ಮೀನುಗಾರಿಕೆ ಸಾಕಾಣಿಕೆ(Fishing farming), ಜಲಚರ ಸಾಕಣೆ ಅಥವಾ ಮೀನು ಸಾಕಣೆ ಎಂದು ಕೂಡ ಕರೆಯಲ್ಪಡುತ್ತದೆ, ವಾಣಿಜ್ಯ (commercial) ಅಥವಾ ಮನರಂಜನಾ(entertainment) ಉದ್ದೇಶಗಳಿಗಾಗಿ ಮೀನು ಮತ್ತು ಇತರ ಜಲಚರ ಜೀವಿಗಳ ನಿಯಂತ್ರಿತ ಕೃಷಿಯನ್ನು ಒಳಗೊಂಡಿರುತ್ತದೆ. ಇದು ಕೊಳಗಳು ಅಥವಾ ಟ್ಯಾಂಕ್‌ಗಳಲ್ಲಿನ ಸಣ್ಣ-ಪ್ರಮಾಣದ ಕಾರ್ಯಾಚರಣೆಗಳಿಂದ ತೆರೆದ ನೀರಿನ ಪರಿಸರದಲ್ಲಿ ದೊಡ್ಡ-ಪ್ರಮಾಣದ ಸೌಲಭ್ಯಗಳವರೆಗೆ ಇರುತ್ತದೆ. ಮೀನುಗಾರಿಕೆ ಕೃಷಿಯು ಸಮುದ್ರಾಹಾರಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಮತ್ತು ಕಾಡು ಮೀನುಗಳ ಸಂಖ್ಯೆಯ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಅತ್ಯುತ್ತಮ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಖಚಿತಪಡಿಸಿಕೊಳ್ಳಲು ಮೀನುಗಳ ಸಂತಾನೋತ್ಪತ್ತಿ, ಆಹಾರ ಮತ್ತು ಆರೋಗ್ಯದಂತಹ ವಿವಿಧ ಅಭ್ಯಾಸಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಮೀನುಗಾರಿಕೆ ಬೇಸಾಯವು ಇತರ ರೀತಿಯ ಕೃಷಿಯೊಂದಿಗೆ ಸಂಯೋಜಿಸಬಹುದು, ಸಿನರ್ಜಿಗಳನ್ನು ಸೃಷ್ಟಿಸುತ್ತದೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ. ಆದರೆ ಇದೀಗ ಮೀನುಗಾರಿಕೆ (fish farming) ಎನ್ನುವುದು ಒಂದು ಲಾಭದಾಯಕ ಉದ್ಯಮ (business) ಆಗಿ ಹೊರಹೊಮ್ಮುತ್ತಿದೆ. ಹೌದು, ಇದೀಗ ರೈತರ ಕೂಡಾ ಈ ಮೀನುಗಾರಿಕೆಯನ್ನು ಉಪ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮತ್ತು ಸಾಕಷ್ಟು ಜನರನ್ನು ನೋಡುವುದಾದರೆ, ಮೀನುಗಾರಿಕೆಯಿಂದಲೇ ತಮ್ಮ ಜೀವನವನ್ನೂ ಸಾಗಿಸುತ್ತಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೀನುಗಾರಿಕೆಗೆ ಸಹಾಯಧನ :
ಇದೀಗ ಈ ಮೀನುಗಾರಿಕೆ ಕೃಷಿಗೆ ಅಗತ್ಯ ಇರುವ ಸಾಕಷ್ಟು ಸೌಲಭ್ಯಗಳನ್ನು ಕೇಂದ್ರ ಸರ್ಕಾರ(central government) ಮತ್ತು ರಾಜ್ಯ ಸರ್ಕಾರಗಳು (state government) ಒದಗಿಸುತ್ತವೆ ಎನ್ನಬಹುದು. ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ರೈತರಿಗೆ ಸದಾ ನೆರವು ಸಿಗುತ್ತದೆ. ಮತ್ತು ಇತ್ತೀಚಿನ ದಿನಮಾನಗಳಲ್ಲಿ ಯುವ ಕೃಷಿಕರು ಕೂಡಾ ಜಾಸ್ತಿ ಕೃಷಿ ಮೇಲೆ ಆಸಕ್ತಿ ಹೊಂದಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಏನಾದರೂ ಯುವ ಕೃಷಿಕರು ಮೀನುಗಾರಿಕೆಯನ್ನು ಮಾಡುತ್ತಿದ್ದರೆ, ಸರ್ಕಾರದಿಂದ ಮೀನುಗಾರಿಕೆಗೆ ಅಂತಯೇ ಸಿಗುವ ಪ್ರೋತ್ಸಾಹ ಧನ (subsidy) ವನ್ನು ಇದೀಗ ನೀವು ಪಡೆದುಕೊಳ್ಳಬಹುದು. ಹೌದು, ಇದೀಗ ವ್ಯಾಪಾರ ವಾಣಿಜ್ಯ ವಿಭಾಗದಲ್ಲಿ ಯುವಕರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತಿರುವ ರಾಜ್ಯ ಸರ್ಕಾರ 2023 – 24ನೇ ಸಾಲಿನ ಮೀನುಗಾರಿಕಾ ಇಲಾಖೆಯಿಂದ ಆರಂಭವಾಗಿರುವ ಯೋಜನೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು. ಈ ಯೋಜನೆಗಳ ಮೂಲಕ ಸಬ್ಸಿಡಿ(Subsidy), ಪರಿಕರಗಳ ವಿತರಣೆ, ಪರಿಹಾರ ಧನ ಸಾಲ(loan) ಸೌಲಭ್ಯ ಮೊದಲಾದ ಪ್ರಯೋಜನ ಪಡೆಯಬಹುದು.
ಒಳನಾಡು ಮೀನುಗಾರಿಕೆಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮೀನುಗಾರರು 4.40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮೀನುಗಾರಿಕೆಗೆ ಅನುಕೂಲವಾಗುವ ಕೊಳ ನಿರ್ಮಾಣ ಮಾಡಲು ಸರ್ಕಾರದಿಂದ ನೆರವು ಪಡೆದುಕೊಳ್ಳುವ ಅವಕಾಶವಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದರಿಂದ ಮೀನುಗಾರಿಕೆಗೆ ಅನುಕೂಲವಾದ ಸಹಾಯಧನ(subsidy)ವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?:
ಮೊದಲಿಗೆ https://ballari.nic.in/ ಈ ಅಧಿಕೃತ ವೆಬ್ ಸೈಟ್ (Official website)ಗೆ ಬೇಟಿ ನೀಡಿ ಮತ್ತು ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ.
ಇನ್ನೂ ಎರಡನೆಯದಾಗಿ ನೀವು ಆಫ್ಲೈನ್(Offline) ಮೂಲಕ ಕೂಡಾ ಅರ್ಜಿ ಸಲ್ಲಿಸಬಹುದು. ರಾಜ್ಯ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಲ್ಲಿ ಆಫ್ಲೈನ್ (Offline)ಮೂಲಕ ಅರ್ಜಿ ಸಲ್ಲಿಸಬಹುದು.
ಇನ್ನು ಕೊನೆಯದಾಗಿ ತಿಳಿಸುವುದೇನೆಂದರೆ,
ಒಡನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ಫೆಬ್ರುವರಿ 20 ಕೊನೆಯ ದಿನಾಂಕವಾಗಿರುತ್ತದೆ. ಕೊನೆಯ ದಿನಾಂಕದ ವರೆಗೂ ಕಾಯದೆ ನಿಗದಿ ಪಡಿಸಲಾದ ದಿನಾಂಕದ ಒಳಗಡೆ ಹೋಗಿ ಅರ್ಜಿ ಸಲ್ಲಿಸಿ. ಮತ್ತು ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕಾ ಇಲಾಖೆಯ ಈ ಕೆಳಗಿನ ನಂಬರ್ ಗಳಿಗೆ ಕರೆ ಮಾಡಿ.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ – 8970754167
ಉಪ ನಿರ್ದೇಶಕರ ಸಂಖ್ಯೆ – 9449593156.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಇದುವರೆಗೂ ಒಂದು ಕಂತಿನ ಹಣ ಬರದೇ ಇದ್ದವರಿಗೆ ಹೊಸ ಮಾರ್ಗಸೂಚಿ ಪ್ರಕಟ, ಹೀಗೆ ಮಾಡಿ ₹2000/- ಬರುತ್ತೆ
- ಗೃಹಲಕ್ಷ್ಮಿ 2000/- ಹಣ ಪಡೆಯಲು ಹೊಸ ರೂಲ್ಸ್ ಜಾರಿ, 5ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ.!
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.