ರೈತರಿಗೆ ಕೇಂದ್ರ ಸರ್ಕಾರದಿಂದ (Central Governament) ದೀಪಾವಳಿಯ ಗಿಫ್ಟ್, 6 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ…!
ರೈತರು (Farmers) ದೇಶದ ಬೆನ್ನೆಲುಬು, ರೈತರು ಖುಷಿಯಾಗಿ ಇದ್ದರೆ ದೇಶ ಅಭಿವೃದ್ಧಿ ಅಥವಾ ಪ್ರಗತಿಯತ್ತ ಸಾಗುತ್ತದೆ. ಆದರೆ ಇಂದು ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಕಾಲ ಕಾಲಕ್ಕೆ ಮಳೆ ಇಲ್ಲದೆ ಬೆಳೆ ಬೆಳೆಯಲು ಕಷ್ಟಕರವಾಗಿದೆ. ಅಷ್ಟೇ ಅಲ್ಲ ಇಂದಿನ ಹವಾಮಾನ (weather) ವೈಪರಿತ್ಯವು ಕೃಷಿಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ರೈತರು ಸಾಲ(loan) ಸೂಲ ಮಾಡಿ ಜೀವನ ನಡೆಸುವಂತಾಗಿದೆ. ಆದರೆ ಇದೀಗ ರೈತರಿಗೆ ಸರ್ಕಾರದಿಂದ ಹಲವಾರು ಯೋಜನೆಗಳು, ಸಾಲ ಸೌಲಭ್ಯಗಳು ದೊರೆಯುತ್ತಿದೆ. ಇದೀಗ 6 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (Minimum support price for crops) ಹೆಚ್ಚಳ ಮಾಡಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕೇಂದ್ರ ಸರ್ಕಾರ ದೀಪಾವಳಿಗೂ(Diwali) ಮುನ್ನ ರೈತರಿಗೆ ಬಂಪರ್ ಉಡುಗೊರೆ ನೀಡಿದೆ. ಪ್ರಮುಖ ಹಿಂಗಾರು ಬೆಳೆಗಳಾದ ಗೋಧಿ, ಬಾರ್ಲಿ, ಕಡಲೆಕಾಳು, ಸೂರ್ಯಕಾಂತಿ ಸೇರಿ ಒಟ್ಟು 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಬೆಂಬಲ ಬೆಲಯಲ್ಲಿ ಕ್ವಿಂಟಾಲ್‌ಗೆ ಗರಿಷ್ಠ 300 ರೂಪಾಯಿ ಹಾಗೂ ಕನಿಷ್ಠ 130 ರೂಪಾಯಿ 6 ರಾಬಿ ಅಂದರೆ ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕ್ವಿಂಟಾಲ್‌ಗೆ 130 ರೂ.ನಿಂದ 300 ರೂ.ವರೆಗೆ ಏರಿಕೆ ಮಾಡಿದೆ.
ಹಿಂಗಾರು ಬೆಳೆಗಳಿಗೆ (crops) ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಸಚಿವ ಸಂಪುಟ ಸಭೆ ಈ ಸಂಬಂಧದ ಪ್ರಸ್ತಾವನೆಗೆ ಬುಧವಾರ (ಅಕ್ಟೋಬರ್ 16) ಒಪ್ಪಿಗೆ ನೀಡಿದೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಸಭೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ (presidency) ನಡೆದಿದ್ದು, ಈ ಸಭೆಯಲ್ಲಿ ಪ್ರಸ್ತಾವನೆಯ ಪರಿಶೀಲನೆ ಮತ್ತು ಚರ್ಚೆ ನಡೆದಿತ್ತು. ಪ್ರಸ್ತಾವನೆಯಲ್ಲಿ ರಬಿ ಬೆಳೆ ಅಥವಾ ಹಿಂಗಾರು ಬೆಳೆಗಳಾದ ಗೋಧಿ, ಬಾರ್ಲಿ, ಕಡಲೆ, ಮಸೂರ್, ಸಾಸಿವೆ ಮತ್ತು ಕುಸುಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ದರಗಳನ್ನು ಅನುಮೋದಿಸಲಾಗಿದೆ.
ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ :
2025-26ನೇ ಸಾಲಿಗೆ ಅನ್ವಯವಾಗುವಂತೆ ಕೇಂದ್ರ ಸಚಿವ ಸಂಪುಟವು ಹಿಂಗಾರು ಬೆಳೆಗಳಿಗೆ ಹೊಸ ಬೆಂಬಲ ಬೆಲೆಯನ್ನು ನಿಗದಿಮಾಡಿದ್ದು, ಹೆಚ್ಚಳವಾಗಿ ಸಾಸಿವೆಗೆ ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ, ಮಸೂರ್ ಬೇಳೆಗೆ ಪ್ರತಿ ಕ್ವಿಂಟಲ್‌ಗೆ 275 ರೂಪಾಯಿ, ಉದ್ದಿನಬೇಳೆಗೆ ಕ್ವಿಂಟಲ್ ಗೆ 210 ರೂಪಾಯಿ, ಗೋಧಿಗೆ 150 ರೂಪಾಯಿ, ಕುಸುಬೆಗೆ 140 ರೂಪಾಯಿ, ಬಾರ್ಲಿ ಕ್ವಿಂಟಾಲ್‌ಗೆ 130 ರೂಪಾಯಿ ಏರಿಕೆಯಾಗಿದೆ. ರೈತರ ಬೆಳೆಗಳಿಗೆ ಖರ್ಚಿಗಿಂತ ಒಂದೂವರೆ ಪಟ್ಟು ಹೆಚ್ಚು ಎಂಎಸ್‌ಪಿ (MSP)ನೀಡಬೇಕು ಎನ್ನುವ ನೀತಿಯಂತೆ ದರ ನಿಗದಿಯಾಗಿದೆ.
ಬೆಂಬಲ ಬೆಲೆ ಏರಿಕೆ ಮಾಡಲು ಕಾರಣವೇನು?:
ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ (ಸಿಎಸಿಪಿ) ಬಿತ್ತನೆ ಹಂಗಾಮು ಮುಗಿಯುವ ಮೊದಲು 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಿಫಾರಸು ಮಾಡುತ್ತದೆ. ಮುಂಗಾರಿನಲ್ಲಿ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿದರೆ, 7 ಹಿಂಗಾರು ಬೆಳೆಗಳಿಗೆ ಎಂಎಸ್‌ಪಿಯ ನೀಡಲಾಗುತ್ತದೆ. ಹಾಗೂ ಬಹಳ ಮುಖ್ಯವಾಗಿ ರೈತರಿಗೆ ಹಣಕಾಸಿನ ಬೆಂಬಲ ನೀಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಮುಖ್ಯವಾಗಿ ಹಿಂಗಾರು ಬೆಳೆಗಳ ಅವಧಿಯಲ್ಲಿ ಕೃಷಿಕರ ಆದಾಯ ಹೆಚ್ಚಿಸಲು ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.