BIGG UPDATE : ಡಿಎಲ್ ಹೊಂದಿರುವ ಎಲ್ಲರಿಗೂ ಹೊಸ ನಿಯಮ ಜಾರಿ; ಸುಪ್ರೀಂಕೋರ್ಟ್ ಆದೇಶ

IMG 20241108 WA0002

ವಾಹನ ಚಾಲಕರಿಗೆ ಗುಡ್ ನ್ಯೂಸ್, ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು,  ‘LMV’ DL ಇದ್ದರೆ 7500 ಕೆ.ಜಿ ತೂಕದ ಸಾರಿಗೆ ವಾಹನ ಚಲಾಯಿಸಬಹುದು..!

ಸುಪ್ರೀಂಕೋರ್ಟ್ ಇದೀಗ ವಾಹನ ಚಾಲಕರಿಗೆ (Vehicle drivers) ಮಹತ್ವದ ತೀರ್ಪು ನೀಡಿದೆ. ಹೌದು, ಅನೇಕ ರೀತಿಯ ವಾಹನಗಳಿದ್ದು ಪ್ರತಿಯೊಂದು ವಾಹನವು ಕೂಡ ಬೇರೆ ಬೇರೆ ಡ್ರೈವಿಂಗ್ ಲೈಸೆನ್ಸ್ (Driving Licence) ಅನ್ನು ಹೊಂದಿದೆ. ಅದರ ಆಧಾರದ ಮೇಲೆ ವಾಹನ ಚಲಾಯಿಸಲು ಅರ್ಹರಾಗಿರುತ್ತಾರೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಅಪರಾಧವಾಗಿರುತ್ತದೆ. ಆದರೆ ಇದೀಗ ‘LMV’ DL ಇದ್ದರೆ 7500 ಕೆ.ಜಿ ತೂಕದ ಸಾರಿಗೆ ವಾಹನ ಚಲಾಯಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಸ್ತುತ ಹಳದಿ ಬಣ್ಣದ ಫಲಕ (Yellow Board) ಹೊಂದಿರುವ ವಾಹನಗಳನ್ನು ಚಲಾಯಿಸಲು ಪರವಾನಗಿ ಜೊತೆಗೆ ಬ್ಯಾಡ್ಜ್ ಕಡ್ಡಾಯವಾಗಿದೆ. ಹಳದಿ ಬಣ್ಣದ ಫಲಕ ಹೊಂದಿರುವ ಗರಿಷ್ಠ  7500 ಕೆ.ಜಿ. ಸಾಗಣೆಯ ವಾಹನಗಳು ಲಘು ಮೋಟಾರು ವಾಹನ ವರ್ಗದಲ್ಲಿವೆ. ಅಂದರೆ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಟೆಂಪೋ, ಜೀಪು, ಸ್ವರಾಜ್ ಮಜ್ದಾ ಇನ್ನಿತರ ವಾಹನಗಳು ಈ ವರ್ಗಕ್ಕೆ ಸೇರಲಿವೆ.

ಶೀಘ್ರದಲ್ಲೆ ಸುಪ್ರೀಂ ಕೋರ್ಟ್‌ ಎಲ್‌ಎಂವಿ ಲಘು ಸಾರಿಗೆ ವಾಹನಗಳನ್ನು ಚಲಾಯಿಸಲು ಅವಕಾಶ ನೀಡಲಿದೆ :

ಲಘು ಮೋಟಾರು ವಾಹನ (ಎಲ್‌ಎಂವಿ) ಪರವಾನಗಿ ಹೊಂದಿರುವ ಚಾಲಕರು ಹಳದಿ ಬಣ್ಣದ ಫಲಕದ ಲಘು ಸಾರಿಗೆ ವಾಹನಗಳನ್ನು ಚಲಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ (Supreme Court) ನ ಆದೇಶ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.

ಎಲ್‌ಎಂವಿ ಇದ್ದರೆ ಸಾಕು 7500 ಕೆಜಿ ತೂಕದ ವಾಹನ ಚಲಾಯಿಸಬಹುದು :

ಹೌದು, ಎಲ್‌ಎಂವಿ ಎಂಬುದು ಲಘು ವಾಹನಗಳಿಗೆ ಇರುವ ಡ್ರೈವಿಂಗ್ ಲೈಸೆನ್ಸ್ ಆಗಿದೆ. ಇದು ಇದ್ದರೆ ಸಾಕು ವ್ಯಕ್ತಿಯು ಯಾವುದೇ ನಿರ್ದಿಷ್ಟ ಅನುಮೋದನೆಯಿಲ್ಲದೆ, 7500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನವನ್ನು ಓಡಿಸಬಹುದು ಎಂದು ಸುಪ್ರೀಂ ಕೋರ್ಟ್ ಇಂದು ತಿಳಿಸಿದೆ.

ಎಲ್‌ಎಂವಿ ಪರವಾನಗಿ ಬಗ್ಗೆ ನ್ಯಾಯಾಲಯದಿಂದ ಮಹತ್ವದ ತೀರ್ಪು :

ವಾಹನದ ಒಟ್ಟು ತೂಕವು 7500 ಕೆಜಿಯೊಳಗೆ ಇದ್ದರೆ, ಎಲ್‌ಎಂವಿ ಪರವಾನಗಿ ಹೊಂದಿರುವ ಚಾಲಕ ಅಂತಹ ಸಾರಿಗೆ ವಾಹನವನ್ನು ಓಡಿಸಬಹುದಾಗಿದೆ. ಮುಖ್ಯವಾಗಿ ನ್ಯಾಯಾಲಯವು ಸಾರಿಗೆ ವಾಹನಗಳನ್ನು ಚಾಲನೆ ಮಾಡುವ ಎಲ್‌ಎಂವಿ ಪರವಾನಗಿ ಹೊಂದಿರುವವರು ರಸ್ತೆ ಅಪಘಾತ (Accidentes) ಗಳಿಗೆ ಪ್ರಮುಖ ಕಾರಣ ಎಂದು ಯಾವುದೇ ಪ್ರಾಯೋಗಿಕ ದತ್ತಾಂಶ ಇಲ್ಲದಿರುವುದನ್ನು ಗಮನಿಸಿ ಈ ತೀರ್ಪು ನೀಡಿದೆ.

ಸಾರಿಗೆ ವಾಹನ ಚಾಲಕರ ಜೀವನೋಪಾಯದ ಸಮಸ್ಯೆಗಳ ದೃಷ್ಟಿಕೋನದಿಂದ ಈ ತೀರ್ಪು ಹೊರಡಿಸಿದೆ :

ಮೋಟಾರು ವಾಹನ ಕಾಯ್ದೆ, 1988 ರ ನಿಬಂಧನೆಗಳ ಸಾಮರಸ್ಯದ ವ್ಯಾಖ್ಯಾನವನ್ನು ಅಳವಡಿಸಿಕೊಂಡ ನ್ಯಾಯಾಲಯವು ಮುಕುಂದ್ ದೇವಾಂಗನ್ ವರ್ಸಸ್ ಓರಿಯಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (2017) 14 ಎಸ್ಸಿಸಿ 663 ಪ್ರಕರಣದಲ್ಲಿ ತೀರ್ಪನ್ನು ಅನುಮೋದಿಸಿತು. ಸಾರಿಗೆ ವಾಹನ ಚಾಲಕರ ಜೀವನೋಪಾಯದ ಸಮಸ್ಯೆಗಳ ದೃಷ್ಟಿಕೋನದಿಂದ ನ್ಯಾಯಾಲಯವು ಈ ವಿಷಯದ ಬಗ್ಗೆ ತೀರ್ಪು ನೀಡಿದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!