ATM’ ನಿಂದ ಹಣ ವಿತ್ ಡ್ರಾ ಮಾಡೋರಿಗೆ ಈ ನಿಯಮ ಅನ್ವಯ..! ಇಲ್ಲಿದೆ ಮಾಹಿತಿ

IMG 20240831 WA0004

ಭಾರತದಲ್ಲಿ ಡಿಜಿಟಲ್ ವಹಿವಾಟು(Digital Transaction) ಪ್ರಾರಂಭವಾದಾಗಿನಿಂದ ಜನರು ನಗದು ವಹಿವಾಟುಗಳನ್ನು ಕಡಿಮೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆನ್‌ಲೈನ್ ವಹಿವಾಟು(Online Transaction) ಹೆಚ್ಚಾದರೂ, ಜನರು ಇನ್ನೂ ಬ್ಯಾಂಕ್(Bank) ಅಥವಾ ಎಟಿಎಂಗಳಿಂದ(ATM) ಹಣ ತೆಗೆಯುತ್ತಾರೆ. ಎಟಿಎಂನಿಂದ ಹರಿದ ನೋಟು ಬಂದರೆ ನೀವು ಕೂಡಲೇ ಬ್ಯಾಂಕ್ ಗೆ ಹೋಗಿ ಹಣ ಬದಲಾಯಿಸಿಕೊಳ್ಳಬಹುದು.ಇದಕ್ಕೆ ಯಾವ ಶುಲ್ಕ ಕೂಡ ಇರಲ್ಲ. ಇನ್ನು ಕೆಲವೊಮ್ಮೆ ಎಟಿಎಂಗಳಿಂದ ನಕಲಿ ನೋಟುಗಳು(Duplicates Notes) ಬರುತ್ತವೆ ಎಂಬ ಘಟನೆಗಳನ್ನು ಕೇಳಿದ್ದೇವೆ.

ಇಂತಹ ಪರಿಸ್ಥಿತಿಯಲ್ಲಿ ನೀವು ಮುಂಜಾಗ್ರತೆ ವಹಿಸಬೇಕು ಮತ್ತು ಈ ಕ್ರಮಗಳನ್ನು ಅನುಸರಿಸಬೇಕು:
ನೋಟು ಪರಿಶೀಲನೆ:

ಎಟಿಎಂನಿಂದ ಹಣವನ್ನು ಹಿಂಪಡೆಯುತ್ತಿದ್ದಾಗಲೇ, ನೋಟು ನಕಲಿಯಾಗಿದೆ ಎಂಬ ಅನುಮಾನವಿದ್ದರೆ, ಅದರ ಫೋಟೋ ತೆಗೆದುಕೊಳ್ಳಿ.
ಈ ನೋಟನ್ನು ಎಟಿಎಂನಲ್ಲಿ ಫಿಕ್ಸ್ ಮಾಡಲಾದ ಸಿಸಿಟಿವಿ ಕ್ಯಾಮೆರಾದ (CCtv camera) ಮುಂದೆ ತಲೆಕೆಳಗಾಗಿ ತೋರಿಸಿ. ಇದರಿಂದ ನೋಟು ಎಟಿಎಂನಿಂದಲೇ ಹೊರಬಂದಿದೆ ಎಂಬುದನ್ನು ಸಿಸಿಟಿವಿ ದಾಖಲೆ (CctV Record) ಮಾಡುತ್ತದೆ.

ರಸೀದಿ ಸೇವ್ ಮಾಡುವುದು:
ಎಟಿಎಂ ವಹಿವಾಟಿನ ರಸೀದಿಯನ್ನು(ATM Transaction Recipt) ತೆಗೆದುಕೊಳ್ಳಿ ಮತ್ತು ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.

ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕ್ ಗೆ ಹೋಗುವುದು:

ನೋಟು ಮತ್ತು ರಸೀದಿಯೊಂದಿಗೆ ತಕ್ಷಣವೇ ನಿಮ್ಮ ಬ್ಯಾಂಕಿಗೆ (Bank) ಹೋಗಿ. ಬ್ಯಾಂಕ್ ಉದ್ಯೋಗಿಗೆ ವಿಷಯವನ್ನು ವಿವರಿಸಿ.ನಿಮ್ಮಿಂದ ಅವರು ಒಂದು ಫಾರ್ಮ್ ಅನ್ನು ಭರ್ತಿ ಮಾಡಿಸುವರು. ಅದನ್ನು ಸರಿಯಾಗಿ ಭರ್ತಿ ಮಾಡಿ, ನಕಲಿ ನೋಟಿನ ಜೊತೆಗೆ ರಸೀದಿಯನ್ನು ಕೂಡಾ ಸಲ್ಲಿಸಬೇಕು.

ಬ್ಯಾಂಕ್ ಪರಿಶೀಲನೆ:

ಬ್ಯಾಂಕ್ ಸಿಬ್ಬಂದಿ ನೋಟು ಪರಿಶೀಲಿಸಿದ ನಂತರ, ಅವರು ಅದನ್ನು ಮಾನ್ಯವಲ್ಲ ಎಂದು ದೃಢಪಡಿಸಿದರೆ, ಅವರು ನಿಮಗೆ ಒರಿಜಿನಲ್ ನೋಟನ್ನು (Original note)ನೀಡುತ್ತಾರೆ.

ಮುಂಜಾಗ್ರತಾ ಕ್ರಮಗಳು:

ನಿಮ್ಮ ಎಲ್ಲಾ ಬ್ಯಾಂಕಿಂಗ್ ವಹಿವಾಟುಗಳ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಏಕೆಂದರೆ, ನಕಲಿ ನೋಟು ಬಂದಿದ್ದರೆ, ಅದರ ಬಗ್ಗೆ ನಿಮ್ಮದೇನು ತಪ್ಪಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ದಾಖಲೆಗಳು ಸಹಾಯ ಮಾಡುತ್ತವೆ.

ಭಾರತದಲ್ಲಿ ಇಂದು ಸುಮಾರು 30 ಲಕ್ಷ ಕೋಟಿ ರೂಪಾಯಿಗಳಷ್ಟು ನಗದು ವಹಿವಾಟು ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣಕಾಸು ಸುರಕ್ಷತೆಗಾಗಿ ಈ ಕ್ರಮಗಳನ್ನು ಜಾಗರೂಕತೆಯಿಂದ ಅನುಸರಿಸುವುದು ಮುಖ್ಯ.ಮತ್ತು ಇಂತಹ ಉತ್ತಮವಾದ  ಮಾಹಿತಿ  ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!