ಯುಗಾದಿಗೆ ಡಬಲ್ ಶಾಕ್! ಹಾಲು ಮತ್ತು ವಿದ್ಯುತ್ ದರ ಏರಿಕೆ.!
ಬೆಂಗಳೂರು, ಮಾರ್ಚ್ 26: ಈ ಬಾರಿಯ ಯುಗಾದಿ ಹಬ್ಬ ಕರ್ನಾಟಕದ ಜನತೆಗೆ ಸಿಹಿಗಿಂತ ಕಹಿಯನ್ನು ನೀಡಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರ ಮೇಲೆ ಈಗ ಹಾಲು ಮತ್ತು ವಿದ್ಯುತ್ ದರಗಳು ಹೆಚ್ಚಾಗಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಹಾಲಿನ ದರಕ್ಕೆ ₹4 ಏರಿಕೆಗೆ ಅನುಮೋದನೆ ನೀಡಿದ್ದು, ಇದರ ಜೊತೆಗೆ ವಿದ್ಯುತ್ ದರವೂ ಹೆಚ್ಚಾಗುವ ಸಾಧ್ಯತೆ ಇದೆ..ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂದು ಸಂಜೆ ನಡೆದ ಸಚಿವ ಸಂಪುಟ ಸಭೆಯ ನಂತರ ವಿದ್ಯುತ್ ದರ ಏರಿಕೆ ಪ್ರಕಟವಾಗಬಹುದು. ಪ್ರತಿ ಯುನಿಟ್‌ಗೆ 36 ಪೈಸೆ ಹೆಚ್ಚಳವಾಗಿ, ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರಲಿದೆ. ಇದರಿಂದ ಕುಡಿತದ ನೀರು, ಟೀ-ಕಾಫಿ, ಹಾಲಿನ ಉತ್ಪನ್ನಗಳ ಬೆಲೆಗಳು ಏರುವುದು ಖಚಿತ.

ಗ್ಯಾರಂಟಿ ಯೋಜನೆಗಳ ಹೊರೆ ಜನರ ಮೇಲೆ?
ಈಗಾಗಲೇ ಮೆಟ್ರೋ ಮತ್ತು ಬಸ್ ದರಗಳು ಹೆಚ್ಚಾಗಿರುವುದರಿಂದ ಜನತೆ ಆರ್ಥಿಕ ಸಂಕಷ್ಟದಲ್ಲಿದೆ. ವಿರೋಧ ಪಕ್ಷಗಳು “ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ, ಜನರ ಮೇಲೆ ಹೊರೆ ಹೇರಿದೆ” ಎಂದು ಟೀಕಿಸಿವೆ. BJP ನಾಯಕ ಎನ್. ರವಿಕುಮಾರ್ ಕೂಡಾ “ಬೆಲೆ ಏರಿಕೆ ತಕ್ಷಣ ನಿಲ್ಲಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಯುಗಾದಿ ಸಂಭ್ರಮಕ್ಕೆ ಮುಗಿಲು?
ಹಬ್ಬದ ಸಂತೋಷಕ್ಕೆ ಬದಲಾಗಿ, ಹಾಲು-ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯರಿಗೆ “ಡಬಲ್ ಶಾಕ್” ನೀಡಲಾಗುತ್ತಿದೆ. ಸರ್ಕಾರವು ಈ ನಿರ್ಧಾರಗಳನ್ನು ಪುನರ್ವಿಮರ್ಶಿಸಬೇಕು ಎಂಬುದು ಜನತೆಯ ಬೇಡಿಕೆ.
“ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಜನರನ್ನು ಹಿಂಸಿಸುವುದು ನಿಲ್ಲಬೇಕು!” – ಎನ್. ರವಿಕುಮಾರ್
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.