ಬರಗಾಲ(Draft)ದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಈ ವಾರದ ಅಂತ್ಯರಿಂದ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗೆ 2,000 ರೂ. ಬರ ಪರಿಹಾರ(Drought relief)ವನ್ನು ನೀಡಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ತಿಳಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
2000 ರೂಗಳ ಬರ ಪರಿಹಾರ :
ಈ ಯೋಜನೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಚಾಲನೆ ದೊರೆಯಲಿದೆ. ಬೆಳೆ ಪರಿಹಾರ ಹಣವನ್ನು ಡಿಬಿಟಿ(DBT) ಮೂಲಕ ನೇರವಾಗಿ ಜಮೆ ಮಾಡಲಾಗುವುದು. ರೈತ ನೋಂದಣಿ ಮತ್ತು ಫಲಾನುಭವಿ ಮಾಹಿತಿ ವ್ಯವಸ್ಥೆಯಲ್ಲಿ (FRUITS) ನೋಂದಾಯಿಸಿಕೊಳ್ಳಬೇಕು. ಇದು ಮೊದಲ ಬಾರಿಗೆ ಅಪ್ಲಿಕೇಶನ್ ಆಧಾರಿತ ವ್ಯವಸ್ಥೆಯನ್ನು ಪರಿಚಯಿಸಲಾಗಿರುವುದರಿಂದ ಪರಿಹಾರ ನೀಡುವುದು ಸ್ವಲ್ಪ ವಿಳಂಬವಾಗಿದೆ ಎಂದು ಕೂಡಾ ತಿಳಿಸಿದರು.
ಇನ್ನೂ ಕುಡಿಯುವ ನೀರು, ಮೇವು ಪೂರೈಕೆ ಸೇರಿದಂತೆ ಬರಗಾಲದ ಸಮಸ್ಯೆಗಳ ನಿವಾರಣೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆಗಳನ್ನು ಸರ್ಕಾರ ರಚಿಸಿದ್ದು, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳ ಪಿಡಿ ಖಾತೆಗಳಲ್ಲಿ 850 ಕೋಟಿ ರೂ.ಗಳು ಲಭ್ಯವಿದೆ ಎಂದು ಹೇಳಿಕೊಂಡರು. ಕೇಂದ್ರದ ಬರ ಅಧ್ಯಯನ ತಂಡವು ಅಕ್ಟೋಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿದೆ. ಅಕ್ಟೋಬರ್ 13 ರಂದು ತನ್ನ ವರದಿಯನ್ನು ಸಲ್ಲಿಸಿದೆ, ಆದರೆ ಇನ್ನೂ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ ಕೇಂದ್ರ ಸರ್ಕಾರ ಎಂದು ಕೇಂದ್ರ ಸರ್ಕಾರದ ನೆಪ ಹೂಡಿ ಟೀಕಿಸಿದೆ ಎಂದು ತಿಳಿದು ಬಂದಿದೆ.
ಕೇಂದ್ರದ ಬಿಜೆಪಿ ಸರಕಾರ ನೆರವನ್ನು ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು. “ಕೇಂದ್ರದ ಅಂತರ್ ಸಚಿವಾಲಯದ ತಂಡವು ಅಕ್ಟೋಬರ್ ಮೊದಲ ವಾರದಲ್ಲಿ ತನ್ನ ಬರ ಪ್ರವಾಸವನ್ನು ಪೂರ್ಣಗೊಳಿಸಿದೆ ಮತ್ತು ಅಕ್ಟೋಬರ್ 13 ರಂದು ತನ್ನ ವರದಿಯನ್ನು ಸಲ್ಲಿಸಿದೆ, ಆದರೆ ಇನ್ನೂ ಯಾವುದೇ ಹಣವನ್ನು ಬಿಡುಗಡೆ ಮಾಡಿಲ್ಲ ಮತ್ತು
ಮುಖ್ಯಮಂತ್ರಿಗಳು ಕೇಂದ್ರಕ್ಕೆ ಎರಡು ಬಾರಿ ಪತ್ರ ಬರೆದಿದ್ದಾರೆ, ನಾನು ಎರಡು ಬಾರಿ ಪತ್ರ ಬರೆದ್ದುದ್ದೇನೆ ಆದರೂ ಯಾವುದೇ ಪ್ರಯೋಜನವಾಗಿಲ್ಲ. ಕೇಂದ್ರ ಕೃಷಿ ಸಚಿವರು ಮತ್ತು ಗೃಹ ಸಚಿವರು ನಮ್ಮನ್ನು ಭೇಟಿ ಮಾಡಿಲ್ಲ. ಇಲಾಖೆ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಜ್ಞಾಪಕ ಪತ್ರ ಸಲ್ಲಿಸುವಂತೆ ಒತ್ತಾಯಿಸಲಾಯಿತು,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- SC-ST ಮಹಿಳೆಯರಿಗೆ 25 ಸಾವಿರ ರೂ. ಸಾಲ & ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ನಿಮ್ಮ ‘ಗ್ರಾಮ ಪಂಚಾಯತಿಯಲ್ಲಿ ನೀಡಲಾಗುವ ‘ಸೇವೆ’ಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
- ಮಹಿಳೆಯರಿಗೆ ಸಿಗಲಿದೆ 50 ಸಾವಿರ ರೂಪಾಯಿ ಸಹಾಯ ಧನ Apply Now
- ಗೃಹಲಕ್ಷ್ಮಿ 4ನೇ ಕಂತಿನ 2000/- ರೂ ಈ ಜಿಲ್ಲೆಯ ಮಹಿಳೆಯರ ಖಾತೆಗೆ ಜಮಾ
- ಈರುಳ್ಳಿ ದರ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಇಂದಿನ ಬೆಲೆ ಎಷ್ಟು ಗೊತ್ತಾ ?
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.