LPG ಸಿಲಿಂಡರ್ ಹೊಂದಿರುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ..!

IMG 20241016 WA0009

ಸಿಲಿಂಡರ್(cylinder) ಬಳಕೆದಾರರೇ ಸಿಲಿಂಡರ್‌ಗಳಿಗೂ ಎಕ್ಸ್ಪರಿ ಡೇಟ್ (Expiry Date) ಇರುತ್ತದೆ ಎಚ್ಚರ.! ಸಿಲಿಂಡರ್’ ಪಡೆಯುವಾಗ ಕಡ್ಡಾಯವಾಗಿ ಈ ವಿಷಯ ತಿಳಿದುಕೊಳ್ಳಿ!!

ಇತ್ತೀಚಿನ ದಿನಗಳಲ್ಲಿ ಜನರು ಸಾಂಪ್ರದಾಯಿಕ ಅಡುಗೆ ಉಪಕರಣಗಳಾದ ಇದ್ದಿಲು, ಕಟ್ಟಿಗೆಯನ್ನು ಬಳಸಿ ಮಾಡುವ ಅಡುಗೆ ವಿಧಾನವನ್ನು ಕ್ರಮೇಣ ಕಡಿಮೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹಲವು ಅರೋಗ್ಯದ ದೃಷ್ಟಿಯಿಂದ ಹಾಗೂ ಇವೆಲ್ಲವುದರ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ಬಳಸಲು ಕಷ್ಟವಾಗುತ್ತಿದೆ. ಆದ್ದರಿಂದ ಜನರು ಗ್ಯಾಸ್ ಸಿಲಿಂಡರ್‌ಗಳ (gas cylinder) ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಗ್ಯಾಸ್ ಸಿಲಿಂಡರ್‌ಗಳನ್ನು ಬಳಸುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ಸಿಲಿಂಡರ್ ಬುಕ್ ಮಾಡಿದ ಒಂದೆರಡು ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಗ್ರಾಹಕನಿಗೆ ತಲುಪಿಬಿಡುತ್ತದೆ. ಕೇವಲ ರೆಗ್ಯೂಲೇಟ‌ರ್ (Regulator) ಸರಿಯಾಗಿ ಕೂತಿದೆಯೇ? ಇಲ್ಲವೇ? ಎಂದು ಪರೀಕ್ಷಿಸಿ ಅಡುಗೆ ಮಾಡಲು ಪ್ರಾರಂಭಿಸುತ್ತೇವೆ. ಆಹಾರ ಪದಾರ್ಥಗಳಲ್ಲಿ ನಾವು ಯಾವಾಗಲೂ ಎಚ್ಚರಿಕೆಯಿಂದ ಎಕ್ಸ್ಪರಿ ಡೇಟ್ (Expiry Date) ಬಗ್ಗೆ ಯೋಚನೆ ಮಾಡುತ್ತೇವೆ ಹಾಗೂ ಗಮನಿಸುತ್ತೇವೆ. ಆದರೆ ಗ್ಯಾಸ್ ಸಿಲೆಂಡರ್ ನಲ್ಲಿ ನಾವು ಎಕ್ಸ್ಪರಿ ಡೇಟ್ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಗ್ಯಾಸ್ ಸಿಲೆಂಡರ್ ಎಕ್ಸ್ಪರಿ ಡೇಟ್ ಆಗಿದ್ದರೆ ಏನಾಗುತ್ತದೆ? ಗ್ಯಾಸ್ ಸಿಲೆಂಡರ್ ಎಕ್ಸ್ಪರಿ ಡೇಟ್ ಆಗಿದೆಯೇ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಎಲ್‌ಪಿಜಿ ಸಿಲಿಂಡ‌ರ್ ಗಳು(LPG cylinder) ಖಾಲಿಯಾದರೆ ಏನು ಮಾಡಬೇಕು ಎಂದು ಯೋಚಿಸಿ ಒಂದಲ್ಲಾ ಎರಡು ಮೂರು ಗ್ಯಾಸ್ ಸಿಲೆಂಡರ್ ಗಳನ್ನು ಇಟ್ಟುಕೊಂಡಿರುತ್ತಾರೆ. ಇಷ್ಟೆಲ್ಲ ಯೋಚನೆ ಮಾಡುವ ಗ್ರಾಹಕರು ಎಲ್‌ಪಿಜಿ ಗ್ಯಾಸ್ ಸಿಲೆಂಡರ್ ಗಳು ಕೂಡ ಎಕ್ಸ್ಪರಿ ಆಗುತ್ತವೆ ಎನ್ನುವುದನ್ನು ಮರೆತುಬಿಟ್ಟಿರುತ್ತಾರೆ. ಎಲ್ಲಾದರು ಗ್ಯಾಸ್ ಲೀಕ್ ಆಗುತ್ತಿದೆಯೇ? ರೆಗ್ಯೂಲೇಟ‌ರ್ ಸರಿಯಾಗಿ ಕೂತಿದೆಯೇ? ಕೇವಲ ಈ ರೀತಿಯಾದ ವಿಚಾರಗಳನ್ನು ಗಮನಿಸಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವಂತಹ ಎಕ್ಸ್ಪರಿ ಡೇಟ್ ಬಗ್ಗೆ ನಾವು ಗಮನವನ್ನು ಕೊಡುವುದೇ ಇಲ್ಲ. ಸಿಲೆಂಡರ್ ಮೇಲೆ ಕಾಣುವಂತಹ ಅಕ್ಷರಗಳು (letters), ನಂಬರ್‌ಗಳನ್ನು(numbers) ನಾವು ಗಮನಿಸಬೇಕಾಗುತ್ತದೆ.

ದಿನಾಂಕ ಮುಗಿದಿರುವ ಸಿಲೆಂಡರ್ ಗಳನ್ನು ಬಳಸಿದರೆ ಏನಾಗುತ್ತದೆ?:

ಅತಿ ಹೆಚ್ಚು ಒತ್ತಡವನ್ನು ಸಿಲಿಂಡರ್ ಗಳು ತೆಗೆದುಕೊಳ್ಳಬೇಕಾಗುತ್ತದೆ ಆದ್ದರಿಂದ ಸಿಲಿಂಡರ್ ಗಳನ್ನು  ಉತ್ಕೃಷ್ಟ ಉಕ್ಕು, ಕಬ್ಬಿಣದಿಂದ ಮಾಡಲಾಗಿರುತ್ತದೆ. ಹಲವಾರು ಕಾರಣಗಳಿಂದ ಸಿಲಿಂಡರ್ ಸ್ಫೋಟ(cylinder blast) ವಾಗುವುದನ್ನು ನಾವು ಕಾಣಬಹುದು. ಅದೇ ರೀತಿಯಾಗಿ ಸಿಲಿಂಡರ್ ನ ಕೊನೆಯ ದಿನಾಂಕ ಮುಗಿದರೂ ಕೂಡ ಬಹಳಷ್ಟು ಅಪಾಯಕಾರಿ ಘಟನೆಗಳು ಸಂಭವಿಸಬಹುದು. ಇದರಿಂದ ಸಿಲೆಂಡರ್ ಸ್ಪೋಟವಾಗಬಹುದು ಹಾಗೂ ಇದರಿಂದ ಕುಟುಂಬದಲ್ಲಿ ವಾಸಿಸುವ ಎಲ್ಲರಿಗೂ ಕೂಡ ಅಪಾಯ ಕಟ್ಟಿಟ್ಟಬುತ್ತಿ. ಆದ್ದರಿಂದ ನಾವು ಸಿಲೆಂಡರ್ ಎಕ್ಸ್ಪರಿ ಡೇಟ್ ಬಗ್ಗೆ  ಎಚ್ಚರ ವಹಿಸಬೇಕು.

ಸಿಲಿಂಡರ್‌ಗಳ ಮೇಲೆಯೇ ಸಿಲಿಂಡರ್‌ಗಳು ಮುಕ್ತಾಯಗೊಳ್ಳುವ ದಿನಾಂಕವನ್ನು ಹಾಕಿರಲಾಗಿರುತ್ತದೆ :

ಸಿಲಿಂಡರ್ ನ ಮೇಲ್ಭಾಗದಲ್ಲಿ ಸಿಲಿಂಡರ್ ನ ತೂಕವನ್ನು ಬರೆದಿರುತ್ತಾರೆ. ಅದೇ ರೀತಿಯಾಗಿ ಈ ಸಿಲಿಂಡರ್ ಅನ್ನು ಎಷ್ಟು ದಿನ ಬಳಸಬಹುದು ಎಂದು ಈ ಸಿಲಿಂಡರ್ ಎಕ್ಸ್ಪರಿ ಆಗುತ್ತದೆ ಎಂಬ ಎಲ್ಲಾ ವಿಷಯಗಳನ್ನು ಕೂಡ ಸಿಲೆಂಡರ್ ಮೇಲ್ಭಾಗದಲ್ಲಿ ಹಾಕಿರುತ್ತಾರೆ. ಸಾಮಾನ್ಯವಾಗಿ ಸಿಲೆಂಡರ್ ಎಕ್ಸ್ಪರಿ ದಿನಾಂಕವನ್ನು ಅವರು ಮುದ್ರಿಸಿರುವುದಿಲ್ಲ ಬದಲಿಗೆ ಸಂಕೇತಗಳ ಮೂಲಕ ಅವರು ಅಂತ್ಯದ ದಿನ ನಮೂದಿಸಿರುತ್ತಾರೆ. ಒಂದೊಂದು ಸಂಕೇತ ಕೂಡ ಒಂದೊಂದು ದಿನಾಂಕ ಅಥವಾ ತಿಂಗಳನ್ನು ಸೂಚಿಸುತ್ತದೆ. ಇದರ ಆಧಾರದ ಮೇಲೆ ಗ್ರಾಹಕರು ಸಿಲಿಂಡರ್ ಕೊನೆಯ ದಿನಾಂಕವನ್ನು ತಿಳಿದುಕೊಳ್ಳಬಹುದು.

ಯಾವ ರೀತಿಯ ಸಂಕೇತಗಳ ಮೂಲಕ ಅಂತ್ಯದ ದಿನವನ್ನು ನಮೂದಿಸಿರಲಾಗೀರುತ್ತದೆ :

ಸಿಲಿಂಡರ್‌ಗಳ ಮೇಲೆ ಸಾಮಾನ್ಯವಾಗಿ ABCD ಎಂಬ ಅಕ್ಷರಗಳನ್ನು ಬರೆಯಲಾಗಿರುತ್ತದೆ, ಈ ಅಕ್ಷರಗಳು  ಆ ಸಿಲಿಂಡರ್‌ನ ಕೊನೆಯ ದಿನಾಂಕವನ್ನು ತಿಳಿಸುತ್ತವೆ. ಜನವರಿ, ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಕೊನೆಯಾಗುವ ಸಿಲೆಂಡರ್ ಗಳ ಮೇಲೆ A ಅಕ್ಷರವನ್ನು ಕಾಣಬಹುದು. ಏಪ್ರಿಲ್ ಮೇ, ಜೂನ್ ತಿಂಗಳುಗಳಲ್ಲಿ ಕೊನೆಯಾಗುವ ಸಿಲೆಂಡರ್ ಗಳ ಮೇಲೆ B ಅಕ್ಷರವನ್ನು ಕಾಣಬಹುದು. ಇನ್ನು ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳುಗಳಲ್ಲಿ ಕೊನೆಯಾಗುವ ಸಿಲೆಂಡರ್ ಗಳ ಮೇಲೆ C ಅಕ್ಷರವನ್ನು ಕಾಣಬಹುದು. ನವೆಂಬರ್ ಡಿಸೆಂಬರ್ ತಿಂಗಳುಗಳಲ್ಲಿ ಕೊನೆಯಾಗುವ ಸಿಲೆಂಡರ್ ಗಳ ಮೇಲೆ D ಅಕ್ಷರವನ್ನು ಕಾಣಬಹುದು. ಕೇವಲ ABCD ಎಂದು ಬರೆದಿರುವುದಿಲ್ಲ ಅದರ ಜೊತೆಯಲ್ಲಿ ವರ್ಷವನ್ನು ಕೂಡ ಬರೆದಿರಲಾಗುತ್ತದೆ. ಅಂದರೆ ಸಿಲಿಂಡರ್‌ನ ಮೇಲೆ A 23, B 24, C 25, D 25 ಈ ರೀತಿ ಬರೆದಿರುತ್ತಾರೆ. A 23 ಅಂದರೆ 2023ರ ಮಾರ್ಚ್ ವರೆಗೂ ಇದರ ವ್ಯಾಲಿಡಿಟಿ ಇರಲಿದೆ ಎಂದರ್ಥ. ABCD ಇವುಗಳ ಮುಂದೆ ಮುದ್ರಿಸಲಾಗಿರುವ ಸಂಖ್ಯೆಗಳು ವರ್ಷವನ್ನು ಸೂಚಿಸುತ್ತವೆ. ಈ ಸಂಖ್ಯೆಗಳ ಅನುಗುಣವಾಗಿ ನಾವು ಸಿಲಿಂಡರ್ ಗಳ ಕೊನೆಯ ದಿನಾಂಕವನ್ನು ತಿಳಿದುಕೊಳ್ಳಬಹುದು. ಹಾಗೂ ಆಗುವಂತಹ ಅಪಾಯಗಳನ್ನು ತಡೆಯಬಹುದು.

ಗಮನಿಸಿ :

ಸಿಲೆಂಡರ್ ಗಳು ಯಾವಾಗಲೂ ಕೂಡ ಅಪಾಯಕಾರಿಯಾಗಿರುವಂತಹ ದಿನಬಳಕೆಯ ವಸ್ತುಗಳಲ್ಲಿ ಒಂದು. ಆದ್ದರಿಂದ ಸಿಲಿಂಡರ್ ಪಡೆಯುವ ಮುನ್ನ ಸಿಲೆಂಡರ್ ಎಕ್ಸ್ಪರಿ ಡೇಟ್  ಬಗ್ಗೆ ಹೆಚ್ಚು ಗಮನವಹಿಸುವುದರ ಜೊತೆ ಸಿಲೆಂಡರ್ ಗಳನ್ನು ತೆಗೆದುಕೊಂಡ ಮೇಲೆ ರೆಗ್ಯೂಲೇಟರ್‌ಗೆ ಹಾಕಿದಾಗ ಗ್ಯಾಸ್ ಲೀಕ್ ಆಗುತ್ತಿದೆಯೇ ಅದರಲ್ಲಿ ವಾಷ‌ರ್ ಸಮಸ್ಯೆಯಿದೆಯೇ ಎಂಬುದನ್ನು ಗಮನಿಸಬೇಕು. ಹಾಗೂ ಸಿಲಿಂಡರ್‌ನ ಸೀಲ್ ಓಪನ್ ಆಗಿದೆಯೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಸೀಲ್ ಓಪನ್ ಆಗಿದ್ದರೆ ಅಂತಹ ಸಿಲಿಂಡರ್ ಗಳನ್ನು ಹಿಂತಿರುಗಿಸಬೇಕು.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!