ಎರಡನೇ ಕಂತಿನ ಬೆಳೆ ಪರಿಹಾರದ ಹಣ(Crop Relief Money) ಇನ್ನೂ ಬಂದಿಲ್ಲ ಎನ್ನುವ ರೈತರಿಗೆ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ ಕೇಂದ್ರ ಸರ್ಕಾರವು ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದಾರೆ. ಎಷ್ಟು ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ?, ಯಾರ ಖಾತೆಗೆ ಹಣ ಜಮಾ ಆಗುತ್ತದೆ?, ಹಣ ಜಮಾ ಆಗದಿದ್ದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಹಾಗಾಗಿ ವರದಿಯನ್ನು ಕೊನೆವರೆಗೂ ತಪ್ಪದೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬೆಳೆ ಪರಿಹಾರದ ಹಣ(bele parihaarada hana) ರಿಲೀಸ್ :
ಕರ್ನಾಟಕ ಸರ್ಕಾರವು ಬರದಿಂದ ಬೇಸತ್ತ ರೈತರಿಗೆ ಮತ್ತು ಬರದಿಂದ ನಷ್ಟದಲ್ಲಿರುವ ರೈತರಿಗೆ 2000 ರೂಪಾಯಿಗಳ ಪರಿಹಾರವನ್ನು ನೀಡಲು ಮುಂದಾಗಿರುವ ಕುರಿತು ನಿಮಗೆಲ್ಲ ತಿಳಿದೇ ಇದೆ. ಮೊದಲನೇ ಕದ್ದಿನ ಹಣ ಬಿಡುಗಡೆಯಾಗಿ ತುಂಬಾ ದಿನಗಳಾದರು ಎರಡನೇ ಕಂತಿನ ಹಣ ಬಿಡುಗಡೆಯಾಗಲು ಕೊಂಚ ಸಮಯ ಹಿಡಿದಿತು. ಒಟ್ಟು 256 ಬರ ತಾಲೂಕುಗಳಿಗೆ ಹಂತ ಹಂತವಾಗಿ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗುವುದು.
ಎರಡನೇ ಕಂತಿನ ಬರ ಪರಿಹಾರದ ಹಣವನ್ನು ನೀಡಿಲ್ಲ ಎಂದು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ದೂರು ನೀಡಿ ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದರು. ಸುಪ್ರೀಂ ಕೋರ್ಟ್ ವಿಚಾರಣೆಯನ್ನು ನಡೆಸಿ ಕೇಂದ್ರ ಸರ್ಕಾರಕ್ಕೆ ಹಣವನ್ನು ನೀಡುವಂತೆ ಮಾಹಿತಿಯನ್ನು ನೀಡಿದಾಗ, ಕೇಂದ್ರ ಸರ್ಕಾರವು ಪರಿಶೀಲಿಸಿ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಹಾಗಾಗಿ ಈ ವಾರದ ಕೊನೆಯಲ್ಲಿ ರೈತರ ಖಾತೆಗೆ 2ನೇ ಕಂತಿನ ಹೊರ ಪರಿಹಾರದ ಹಣ ಜಮಾ ಆಗಲಿದೆ.
ಯಾರ ಖಾತೆಗೆ ಹಣ ಬರುವುದಿಲ್ಲ :
ರೈತರು FID ನಂಬರನ್ನು ಹೊಂದದಿದ್ದರೆ ಹಣ ಜಮಾ ಆಗುವುದಿಲ್ಲ. ಈ ನಂಬರ್ ಇಲ್ಲದಿದ್ದರೆ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ.
ಆಧಾರ್ ಕಾರ್ಡಿಗೆ ಬ್ಯಾಂಕ್ ಖಾತೆ ಜೋಡನೆ ಯಾಗದಿದ್ದರೆ
ಜಮೀನು ಮಾರಾಟವಾಗಿದ್ದು, ಹಳೆಯ ಪಹಣಿಯನ್ನು ನೀಡಿದ್ದರೆ ಅಂತಹವರಿಗೆ ಜಮಾ ಆಗುವುದಿಲ್ಲ.
ರೈತರು ತಮ್ಮ ಜಮೀನಿನ ಎಲ್ಲಾ ಸರ್ವೇ ನಂಬರ್ ಗಳನ್ನು ಫ್ರೂಟ್ಸ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಣ ಬರುವುದು ಕಷ್ಟ
ಬೆಳೆ ಪರಿಹಾರದ ಲಿಸ್ಟಿನಲ್ಲಿ ನಿಮ್ಮ ಹೆಸರು ಇದೆಯೇ ಎಂದು ಹೀಗೆ ಚೆಕ್ ಮಾಡಿ :
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/Pariharahome/
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Agriculture