ಚಿನ್ನದ ಹೂಡಿಕೆ ಮಾಡಿ ಡಬಲ್ ಹಣ ಗಳಿಸುವುದು ಹೇಗೆ..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ 

Picsart 25 03 16 22 51 02 572

WhatsApp Group Telegram Group

ಚಿನ್ನದಲ್ಲಿ ಹೂಡಿಕೆ: 2024-25ರಲ್ಲಿ ಚಿನ್ನದ ಬೆಲೆ ಏರಿಕೆ, ಭವಿಷ್ಯದ ಆರ್ಥಿಕ ಸುರಕ್ಷತೆಗೆ ಸ್ಮಾರ್ಟ್ ಆಯ್ಕೆ!

ಚಿನ್ನ (Gold) ಎಂದರೆ ಕೇವಲ ಆಭರಣವಷ್ಟೇ ಅಲ್ಲ, ಇದು ಹೂಡಿಕೆಯ ವಿಶ್ವಾಸಾರ್ಹ ಆಸ್ತಿಯೂ ಹೌದು. ಪ್ರಾಚೀನ ಕಾಲದಿಂದಲೂ ಚಿನ್ನವನ್ನು ಮೌಲ್ಯಯುತ ಆಸ್ತಿ, ಶ್ರೇಷ್ಟ ಹೂಡಿಕೆ ಮತ್ತು ಆರ್ಥಿಕ ಸುರಕ್ಷತೆಯ ಚಿಹ್ನೆಯಾಗಿ ಪರಿಗಣಿಸಲಾಗಿದೆ. ಇನ್ನು, ಅಂದಿನಿಂದ ಇಂದಿನವರೆಗೂ ಚಿನ್ನವು ಆರ್ಥಿಕ ಸ್ಥಿರತೆಯ (Economic stability) ಸಂಕೇತವಾಗಿ, ಮತ್ತು ಹೂಡಿಕೆದಾರರ ಸುರಕ್ಷಿತ ಆಶ್ರಯವಾಗಿ ಉಳಿದಿದೆ. 2024 ಮತ್ತು 2025ರ ಮೊದಲ ತಿಂಗಳುಗಳಲ್ಲಿ ಚಿನ್ನದ ಬೆಲೆಗಳು ಏರಿಕೆ ಕಂಡಿದ್ದು, ಹೂಡಿಕೆದಾರರಿಗೆ ಲಾಭದಾಯಕ ಹೂಡಿಕೆಯಾಗಿ ಪರಿಣಮಿಸಿದೆ. ಹೂಡಿಕೆ ಮತ್ತು ಆರ್ಥಿಕವಾಗಿ ಚಿನ್ನ ಯಾವ ರೀತಿ ಪ್ರಯೋಜನ ನೀಡುತ್ತದೆ? ಹೇಗೆ ಹೂಡಿಕೆ ಮಾಡಬಹುದು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಹಣಕಾಸು ನಿರ್ಧಾರಗಳಾಗಲಿ, ಹೂಡಿಕೆ ಮಾರ್ಗಗಳಾಗಲಿ, ಅವುಗಳಲ್ಲಿ ಒಂದು ಪ್ರಮುಖವಾದ ಆಯ್ಕೆಯೇ ಚಿನ್ನದಲ್ಲಿ ಹೂಡಿಕೆ(Investment in Gold).  ಇಂದು, ಜಾಗತಿಕ ಆರ್ಥಿಕ ಅನಿಶ್ಚಿತತೆ, ಬಡ್ಡಿದರಗಳ ಬದಲಾವಣೆ ಮತ್ತು ಕರೆನ್ಸಿಗಳ ಮೌಲ್ಯ ಕುಸಿತದಂತಹ ಕಾರಣಗಳಿಂದಾಗಿ ಚಿನ್ನದ ಬೇಡಿಕೆ ಹೊಸ ಗರಿಷ್ಠ ಮಟ್ಟಗಳನ್ನು ತಲುಪುತ್ತಿದೆ.
ಅದರಲ್ಲೂ, 2024 ಮತ್ತು 2025 ರ ಮೊದಲ ಎರಡು ತಿಂಗಳುಗಳಲ್ಲಿ ಚಿನ್ನದ ಹೂಡಿಕೆದಾರರಿಗೆ ಹೆಚ್ಚಿನ ಲಾಭ (profit) ವಾಗಿತ್ತು. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇ. 40 ಕ್ಕೂ ಹೆಚ್ಚು ಏರಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ದಾಖಲೆ ಮಟ್ಟವನ್ನು ತಲುಪಿದೆ. ಈ ಏರಿಕೆಗೆ ಕಾರಣಗಳಾಗಿರುವ ಆರ್ಥಿಕ ಮತ್ತು ಭೌಗೋಳಿಕ ಅಸ್ಥಿರತೆಗಳು, ಹೂಡಿಕೆದಾರರ ಭರವಸೆ, ಮತ್ತು ಕೇಂದ್ರ ಬ್ಯಾಂಕುಗಳ ಚಿನ್ನದ ಖರೀದಿಯ ಕುರಿತು ವಿಶ್ಲೇಷಣೆ ಮಾಡುವುದು ಅವಶ್ಯಕವಾಗಿದೆ.

ವಿಶ್ವ ಚಿನ್ನ ಮಂಡಳಿಯ ಮಾರುಕಟ್ಟೆ ತಂತ್ರಜ್ಞ ಜಾನ್ ರೀಡ್ ಅವರ ಪ್ರಕಾರ(According to John Reid, market strategist at the World Gold Council) “ಚಿನ್ನದ ಬೆಲೆಯಲ್ಲಿನ ದಿಢೀರ್ ಏರಿಕೆ ಹೂಡಿಕೆದಾರರನ್ನು ಮಾರುಕಟ್ಟೆಯ ಬಗ್ಗೆ ಯೋಚಿಸುವಂತೆ ಮಾಡಿದೆ. ಪಾಶ್ಚಿಮಾತ್ಯ ಹೂಡಿಕೆದಾರರು ಚಿನ್ನದ ಇಟಿಎಫ್‌ಗಳ (Gold ETFs) ಮೂಲಕ ಹೂಡಿಕೆಯನ್ನು ಹೆಚ್ಚಿಸಿರುವುದು ಸಹ ಈ ಏರಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ. 1 ರಷ್ಟು ಹೆಚ್ಚಾಗಿ, ವರ್ಷಂತ್ಯಕ್ಕೆ 4,974 ಟನ್‌ಗಳಿಗೆ ತಲುಪಿದೆ ಎಂದು ಜಾಗತಿಕ ಸಂಶೋಧನಾ ಮುಖ್ಯಸ್ಥ ಜುವಾನ್ ಕಾರ್ಲೋಸ್ ಒರ್ಟಿಗಾಸ್ (Global Head of Research Juan Carlos Ortigas) ಹೇಳಿದ್ದಾರೆ. ಚಿನ್ನವನ್ನು ಆರ್ಥಿಕ ಅನಿಶ್ಚಿತತೆ ಮತ್ತು ಭೌಗೋಳಿಕ ಉದ್ವಿಗ್ನತೆಗಳ ನಡುವಿನ ಸುರಕ್ಷಿತ ಹೂಡಿಕೆ ಎಂಬುದಾಗಿ ಪರಿಗಣಿಸಲಾಗುತ್ತಿದೆ. ಶೇರು ಮಾರುಕಟ್ಟೆ ಮತ್ತು ಕರೆನ್ಸಿಗಳ ಕುಸಿತದ ನಡುವೆಯೂ ಚಿನ್ನದ ಬೆಲೆ ಸತತವಾಗಿ ಹೆಚ್ಚುತ್ತಿದೆ. ಕೆಲ ದೇಶಗಳು ಡಾಲರ್‌ಗೆ (Dollar) ಪರ್ಯಾಯವಾಗಿ ತಮ್ಮ ಮೀಸಲು ನಿಧಿಗಳನ್ನು ಚಿನ್ನದಲ್ಲಿ ಹೆಚ್ಚಿಸುತ್ತಿದ್ದು, ಇದು ಚಿನ್ನದ ಬೇಡಿಕೆಯನ್ನು ಮತ್ತಷ್ಟು ಏರಿಸಿ ದೆ ಎಂದು ತಿಳಿಸಿದ್ದಾರೆ.

ಚಿನ್ನದಲ್ಲಿ ಹೂಡಿಕೆ ಮಾಡಲು ಇರುವ ಮಾರ್ಗಗಳು ಹೀಗುವೆ?:

ಚಿನ್ನದಲ್ಲಿ ಹೂಡಿಕೆ ಮಾಡುವಾಗ, ಅದರ ಪ್ರಕಾರ, ಅನುಕೂಲಗಳು ಮತ್ತು ಅನಾನುಕೂಲಗಳನ್ನು ಆಲೋಚಿಸಬೇಕು. ಈ ಕುರಿತು ಪ್ರಮುಖ ಹೂಡಿಕೆ ಮಾರ್ಗಗಳು ಕೆಳಗಿನಂತಿವೆ.

1. ಭೌತಿಕ ಚಿನ್ನ (Gold Bullion/Coins) ಖರೀದಿ :
ಚಿನ್ನದ ನಾಣ್ಯಗಳು, ಚಿನ್ನದ ಗಟ್ಟಿಗಳು ಅಥವಾ ಆಭರಣ ರೂಪದಲ್ಲಿ ಖರೀದಿಸಬಹುದು.
ಈ ರೀತಿಯ ಹೂಡಿಕೆಯಿಂದ ಹಣ ಆಸ್ತಿ ರೂಪದಲ್ಲಿ ಉಳಿಯುತ್ತದೆ, ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ನಗದುಗೆ ಪರಿವರ್ತಿಸಿಕೊಳ್ಳಬಹುದು.
ಆದರೆ ಈ ರೀತಿಯ ಹೂಡಿಕೆಯಲ್ಲಿ, ಶೇಖರಣಾ ವೆಚ್ಚ, ಭದ್ರತಾ ಸಮಸ್ಯೆಗಳು, ಮತ್ತು ಮಾರುಕಟ್ಟೆ ವ್ಯತ್ಯಾಸದ ಕಾರಣದಿಂದ ತಕ್ಷಣ ಲಾಭ ತರಲು ಸಾಧ್ಯವಾಗುವುದಿಲ್ಲ.

2. ಚಿನ್ನದ ಇಟಿಎಫ್‌ಗಳು (Gold ETFs) ಮತ್ತು ಇಟಿಸಿಗಳು (ETCs):
ಚಿನ್ನದ ಇಟಿಎಫ್‌ಗಳು ಭೌತಿಕ ಚಿನ್ನವನ್ನು ನೇರವಾಗಿ ಹೊಂದಿರುವುದಿಲ್ಲ, ಆದರೆ ಮಾರುಕಟ್ಟೆ ಬೆಲೆ ಬದಲಾವಣೆಯನ್ನು ಅನುಸರಿಸುತ್ತವೆ.
ಇವು ಕಡಿಮೆ ವೆಚ್ಚದ ಮತ್ತು ಸುಲಭ ನಿರ್ವಹಣೆಯ ಆಯ್ಕೆಯಾಗಿದ್ದರೂ, ನಿರ್ವಹಣಾ ಶುಲ್ಕಗಳು ಹೂಡಿಕೆದಾರರ ಮೇಲೆ ಪರಿಣಾಮ ಬೀರುತ್ತವೆ.
ಕೆಲವು ವಿಶೇಷ ETFs ಹೂಡಿಕೆದಾರರಿಗೆ ಚಿನ್ನದ ನಾಣ್ಯ ಅಥವಾ ಬಾರ್‌ಗೆ ವಿನಿಮಯ ಅವಕಾಶ ಒದಗಿಸುತ್ತವೆ.

3. ಚಿನ್ನದ ಬಾಂಡ್‌ಗಳು (Sovereign Gold Bonds – SGBs):
ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತರುವ ಈ ಬಾಂಡ್‌ಗಳು ಚಿನ್ನದ ಬೆಲೆಯ ಮೇಲೆ ಆಧಾರಿತವಾಗಿರುತ್ತವೆ.
ಈ ರೀತಿಯ ಹೂಡಿಕೆಯಲ್ಲಿ ವಾರ್ಷಿಕ ಬಡ್ಡಿದರ ಲಾಭ (ಪ್ರಸ್ತುತ ಶೇ. 2.5), ಭೌತಿಕ ಚಿನ್ನದ ಶೇಖರಣೆಯ ತೊಂದರೆ ಇರುವುದಿಲ್ಲ.
ಇನ್ನು, ಬಾಂಡ್‌ಗಳ ಲಾಕ್-ಇನ್ ಅವಧಿಯ (5-8 ವರ್ಷ) ಕಾರಣ ಸೌಕರ್ಯ ಇಲ್ಲದ ಹೂಡಿಕೆದಾರರಿಗೆ ತೊಂದರೆಯಾಗಬಹುದು.

4. ಡಿಜಿಟಲ್ ಚಿನ್ನ ಮತ್ತು ಆನ್‌ಲೈನ್ ಹೂಡಿಕೆ:
ಡಿಜಿಟಲ್ ಚಿನ್ನವನ್ನು Paytm Gold, Google Pay Gold, PhonePe Gold ಮುಂತಾದ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದು.
ಇದರಲ್ಲಿ ಭದ್ರತಾ ತೊಂದರೆ ಇಲ್ಲದೆ ಕಡಿಮೆ ಮೊತ್ತದಿಂದ ಹೂಡಿಕೆ ಮಾಡಬಹುದು.
ಆದರೆ, ಪ್ಲಾಟ್‌ಫಾರ್ಮ್ ಲಾಭಾಂಶ ಮತ್ತು ನಿರ್ವಹಣಾ ಶುಲ್ಕಗಳನ್ನು ಗಮನಿಸಬೇಕು.

ಚಿನ್ನದಲ್ಲಿ ಹೂಡಿಕೆಯಿಂದ ಯಾವ ರೀತಿಯ ಲಾಭ ದೊರೆಯಲಿದೆ?:

ಸುರಕ್ಷಿತ ಹೂಡಿಕೆ (Safety investment) ಮಾಡುವುದರಿಂದ ಚಿನ್ನವು ಆರ್ಥಿಕ ಸ್ಥಿರತೆ ನೀಡುತ್ತದೆ.
ಹಣದುಬ್ಬರ ಹೆಚ್ಚಾದರೆ, ಚಿನ್ನದ ಬೆಲೆ ಸಹ ಹೆಚ್ಚಾಗುತ್ತದೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೂ ಚಿನ್ನವು ವೈವಿಧ್ಯತೆಯನ್ನು ಒದಗಿಸುತ್ತದೆ.
ಚಿನ್ನವನ್ನು ಬೇಗನೆ ನಗದುಗೆ ಪರಿವರ್ತಿಸಬಹುದು.

ಚಿನ್ನದಲ್ಲಿ ಹೂಡಿಕೆಯಿಂದ ಯಾವ ರೀತಿಯ ಅಪಾಯಗಳು ಸಂಭವಿಸಲಿವೆ?:

ಬೆಲೆಯ ಏರಿಳಿತದಿಂದ ಚಿನ್ನದ ಮೌಲ್ಯ ಕೆಲವೊಮ್ಮೆ ತೀವ್ರವಾಗಿ ಬದಲಾಗಬಹುದು.
ಲಾಕರ್ ಅಥವಾ ಭದ್ರತಾ (Locker or safety) ವ್ಯವಸ್ಥೆಗಳಿಗಾಗಿ ಹೆಚ್ಚುವರಿ ವೆಚ್ಚಗಳು ಬೀಳುತ್ತವೆ.
ಖರೀದಿಸುವಾಗ ನಕಲಿ ಚಿನ್ನ ಅಥವಾ ಕಡಿಮೆ ಗುಣಮಟ್ಟದ ಚಿನ್ನ ಖರೀದಿಸದಂತೆ ಎಚ್ಚರಿಕೆ ವಹಿಸಬೇಕು.

ಚಿನ್ನವು ಭದ್ರ ಹೂಡಿಕೆ ಆಯ್ಕೆಯಾಗಿದ್ದರೂ, ಹೂಡಿಕೆದಾರರು ತಮ್ಮ ಆರ್ಥಿಕ ಗುರಿಗಳನ್ನು ಪರಿಗಣಿಸಿ, ವೈವಿಧ್ಯತೆ, ಅಪಾಯ ನಿರ್ವಹಣೆ, ಮತ್ತು ಮಾರುಕಟ್ಟೆಯ ಸ್ಥಿತಿಯನ್ನು ಅರ್ಥಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು.ನೀವು ದೀರ್ಘಾವಧಿ ಹೂಡಿಕೆಗೆ ಆಸಕ್ತಿ ಹೊಂದಿದ್ದರೆ, ಚಿನ್ನದ Sovereign Bonds ಮತ್ತು ETFs ಉತ್ತಮ ಆಯ್ಕೆ. ಕಿರು ಅವಧಿಯ ಲಾಭಕ್ಕಾಗಿ, ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಹೂಡಿಕೆ ಮಾಡುವುದು ಸೂಕ್ತ.

ಹೀಗಾಗಿ, ಚಿನ್ನವನ್ನು ಹೂಡಿಕೆಯ ಮುಖ್ಯ ಭಾಗವಾಗಿ ಪರಿಗಣಿಸಬಹುದು, ಆದರೆ, ಚಿನ್ನವು ನಿರ್ದಿಷ್ಟ ಆದಾಯವನ್ನು ನೀಡುವ ಹೂಡಿಕೆ ಅಲ್ಲ. ಆದ್ದರಿಂದ, ಬಡ್ಡಿದರ ಮತ್ತು ಮಾರುಕಟ್ಟೆಯ ಸ್ಥಿತಿಯನ್ನು (Interest and Market situation) ಗಮನಿಸಿ, ಸೂಕ್ತವಾದ ಹೂಡಿಕೆ ತೀರ್ಮಾನವನ್ನು ತೆಗೆದುಕೊಳ್ಳುವುದು ಉತ್ತಮ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!