ಡ್ರೈವಿಂಗ್ ಟೆಸ್ಟ್ (driving test) ನೀಡಲು RTO ಗೆ ಹೋಗುವ ಅಗತ್ಯವಿಲ್ಲ! ಜೂನ್ 1 ರಿಂದ ಜಾರಿಯಾಗುತ್ತಿದೆ ಡ್ರೈವಿಂಗ್ ಲೈಸೆನ್ಸ್ ನ (driving license) ನಿಯಮ(Rule)ದಲ್ಲಿ ಭಾರಿ ಬದಲಾವಣೆ.
ಇತ್ತೀಚಿಗೆ ವಾಹನಗಳ ಮಾರಾಟವು ಹೆಚ್ಚಾಗುತ್ತಿದೆ, ಇದರ ಜೊತೆಯಲ್ಲಿ ಗ್ರಾಹಕರು ಹೆಚ್ಚು ಹೆಚ್ಚು ತಮಗಿಷ್ಟವಾದಂತಹ ವಾಹನಗಳನ್ನು ಖರೀದಿಸುತ್ತಿದ್ದಾರೆ. ಆದರೆ ನಾವು ವಾಹನಗಳನ್ನು ಚಲಾಯಿಸಲು ಪರವಾನಗಿ ಅತ್ಯವಶ್ಯಕ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ನಾವು ವಾಹನಗಳನ್ನು ಚಲಾಯಿಸಲಾಗುವುದಿಲ್ಲ. ಆದರೆ ಈ ಡ್ರೈವಿಂಗ್ ಲೈಸೆನ್ಸ್ ಅನ್ನು ಮಾಡಿಸಲು ಗ್ರಾಹಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಆರ್‌ಟಿಓ (RTO) ಕಚೇರಿಗಳಿಗೆ ಹೋಗುವ ಮೂಲಕ ಸಮಯವನ್ನು ಡ್ರೈವಿಂಗ್ ಲೈಸನ್ಸ್ ಗಾಗಿಯೇ ಮೀಸಲಿಡುತ್ತಿದ್ದರು. ಇನ್ನು ಆರ್ ಟಿ ಓ (RTO) ಕಚೇರಿಗಳಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಟೆಸ್ಟ್ ಅಟೆಂಡ್ (test attend) ಮಾಡಬೇಕಿತ್ತು. ತದನಂತರ ನಮಗೆ ಡ್ರೈವ್ ಮಾಡಲು ಬರುತ್ತದೆ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿ, ನಾವು ಟೆಸ್ಟ್ ನಲ್ಲಿ ಪಾಸ್ ಆದರೆ ಮಾತ್ರ ನಮಗೆ ಡ್ರೈವಿಂಗ್ ಲೈಸೆನ್ಸ್ ನೀಡುತ್ತಿದರು. ಇದಕ್ಕಾಗಿ ಹಲವು ದಿನಗಳ ಕಾಲ ಆರ್ ಟಿ ಓ ಕಚೇರಿಯಲ್ಲಿ ಸಾಲಿನಲ್ಲಿ ನಿಲ್ಲುವ ಮೂಲಕ ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆಯುತ್ತಿದ್ದರು.ಆದರೆ ಇದೀಗ ಪರವಾನಗಿ ನಿಯಮದಲ್ಲಿ ಭಾರಿ ಬದಲಾವಣೆಯಾಗುತ್ತಿದೆ. ಈ ಒಂದು ಬದಲಾವಣೆ ಯಾವಾಗ ಜಾರಿಯಾಗುತ್ತಿದೆ? ಇದರ ನಿಯಮಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಚಾಲನಾ ಪರವಾನಗಿಯ ನಿಯಮದಲ್ಲಿ ಬದಲಾವಣೆ :
ಹೌದು, ಇನ್ನು ಮುಂದೆ ಡ್ರೈವಿಂಗ್ ಟೆಸ್ಟ್ ನೀಡಲು RTO ಗೆ ಹೋಗುವ ಅಗತ್ಯವಿಲ್ಲ.
ಆರ್ಟಿಒ (RTO) ಗೆ ಹೋಗಿ ತಮ್ಮ ಡಿಎಲ್ ಪಡೆಯಲು ದೊಡ್ಡ ಸಾಲಿನಲ್ಲಿ ಕಾಯುವ ಅಗತ್ಯವನ್ನು ನಿವಾರಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ (Union Ministry of Road Transport) ಚಾಲನಾ ಪರವಾನಗಿಯ ನಿಯಮದಲ್ಲಿ ಭಾರಿ ಬದಲಾವಣೆಯನ್ನು ತಂದಿದೆ. ಹೊಸ ಚಾಲನಾ ಪರವಾನಗಿ ನಿಯಮಗಳಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿಗಳನ್ನು ಹಾಕುತ್ತಿರುವ ಅರ್ಜಿದಾರರಿಗೆ ಹೆಚ್ಚು ಸಂತೋಷದ ವಿಷಯವಾಗಿದೆ.
ಈ ಹೊಸ ನಿಯಮದ ಜಾರಿ ಯಾವಾಗ?
ಸರ್ಕಾರ ಚಾಲನಾ ಪರವಾನಗಿಯ ನಿಯಮದಲ್ಲಿ ಬದಲಾವಣೆಯನ್ನು ತಂದಿದ್ದು, ಜೂನ್ 1 2024 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಒಟ್ಟಾರೆಯಾಗಿ ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯುಲು ತುಂಬಾ ಸರಳ ವಿಧಾನವನ್ನು ಈ ನಿಯಮದಡಿ ಜಾರಿಗೊಳಿಸಲಾಗಿದೆ. ಇನ್ನು ಈ ನಿಯಮವು ಜೂನ್ 1 ರಿಂದ ಜಾರಿಯಾಗಲಿದೆ ಎಂದು ಕೇಂದ್ರ ರಸ್ತೆಗಳು ಮತ್ತು ಮೋಟಾರುಮಾರ್ಗ ಸಚಿವಾಲಯ ತಿಳಿಸಿದೆ.
ಆರ್ಟಿಒ (RTO) ಹೊರತುಪಡಿಸಿ ಎಲ್ಲಿ ಸಿಗುತ್ತದೆ ಡ್ರೈವಿಂಗ್ ಲೈಸೆನ್ಸ್:
ಆರ್ಟಿಒ (RTO) ಹೊರತುಪಡಿಸಿ ಖಾಸಗಿ ಚಾಲನಾ ತರಬೇತಿ ಕೇಂದ್ರದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು. ಖಾಸಗಿ ಚಾಲನಾ ತರಬೇತಿ ಕೇಂದ್ರದಲ್ಲಿ ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಗೆ ಹೋಗಬೇಕು. ಟೆಸ್ಟ್ ಪಾಸ್ (test pass) ಆದರೆ ಖಾಸಗಿ ತರಬೇತಿ ಸಂಸ್ಥೆ ನಿಮಗೆ ಡ್ರೈವಿಂಗ್ ಲೈಸೆನ್ಸ್ ನೀಡುತ್ತದೆ.ಆದರೆ ಸರ್ಕಾರ ಸೂಚಿಸಿದ ತರಬೇತಿ ಕೇಂದ್ರಗಳಲ್ಲಿ ಮಾತ್ರ ಈ ಸೌಲಭ್ಯ ದೊರಯಲಿದೆ.
ವಿವಿಧ ರೀತಿಯ ಚಾಲನಾ ಪರವಾನಗಿಗಳಿಗೆ ವಿಭಿನ್ನ ಶುಲ್ಕಗಳು ನಿಗದಿಯಾಗಿವೆ. ಶುಲ್ಕದ ವಿವರಗಳು :
ಕಲಿಕಾ ಪರವಾನಗಿ (Learner’s License): 200 ರೂ.
ಕಲಿಕಾ ಪರವಾನಗಿ ನವೀಕರಣ (Learner’s License Renewal): 200 ರೂ.
ಅಂತರಾಷ್ಟ್ರೀಯ ಪರವಾನಗಿ(International Driving License): 1000 ರೂ.
ಶಾಶ್ವತ ಪರವಾನಗಿ (Driving License): 200 ರೂ.
ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ( Private Driving Training Centers) ಡ್ರೈವಿಂಗ್ ಲೈಸೆನ್ಸ್ ವಿತರಣೆ ಮಾಡಲು ಕೆಲವು ನಿಯಮಗಳನ್ನು ಪಾಲಿಸಬೇಕು:
ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಅನ್ನು ಎಲ್ಲ ಖಾಸಗಿ ಚಾಲನಾ ತರಬೇತಿ ಕೇಂದ್ರಗಳಲ್ಲಿ ಅಟೆಂಡ್ ಮಾಡಲು ಸಾಧ್ಯವಿಲ್ಲ.ಇದಕ್ಕಾಗಿ ಸರಕಾರ ಕೆಲವು ನಿಬಂಧನೆಗಳನ್ನು ತಿಳಿಸಿದೆ.
ಅವುಗಳೆಂದರೆ :
ಖಾಸಗಿ ಚಾಲನಾ ತರಬೇತಿ ಕೇಂದ್ರಗಳು ಪರೀಕ್ಷಾ ಸೌಲಭ್ಯಗಳನ್ನು (exam facilities) ಹೊಂದಿರಬೇಕು.
ತರಬೇತಿಗಾರನಿಗೆ 5 ವರ್ಷಗಳ ಕಾಲ ವಾಹನ ಚಾಲನೆಯ ಅನುಭವ ಇರಬೇಕು.
ತರಬೇತಿಗಾರ ಪರೀಕ್ಷೆ ನಡೆಸಲು ಜಾಗ ಹೊಂದಿರಬೇಕು. ಎರಡು ಚಕ್ರದ ವಾಹನಗಳಿಗೆ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಲೈಸೆನ್ಸ್ ಟೆಸ್ಟ್ (license test) ಮಾಡಲು ಕನಿಷ್ಠ 1 ಎಕರೆಯನ್ನು ಹೊಂದಿರಬೇಕು. ಹಾಗೂ ಭಾರಿ ವಾಹನಗಳಿಗೆ 2 ಎಕರೆ ವಿಸ್ತೀರ್ಣ ಇರಬೇಕು.
ತರಬೇತಿಯಲ್ಲಿ ಥಿಯರಿ ಹಾಗೂ ಪ್ರಾಯೋಗಿಕವಾಗಿ ನಡೆಸಬೇಕು. ಥಿಯರಿ ವಿಭಾಗವನ್ನು 8 ಗಂಟೆ ಕನಿಷ್ಠ ಹೇಳಿಕೊಡಬೇಕು ಹಾಗೂ ಪ್ರಾಯೋಗಿಕ 21 ಗಂಟೆ ತರಬೇತಿ ನೀಡಬೇಕು.
ದೊಡ್ಡ ಮೋಟರ್ ವಾಹನ ಸವಾರರಿಗೆ 38 ಗಂಟೆಗಳ ಕಾಲ ತರಬೇತಿ ನೀಡಬೇಕು. 8 ಗಂಟೆ ಥಿಯರಿ ಕ್ಲಾಸ್ ಹಾಗೂ 31 ಗಂಟೆ ಪ್ರಾಯೋಗಿಕ ಕ್ಲಾಸ್ (practical class) ಇರಬೇಕು. ಭಾರಿ ವಾಹನ ಸವಾರರಿಗೆ ತರಬೇತಿಯನ್ನು 6 ವಾರಗಳಲ್ಲಿ ಪೂರ್ಣ ಗೊಳಿಸಬೇಕು.
ಬಹಳ ಮುಖ್ಯವಾಗಿ ತರಬೇತುದಾರನಿಗೆ ಬಯೋಮೆಟ್ರಿಕ್ಸ್ (biometric) ಮತ್ತು ಮಾಹಿತಿ ತಂತ್ರಜ್ಞಾನ (information technology) ವ್ಯವಸ್ಥೆಗಳ ಬಗ್ಗೆ ತಿಳಿದಿರಬೇಕು ಹಾಗೂ ತರಬೇತುದಾರರು ಕನಿಷ್ಟ ಹೈಸ್ಕೂಲ್ ಡಿಪ್ಲೊಮಾ ಅಥವಾ ತತ್ಸಮಾನ ಶಿಕ್ಷಣವನ್ನು ಹೊಂದಿರಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.