ಈ ರೈತರಿಗೆ ಬೆಳೆ ಹಾನಿ ಪರಿಹಾರದ 2000/- ರೂ. ಜಮಾ ಆಗಿದೆ, ನಿಮ್ಮ ಖಾತೆ ಹೀಗೆ ಚೆಕ್ ಮಾಡಿ

bele parihar

ಬರದಿಂದ ಕಂಗಾಲಾಗಿರುವ ರೈತರ ನೆರವಿಗೆ ರಾಜ್ಯ  ಸರ್ಕಾರ ಮುಂದಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ( State Government ) ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣವನ್ನು ಜಮಾ ಮಾಡಲು ನಿರ್ಧರಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈ ಯೋಜನೆಯ ಮುಖ್ಯ ಉದ್ದೇಶ ( Purpose ) :

ಈಗಾಗಲೇ ಹಲವಾರು ರೈತರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ, ಬರಗಾಲ ಮುಂತಾದ ಹಲವಾರು ಸಮಸ್ಯೆಗಳು ಇದ್ದಾವೆ. ರೈತರು ನಮ್ಮ ದೇಶದ ಬೆನ್ನೆಲುಬು. ಅನ್ನದಾತೋ ಸುಖಿನೋ ಭವ ಎಂಬ ಮಾತಿದೆ. ಹೌದು, ರೈತರು ಸುಖವಾಗಿ ಇದ್ದರೆ, ಇಡೀ ದೇಶವೇ ಸುಖವಾಗಿ ಇರುತ್ತದೆ. ಆದ್ದರಿಂದ ರೈತರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಅವರಿಗೆ ಯಾವುದೇ ಸಮಸ್ಯೆ ಬಂದರೂ ಕೂಡ ಅವರ ಪರವಾಗಿ ರಾಜ್ಯ ಸರ್ಕಾರ ಇದೆ. ಅವರ ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ರೈತರಿಗಾಗಿ ಹಲವು ಯೋಜನೆ ಮತ್ತು ಸಾಲ ಸೌಲಭ್ಯಗಳನ್ನು ಜಾರಿಗೆ ತಂದಿದೆ. ಹಾಗೆಯೇ ರೈತರಿಗಾಗಿ ಬರ ಪರಿಹಾರವನ್ನು ನೀಡುತ್ತಿದೆ.

ಬೆಳೆ ಹಾನಿ ಪರಿಹಾರದ ನಿಧಿ ಬಿಡುಗಡೆ

ಈಗಾಗಲೇ ರೈತರಿಗೆ ಬರ ಪರಿಹಾರ ಬಿಡುಗಡೆ ಆಗಿದ್ದು, ಬರ ಪರಿಹಾರದ ಮೊದಲ ಕಂತಿನ 2,000 ರೂ. ಹಣವನ್ನು ಪ್ರತಿಯೊಬ್ಬ ರೈತನಿಗೂ ಒಂದು ವಾರದೊಳಗೆ ಹಣ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಪಿರಿಯಾಪಟ್ಟಣ ( Piriyapattana ) ತಾಲೂಕಿನ ಬೈಲುಕುಪ್ಪೆಯಲ್ಲಿ ( Bailukuppe ) ಮಾತನಾಡಿದ ಅವರು, ಕೇಂದ್ರ ಸರ್ಕಾರ ಇನ್ನೂ ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಕೊಟ್ಟಿಲ್ಲ. 2 ತಿಂಗಳ ಹಿಂದೆಯೇ ಖುದ್ದಾಗಿ ಭೇಟಿ ನೀಡಿ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇನೆ. ಬೇಗನೆ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿ, ಎಂದು ಕೇಳಿದ್ದೆವು. ಪ್ರಧಾನಿ ಬೆಂಗಳೂರಿಗೆ ಬಂದಾಗಲೂ ಬರ ಪರಿಹಾರ ನೀಡುವಂತೆ ಕೇಳಿದ್ದೆ. ಸದ್ಯಕ್ಕೆ ರಾಜ್ಯದಲ್ಲಿ ನಾವೇ ಬರ ಪರಿಸ್ಥಿತಿ ನಿರ್ವಹಣೆ ಮಾಡುತ್ತಿದ್ದೇವೆ ಎಂದು ರೈತರಿಗೆ ಭರವಸೆ ನೀಡಿದರು.

whatss

ಮೊದಲ ಕಂತಿನ ಹಣ 2000 ರೂ. ಪ್ರತಿಯೊಬ್ಬ ರೈತನ ಖಾತೆಗೆ ಜಮಾ ಆಗಲಿದೆ :

ರಾಜ್ಯ ಸರ್ಕಾರ ಈವರೆಗೆ ಬೆಳೆ ಹಾನಿಗೆ ಒಳಗಾದವರಿಗೆ ಮತ್ತು ಬರ ಪರಿಹಾರಕ್ಕೆ 550 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರೈತರಿಗೆ 2,000 ರೂಪಾಯಿ ಬರ ಪರಿಹಾರಕ್ಕಾಗಿ ನೀಡುತ್ತಿದೆ. ಒಂದು ವಾರದೊಳಗೆ ಎಲ್ಲಾ ರೈತರ ಖಾತೆಗೆ ಮೊದಲ ಕಂತಿನ ಹಣ ತಲುಪುತ್ತೆ’’ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಸರಕಾರದಿಂದ ಅರ್ಹ ರೈತರಿಗೆಗೆ ಮೊದಲ ಕಂತಿನ ಬರ ಪರಿಹಾರದ ಹಣವನ್ನು ವರ್ಗಾವಣೆ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. FID ಸಂಖ್ಯೆ ಹೊಂದಿರುವ ಅರ್ಹ ರೈತರ ಖಾತೆಗೆ ಮೊದಲ ಕಂತಿನ ರೂ 2,000 ಹಣ ವರ್ಗಾವಣೆ ಪಕ್ರಿಯೆಯು ಕೂಡ ಆರಂಭವಾಗಿದೆ.

ರೈತರು ತಮ್ಮ ಬ್ಯಾಂಕ್ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ :

ವಿಧಾನ 1 :

ರಾಜ್ಯ ಸರ್ಕಾರದ ಬರ ಪರಿಹಾರದ ಅಧಿಕೃತ ವೆಬೈಟ್ ಗೆ ( Website ) ಭೇಟಿ ನೀಡಿ:
ಅಧಿಕೃತ ವೆಬ್ ಸೈಟ್ ನ ಲಿಂಕ್ : https://landrecords.karnataka.gov.in/pariharapayment/ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿಯಬಹುದು.

ಅಥವಾ ನಿಮ್ಮ ಬ್ಯಾಂಕಿನ ಸಹಾಯವಾಣಿಗೆ ಮಿಸ್ ಕಾಲ್ ಮಾಡಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ( Balance Check ) ಮಾಡುವ ಮೂಲಕ ನಿಮ್ಮ ಖಾತೆಗೆ 2000 ರೂ. ವರ್ಗಾವಣೆ ಆಗಿರುವುದನ್ನು ತಿಳಿದುಕೊಳ್ಳಬಹುದು.

ವಿಧಾನ 2 :

ರಾಜ್ಯ ಸರ್ಕಾರದ ವಿವಿಧ ಯೋಜನೆಗಳು ನೇರ ನಗದು ವರ್ಗಾವಣೆ ಡಿಬಿಟಿ ಮೂಲಕ ವರ್ಗಾವಣೆಯಾದ ಹಣದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ( DBT Application) ಅನ್ನು ಬಿಡುಗಡೆ ಮಾಡಿದ್ದು ರೈತರು ಆ ಅಪ್ಲಿಕೇಶನ್ ನಲ್ಲಿ ಡೌನ್ಲೋಡ್.( Download ) ಮಾಡಿಕೊಂಡು ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು.

ಈ ಬರ ಪರಿಹಾರದ ಹಣದ ಜಮಾ ವಿವರವನ್ನು ಈ ವಿಧಾನದ ಮೂಲಕ ನೀವು ಚೆಕ್ ಮಾಡಿಕೊಳ್ಳಬಹುದು.
ಈ ಎರಡು ವಿಧಾನವನ್ನು ಅನುಸರಿಸಿ ರೈತರು ತಮ್ಮ ಜಮೀನು ಮತ್ತು ಬ್ಯಾಂಕ್ ಖಾತೆ ವಿವರ ಕೃಷಿ ಇಲಾಖೆಯ ಫ್ರೂಟ್ಸ್ ವೆಬೈಟ್ ನಲ್ಲಿ ದಾಖಲಾಗಿ FID ನಂಬರ್ ಸೃಜನೆ ಅಗಿರುತ್ತದೆ ಕೂಡ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ಎಫ್ಐಡಿ ನಂಬರ್ ಕಡ್ಡಾಯ ( FID Number is Compulsory ) :

ಬರ ಪರಿಹಾರ ಮತ್ತು ಸರ್ಕಾರದ ಇತರೆ ಇಲಾಖೆಗಳ ಸಹಾಯಧನ ಪಡೆಯಲು ಕಡ್ಡಾಯವಾಗಿ ಸರಕಾರದ ವಿವಿಧ ಇಲಾಖೆ ಮೂಲಕ ತಿಳಿಸಿರುವ ಮಾಹಿತಿಯ ಪ್ರಕಾರ ಈ ವರ್ಷ ಬರ ಪರಿಹಾರ ಪಡೆಯಲು FID ನಂಬರ್ ಕಡ್ಡಾಯವಾಗಿ ಮಾಡಲಾಗಿದ್ದು. ಈ ನಂಬರ್‌ ಹೊಂದಿರುವವರಿಗೆ ಮಾತ್ರ ಪರಿಹಾರದ ಹಣ ಜಮಾ ಅಗಲಿದೆ ಎಂದು ಈ ಮೂಲಕ ತಿಳಿಸಲಾಗಿದೆ.

ಆಧಾರ್ ಕಾರ್ಡ್ ಲಿಂಕ್ ಕೂಡ ಕಡ್ಡಾಯ ( Adhar Linking is Compulsory ) :

ಬರ ಪರಿಹಾರದ ಹಣ ಪಡೆಯಲು ಅಥವಾ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ತಿಳಿದು ಕೊಳ್ಳಲು ಆಧಾರ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

tel share transformed

 

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

    ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!