 ಹೆಕ್ಟೇರ್ ಗೆ ಇನ್ಪುಟ್ ಸಬ್ಸಿಡಿ(subsidy)ಯನ್ನು ಜಮೆ ಮಾಡಲಾಗಿದೆ ತಿಳಿಸಿದರು. ಅಷ್ಟೇ ಅಲ್ಲದೆ ಈಗಾಗಲೇ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಧಾರವಾಡ ಜಿಲ್ಲೆಯ ಎರಡು ತಾಲೂಕುಗಳಿಗೆ ಇನಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ ಎಂದು ಪ್ರಕಟಣೆಯನ್ನು ನೀಡಿದ್ದಾರೆ.
ಅಳ್ನಾವರ ತಾಲ್ಲೂಕಿನ 69 ಫಲಾನುಭವಿಗಳಿಗೆ, ಹುಬ್ಬಳ್ಳಿ ತಾಲ್ಲೂಕಿನ 8,616 ಫಲಾನುಭವಿಗಳಿಗೆ, ಹುಬ್ಬಳ್ಳಿ ನಗರ ತಾಲ್ಲೂಕಿನ 741 ಫಲಾನುಭವಿಗಳಿಗೆ, ಕುಂದಗೋಳ, ನವಲಗುಂದ, ಅಣ್ಣಿಗೇರಿ ತಾಲೂಕಿನ ಫಲಾನುಭವಿಗಳಿಗೆ ಒಟ್ಟು ಕ್ಷೇತ್ರ ಹೆಕ್ಟೇರ್ ಗೆ ಇನ್ಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ.
ಎರಡನೇ ಹಂತದಲ್ಲಿ ಧಾರವಾಡ ಜಿಲ್ಲೆಯ ಏಳು ತಾಲ್ಲೂಕಿನ 50,515 ಫಲಾನುಭವಿಗಳಿಗೆ 4,211.17 ಲಕ್ಷ ರೂ.ಗಳನ್ನು ಒಟ್ಟು ಕ್ಷೇತ್ರ 48,102.68 ಹೆಕ್ಟೇರ್ ಗೆ ಇನ್ಪುಟ್ ಸಬ್ಸಿಡಿಯನ್ನು ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಬೆಳೆ ಹಾನಿ ಪರಿಹಾರದ ಜೊತೆಗೆ ಪ್ರಭಾವ ಮತ್ತು ಭವಿಷ್ಯದ ಯೋಜನೆಗಳು :
ಈ ಯೋಜನೆಯಡಿಯಲ್ಲಿ ಪರಿಹಾರ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆ (bank account) ಗಳಿಗೆ ಜಮಾ ಮಾಡಲಾಗುವುದು, ಇದು ಪಾರದರ್ಶಕತೆ ಮತ್ತು ಸರಿಯಾದ ಲಾಭಗ್ರಹಣವನ್ನು ಖಚಿತಪಡಿಸುತ್ತದೆ. ಹಿಂಗಾರು ಮಳೆಯ ನಂತರ ಬೆಳೆ ಹಾನಿ ಎದುರಿಸಿದ ರೈತರಿಗೆ ಈ ಪರಿಹಾರವು ಶಾಶ್ವತ ಪರಿಹಾರವಲ್ಲದಿದ್ದರೂ, ತಾತ್ಕಾಲಿಕವಾಗಿ ಅವರಿಗೆ ಆರ್ಥಿಕ ನೆರವಾಗಲಿದೆ.
ಪೀಡಿತ ರೈತರನ್ನು ಪ್ರೋತ್ಸಾಹಿಸುವ ಮತ್ತು ಬೆಳೆ ವಿಮೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ :
ಅಷ್ಟೇ ಅಲ್ಲದೆ ಸರ್ಕಾರವು ಈ ಯೋಜನೆಯೊಂದಿಗೆ, ಪೀಡಿತ ರೈತರನ್ನು ಪ್ರೋತ್ಸಾಹಿಸುವ ಮತ್ತು ಬೆಳೆ ವಿಮೆ (Crop insurance) ಯೋಜನೆಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲು ಮುಂದಾಗಿದೆ. ಇದು ರೈತರು ಇತರ ಬೆಳೆಗಳಿಗೆ ಪರ್ಯಾಯ ಹೂಡಿಕೆಯನ್ನು ಪರಿಶೀಲಿಸಲು ಸಹಾಯ ಮಾಡಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.