ಎಲ್ಲರಿಗೂ ನಮಸ್ಕಾರ, ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಶುಕ್ರವಾರ, ಅಂದರೆ ಇಂದು ವರಮಹಾಲಕ್ಷ್ಮಿ ಹಬ್ಬದಂದು ಹಾಗೂ ಇದಕ್ಕೂ ಮುನ್ನ ಹೂವಿನ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಇದು ಜನರಲ್ಲಿ ಆತಂಕವನ್ನು ಮೂಡಿಸಿದೆ. ಇದರ ಕುರಿತಾಗಿ ಈ ಲೇಖನದಲ್ಲಿ ಇನ್ನಷ್ಟು ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ವರಮಹಾಲಕ್ಷ್ಮಿ ಹಬ್ಬದ ಸಲುವಾಗಿ ಹೂವು ಹಾಗೂ ಹಣ್ಣುಗಳಲ್ಲಿ ದಿಢೀರ್ ಬೆಲೆ ಏರಿಕೆ :
ಶುಕ್ರವಾರ, ಆಗಸ್ಟ್ 25 ವರಮಹಾಲಕ್ಷ್ಮಿ ಪೂಜೆ, ಈ ದಿನದಂದು ದೇವಿ ಲಕ್ಷ್ಮಿಯನ್ನು ಸುಖ, ಶಾಂತಿ, ಸಮೃದ್ಧಿಗಾಗಿ ಆರಾಧಿಸುತ್ತಾರೆ. ಮಹಿಳೆಯರು ಈ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೀಗಿರುವಾಗ, ಕಳೆದೆರಡು ದಿನಗಳಿಂದ ನಗರದ ವಿವಿಧೆಡೆ ಹೂವು, ಹಣ್ಣುಗಳು ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಿದೆ.
ಆದರೆ, ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ನಿವಾಸಿಗಳು ಮಾರುಕಟ್ಟೆಗೆ ಆಗಮಿಸುವ ಮುನ್ನ ಎರಡು ಬಾರಿ ಯೋಚಿಸುತ್ತಿದ್ದಾರೆ. ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಹೂವು, ಹಣ್ಣುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬಕ್ಕೂ ಮುನ್ನ ಹೂವಿನ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಈ ಹಿಂದೆ ತರಕಾರಿಗಳ ಮೇಲೆ ಬೆಲೆಯೇರಿಕೆಯಿಂದ ಟೆನ್ಶನ್ ನಲ್ಲಿ ಇದ್ದ ಜನರು ಮತ್ತೆ ಈಗ ಹೂವು, ಹಣ್ಣುಗಳ ಮೇಲೆ ಬೆಲೆ ಏರಿಕೆಯಾಗಿದ್ದು, ಜನರಲ್ಲಿ ಹಬ್ಬದ ಸಂಭ್ರಮಕ್ಕಿಂತ ಬೆಲೆ ಏರಿಕೆಯನ್ನು ಆತಂಕ ಮೂಡಿಸಿದೆ.
ಬೆಂಗಳೂರು, ಕೆ. ಆರ್ ಮಾರ್ಕೆಟ್ ನಲ್ಲಿ ಪೂಜೆಗೆ ಬೇಕಾಗಿರುವ ಸಾಮಗ್ರಿಗಳಾದ ಹೂವು, ಹಣ್ಣುಗಳು ಮತ್ತು ಇನ್ನಿತರೇ ಮಾರಾಟವು ಜೋರಾಗಿ ನಡೆಯುತ್ತಿದೆ. ಜನರು ಖರೀದಿಸಲು ವಸ್ತುಗಳನ್ನು ಖರೀದಿಸಲು ಮುಗ್ಗಿಬಿದ್ದಿದ್ದಾರೆ. ಆದರೆ ಬೆಲೆ ಏರಿಕೆಯು ಜನರಲ್ಲಿ ಗಾಭರಿಯನ್ನುಂಟು ಮಾಡಿದೆ. ಏಕೆಂದರೆ ಹೂವು, ಹಣ್ಣುಗಳು ರೇಟ್ ಮೂರೂಪಟ್ಟು ಜಾಸ್ತಿ ಏರಿಕೆಯಾಗಿದೆ. ಹೀಗಾಗಿ ಜನರು ತಮ್ಮ ಬಜೆಟ್ ನೋಡಿಕೊಂಡು ಖರೀದಿಸಲು ಮುಂದಾಗಿದ್ದಾರೆ.
ಹೂವಿನ ಏರಿಕೆಯಾದ ಬೆಲೆಗಳು ಈ ಕೆಳಗಿನಂತಿವೇ :
ಕನಕಾಂಬರಿ 1 kg ಗೆ – 1200 ರಿಂದ 1500 ರೂಪಾಯಿ
ಮಲ್ಲಿಗೆ 1 kg ಗೆ – 600 ರಿಂದ 800 ರೂಪಾಯಿ ವರೆಗೂ ಏರಿದೆ
ಗುಲಾಬಿ 150 ರಿಂದ 200 ರೂಪಾಯಿ
ಚಿಕ್ಕ ಹೂವಿನ ಹಾರದ ಬೆಲೆ 150 ರಿಂದ 200 ರೂಪಾಯಿ
ದೊಡ್ಡ ಹೂವಿನ ಹಾರದ ಬೆಲೆ 300 ರಿಂದ 500 ರೂಪಾಯಿ
ಸೇವಂತಿಗೆ 250 ರಿಂದ 300 ರೂಪಾಯಿಗೆ ಸಿಗುತ್ತಿದೆ.
ತಾವರೆ ಹೂವು ಜೋಡಿಗೆ 50 ರಿಂದ 100 ರೂಪಾಯಿ ವರೆಗೂ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಹಣ್ಣಿನ ಏರಿಕೆಯಾದ ಬೆಲೆಗಳು ಈ ಕೆಳಗಿನಂತಿವೇ
ಏಲಕ್ಕಿ ಬಾಳೆ – 120 ರಿಂದ 140 ರೂಪಾಯಿ
ಸೀಬೆ ಹಣ್ಣು – 120 ರೂಪಾಯಿಗಳು
ಸೇಬು ಹಣ್ಣು- 200 ರಿಂದ 300 ರೂಪಾಯಿಗಳು
ಕಿತ್ತಳೆ – 150 ರಿಂದ 200 ರೂಪಾಯಿ
ದ್ರಾಕ್ಷಿ ಹಣ್ಣು- 180 ರಿಂದ 200 ರೂಪಾಯಿ
ಫೈನಾಪಲ್ – ಒಂದು ಹಣ್ಣಿಗೆ 80 ರೂಪಾಯಿ
ದಾಳಿಂಬೆ ಹಣ್ಣು – 150 ರಿಂದ 200 ರೂಪಾಯಿ
ಇನ್ನಿತರ ವಸ್ತುಗಳ ಬೆಲೆಯೂ ಹೀಗಿವೆ
ಬಾಳೆ ಕಂಬ – ಜೋಡಿಗೆ 50 ರೂಪಾಯಿ
ಮಾವಿನ ತೋರಣ 20 ರೂಪಾಯಿ
ವಿಳ್ಯದೆಲೆ 100 ಎಲೆಗೆ – 150 ರೂಪಾಯಿ
ತೆಂಗಿನಕಾಯಿ 5 ಕ್ಕೆ – 100 ರೂಪಾಯಿ
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ