ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಇವೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಅಥವಾ ನಿಮ್ಮ ಆಧಾರ್ ಕಾರ್ಡನ್ನು ಬಳಸಿಕೊಂಡು ಎಷ್ಟು ಸಿಮ್ ಕಾರ್ಡ್ ಗಳು ಚಾಲ್ತಿಯಲ್ಲಿ ಇವೆ ಎಂಬುವುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದಾಗಿದೆ. ನಮ್ಮ ಹೆಸರನ್ನು ಬಳಸಿಕೊಂಡು ಮತ್ತೊಬ್ಬ ವ್ಯಕ್ತಿಯು ಸಿಮ್ ಸಿಮ್ ಕಾರ್ಡ್ ಳನ್ನು ಬಳಸುತ್ತಿದ್ದರೆ ಅದನ್ನು ಹೇಗೆ ಪತ್ತೆ ಮಾಡುವುದು? ಆ ಸಿಮ್ ಕಾರ್ಡನ್ನು ಹೇಗೆ ನಿಷ್ಕ್ರಿಯಗೊಳಿಸುವುದು? ನಮ್ಮ ಹೆಸರಿನಲ್ಲಿ ಎಷ್ಟೋ ಸಿಮ್ ಕಾರ್ಡ್ ಗಳು ಇವೆ ಎಂದು ಹೇಗೆ ತಿಳಿದುಕೊಳ್ಳುವುದು? ಎಂಬುದರ ಸಂಪೂರ್ಣ ಮಾಹಿತಿಯನ್ನು ವರದಿಯ ಮೂಲಕ ನಿಮಗೆ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ ದಿನಗಳಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿರುವ ಹಲವಾರು ಅವರಾದ ಪ್ರಕರಣಗಳಲ್ಲಿ ಏನನ್ನು ತಿಳಿಯದಂತಹ ನಿರಪರಾಧಿಗಳು ಅರೆಸ್ಟ್ ಆಗುತ್ತಿದ್ದಾರೆ. ಆದರೆ ಅಪರಾಧವನ್ನು ಮಾಡಿದವರು ಎಲ್ಲೋ ಕುಳಿತುಕೊಂಡಿರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಎಂದರೆ ನಕಲಿ ಸಿಮ್ ಅನ್ನು ಬೇರೆಯವರ ಹೆಸರಿನಲ್ಲಿ ಆರೋಪಿಗಳು ತೆಗೆದುಕೊಂಡು ಅದರಿಂದ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇಂತಹ ಪ್ರಕರಣಗಳಿಂದಾಗಿ ನಿರಪರಾಧಿ ಜನರಿಗೆ ತೊಂದರೆಯನ್ನು ಕೊಡುವುದು ಸಾಮಾನ್ಯವಾಗಿದೆ. ಹಾಗಾಗಿ ಇಂತಹ ಸಂಕಷ್ಟದಿಂದ ಪಾರಾಗಲು ನಾವು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.
ನಿಮ್ಮ ಹೆಸರಿನಲ್ಲಿರುವ ಸಿಮ್ ಕಾರ್ಡ್ ಕಂಡು ಹಿಡಿಯುವುದು ಹೇಗೆ??
ಟೆಲಿ ಕಮ್ಯುನಿಕೇಶನ್ ಇಲಾಖೆಯ ವತಿಯಿಂದ ಟಫ್-ಕಾಪ್ (TAF-COP) ಎನ್ನುವ ಪೋರ್ಟಲ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಒಂದು ಕೇಂದ್ರ ಸರ್ಕಾರದ ಪೋರ್ಟಲ್ ಆಗಿದೆ. ಟಫ್ ಕಾಪ್ ಟೆಲಿಕಾಂ ಸೇವೆಗಳ ಮೂಲಕ ಸಮಸ್ಯೆಗಳನ್ನು ನಿಯಂತ್ರಿಸಲು ಭಾರತ ಸರ್ಕಾರ ನಡೆಸುತ್ತಿರುವ ಪೋರ್ಟಲ್ ಇದಾಗಿದೆ. TAF-ಕಪ್ ಎಂದರೆ ಟೆಲಿಕಾಂ ಅನಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್ಮೆಂಟ್ ಅಂಡ್ ಕನ್ಸ್ಯೂಮರ್ ಪ್ರೊಟೆಕ್ಷನ್ ಎಂದರ್ಥ.
TAF-COP ಪೋರ್ಟನ್ನ ಉಪಯೋಗಗಳು :
ಈ ಪೋರ್ಟಲ್ ನ ಸಹಾಯದಿಂದ ನಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಇವೆ? ಹಾಗೂ ಎಷ್ಟು ಸಿಮ್ ಕಾರ್ಡ್ ಗಳು ನೋಂದಣಿ ಆಗಿದೆ ಎಂಬುದನ್ನು ಪತ್ತೆಹಚ್ಚಬಹುದು. ಇಷ್ಟೇ ಅಲ್ಲದೆ ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಕಾರ್ಡ್ ಅನ್ನು ತೆಗೆದುಕೊಂಡು ಉಪಯೋಗಿಸುತ್ತಿದ್ದರೆ ಅಂತಹ ಮೊಬೈಲ್ ಸಂಖ್ಯೆಗಳನ್ನು ಸುಲಭವಾಗಿ ಈ ಪೋರ್ಟಲ್ ಗಳ ಮೂಲಕ ಪತ್ತೆ ಹಚ್ಚಿ ನಂತರ ಅಂತಹ ಸಂಖ್ಯೆಗಳ ಮೇಲೆ ವರದಿಯನ್ನು ನೀಡಿ ನಿಷ್ಕ್ರಿಯಗೊಳಿಸಬಹುದಾಗಿದೆ.
ನಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳು ಇವೆ ಎಂಬುದನ್ನು ತಿಳಿಸುವ ವಿಧಾನ :
ಹಂತ 1: ಮೊದಲಿಗೆ ನಾವು ನಮ್ಮ ಮೊಬೈಲ್ ನಲ್ಲಿ ಟಾಪ್ ಕಾಪ್ ಪೋರ್ಟಲ್ ಅನ್ನು ಓಪನ್ ಮಾಡಿಕೊಳ್ಳಬೇಕು.
ಈ ಪೋರ್ಟಲಿನ ಅಧಿಕೃತ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ : https://tafcop.dgtelecom.gov.in/
ಹಂತ 2: ನಂತರ ಟಾಪ್ ಕಾಪ್ ಪೋರ್ಟಲ್ ತೆರೆಯುತ್ತದೆ. ನಂತರ ಇದರ ಹೋಂ ಪೇಜ್ ನಲ್ಲಿ ನಾವು ಸದ್ಯಕ್ಕೆ ಬಳಸುತ್ತಿರುವ ಮೊಬೈಲ್ ನಂಬರ್ ಅನ್ನು ನಮೂದಿಸಬೇಕು.
ಹಂತ 3: ಒಮ್ಮೆ ನಮೂದಿಸಿದ ನಂತರ ರಿಕ್ವೆಸ್ಟ್ ಒಟಿಪಿ ಎಂಬ ಆಯ್ಕೆಯನ್ನು ಒತ್ತಬೇಕು. ನಂತರ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ ಅದನ್ನು ನೀವು ನಮೂದಿಸಿ ನಂತರ ಮೌಲಿಕರಿಸಿ.
ಹಂತ 4: ನಂತರ ನಿಮಗೆ ಮುಂದಿನ ಪುಟ ತೆರೆಯುತ್ತದೆ. ಆ ಪುಟದಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇದೆ ಎಂಬುದರ ಸಂಪೂರ್ಣ ಮಾಹಿತಿ ದೊರೆಯುತ್ತದೆ.
ಈ ಪುಟದಲ್ಲಿ ನೀವು ಬಳಸುತ್ತಿರುವ ನಂಬರ್ಗಳು ಕಾಣಿಸಿದರೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ನೀವು ನೇರವಾಗಿ ಪೋರ್ಟಲ್ ಇಂದ ಹೊರ ಬರಬಹುದು. ಒಂದು ವೇಳೆ ನೀವು ಬಳಸದೇ ಇರುವ ನಂಬರ್ಗಳು ಅಲ್ಲಿ ಕಂಡರೆ, ಅಂತಹ ನಂಬರ್ಗಳನ್ನು ನೀವು ವರದಿಯನ್ನು ಸಲ್ಲಿಸಿ ಅವುಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.
ನೀವು ಬಳಸದೇ ಇರುವ ನಂಬರ್ ಗಳನ್ನು ಬಂದ್ ಮಾಡಿಸುವ ವಿಧಾನ :
ಹಂತ 1: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಇದೆ ಎಂಬ ಮಾಹಿತಿಯು ದೊರೆತಿರುವ ಪುಟದಲ್ಲಿ, ನೀವು ಬಳಸದೇ ಇರುವ ನಂಬರ್ ಅನ್ನು ರಿಪೋರ್ಟ್ ಮಾಡಬೇಕು ಅಥವಾ ಅದರ ಬಗ್ಗೆ ವರದಿಯನ್ನು ನೀಡಬೇಕು ಎಂದುಕೊಂಡಲ್ಲಿ, ಮೊದಲಿಗೆ ಆ ನಂಬರ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಿ.
ಹಂತ 2: ನಂತರ ನಂಬರನ್ನು ಆಯ್ಕೆ ಮಾಡಿಕೊಂಡ ಮೇಲೆ ಕೆಳಗಿನ ಭಾಗದಲ್ಲಿ ನಿಮಗೆ ಮೂರು ಆಯ್ಕೆಗಳು ದೊರೆಯುತ್ತವೆ. ಮೊದಲನೆಯದಾಗಿ ದಿಸ್ ಇಸ್ ನಾಟ್ ಮೈ, ಎರಡನೆಯದಾಗಿ ನಾಟ್ ರಿಕ್ವೈರ್ಡ್ ಹಾಗೂ ಮೂರನೆಯದಾಗಿ ರಿಕ್ವೈರ್ಡ್ ಎಂಬ ಆಯ್ಕೆಗಳು ದೊರೆಯುತ್ತವೆ.
ಹಂತ 3: ಈ ನಂಬರ್ ನಿಮ್ಮದಲ್ಲ ಎಂದು ಕೊಂಡಲಿ ದಿಸ್ ಇಸ್ ನಾಟ್ ಮೈ ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. ಅಥವಾ ನಿಮಗೆ ಈ ನಂಬರ್ ಬೇಡವಾದಲ್ಲಿ ನಾಟ್ ರಿಕ್ವೈರ್ಡ್ ಎಂದು ಆಯ್ಕೆಯನ್ನು ಮಾಡಿ.
ಹಂತ 4 : ನಂತರ ರಿಪೋರ್ಟ್ ಎಂಬ ಆಯ್ಕೆಯ ಮೇಲೆ ಓತ್ತಿರಿ. ಆಗ ಅದು ರಿಪೋರ್ಟ್ ಟೆಲಿ ಕಮ್ಯುನಿಕೇಷನ್ಗೆ ದೂರು ಹೋಗುತ್ತದೆ.
ಹಂತ 5: ನಂತರ ನಿಮಗೆ ಮೇಲಿನ ಭಾಗದಲ್ಲಿ ಉಲ್ಲೇಖದ ನಂಬರ್ ಕೂಡ ದೊರೆಯುತ್ತದೆ ಅದನ್ನು ನೀವು ಮುಂದೆ ಬೇಕಾದಲ್ಲಿ ಉಪಯೋಗಿಸಿಕೊಳ್ಳಬಹುದು.
ಹಂತ 6: ಈ ಉಲ್ಲೇಖದ ನಂಬರನ್ನು ಇಟ್ಟುಕೊಂಡು ನೀವು ಸಲ್ಲಿಸಿದ ವರದಿಯ ಬಗ್ಗೆ ಟ್ರ್ಯಾಕ್ ಕೂಡ ಮಾಡಬಹುದು.
ಹಂತ 7: ನೀವು ಸಲ್ಲಿಸಿದ ವರದಿಯನ್ನು ನಿಷ್ಕ್ರಿಯಗೊಳಿಸಬೇಕು ಎಂದು ಕೊಂಡಲಿ ಕ್ಯಾನ್ಸಲ್ ಎಂಬ ಆಪ್ಷನ್ ಮೇಲೆ ಒತ್ತಬೇಕು.
ಈ ರೀತಿಯಾಗಿ ಈ ಪೋರ್ಟಲ್ ಕೆಲಸ ಮಾಡುತ್ತದೆ.
ನಿಮ್ಮ ಹೆಸರಿನಲ್ಲಿರುವ ಸಿಮೆ ಏನಾದರೂ ಕಳೆದುಕೊಂಡು ಹೋದರೆ, ನೀವು ಕೂಡ ನೀವು ಬಳಸುತ್ತಿರುವ ಸಿಮ್ ಟೆಲಿಕಾಂ ಕಂಪನಿಗೆ ಕರೆಯನ್ನು ಮಾಡಿ ಸಿಮ್ ಅನ್ನು ನಿಷ್ಕ್ರಿಯಗೊಳಿಸಬಹುದು. ಹಾಗೆಯೇ ನೀವೇನಾದರೂ ಹೊಸ ಸಿಮ್ ತೆಗೆದುಕೊಳ್ಳಬೇಕೆಂದಿದ್ದರೆ ಪರಿಚಯ ಇರುವ ಮಾನ್ಯತೆ ಹೊಂದಿರುವ ಟೆಲಿಕಾಂ ಸಂಸ್ಥೆಯ ಮಳಿಗೆಗಳಲ್ಲಿ ಮಾತ್ರ ಖರೀದಿಸಬೇಕು. ಈ ಎಲ್ಲಾ ಮುನ್ನೆಚ್ಚರಿಕೆಗಳನ್ನು ನೀವು ವಹಿಸುವುದು ಅವಶ್ಯಕವಾಗಿದೆ. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಈ ಕೂಡಲೇ ಸಿಮ್ ಕಾರ್ಡ್ ಹೊಂದಿರುವ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಈ ಕೂಡಲೇ ಶೇರ್ ಮಾಡಿ, ಧನ್ಯವಾದಗಳು.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
*********** ವರದಿ ಮುಕ್ತಾಯ ***********
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ