ಕೇಂದ್ರ ಸರ್ಕಾರದಿಂದ ಉದ್ಯೋಗ ಭವಿಷ್ಯ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಉದ್ಯೋಗ ಪಿಂಚಣಿ ಯೋಜನೆಯಲ್ಲಿ ಹೊಸ ವ್ಯವಸ್ಥೆ ಜಾರಿ!
ಇಂದು ಹಲವಾರು ಉದ್ಯೋಗಿಗಳು ಅನೇಕ ಬ್ಯಾಂಕ್ ಗಳಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡಿದ್ದಾರೆ ಮತ್ತು ಸಮಯ ಬಂದಾಗ ಪಿಂಚಣಿಯನ್ನು ಪಡೆದುಕೊಳುತ್ತಾರೆ. ಉದ್ಯೋಗ ಭವಿಷ್ಯ ನಿಧಿ (EPFO) ಅಡಿಯಲ್ಲಿನ ಉದ್ಯೋಗ ಪಿಂಚಣಿ ಯೋಜನೆ (Employment pension scheme) ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವಿಯಾ ಉದ್ಯೋಗ ಪಿಂಚಣಿ ಯೋಜನೆಯ ಬಗ್ಗೆ ಮಹತ್ವದ ಘೋಷಣೆ :
ಇಪಿಎಸ್ ಪಿಂಚಣಿದಾರರಿಗೆ ಮುಂದಿನ ವರ್ಷದ ಜನವರಿ 1ರಿಂದ ದೇಶದ ಯಾವುದೇ ಭಾಗದಲ್ಲಿ, ಯಾವುದೇ ಬ್ಯಾಂಕ್ ಮತ್ತು ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಪಡೆಯಲು ಅವಕಾಶ ದೊರೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ (CPPS) ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಅದ್ದರಿಂದ ಈ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಈ ಒಂದು ಹೊವೆ ವ್ಯವಸ್ಥೆಯಲ್ಲಿರುವ ಲಾಭಗಳು :
ಪಿಂಚಣಿದಾರರು ದೇಶದ ಯಾವುದೇ ಬ್ಯಾಂಕ್, ಯಾವುದೇ ಶಾಖೆಯಲ್ಲಿ ಹಾಗೂ ಯಾವುದೇ ರಾಜ್ಯದಲ್ಲಿ (State) ಬೇಕಾದರೂ ಪಿಂಚಣಿ ಪಡೆಯಲು ಸಾಧ್ಯವಿದೆ.
ಜನವರಿ 1, 2025ರಿಂದ ಈ ಯೋಜನೆ ದೇಶಾದ್ಯಂತ ಜಾರಿಯಾಗುತ್ತಿದೆ. ಹೊಸ CPPS ವ್ಯವಸ್ಥೆಯಿಂದ ಪಿಂಚಣಿ ಫಲಾನುಭವಿಗಳ ಪಿಂಚಣಿ ಸಮಯದ ವೇಳೆ ಯಾವುದೇ ಬ್ಯಾಂಕ್ ಶಾಖೆಗೆ ತೆರಳಿ ವೆರಿಫಿಕೇಶನ್ (Varification) ಮಾಡಬೇಕಿಲ್ಲ. ಇಷ್ಟೇ ಅಲ್ಲ ಪಿಂಚಣಿದಾರರು ನಿರ್ದಿಷ್ಟ ಬ್ರಾಂಚ್‌ಗೆ ತೆರಳಿ ಪಿಂಚಣಿ(pension) ಸೌಲಭ್ಯ ಮಾಡಿಸಬೇಕಾದ ಅನಿವಾರ್ಯತೆ ಇತ್ತು. ಇದೀಗ ಈ ಸಮಸ್ಯೆಗೆ ಮುಕ್ತಿ ನೀಡಲಾಗಿದೆ. ಹೊಸ ವ್ಯವಸ್ಥೆ ಮೂಲಕ ಪಿಂಚಣಿ ಸಮಯ ಬಂದಾಗ, ಖಾತಗೆ ಜಮೆ ಆಗಲಿದೆ. ಪಿಂಚಣಿದಾರರು ಯಾವುದೇ ಬ್ಯಾಂಕ್‌ನಿಂದ ಈ ಹಣ ಪಡೆದುಕೊಳ್ಳಬಹುದು.
ಈ ಹೊಸ ವ್ಯವಸ್ಥೆಯಿಂದ ಪಿಂಚಣಿ ಯೋಜನೆಯಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿವೆ :
ಇದು ಸುದೀರ್ಘ ವರ್ಷಗಳಿಂದ ಬಾಕಿ ಉಳಿದಿದ್ದ ಯೋಜನೆಯಾಗಿತ್ತು. ಈಗ ಈ ಹೊಸ ವ್ಯವಸ್ಥೆಯಿಂದ ಉದ್ಯೋಗ ಭವಿಷ್ಯ ನಿಧಿ ಕೆಲಸಗಳು ಸುಲಭಗೊಂಡಿದೆ. ಇಷ್ಟೇ ಅಲ್ಲ ಇದಕ್ಕಾಗಿ ಖರ್ಚು ಮಾಡುತ್ತಿದ್ದ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ. ಹಲವು ಆಧುನಿಕರಣ ಬಳಿಕವೂ ಪಿಂಚಣಿ ಯೋಜನೆ (Pension scheme) ಯಲ್ಲಿ ಬದಲಾವಣೆಯಾಗಿರಲಿಲ್ಲ. ಇದು ಪಿಂಚಣಿದಾರರಿಗೂ ಸಮಸ್ಯೆಯಾಗಿ ಕಾಡುತ್ತಿತ್ತು. ಆದರೆ ಇದೀಗ ಈ ಎಲ್ಲಾ ಸಮಸ್ಯೆಗಳು ಪರಿಹಾರಗೊಂಡಿವೆ.
ಹಲವು ರೀತಿಯ ಸಮಸ್ಯೆಗಳನ್ನು ದೂರ ಮಾಡಿದೆ ಪಿಂಚಣಿ ಯೋಜನೆಯಲ್ಲಿ ಜಾರಿಗೆ ತಂದ ಈ ಹೊಸ ವ್ಯವಸ್ಥೆ :
ಈ ಹೊಸ ಯೋಜನೆಯಿಂದ ಪಿಂಚಣಿ ಫಲಾನುಭವಿಗಳು, ಕಚೇರಿಯಿಂದ ಕಚೇರಿಗೆ, ಬ್ಯಾಂಕ್ ನಿಂದ ಬ್ಯಾಂಕ್‌ಗೆ ಅಲೆಯಬೇಕಿಲ್ಲ. ನಿಗದಿತ ಸಮಮಯ ಬಂದಾಗ ಪಿಂಚಣಿ ಖಾತೆಗೆ ಕ್ರೆಡಿಟ್ (Credit) ಆಗಲಿದೆ. ಇನ್ನು ಪಿಂಚಣಿದಾರರು ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಹಣ ಪಡೆಯಲು ಸಾಧ್ಯವಿದೆ. ಹೊಸ ವಿಧಾನ ಸರ್ಕಾರಕ್ಕೂ ಹಾಗೂ ಪಿಂಚಣಿದಾರರಿಗೆ ನೆರವಾಗಿದೆ ಎಂದಿದ್ದಾರೆ. ಹೊಸ ವರ್ಷದಿಂದ ಯೋಜನೆ ಜಾರಿಯಾಗುತ್ತಿದೆ. ಇದರ ಬೆನ್ನಲ್ಲೇ ಆಧಾರ್ ಬೇಸ್ಡ್ ಪೇಮೆಂಟ್ ಸಿಸ್ಟಮ್ (Adhar based payment system) ವ್ಯವಸ್ಥೆಯೂ ಜಾರಿಯಾಗುತ್ತಿದೆ ಎಂದು ಮನ್ಸುಕ್ ಮಾಂಡವಿಯಾ ಹೇಳಿದ್ದಾರೆ. ಹೊಸ ವ್ಯವಸ್ಥೆಗಳು ಪಿಂಚಣಿದಾರರ ಜೀವನ ಸುಗಮಗೊಳಿಸಲಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ