ರೈತರೇ ಗಮನಿಸಿ, ನಿಮಗಿನ್ನೂ ಬರ ಪರಿಹಾರ ಹಣ ಬಂದಿಲ್ವಾ? ಈ ದಾಖಲೆ ಕೊಟ್ಟು ಎಲ್ಲಾ ಹಣ ಪಡೆಯಿರಿ

bara parihaara

₹2000 ಬರ ಪರಿಹಾರ(Drought relief) ದ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಚಿಂತೆ ಬೇಡ! ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಈ ಸಮಸ್ಯೆಯನ್ನು ಪರಿಹರಿಸಬಹುದು. ಮೊದಲು, ನಿಮ್ಮ ಹೆಸರಿನಲ್ಲಿ FID (Farmer Identification Number) ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮಲ್ಲಿ FID ಇಲ್ಲದಿದ್ದರೆ ಇಂದೇ/ತಕ್ಷಣವೇ ಅರ್ಜಿ ಸಲ್ಲಿಸಿ. ಅರ್ಜಿ ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬರ ಪರಿಹಾರದ ಹಣ :

ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರಗಾಲ ರಾಜ್ಯದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಜಮೀನುಗಳಿಗೆ ನೀರುಣಿಸುವುದು ಕಷ್ಟವಾಗಿದ್ದು, ರೈತರು ಮತ್ತು ಸಾಮಾನ್ಯ ಜನರು ನೀರಿಗಾಗಿ ಪರದಾಡುವಂತಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಬರ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲು ಕೆಲವು ಕ್ರಮಗಳನ್ನು ಘೋಷಿಸಿದೆ.

ಬರಗಾಲದಿಂದ ನಲುಗಿರುವ ರೈತರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಈ ಬಾರಿ ಉತ್ತಮ ಕ್ರಮ ಕೈಗೊಂಡಿದೆ. ಬರದಿಂದ ಉಂಟಾದ ನಷ್ಟಕ್ಕೆ ಪರಿಹಾರವಾಗಿ, ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. ಈ ಧನಸಹಾಯವು ರೈತರಿಗೆ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಬೆಳೆ ಋತುವಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

2023-24ನೇ ಸಾಲಿನಲ್ಲಿ ಬಿತ್ತನೆ ಮಾಡಿದ 1,09,729 ರೈತರಿಗೆ ಒಂದು ಭಾರಿ ಸಹಾಯಹಸ್ತ ನೀಡಿದೆ ರಾಜ್ಯ ಸರ್ಕಾರ. ಬರದಿಂದ ಬಾಧಿತ ರೈತರಿಗೆ 37 ಕೋಟಿ 59 ಲಕ್ಷ ರೂಪಾಯಿಗಳ ಬರ ಪರಿಹಾರ ಧನ(Draught relief fund)ವನ್ನು ಬಿಡುಗಡೆ ಮಾಡಿದೆ. ಈ ಧನದ ಮೂಲಕ ರೈತರ ಖಾತೆಗೆ 2000 ರೂಪಾಯಿಗಳನ್ನು ಮೊದಲ ಕಂತಾಗಿ ಜಮಾ ಮಾಡಲಾಗಿದೆ. ಈ ಸಹಾಯಧನ ರೈತರಿಗೆ ಒಂದು ಭರವಸೆಯ ಕಿರಣವಾಗಿದೆ.

ಆದರೆ, ಕೆಲವು ರೈತ ಬಂಧುಗಳಿಗೆ ಬರ ಪರಿಹಾರದ ಹಣ ಖಾತೆಗೆ ಜಮಾವಾಗಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಹಣ ಪಡೆಯಲು ರೈತರು ತಮ್ಮ ಹೆಸರಿನಲ್ಲಿ FID (Farmer Identification Number) ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. FID ಇಲ್ಲದಿದ್ದರೆ ತಕ್ಷಣ ಅರ್ಜಿ ಸಲ್ಲಿಸಿ ಪಡೆಯಬೇಕು.
ಏಕೆಂದರೆ, FID ಇಲ್ಲದ ರೈತರಿಗೆ ಬರ ಪರಿಹಾರ ಸಿಗುವುದಿಲ್ಲ. ಬರ ಪರಿಹಾರದ ಹಣವನ್ನು ಪಡೆಯಬೇಕಾದರೆ FID ನಂಬರ್ ಸಲ್ಲಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹಾಗಾಗಿ FID ಮಾಡಿಸುವುದು ಕಡ್ಡಾಯವಾಗಿದೆ, ಒಂದು ವೇಳೆ ರೈತರ ಬಳಿ ಏನಾದರೂ ಸಂಖ್ಯೆ ಇಲ್ಲದೆ ಇದ್ದರೆ ತಕ್ಷಣವೇ ಎಫ್ಐ ಡಿ ಸಂಖ್ಯೆಯನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕು. FID ನಂಬರಗಾಗಿ ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು? ಎಂಬ ಮಾಹಿತಿ ಕೆಳಗಿನಂತಿದೆ.

whatss

ಸರಕಾರದ ಸೌಲಭ್ಯ ಪಡೆಯಲು ಎಫ್‌ಐಡಿ ಕಡ್ಡಾಯ

FID ಎಂದರೇನು?

FID ಎಂದರೆ “Farmer ID ” ಅಥವಾ “Farmer Identification Number”. ಇದು ಕರ್ನಾಟಕ ಸರ್ಕಾರದಿಂದ ರೈತರಿಗೆ ನೀಡಲಾಗುವ ಒಂದು ಗುರುತಿನ ಸಂಖ್ಯೆಯಾಗಿದೆ. ಈ ಸಂಖ್ಯೆಯು ರೈತರ ಭೂಮಿ ಮತ್ತು ಬೆಳೆಗಳ ಬಗ್ಗೆ ಮತ್ತು ರೈತರು ಸರ್ಕಾರದ ವಿವಿಧ ಕೃಷಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.

ಕೃಷಿ ಇಲಾಖೆಗೆ ಸಂಬಂಧಿಸಿದ ಮತ್ತು ಕೃಷಿಗೆ ಸಬಂದ ಪಟ್ಟ ಮಾಹಿತಿಗೆ Farmers Registration and unified beneficiary information systems (FRUITS ) ಇದರ ಅಡಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸುವುದು ರೈತರಿಗೆ ಕಡ್ಡಾಯವಾಗಿದೆ. ಅಂದರೆ FID ಮತ್ತು FRUITS ರೆಜಿಸ್ಟ್ರೇಷನ್ ಆಗಲೇ ಬೇಕು. FID ಗೆ ನೋಂದಾಯಿತ ಆಗದ್ದಿದರೆ ನೀವು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳದೇ ವಂಚಿತರಾಗುತ್ತಿರಿ.

ಎಸ್ ಐ ಡಿ ಮಾಡಿಸಲು ಬೇಕಾದ ದಾಖಲೆಗಳು:

ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಮತ್ತು ಬರ ಪರಿಹಾರದ ಹಣ ಪಡೆಯಲು ಎಫ್ಐಡಿ (Farmer ID) ಅಗತ್ಯ. ಅದಕ್ಕೆ ಬೇಕಾಗುವ ದಾಖಲೆಗಳು ಕೆಳಗಿನಂತಿವೆ:

ಆಧಾರ್ ಕಾರ್ಡ್(Aadhar Card)
ಆದಯ ಪ್ರಮಾಣ ಪತ್ರ
ಪಡಿತರ ಚೀಟಿ(Ration Card)
ವಿಳಾಸದ ಪುರಾವೆ(Address Proof)
ಮೊಬೈಲ್ ನಂಬರ್

ಎಫ್ ಐ ಡಿ ಪಡೆಯುವುದು ಹೇಗೆ?

ಎಫ್ ಐ ಡಿ (Farmer Identification Number), ಈ ಸಂಖ್ಯೆಯನ್ನು ಪಡೆಯಲು ರೈತರು ಕೆಲವು ಸುಲಭವಾದ ಹಂತಗಳನ್ನು ಅನುಸರಿಸಬೇಕು.

ಅರ್ಜಿ ಸಲ್ಲಿಸಲು ಕೆಲವು ಕೇಂದ್ರಗಳು:

ರೈತ ಸಂಪರ್ಕ ಕೇಂದ್ರ: ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ರೈತರಿಗೆ ಈ ಕೇಂದ್ರಗಳು ಹತ್ತಿರದಲ್ಲೇ ಲಭ್ಯವಿರುತ್ತವೆ.

ತೋಟಗಾರಿಕೆ ಇಲಾಖೆ: ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು.

ಕೃಷಿ ರೇಷ್ಮೆ ಇಲಾಖೆ: ರೇಷ್ಮೆ ಉತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸಬಹುದು.

ನಾಗರಿಕ ಸೇವಾ ಕೇಂದ್ರ: ಈ ಕೇಂದ್ರಗಳು ಎಲ್ಲಾ ರೀತಿಯ ಸರ್ಕಾರಿ ಸೇವೆಗಳನ್ನು ಒದಗಿಸುತ್ತವೆ, ಎಫ್ ಐ ಡಿ ಅರ್ಜಿ ಸಲ್ಲಿಸುವುದೂ ಒಂದು.

ಈ ಕೇಂದ್ರಗಳಲ್ಲಿ ಲಭ್ಯವಿರುವ ಅರ್ಜಿ ಫಾರ್ಮ್‌ನ್ನು ಪಡೆದುಕೊಳ್ಳಿ. ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ದಾಖಲೆಗಳ ಜೊತೆಗೆ ಅರ್ಜಿ ಫಾರ್ಮ್‌ನ್ನು ಸಲ್ಲಿಸಿ.
ಅರ್ಜಿ ಶುಲ್ಕವನ್ನು ಪಾವತಿಸಿ. ಅರ್ಜಿ ಸ್ವೀಕೃತಿಯನ್ನು ಪಡೆದುಕೊಳ್ಳಿ.

ಬರ ಪರಿಹಾರದ ಹಣ ಖಾತೆಗೆ ಜಮಾ ಆಗಿದೆಯೇ? ಚೆಕ್ ಮಾಡುವ ಸುಲಭ ವಿಧಾನ ಇಲ್ಲಿದೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರದ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಕೆಲವು ಸುಲಭ ವಿಧಾನ

ಅಧಿಕೃತ ವೆಬ್‌ಸೈಟ್ ಮೂಲಕ:

https://fruits.karnataka.gov.in ಗೆ ಭೇಟಿ ನೀಡಿ.

‘Farmer Declaration Report’ ಆಯ್ಕೆಮಾಡಿ.
ನಿಮ್ಮ ಆಧಾರ್ ಸಂಖ್ಯೆ ಅಥವಾ FID ಸಂಖ್ಯೆ ನಮೂದಿಸಿ.

‘Get Details’ ಕ್ಲಿಕ್ ಮಾಡಿ.

ನಿಮ್ಮ ಖಾತೆಗೆ ಜಮಾ ಆಗಿರುವ ಬರ ಪರಿಹಾರದ ಹಣದ ವಿವರಗಳನ್ನು ನೋಡಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!