ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರೈತರ ಮಕ್ಕಳಿಗೆ ನೀಡುತ್ತಿದ್ದ ಮುಖ್ಯಮಂತ್ರಿ ರೈತವಿಧ್ಯಾನಿಧಿ ಈ ವರ್ಗಗಳಿಗೂ ವಿಸ್ತರಣೆ
ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960ರ ಸರ್ವೆ ನಕಾಶೆಗಳ ಆಧಾರದಲ್ಲಿ ಈ ಆಪನ್ನು ಅಭಿವೃದ್ಧಿಪಡಿಸಲಾಗಿದೆ. ಕಂದಾಯ ಇಲಾಖೆಯು ಪರಿಚಯಿಸಿರುವ ಈ ಆಪ್ ಎಲ್ಲಾ ರೈತ ಮಿತ್ರರಿಗೆ ತುಂಬಾ ಸಹಾಯಕವಾಗಿದೆ. ಇಷ್ಟೇ ಅಲ್ಲದೆ ನಿಮ್ಮ ಆಸ್ತಿಯ ಜಾಗ ಸರ್ಕಾರದ ವಶವಾಗಿದ್ದೇವೆಯೇ ಅಥವಾ ಕೆರೆಯ ಮೀಸಲು ಪ್ರದೇಶದ ವ್ಯಾಪ್ತಿಯಲ್ಲಿದೆಯೇ ಅಥವಾ ಒತ್ತುವರಿಯಾಗಿದೆಯೇ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.
Dishank ಆಪ್ ನ ಪರಿಚಯ :
ದಿಶಾಂಕ್ ಆಪ್ ಸಾಮಾನ್ಯ ಜನರಿಗೆ ಅತ್ಯುತ್ತಮ ಸಾಧನವಾಗಿದೆ. ಈ ಅಪ್ಲಿಕೇಶನ್ ಅನ್ನು ಸುಮಾರು ಅರ್ಧ ಮಿಲಿಯನ್ ಗಿಂತಲೂ ಹೆಚ್ಚು ಜನರು ಡೌನ್ಲೋಡ್ ಮಾಡಿದ್ದಾರೆ. ನೀವು ನಿಂತಿರುವ ಜಗ ಯಾರ ಮಾಲಿಕತ್ವದಲ್ಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು. ನಿಮ್ಮ ಸರ್ವಿಸ್ ಕಿಚ್ಚನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ನೋಡುವುದು ಎಂದು ಕೂಡ ಈ ಲೇಖನದಲ್ಲಿ ತಿಳಿಸಲಾಗುವುದು.
ಇದನ್ನೂ ಓದಿ: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – 2022-23 ನೇ ಸಾಲಿನ ಅರ್ಜಿ ಸಲ್ಲಿಕೆ ವಿವರ
ಅಪ್ಲಿಕೇಶನ್ ಉಪಯೋಗಿಸುವ ವಿಧಾನ :
ಮೊದಲಿಗೆ ನಿಮ್ಮ ಫೋನಿನಲ್ಲಿ ಪ್ಲೇ ಸ್ಟೋರ್ ಆಪ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಡಿಶಾಂಕ್ ಆಪ್ ಎಂದು ಟೈಪ್ ಮಾಡಿ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಇದು ಒಂದು ಕರ್ನಾಟಕ ಸರ್ಕಾರದ ಆಪ್ ಆಗಿದೆ ಇದನ್ನು ಓಪನ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ನಲ್ಲಿ ಓಪನ್ ಮಾಡಿಕೊಂಡ ನಂತರ ಇದಕ್ಕೆ ಅಕ್ಸೆಸ್ ಪರ್ಮಿಷನ್ ಕೊಡಬೇಕಾಗುತ್ತೆ. ಅದಕ್ಕಾಗಿ ನೀವು ಹಲೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಮುಂದುವರೆದು ನೀವು ಅದರ ಭಾಷೆಯನ್ನು ಕೂಡ ಸೆಟ್ ಮಾಡಿಕೊಳ್ಳಬೇಕಾಗುತ್ತದೆ ಅದರಲ್ಲಿ ಎರಡು ಭಾಷೆಗಳಿರುತ್ತದೆ. ಕನ್ನಡ ಮತ್ತು ಇನ್ನೊಂದು ಇಂಗ್ಲಿಷ್. ನಾವು ಕನ್ನಡ ಎಂಬ ಭಾಷೆಯನ್ನು ಸೆಟ್ ಮಾಡಿಕೊಳ್ಳಬೇಕು. ಹೋಂ ಪೇಜ್ ಓಪನ್ ಆಗುವುದು ಅದರಲ್ಲಿ ನೀವು ನಿಂತಿರುವಂತಹ ಸ್ಥಳ ಯಾರ ಹೆಸರಿನಲ್ಲಿದೆ,ಅದರ ಸರ್ವೇ ನಂಬರ್ ಎಷ್ಟು, ಅದಲ್ಲದೆ ನೀವು ಅದರ ವಿಸ್ತೀರ್ಣವನ್ನು ಕೂಡ ಅಳತೆ ಮಾಡಬಹುದು. ಗೌರ್ಮೆಂಟ್ ಅಧಿಕಾರಿಗಳು ನಿಮ್ಮ ಜಾಗಕ್ಕೆ ಭೇಟಿ ನೀಡಿದಾಗಲೂ ಕೂಡ ಇದೇ ಅದನ್ನು ಬಳಸಿಕೊಂಡು ಸರ್ವೇಯನ್ನು ಮಾಡಲಾಗುತ್ತದೆ. ಈ ಆಪ್ ನಲ್ಲಿ ಬಹಳಷ್ಟು ನಿಮ್ಮ ಬಲಭಾಗದಲ್ಲಿ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ರಾಜ್ಯದ ಗಡಿಭಾಗ ಯಾವ ಬಣ್ಣದಲ್ಲಿದೆ ಹಾಗೂ ನಿಮ್ಮ ಜಿಲ್ಲೆ ಗಡಿ,ತಾಲೂಕು ಗಡಿ, ಹೋಬಳಿ ಗಡಿ, ಗ್ರಾಮ ಗಡಿ ಯಾವ ಬಣ್ಣದಲ್ಲಿದೆ ಎಂಬುದರ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಹಾಗೂ ಅಕ್ಕಪಕ್ಕದ ಸರ್ವೆ ನಂಬರ್ ಗಳಲ್ಲಿ ವಸತಿ ಇದೆಯೇ ಅಥವಾ ಬೆಟ್ಟಗಳಾಗಿರಬಹುದು ನದಿ, ಟ್ಯಾಂಕ್ ಅಥವಾ ಯಾವುದಾದರೂ ಸ್ಕೀಮ್ ಇದೆಯೇ ಎಂಬುದರ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಮತ್ತು ಅದರ ಕೆಳಗಿನ ಭಾಗದಲ್ಲಿ ನಿಮಗೆ ನಾಲ್ಕು ಆಪ್ಷನ್ ಗಳು ದೊರೆಯುತ್ತದೆ, ಒಂದು ಮಾಪನ ಸಾಧನಗಳು, ಸರ್ವೇ ನಂಬರ್ ಹುಡುಕಿ, ಸ್ಥಳದ ವರದಿ ಮತ್ತು ಮ್ಯಾಪ್ ಗಾಗಿ ಒತ್ತಿರಿ.
ಇದನ್ನೂ ಓದಿ: ಹೊಸ ಪಡಿತರ ಚೀಟಿ ( ರೇಷನ್ ಕಾರ್ಡ ) ಡೌನ್ಲೋಡ್ ಮಾಡುವ ವಿಧಾನ.
ಸರ್ವೆ ನಂಬರ್ ಹುಡುಗಿ ಎಂಬ ಆಪ್ಷನ್ ಅನ್ನು ಬಳಸುವ ವಿಧಾನ : ಈ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನೀವು ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ ಹಾಗೂ ಗ್ರಾಮವನ್ನು ಎಂಟರ್ ಮಾಡಬೇಕು. ನಂತರ ಸರ್ವೆ ನಂಬರನ್ನು ಎಂಟರ್ ಮಾಡಿ ಹೋಗಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇಷ್ಟು ಡೀಟೇಲ್ ಅನ್ನು ಸೆಲೆಕ್ಟ್ ಮಾಡಿಕೊಂಡ ನಂತರ ನಿಮಗೆ ಸರ್ವೇ ನಂಬರಿನ ನಕ್ಷೆ ರೇಖೆ ದೊರೆಯುತ್ತದೆ ಇದರಲ್ಲಿ ನೀವು ಕುಳಿತುಕೊಂಡ ಜಾಗದಿಂದ ಆ ಆ ಜಾಗ ಎಷ್ಟು ದೂರದಲ್ಲಿದೆ ಎಂಬುದರ ವಿವರವೂ ಕೂಡ ದೊರೆಯುತ್ತದೆ. ಹೆಚ್ಚಿನ ವಿವರಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಹಾಗೂ ನೀವು ಮೊದಲೇ ನಿಮ್ಮ ಇಸೇ ನಂಬರನ್ನು ಎಂಟರ್ ಮಾಡಿದಲ್ಲಿ ಆ ಜಾಗದ ಮಾಲೀಕರ ಹೆಸರು ನಿಮಗೆ ತಿಳಿಯುತ್ತದೆ.
ತಳದ ವರದಿ ಆಪ್ಷನ್ ಅನ್ನು ಯೂಸ್ ಮಾಡುವ ವಿಧಾನ :
ಈ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ನಿಮ್ಮ ಸರ್ವೇ ನಂಬರ್ ಅಥವಾ ಅದರಲ್ಲಿರುವ ಗ್ರಾಮದ ಹೆಸರು, ಹೋಬಳಿ ಹೆಸರು, ತಾಲೂಕಿನ ಹೆಸರು, ಜಿಲ್ಲಾ ಹೆಸರು ಮತ್ತು 30 ಮೀಟರ್ ಒಳಗಿರುವ ಪಕ್ಕದ ಸರ್ವೇ ನಂಬರ್ಗಳ ಡೀಟೇಲ್ಸ್ ದೊರೆಯುತ್ತದೆ. ಹೆಚ್ಚಿನ ವಿವರಗಳು ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನೀವು ನಿಂತಿರುವ ಜಾಗದ ಓನರ್ ಅಥವಾ ಮಾಲೀಕರ ಹೆಸರು ಯಾವುದು ಎಂಬುದನ್ನು ಕೂಡ ತಿಳಿಸುತ್ತದೆ.
ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?
ಮ್ಯಾಪ್ಗಾಗಿ ಒತ್ತಿ ಎಂಬ ಆಪ್ಷನ್ ಅನ್ನು ಬಳಸುವ ವಿಧಾನ : ಈ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಾಗದ ನಕ್ಷೆಯ ವಿವರವನ್ನು ನಿಮಗೆ ತೋರಿಸುತ್ತದೆ. ಸರ್ವೇ ನಂಬರ್ ಮತ್ತು ಮಾಲೀಕರು ಯಾರು ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬಹುದು.
ಡಿಶಾಂಕ್ ಆಪ್ ಹೇಗೆ ಉಪಯೋಗಿಸಬೇಕು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ನೋಡಿ :
ಈ ಅಪ್ಲಿಕೇಶನ್ ತುಂಬಾ ಉಪಯೋಗಕರವಾಗಿದ್ದು, ನೀವು ಈ ಲೇಖನವನ್ನು ನಿಮ್ಮ ಎಲ್ಲ ರೈತ ಬಾಂಧವರಿಗೆ ಹಾಗೂ ಸಂಬಂಧಿಕರಿಗೆ, ನಿಮ್ಮ ಸ್ನೇಹಿತ ಮಿತ್ರರಿಗೆ ಶೇರ್ ಮಾಡಿ. ಧನ್ಯವಾದಗಳು.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
*********** ಲೇಖನ ಮುಕ್ತಾಯ ***********
ಇದನ್ನೂ ಓದಿ: ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ಇದನ್ನೂ ಓದಿ: ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ
ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ.
ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/yasashwing-scheme-karnataka-kannada/
ಆಧಾರ್ ನಂಬರ್ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ
ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/
ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ
ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ, ಸರಕು ಸಾಗಾಣಿಕೆ ವಾಹನ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಾ ಅಂಬೇಡ್ಕರ್ ನಿಗಮ ದಲ್ಲಿ ಹೊಸ ಬೈಕ್ ಪಡೆಯಲು ಸಹಾಯಧನ ಅರ್ಜಿ ಆಹ್ವಾನಿಸಲಾಗಿದೆ. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.
ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/two-wheeler-scheme-karnataka/
ನವೆಂಬರ್ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು
ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು ಬಂದಿದೆ. ಯಾವ ಯಾವ ಅಭ್ಯರ್ಥಿಗಳಿಗೆ ಈ ಸರ್ಕಾರಿ ಹುದ್ದೆಯಲ್ಲಿ ಆಸಕ್ತಿ ಹೊಂದಿದೆಯೋ ಅವರು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಆನ್ಲೈನ್ ಫಾರ್ಮ್ ಇಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/kannada-job-news-november-2022/