ಡಾರ್ಕ್‌ವೆಬ್‌ನಲ್ಲಿ (Dark Web) ಸುಮಾರು 81 ಕೋಟಿ ಭಾರತೀಯರ ಆಧಾರ್ ಕಾರ್ಡ ನ ವೈಯಕ್ತಿಕ ಮಾಹಿತಿ ಲೀಕ್ ಆಗಿದೆ ಎಂದು ತಿಳಿದು ಬಂದಿದೆ. ಆಧಾರ್ ಕಾರ್ಡ್ (Aadhaar Card) ಹೊಂದಿರುವವರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್, ಪಾಸ್‌ಪೋರ್ಟ್ ಮಾಹಿತಿಯನ್ನು ಮಾರಾಟ ಮಾಡಲಾಗಿದೆ. ಏನಿದು ಸುದ್ದಿ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಭಾರತೀಯರ ವೈಯಕ್ತಿಕ ಮಾಹಿತಿ ಮಾರಾಟ :
ಹ್ಯಾಕರ್‌ಗಳು ಭಾರತೀಯ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ( Passport ) ಹೊಂದಿರುವವರ ವೈಯಕ್ತಿಕ ಮಾಹಿತಿಯನ್ನು ಖದ್ದು ಆನ್‌ಲೈನ್‌ನಲ್ಲಿ ( Online ) ಇತರರಿಗೆ ಮಾರಾಟ ಮಾಡಿದ್ದಾರೆ ಎಂದು ಭಾರತ ಹಾಗೂ ಅಂತರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ತಿಳಿಸಿವೆ.
ಹೀಗೆ ಮಾಧ್ಯಮ ಹಾಗೂ ಸೋಶಿಯಲ್ ಮಿಡೀಯಗಳಲ್ಲಿ ( Social media ) ಆಧಾರ್ ನ ಮಾಹಿತಿ ಲೀಕ್ ಆಗಿರುವ ಬಗ್ಗೆ ವರದಿಗಳು ಪ್ರಕಟವಾದ ಬೆನ್ನಲ್ಲೇ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ತನಿಖೆಯನ್ನು ಆರಂಭಿಸಿದೆ. ಅಷ್ಟೇ ಅಲ್ಲದೇ ಹ್ಯಾಕರ್ “pwn0001” ನಿಂದ ಪತ್ತೆಯಾದ ಮಾಹಿತಿಯ ಬಗ್ಗೆ ತನಿಖೆ ನಡೆಸಲಾಗಿದೆ. ಹ್ಯಾಕರ್‌ಗಳು COVID 19 ನ 800 ಮಿಲಿಯನ್ ಭಾರತೀಯರ ವೈಯಕ್ತಿಕ ಡೇಟಾವನ್ನು ( Personal data ) ಲೀಕ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ – ಬರೋಬ್ಬರಿ 300 ಕಿ. ಮೀ ವರೆಗೆ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಬೆಲೆ ಎಷ್ಟು ಗೊತ್ತಾ?
ಆಧಾರ್ ಹಾಗೂ ಪಾಸ್‌ಪೋರ್ಟ್ ಮಾಹಿತಿ ಲೀಕ್
ಪ್ರತೀ ಭಾರತೀಯರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ. ಆಧಾರ್ ಕಾರ್ಡ್ ಹಲವಾರು ಮಾಹಿತಿಗಳಿಗೆ ಬೇಕಾಗುತ್ತದೆ. ಇದು ಒಂದು ಐಡೆಂಟಿಟಿ ಕಾರ್ಡ್ ( Identity Card ) ಆಗಿದೆ. ಅಲ್ಲದೇ ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವ್ಯವಹಾರಗಳಿಗೂ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ. ಆದರೆ ಆಧಾರ್ ಹಾಗೂ ಪಾಸ್‌ಪೋರ್ಟ್ ಮಾಹಿತಿ ಲೀಕ್ ಆಗಿರುವುದು ಒಂದು ದೊಡ್ಡ ಸಮಸ್ಯೆ ಆಗಿದೆ.
ಸದ್ಯಕ್ಕೆ ಮಾಧ್ಯಮಗಳು ( Media ) ಆಧಾರ್ ಹಾಗೂ ಪಾಸ್ ಪೋರ್ಟ್‌ನ ವೈಯಕ್ತಿಕ ಮಾಹಿತಿ ಲೀಕ್ ಆಗಿರುವ ಕುರಿತು ವರದಿ ಪ್ರಕಟಿಸಿವೆ. ಆದರೆ ಇದುವರೆಗೂ ಈ ಕುರಿತು ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಕೇಂದ್ರ ಸರಕಾರ(central government) ಈಗಾಗಲೇ ಪ್ರಕರಣ ತನಿಖೆಯನ್ನು ನಡೆಸುವ ಜವಾಬ್ದಾರಿಯನ್ನು ಸಿಬಿಐಗೆ ( CBI ) ವಹಿಸಿದೆ.
ಒಟ್ಟಿನಲ್ಲಿ ಸಿಬಿಐ ತನಿಖೆಯ ನಂತರಷ್ಟೇ ಆಧಾರ್ ಹಾಗೂ ಪಾಸ್ ಪೋರ್ಟ್ ಮಾಹಿತಿ ಲೀಕ್ ಆಗಿರುವ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ. ನೂರು ಕೋಟಿಗೂ ಅಧಿಕ ಭಾರತೀಯರ ಗೌಪ್ಯ ( Secret ) ಮಾಹಿತಿ ಆಧಾರ್ ಕಾರ್ಡ್‌ನಲ್ಲಿ ಇದೆ. ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್, ಬ್ಯಾಂಕ್ ಡಿಟೇಲ್ಸ್ ಕೂಡ ಲಿಂಕ್ ಆಗಿದೆ.
ಯಾರು ಹೆದರುವ ಅವಶ್ಯಕತೆ ಇಲ್ಲ ಆದಷ್ಟು ಬೇಗ ತನಿಖೆ ನಡೆಸಿ ಸರಿ ಪಡಿಸಲಾಗುತ್ತದೆ. ಎಂದು ತಿಳಿಸಿದ್ದಾರೆ.
ಇದನ್ನೂ ಓದಿ –Bigg Alert – ಗುಡುಗು & ಸಿಡಿಲು ಬರುವಾಗ ಮೊಬೈಲ್ ಫೋನ್ ಬಳಸೋರು ತಪ್ಪದೇ ಇದನ್ನು ತಿಳಿದುಕೊಳ್ಳಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಇದನ್ನೂ ಓದಿ – Coconut Price – ಎಳನೀರು ಗ್ರಾಹಕನಿಗೆ ಹೊರೆ, ರೈತರಿಗೆ ಬರೆ, 10ಕ್ಕೆ ಖರೀದಿಸಿ 35- 40 ಕ್ಕೆ ಮಾರಾಟ! ಇಲ್ಲಿದೆ ವಿವರ