ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್, ಡಿಎ ಜೊತೆಗೆ ದೀಪಾವಳಿ ಬೋನಸ್ ಸಹ ಘೋಷಣೆ..!
ಕೇಂದ್ರ ಸರ್ಕಾರಿ ನೌಕರರು ಹಲವು ಹೋರಾಟದ ಫಲದಿಂದ ಇಂದು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಪೂರ್ವದಲ್ಲಿಯೇ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು ಘೋಷಿಸಲಾಗಿದೆ. ಇದರ ಇದೀಗ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ದೀಪಾವಳಿ ಗಿಫ್ಟ್ ಎಂಬಂತೆ ಪಿಂಚಣಿದಾರಿಗೆ ಡಿಎ ಜೊತೆಗೆ ದೀಪಾವಳಿ ಬೋನಸ್ (Diwali Bonus) ಸಹ ಘೋಷಣೆ ಆಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾದಿಂದ ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಣೆ :
ಇಂದು ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರದಂತಹ ಸಂದರ್ಭದಲ್ಲಿ ನೌಕರರಿಗೆ ಸರ್ಕಾರವು ಆಸರೆಯಾಗಿದ್ದು, ಹೌದು, ಇದೀಗ ರಾಜ್ಯ ಸರ್ಕಾರವು (State government) ಸರ್ಕಾರಿ ನೌಕರರ ಮುಖದಲ್ಲಿ ಖುಷಿಯನ್ನು ಮೂಡಿಸಿದೆ. ಕೇಂದ್ರ ಸರ್ಕಾರವು ಈಗಾಗಲೇ ನೌಕರರಿಗೆ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಘೋಷಿಸಿದೆ. ಈ ಹಿಂದೆ ದಿಪಾವಳಿಗೂ ಮೊದಲೇ ಶೇಕಡಾ 3ರಷ್ಟು ತುಟ್ಟಿಭತ್ಯೆ ಏರಿಕೆ ಮಾಡಿದೆ. ಅದರ ಪ್ರಮಾಣ ಸದ್ಯ 53ಕ್ಕೆ ತಲುಪಿದೆ. ಇದರ ಬೆನ್ನಲ್ಲೆ ಹಲವು ಭತ್ಯೆಗಳು ಸಹ ಪರಿಷ್ಕರಣೆಗೊಳ್ಳಲಿವೆ ಎನ್ನಲಾಗಿದೆ. ಇದರ ಮಧ್ಯೆ ದೀಪಾವಳಿಗೆ ವಿವಿಧ ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ದೀಪಾವಳಿ ಬೋನಸ್ ಘೋಷಿಸಿದೆ.
ಕೇಂದ್ರ ಹಣಕಾಸು ಇಲಾಖೆಯು ನೌಕರರಿಗೆ ಒಂದು ತಿಂಗಳ ವೇತನದಷ್ಟು ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ :
ದೀಪಾವಳಿಯ ಬೋನಸ್ ಅಷ್ಟೇ ಅಲ್ಲದೆ ಇನ್ನೊಂದು ಖುಷಿಯ ಕೇಂದ್ರ ಸರ್ಕಾರ ವಿಚಾರವಿದೆ. ಬೋನಸ್ ಜೊತೆಗೆ ಕೇಂದ್ರ ಹಣಕಾಸು ಇಲಾಖೆಯು ನೌಕರರ ಒಂದು ತಿಂಗಳ ವೇತನಷ್ಟು ನಾನ್ ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ (Non productivity linked Bonus) ನೀಡಲಾಗುತ್ತದೆ ಎಂದು ಮಾಹಿತಿ ನೀಡಿದೆ. ಒಟ್ಟಾರೆ ನೌಕರರಿಗೆ ಈ ವರ್ಷ ಎರಡು ಭಾರಿ ವಿವಿಧ ಆರ್ಥಿಕ ಹೆಚ್ಚಳದ ಲಾಭ ಪಡೆದುಕೊಂಡಿದ್ದಾರೆ.
ಹಲವು ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ದೀಪಾವಳಿಯ ಬೋನಸ್ :
ಉತ್ತರ ಪ್ರದೇಶದ (Uttar pradesh) ರಾಜ್ಯ ಸರ್ಕಾರವು, ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಸರ್ಕಾರವು ದೀಪಾವಳಿ ಪ್ರಯುಕ್ತ ಬೋನಸ್ ಅನ್ನು ಘೋಷಿಸಿದೆ.
ನೌಕರರು ಈ ದೀಪಾವಳಿಗೆ ಒಂದು ತಿಂಗಳು ಹಣವನ್ನು ಹೆಚ್ಚುವರಿಯಾಗಿ ಪಡೆಯಲಿದ್ದು, ಆದಷ್ಟು ಬೇಗ ಈ ಹಣ ಲಕ್ಷಾಂತರ ನೌಕರರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ.
ಅಷ್ಟೇ ಅಲ್ಲದೆ ಗುಜರಾತ್ (Gujarat) ರಾಜ್ಯ ಸರ್ಕಾರವು ಕೂಡ ಉದ್ಯೋಗಿಗಳ ಮುಖದಲ್ಲಿ ನಗು ಮೂಡಿಸಿದೆ. ಈ ರಾಜ್ಯ ಸರ್ಕಾರವು ಕೂಡ ಸರ್ಕಾರಿ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಘೋಷಣೆ ಮಾಡಿದ್ದು, ಆದಷ್ಟು ಬೇಗ ಹಣವನ್ನು ನೌಕರರ ಖಾತೆಗೆ ಬಿಡುಗಡೆ ಮಾಡಲಿದೆ.
ಅರುಣಾಚಲ (Arunachal) ರಾಜ್ಯ ಸರ್ಕಾರವು ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಶೇಕಡಾ 3ರಷ್ಟು ಹೆಚ್ಚಿಸಿದೆ :
ಅರುಣಾಚಲ ಪ್ರದೇಶ ರಾಜ್ಯ ಸರ್ಕಾರ ಸಹ ತನ್ನ ನೌಕರರಿಗೆ ದೀಪಾವಳಿಯ ಪ್ರಯುಕ್ತ ಗುಡ್ ನ್ಯೂಸ್ ನೀಡಿದ್ದು, ದೀಪಾವಳಿಯ ಸಂದರ್ಭದಲ್ಲಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಶೇಕಡಾ 3ರಷ್ಟು ಹೆಚ್ಚಳ ಮಾಡಿ ನಿರ್ಧಾರ ಪ್ರಕಟಿಸಿದೆ. ಇದು ಜುಲೈ 1ರಿಂದಲೇ ಅನ್ವಯವಾಗಲಿದ್ದು, ನೌಕರರ ಖಾತೆಗೆ ಆದಷ್ಟು ಬೇಗ ಈ ಹಣ ಜಮೆ ಆಗಲಿದೆ.
ಅಷ್ಟೇ ಅಲ್ಲದೆ ತಮಿಳುನಾಡು (Thamilnad) ರಾಜ್ಯ ಸರ್ಕಾರವು ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ತಮಿಳುನಾಡು ರಾಜ್ಯ ಸರ್ಕಾರವು ತನ್ನ 16ಲಕ್ಷಕ್ಕೂ ಹೆಚ್ಚು ನೌಕರರಿಗೆ ತುಟ್ಟಿಭತ್ಯೆ ನೀಡಿದೆ. ಇದು ಕಳೆದ ಜುಲೈ 1ರಿಂದ ಜಾರಿಗೆ ಬರುವಂತೆ ನೀಡಲಾಗುವುದು ಎಂದು ಹೇಳಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.