ಈ ವರ್ಷದಲ್ಲಿ ಬಿಡುಗಡೆ ಆದ ಟಾಪ್ e-ಸ್ಕೂಟಿಗಳು ಇವೇ ನೋಡಿ..!

top scooties of 2023

ದೇಶದಲ್ಲಿ ಈಗ ಎಲೆಕ್ಟ್ರಿಕ್‌ ವಾಹನಗಳಿಗಿರುವ (Electric Vehicles) ಬೇಡಿಕೆ ಮತ್ತು ಬೆಳವಣಿಗೆ ದಿನೇದಿನೇ ಏರುಗತಿಯನ್ನು ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ 2023ರಲ್ಲಿ ಅನೇಕ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು (Electric two wheeler vehicles) ಬಿಡುಗಡೆಯಾಗಿವೆ.
ಇದೀಗ ದೇಶದಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಬೇಡಿಕೆ ಮತ್ತು ಬೆಳವಣಿಗೆ ಹೆಚ್ಚುತ್ತಿರುವ ಕಾರಣ, ಈ ಬೆಳವಣಿಗೆಯನ್ನು ಹೆಚ್ಚಿಸಲು ಭಾರತ ಸರ್ಕಾರವು ವಿವಿಧ ಸಬ್ಸಿಡಿ (Subsidy) ಮತ್ತು ಪ್ರೋತ್ಸಾಹ ನೀಡುತ್ತಿದೆ. ಹಾಗಾಗಿ ಆಟೋಮೊಬೈಲ್‌ (Automobile) ಕ್ಷೇತ್ರದಲ್ಲಿ ಹೊಸ ಹೊಸ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಲೇ ಇವೆ ಎಂದು ಹೇಳಬಹುದು. ಇದೀಗ ಈ 2023 ಆಟೋ ಮೊಬೈಲ್ (Automobile) ಕ್ಷೇತ್ರದ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಕೂಡಾ ಹೇಳಬಹುದು. 2023ರಲ್ಲಿ ಭಾರದಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದ ಕೆಲವು ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

TVS X:

TVS X

ಟಿವಿಎಸ್‌ (TVS) ಇಂಡಿಯಾ ಆಗಸ್ಟ್‌ 2023ರಲ್ಲಿ TVS X ಬಿಡುಗಡೆ ಮಾಡಿದೆ. ಸದ್ಯ ಈ ಎಲೆಕ್ಟ್ರಿಕ್‌ ಸ್ಕೂಟರ್‌(Electric scooter) 2.50 ಲಕ್ಷ ರೂ. (ಎಕ್ಸ್‌ ಶೋರೂಂ ದರ) ನಿಂದಾಗಿ ಭಾರತದಲ್ಲಿ ಅತಿ ದುಬಾರಿ ಸ್ಕೂಟರ್‌ ಆಗಿದೆ. 4.44 kWh ಬ್ಯಾಟರಿ ಪ್ಯಾಕ್‌ (Battery pack) ಹೊಂದಿರುವ ಇದು 140 ಕಮಿ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ. ಟಿವಿಎಸ್‌ X ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರತಿಗಂಟೆಗೆ 105 ಕಿಮಿ ಗರಿಷ್ಠ ವೇಗವನ್ನು ನೀಡಲಿದ್ದು, ಕೇವಲ 2.6 ಸೆಕೆಂಡುಗಳಲ್ಲಿ 0–40 km/h ವೇಗ ಪಡೆದುಕೊಳ್ಳಲಿದೆ ಎಂದ ಟಿವಿಎಸ್‌ (TVS )ಹೇಳಿಕೊಂಡಿದೆ.

ಓಲಾ S1 ಶ್ರೇಣಿ(Ola S 1)

Ola S 1

ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಓಲಾ, ಆಗಸ್ಟ್‌ 2023ಯಲ್ಲಿ ದೇಶದಲ್ಲಿ ಇ–ಸ್ಕೂಟರ್‌ಗಳ ಶ್ರೇಣಿಯನ್ನು ಬಿಡುಗಡೆ ಮಾಡಿತು. ಓಲಾ S1 ಪ್ರೋ, ಓಲಾ S1 ಏರ್‌ ಮತ್ತು ಓಲಾ S1 X ಎಂಬ ಎಲೆಕ್ಟ್ರಿಕ್‌ ದ್ವಿಚಕ್ರವಾಹನವನ್ನು ಭಾರತದ ಮಾರುಕಟ್ಟೆಗೆ ನೀಡಿತು. ಈ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಎಕ್ಸ್ ಶೋ ರೂಂ ಬೆಲೆಗಳು ಕ್ರಮವಾಗಿ S1 ಪ್ರೋ– 1.47 ಲಕ್ಷ ರೂ., S1 ಏರ್‌ಗೆ –1.20 ಲಕ್ಷ ರೂ. ಮತ್ತು S1 X ಗೆ– 90,000 ರೂಪಾಯಿಗಳಾಗಿವೆ.

whatss

ಓರ್ಕ್ಸಾ ಮಾಂಟಿಸ್

ಓರ್ಕ್ಸಾ ಮಾಂಟಿಸ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿಯಾದ ಓರ್ಕ್ಸಾ ಎನರ್ಜಿಸ್ ತನ್ನ ಮ್ಯಾಂಟಿಸ್ ಇ–ಬೈಕ್‌ ಅನ್ನು ಪ್ರಮುಖ ಕೊಡುಗೆಯಾದ ನವೆಂಬರ್ 2023 ರಲ್ಲಿ ಬಿಡುಗಡೆ ಮಾಡಿತು. ಓರ್ಕ್ಸಾ ಮಾಂಟಿಸ್ ಈ ಎಲೆಕ್ಟ್ರಿಕ್‌ ಬೈಕ್ ಅನ್ನು 3.6 ಲಕ್ಷ (ಎಕ್ಸ್ ಶೋ ರೂಂ) ರೂ. ಬೆಲೆಯೊಂದಿಗೆ ಬಿಡುಗಡೆ ಮಾಡಿದೆ. ಮ್ಯಾಂಟಿಸ್ ಇ-ಬೈಕ್ ಪ್ರತಿ ಗಂಟೆಗೆ 135 ಕಿಮೀ ವೇಗವನ್ನು ಸಾಧಿಸುವ ಸಾಮರ್ಥ್ಯ ಹೊಂದಿದೆ. ಓರ್ಕ್ಸಾ ಮಾಂಟಿಸ್ 8.9 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 221km ಮೈಲೇಜ್ ನೀಡಲಿದೆ.

ಸಿಂಪಲ್‌ ಡಾಟ್ ಒನ್(Simple Dot One):

Simple Dot One

ಸಿಂಪಲ್ ಎನರ್ಜಿಯು (Simple Energy)2023 ಡಿಸೆಂಬರ್ 15 ರಂದು ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್(Dot one electric scooter) ಅನ್ನು ಬಿಡುಗಡೆ ಮಾಡಿದೆ. ಸಿಂಪಲ್ ಎನರ್ಜಿಯು ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 99,999 ರೂ.ಗಳ ಪರಿಚಯಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಸಿಂಪಲ್ ಡಾಟ್ ಒನ್ ಇಲೆಕ್ಟ್ರಿಕ್‌ ಸ್ಕೂಟರ್‌ 8.5 kW ಎಲೆಕ್ಟ್ರಿಕ್ ಮೋಟಾರ್ ಮತ್ತು 3.7 kWh ಬ್ಯಾಟರಿ ಪ್ಯಾಕ್ (Battery pack) ಅನ್ನು ಹೊಂದಿದೆ. ಎಲೆಕ್ಟ್ರಿಕ್ ಮೋಟಾರ್ 12 bhp ಮತ್ತು 72 Nm ಟಾರ್ಕ್‌ನ ಪವರ್ ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ. ಇದು 151km ಮೈಲೇಜ್ ನೀಡುತ್ತದೆ.

tel share transformed

ಅಥರ್ 450S (Ather 450S):

Ather 450S 1

ಅಥರ್ ಎನರ್ಜಿಯದು(Ather emergy) ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಜನಪ್ರಿಯ ಹೆಸರಾಗಿದೆ. ಇದು 2023 ರ ಆಗಸ್ಟ್‌ನಲ್ಲಿ 450S ಎಂಬ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಅಥರ್ 450S ಎಲೆಕ್ಟ್ರಿಕ್‌ ಸ್ಕೂಟರ್‌ನ ಬೆಲೆ 1.30 ಲಕ್ಷ ರೂ. (ಎಕ್ಸ್ ಶೋ ರೂಂ) ದಿಂದ ಪ್ರಾರಂಭವಾಗುತ್ತದೆ. ಇದು 2.9 kWh ಬ್ಯಾಟರಿ ಪ್ಯಾಕ್ (Battery pack) ಅನ್ನು ಹೊಂದಿದೆ. ಎಲೆಕ್ಟ್ರಿಕ್ ಸ್ಕೂಟರ್ 115 ಕಿಮೀ ಡ್ರೈವಿಂಗ್ ಶ್ರೇಣಿಯನ್ನು ಒಂದೇ ಚಾರ್ಜ್‌ನಲ್ಲಿ ನೀಡುವಂತೆ ಶಕ್ತಗೊಳಿಸಲಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!