ಇದೀಗ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಈ ಹಿಂದೆ ರೈತರಿಗೆ ಬರ ಪರಿಹಾರ(drought relief)ಕ್ಕೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಹಾಗೆಯೇ ಇದೀಗ ಆ ಒಂದು ಉತ್ತಮ ಕಾರ್ಯ ಯಶಸ್ವಿಯಾಗಲಿದೆ. ಒಂದು ತಾಲೂಕಿಗೆ ಬರ ಪರಿಹಾರ ಈ ವಾರ ರಿಲೀಸ್ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ( Krishna Bhairegowda ) ಹೇಳಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣ :
ಕೇಂದ್ರ ಸರ್ಕಾರಕ್ಕೆ ಏನ್ ಡಿ ಆರ್ ಎಸ್ ( NDRS ) ನಿಂದ ಬರ ಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವು ಮನವಿ ಮಾಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿ ಮಾಡಿ ಶೀಘ್ರದಲ್ಲಿಯೇ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಆಗ್ರಹಿಸಿದ್ದಾರೆ.
ಸಕಾರಾತ್ಮಕ ಪ್ರತಿಕ್ರಿಯೆ ಕೇಂದ್ರ ಸರ್ಕಾರದಿಂದ ವ್ಯಕ್ತವಾದ ದಿನದಲ್ಲಿ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ಪಾವತಿ ಮಾಡಲು ಕಂದಾಯ ಇಲಾಖೆಯಿಂದ ಸಿದ್ಧತೆ ನಡೆಸಿದೆ. ಇದೀಗ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಇಲಾಖೆಯ ಹಿರಿಯಾಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಪರಿಹಾರ ಸಂದಾಯಕ್ಕೆ ಆಗಬೇಕಾದ ತಯಾರಿಯನ್ನು ನಡೆಸಿ ಈ ಬಗ್ಗೆ ಚರ್ಚಿಸಿ ಸೂಚನೆಗಳನ್ನು ನೀಡಿದ್ದಾರೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿಯನ್ನು ಅಪ್ ಡೇಟ್ ( Update ) ಮಾಡಲು ಅವಕಾಶ ನೀಡುತ್ತಿದ್ದು ಈ ಕಾರ್ಯವು ಬರದಿಂದ ಸಾಗುತ್ತಿದೆ. ಮೊದಲ ಕಂತಿನ ಹಣ ಕೂಡಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಬೇಕು ಎಂದು ಕಂದಾಯ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಒಂದು ತಾಲೂಕಿಗೆ ಪ್ರಾಯೋಗಿಕ ( Practically ) ಬರ ಪರಿಹಾರ :
ಈ ಬರ ಪರಿಹಾರವನ್ನು ರೈತರಿಗೆ ಅಥವಾ ಆ ತಾಲೂಕಿಗೆ ಪ್ರೂಟ್‌ಆಪ್(Fruit app) ನಿಂದ ವಿತರಣೆ ಮಾಡಲಾಗುತ್ತದೆ. ಹಾಗೂ ಈ ವಾರದಲ್ಲಿ ಪ್ರಾಯೋಗಿಕವಾಗಿ ಈ ಒಂದು ತಾಲೂಕಿನಲ್ಲಿ ನೀಡಲಾಗುತ್ತದೆ. ನಂತರ ಇದರಲ್ಲಿ ಬದಲಾವಣೆ ಅಥವಾ ಸುಧಾರಣೆ ಕಂಡಲ್ಲಿ ಈ ಒಂದು ಯೋಜನೆಯನ್ನು ಬೇರೆ ಬೇರೆ ಊರು ಅಥವಾ ತಾಲೂಕುಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರೂಟ್ ಆಪ್ ನಲ್ಲಿ ಬರ ಪರಿಹಾರ ನಡೆಸಲಾಗುತ್ತದೆ :
ಪ್ರೂಟ್ ಎಂಬ ಆಪ್‌ನಲ್ಲಿ ಬರ ಪರಿಹಾರದ ಯೋಜನೆಯನ್ನು ನಿಗದಿ ಪಡಿಸಿದ ತಾಲೂಕಿನಲ್ಲಿ ಕೈಗೊಂಡು ಅದರಲ್ಲಿ ಏನಾದರೂ ತಪ್ಪುಗಳು ಕಂಡು ಬಂದರೆ ಸರಿಪಡಿಸಲಾಗುತ್ತದೆ. ಹಾಗೆಯೇ ಈ ಆಪ್ ಬರ ಪರಿಹಾರಕ್ಕೆ ಶಾಶ್ವತ ಪರಿಹಾರ ನೀಡುತ್ತದೆ. ಈಗಾಗಲೇ ಪ್ರೂಟ್ ಆಪ್‌ನಲ್ಲಿ ಈಗ ಶೇ. 5೦ ರಷ್ಟು ರೈತರು ಬರ ಪರಿಹಾರಕ್ಕೆ ಅರ್ಜಿ ನೊಂದಾಯಿಸಿದ್ದಾರೆ. ಈಗ ಅಭಿಯಾನ ನಡೆಯುತ್ತಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗೆ ನೇರ ಹಣ ಜಮಾ ಆಗುತ್ತದೆ ಎಂದು ತಿಳಿದು ಬಂದಿದೆ.
ಬರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ :
ಹೌದು, ಈಗಾಗಲೇ ರಾಜ್ಯದಲ್ಲಿ 236 ತಾಲೂಕಿಗಳಲ್ಲಿ ಬರವಿದೆ. ಇದರ ಕುರಿತು ಕೇಂದ್ರಕ್ಕೆ ಮನವರಿಕೆ ಮಾಡಿದ್ದೇವೆ. ಹಾಗೆಯೇ ಕೇಂದ್ರ ಸರಕಾರ ಇಷ್ಟರಲ್ಲಿಯೇ ಪರಿಹಾರ ನೀಡಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ರಾಜ್ಯದ ಎಲ್ಲಾ ಮಹಿಳೆಯರಿಗೆ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
- ಇದುವರೆಗೂ ಗೃಹಲಕ್ಷ್ಮಿ 2000/- ಹಣ ಬರದೇ ಇದ್ದವರಿಗೆ ವಿಶೇಷ ಶಿಬಿರ ಆಯೋಜನೆ! ಇಲ್ಲಿ ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಿ
- ರಾಜ್ಯ ಸರ್ಕಾರದಿಂದ ಉಚಿತ ಮನೆ ಪಡೆಯಲು ಹೀಗೆ ಅರ್ಜಿ ಹಾಕಿ!
- ಈ ರೈತರ ಖಾತೆಗೆ ಮಧ್ಯಂತರ ಬೆಳೆ ವಿಮೆ ಜಮಾ ಆಗಿದೆ, ಮೊಬೈಲ್ ನಲ್ಲೆ ಹೀಗೆ ಚೆಕ್ ಮಾಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.