ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ!
ಆಸ್ತಿ ಮಾಲೀಕರಿಗೆ ಬಿಗ್ ಅಪ್‌ಡೇಟ್!(Big Update) ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಆಸ್ತಿಗಳಿಗೆ ಇ-ಖಾತಾ ಪಡೆಯಲು ಸರ್ಕಾರ ಹೊಸ ದಾರಿಗಳನ್ನು ತೆರೆದಿದೆ. ಈಗ, ಯಾವುದೇ ಭೌತಿಕ ದಾಖಲೆಗಳ ಅವಶ್ಯಕತೆ ಇಲ್ಲದೆ, ಸುಲಭವಾದ ಆನ್‌ಲೈನ್ ಪ್ರಕ್ರಿಯೆಯ (Online process) ಮೂಲಕ ಇ-ಖಾತಾ ಪಡೆಯಬಹುದಾಗಿದೆ. ಇದರಿಂದಾಗಿ, ಖಾತೆ ಇಲ್ಲದ ಆಸ್ತಿ ಮಾಲೀಕರು ಸಹ ತಮ್ಮ ಆಸ್ತಿಗೆ ಅಧಿಕೃತ ದಾಖಲೆಗಳನ್ನು ಪಡೆಯಲು ಅನುಕೂಲವಾಗಲಿದೆ. ಹಾಗಿದ್ದರೆ ಆನ್ಲೈನ್ ಮೂಲಕ ಇ-ಖಾತಾ ಪಡೆಯುವುದು ಹೇಗೆ? ಯಾವೆಲ್ಲಾ ದಾಖಲೆಗಳು (Documents) ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇ-ಖಾತಾ (E-Khata) ಎಂಬುದು ಆಸ್ತಿ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಗಣಿಸುವ ದಾಖಲೆ ವ್ಯವಸ್ಥೆಯಾಗಿದ್ದು, ಇದು ಆಸ್ತಿ ಹಸ್ತಾಂತರ, ತೆರಿಗೆ ಪಾವತಿ, ಮತ್ತು ವಿವಿಧ ಸರ್ಕಾರದ ಸೇವೆಗಳನ್ನು ಪಡೆಯಲು ಅತ್ಯವಶ್ಯಕವಾಗಿದೆ. ಈ ಪ್ರಕ್ರಿಯೆಯನ್ನು ಸರಳಗೊಳಿಸಲು, BBMP ಹೊಸ ವೆಬ್‌ಸೈಟ್ (Website) ಪರಿಚಯಿಸಿದ್ದು, ಇಲ್ಲಿ ನೀವು ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಬಹುದು.
ಇ-ಖಾತಾ ಪಡೆಯಲು ಬೇಕಾದ ಮುಖ್ಯ ದಾಖಲೆಗಳು (Important Documents) ಯಾವುವು?:
ಇ-ಖಾತಾ ಪಡೆಯಲು ಈ ಕೆಳಗಿನ ದಾಖಲೆಗಳು ಅಗತ್ಯ, ಸ್ವತ್ತಿನ ಗುರುತಿನ ದಾಖಲೆ:
ಸರ್ಕಾರದಿಂದ ಮಾನ್ಯತೆ ಪಡೆದ ಗುರುತಿನ ಚೀಟಿ (ಉದಾ. ಆಧಾರ್ ಕಾರ್ಡ್, ಪಾಸ್‌ಪೋರ್ಟ್, ವೋಟರ್ ಐಡಿ).
ಆಸ್ತಿ ಮಾಲಿಕರ ಫೋಟೋ.
ಮಾಲಿಕತ್ವ ದೃಢೀಕರಿಸುವ ನೋಂದಾಯಿತ ದಾಖಲೆಗಳು (ಮಾರಾಟ ಒಪ್ಪಂದ, ಪಟ್ಟಿ ನೋಂದಣಿ ಡೀಡ್).
ಸ್ವತ್ತಿನ ಋಣಭಾರ ಪ್ರಮಾಣ ಪತ್ರ.
ಆಸ್ತಿ ತೆರಿಗೆ ಪಾವತಿಸಿದ ರಶೀದಿ.
ಆಸ್ತಿಯ ಛಾಯಾಚಿತ್ರ (Photo).
ಇ-ಖಾತಾ ಪಡೆಯಲು ಅನುಸರಿಸಬೇಕಾದ ವಿಧಾನ (Steps) ಕೆಳಗಿನಂತಿದೆ :
ಮೊದಲಿಗೆಬಿ ಬಿಎಂಪಿನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. https://site.bbmp.gov.in/
ನಿಮ್ಮ ಆಸ್ತಿಯ ವಿವರಗಳು ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ (Upload) ಮಾಡಿ.
ಅಧಿಕೃತರು ಪರಿಶೀಲಿಸಿದ ಬಳಿಕ, ಇ-ಖಾತಾ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಈಗಾಗಲೇ ಹಸ್ತಪ್ರತಿ (Manual) ಖಾತಾ ಹೊಂದಿರುವವರು ಏನು ಮಾಡಬೇಕು?:
ಈಗಾಗಲೇ ಹಸ್ತಪ್ರತಿ (ಕೈಬರಹ) ಖಾತೆ ಹೊಂದಿರುವವರು ಇ-ಖಾತಾ ಪಡೆಯಲು ತಮ್ಮ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ / ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆ ಸಂಖ್ಯೆ (ಖಾಲಿ ನಿವೇಶನಗಳಿಗೆ ಅನಿವಾರ್ಯವಿಲ್ಲ) ಮತ್ತು ಆಸ್ತಿ ಫೋಟೋ (Property photo) ಅನ್ನು BBMP ದಾಖಲಾತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ದಾಖಲೆಗಳು ಪರಿಶೀಲನೆಯಾದ ನಂತರ, ಅಂತಿಮ ಇ-ಖಾತಾ ಡೌನ್‌ಲೋಡ್ ಮಾಡಬಹುದು.
ಗಮನಿಸಿ (Notice) :
ಇ-ಖಾತಾ ಪ್ರಕ್ರಿಯೆ ಬಗ್ಗೆ ಇನ್ನಷ್ಟು ಮಾಹಿತಿಗೆ ಅಥವಾ ಯಾವುದೇ ಅನುಮಾನಗಳಿರುವವರು BBMP ಇ-ಖಾತಾ ಸಹಾಯವಾಣಿ 94806 83695 ಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದು.
ಈ ಹೊಸ ಡಿಜಿಟಲ್ ವ್ಯವಸ್ಥೆಯೊಂದಿಗೆ (New Digital system), ಆಸ್ತಿ ಖಾತಾದ ಪ್ರಕ್ರಿಯೆ ಇನ್ನಷ್ಟು ಸುಲಭ ಮತ್ತು ಸೌಕರ್ಯಯುಕ್ತವಾಗಿದ್ದು, ನಗರ ನಿವಾಸಿಗಳಿಗೆ ಬಹಳ ಅನುಕೂಲವಾಗಲಿದೆ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.