ECIL Jobs: ಎಕ್ಸಿಕ್ಯೂಟಿವ್​ ಆಫೀಸರ್​ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.

ECIL recruitment 2024

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿದ್ದೀರಾ? 10 ಎಕ್ಸಿಕ್ಯೂಟಿವ್  ಆಫೀಸರ್ ಹುದ್ದೆಗಳು ನಿಮಗಾಗಿ ಕಾದಿವೆ.

ಇಂದು ಹಲವಾರು ಜನರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ, ಹಾಗೆಯೇ ಹಲವರು ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸ ಹುಡುಕುತ್ತಲೇ ಇದ್ದಾರೆ. ಅಂತವರಿಗೆ ಇದು  ಸುವರ್ಣಾವಕಾಶ ಎನ್ನಬಹುದು. ಕೇಂದ್ರ ಸರ್ಕಾರದ ಕೆಲಸ ಎಂದರೆ ಎಲ್ಲರಿಗೂ ಹೆಚ್ಚು ಕೌತುಕತೆ. ಹಾಗೆ ಕೇಂದ್ರ ಸರ್ಕಾರದ ಕೆಲಸ ಸಿಕ್ಕಿದೆ ಎಂದರೆ ತಮ್ಮ ಲೈಫ್ ಸೆಟಲ್ ಎಂದುಕೊಳ್ಳುವರು ಹಲವಾರು ಮಂದಿ ಇದ್ದಾರೆ. ಬಹಳಷ್ಟು ಜನ ಈ ಒಂದು ಅವಕಾಶಕ್ಕಾಗಿ ಕಾದು ಕುಳಿತಿರುತ್ತಾರೆ. ಅಂಥವರಿಗೆ ಇದೊಂದು ಸುವರ್ಣಾವಕಾಶ. ಕೇಂದ್ರ ಸರ್ಕಾರದ ಯಾವ ಹುದ್ದೆ ಖಾಲಿ ಇದೆ? ಇದರ ವೇತನ ಎಷ್ಟು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಎಲೆಕ್ಟ್ರಾನಿಕ್ಸ್  ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ ಒಟ್ಟು 10 ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗಳು ಖಾಲಿ ಇವೆ :

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ಸ್  ಕಾರ್ಪೊರೇಷನ್ ಆಫ್  ಇಂಡಿಯಾ ಲಿಮಿಟೆಡ್ (Electronics Corporation of India Limited ECIL) ವತಿಯಿಂದ ಭರ್ಜರಿ ಸಿಹಿ ಸುದ್ದಿ ಇದಾಗಿದೆ. ಹೌದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.ಇದರಿಂದ ಹಲವಾರು ಜನರಿಗೆ ಉಪಯುಕ್ತವಾಗಲಿದ್ದು. ಮೇ 3 2024 ರಂದು ಸಂದರ್ಶನ ನೆಡೆಯಲಿದೆ. ಯಾರೆಲ್ಲ ಅಭ್ಯರ್ಥಿಗಳಿದ್ದಾರೋ ಅವರೆಲ್ಲಾ ಈ ಸಂದರ್ಶನಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಎಕ್ಸಿಕ್ಯೂಟಿವ್  ಆಫೀಸರ್  ಹುದ್ದೆಗಳು ಅರ್ಜಿ ಆಹ್ವಾನಿಸಲಾಗಿದ್ದು. ಒಟ್ಟು 10  ಹುದ್ದೆಗಳು ಖಾಲಿ ಇವೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಸಂದರ್ಶನದ ದಿನ :

ಇನ್ನು ಇದಕ್ಕಾಗಿ ಸಂದರ್ಶನ ಮೇ 3 2024 ರಂದು ನಡೆಯಲಿದ್ದು, ಪದವೀಧರರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗಾದರೆ ಈ ಒಂದು ಕೆಲಸಕ್ಕೆ ಇರುವ ಅರ್ಹತೆ, ಸಂದರ್ಶನದ ಬಗ್ಗೆ ಮಾಹಿತಿ, ಮತ್ತು ಅರ್ಜಿ ಸಲ್ಲಿಸಲು ಇರುವ ದಿನಾಂಕದ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.

ಶೈಕ್ಷಣಿಕ ಅರ್ಹತೆ (education qualifications):

ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ, ಎಂಬಿಎ, ಎಂ.ಕಾಂ, ಪಿಜಿಡಿಎಂ ಪೂರ್ಣಗೊಳಿಸಿರಬೇಕು.ಈ ಎಲ್ಲಾ ಶೈಕ್ಷಣಿಕ ಅರ್ಹತೆಯನ್ನು ಎಲೆಕ್ಟ್ರಾನಿಕ್ಸ್  ಕಾರ್ಪೊರೇಷನ್ ಆಫ್  ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ ಮಾಡಲಾಗಿದೆ.

ವಯೋಮಿತಿ (age limits) :

ಇನ್ನು ಅರ್ಹ ಅಭ್ಯರ್ಥಿಗಳ ವಯಸ್ಸು ಗರಿಷ್ಠ 33 ವರ್ಷ ಮೀರಿರಬಾರದು. ಹಾಗೆ ಒಂದು ವೇಳೆ ಮೀರಿದ್ದರೆ ಅವರ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.

ವಯೋಮಿತಿ ಸಡಿಲಿಕೆ (age limits for category wise) :
OBC ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳು

ವೇತನ (salary) :

ಇನ್ನು ವೇತನದ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರದ ಹುದ್ದೆ ಎಂದರೆ ಕೆಲಸಕ್ಕೆ ತಕ್ಕ ಸಂಬಳ ಇದ್ದೇ ಇರುತ್ತದೆ. ಕೇಂದ್ರ ಸರ್ಕಾರದ ಈ ಹುದ್ದೆಗಾಗಿ  ಮಾಸಿಕ ವೇತನ  ₹ 40,000-55,000 ದೊರೆಯುತ್ತದೆ.

ಉದ್ಯೋಗದ ಸ್ಥಳ (work place) :

ಈ ಉದ್ಯೋಗವನ್ನು ನಾವು ಭಾರತದಲ್ಲಿನ ಯಾವ ಪ್ರದೇಶದಲ್ಲಾದರೂ ಮಾಡಬಹುದು. ಆದರೆ ಆ ಪ್ರದೇಶದಲ್ಲಿ ಆ ಹುದ್ದೆ ಖಾಲಿ ಇರಬೇಕು.

ಆಯ್ಕೆ ಪ್ರಕ್ರಿಯೆ ವಿಧಾನ (selection process) :

ಹಾಗೆ ಇದರ ಆಯ್ಕೆ ಪ್ರಕ್ರಿಯೆ 2 ಹಂತಗಳಲ್ಲಿ ನೆಡೆಯಲಿದ್ದು ಒಂದು ಹಂತದಲ್ಲಿ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಮತ್ತು ನಂತರ ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ತೆಗೆದುಕೊಳ್ಳಲಾಗುವುದು.

ಸಂದರ್ಶನ ನಡೆಯುವ ಸ್ಥಳ (interview place) :

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಆಡಳಿತಾತ್ಮಕ ಕಟ್ಟಡ NFC ರಸ್ತೆ ECIL ಪೋಸ್ಟ್ ಹೈದರಾಬಾದ್ – 500062

ಪ್ರಮುಖ ದಿನಾಂಕಗಳು (Important dates) :

ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 23/04/2024
ಸಂದರ್ಶನ ನಡೆಯುವ ದಿನ: ಮೇ 3, 2024

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ (For more information) ಅಧಿಕೃತ ವೆಬ್ ಸೈಟ್  ecil.co.in ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೆ ಈ ಒಂದು ವೆಬ್ಸೈಟ್ ನ ಮೂಲಕ ಪಡೆಯಬಹುದು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಈ ಮಾಹಿತಿಗಳನ್ನು ಓದಿ


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!