ರಸ್ತೆ ಸಂಚಾರ ನಿಯಮ ಪಾಲನೆ – ನಿಮ್ಮ ಸುರಕ್ಷತೆ, ನಿಮ್ಮ ಜವಾಬ್ದಾರಿ!
ರಸ್ತೆ ಸಂಚಾರವು (Road traffic) ಸುರಕ್ಷಿತವಾಗಿರಲು, ಪ್ರಯಾಣಿಕರು ಹಾಗೂ ವಾಹನ ಸವಾರರು ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಸರ್ಕಾರ ಮತ್ತು ಸಂಚಾರ ಇಲಾಖೆಯು ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಹಿಡಿಯಲು ಮತ್ತು ಸಾರ್ವಜನಿಕರ ಸುರಕ್ಷತೆ (Public safety) ಕಾಪಾಡಿಕೊಳ್ಳಲು ಕಾನೂನು ಕ್ರಮಗಳನ್ನು ಜಾರಿಗೆ ತಂದಿದೆ. ಇನ್ನು, ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ವಾಹನ ಸವಾರರು ತಮ್ಮ ಹಾಗೂ ಇತರರ ಜೀವವನ್ನು ಅಪಾಯಕ್ಕೆ ಒಳಪಡಿಸದೇ, ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಪ್ರಾಧಿಕಾರಗಳು ಬಲವಾದ ಕಾನೂನುಗಳನ್ನು ಜಾರಿಗೊಳಿಸಿದ್ದಾವೆ. ಆದರೆ, ಕೆಲವು ಸವಾರರು ನಿರ್ಲಕ್ಷ್ಯದಿಂದ ಅಥವಾ ಜಾಣತನದಿಂದ ಈ ನಿಯಮಗಳನ್ನು (Rules) ಉಲ್ಲಂಘಿಸುತ್ತಾರೆ. ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗುವುದು ಮಾತ್ರವಲ್ಲ, ದಂಡದ ಮೊತ್ತವನ್ನು ಭರಿಸಬೇಕಾಗುತ್ತದೆ. ಹಾಗಿದ್ದರೆ, ರಸ್ತೆ ನಿಯಮಗಳ ಉಲ್ಲಂಘನೆಗಾಗಿ ವಿಧಿಸಲ್ಪಡುವ ದಂಡದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಯಾವ ನಿಯಮಕ್ಕೆ ಎಷ್ಟು ದಂಡ ವಿಧಿಸಲಾಗುತ್ತದೆ (Penalty is imposed) ಎಂಬ ಬಗ್ಗೆ ಜನತೆ ಸ್ಪಷ್ಟ ಮಾಹಿತಿಯನ್ನು ತಿಳಿದುಕೊಳ್ಳುವುದು ಅಗತ್ಯ. ಯಾವುದೇ ನಿಯಮ ಉಲ್ಲಂಘನೆ ಮಾಡಿದರೆ ಸಂಚಾರ ಪೊಲೀಸರು ದಂಡ ವಿಧಿಸುತ್ತಾರೆ ಮತ್ತು ಕೆಲವು ಸಂದರ್ಭಗಳಲ್ಲಿ ಚಾಲನಾ ಪರವಾನಗಿಯು (Driving license) ರದ್ದು ಮಾಡಲು ಕೂಡ ಅವಕಾಶವಿರುತ್ತದೆ. ಆದ್ದರಿಂದ, ನೀವು ಬೈಕ್ ಅಥವಾ ಕಾರು ಓಡಿಸುತ್ತಿದ್ದರೆ, ಈ ನಿಯಮಗಳನ್ನು ತಪ್ಪದೇ ಪಾಲಿಸಿ.
ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ (IMV Act) ಪ್ರತಿ ನಿಯಮ ಉಲ್ಲಂಘನೆಗೆ ದಂಡ ವಿಧಿಸಲಾಗಿದೆ. ನಿಯಮ ಪಾಲನೆಯ ಅರಿವು ಹೆಚ್ಚಿಸಲು, ಸಂಚಾರ ಪೊಲೀಸ್ ಇಲಾಖೆ ರಸ್ತೆ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಿದೆ.
ಪ್ರಮುಖ ಸಂಚಾರ ನಿಯಮ ಉಲ್ಲಂಘನೆ ಮತ್ತು ವಿಧಿಸಲ್ಪಡುವ ದಂಡ(Major traffic violations and penalties imposed) :
1. ಹೆಲ್ಮಟ್ ಧರಿಸದೇ ವಾಹನ ಚಾಲನೆ :
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಡಿ)
ದಂಡ: ₹500
2. ಹಿಂಬದಿ ಸವಾರ ಹೆಲ್ಮಟ್ (Helmet) ಧರಿಸದೇ ವಾಹನ ಸವಾರಿ:
ನಿಯಮ: ಕೆ.ಎಂ.ವಿ ನಿಯಮ 230(1)
ದಂಡ: ₹500
3. ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ:
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಬಿ)
ದಂಡ: ₹500
4. ವಾಹನ ಚಾಲನೆ ವೇಳೆ ಮೊಬೈಲ್ (Mobile) ಬಳಕೆ:
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 184(ಸಿ)
ದಂಡ: ₹1,000
5. ಅಜಾಗರೂಕತೆ/ಅಪಾಯಕಾರಿ ಯಾಗಿ ವಾಹನ ಚಾಲನೆ:
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 184
ದಂಡ: ₹1,000
6. ತುರ್ತು ಸೇವಾ ವಾಹನಗಳಿಗೆ (ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನ) ದಾರಿ ನೀಡಲು ವಿಫಲವಾದರೆ:
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಇ)
ದಂಡ: ₹1,000
7. ನಿಷೇಧಿತ/ನಿರ್ಬಂಧಿತ ವಲಯಗಳಲ್ಲಿ ಹಾರ್ನ್ ಬಳಕೆ:
ನಿಯಮ: ಐ.ಎಂ.ವಿ ಕಾಯ್ದೆ ಸೆಕ್ಷನ್ 194(ಎಫ್)
ದಂಡ: 2W/3W ವಾಹನಗಳಿಗೆ: ₹500, ಇತರೆ ವಾಹನಗಳಿಗೆ: ₹1,000
ನೀವು ವಾಹನ ಚಲಾಯಿಸುವಾಗ ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ (Helmet or seatbelt) ಧರಿಸುವುದು, ಮೊಬೈಲ್ ಬಳಸದೆ ಸುರಕ್ಷಿತವಾಗಿ ವಾಹನ ಚಲಾಯಿಸುವುದು, ತುರ್ತು ಸೇವಾ ವಾಹನಗಳಿಗೆ ದಾರಿ ನೀಡುವುದು ಮತ್ತು ಇತರ ನಿಯಮಗಳನ್ನು ಪಾಲಿಸುವುದು, ನಿಮ್ಮ ಸುರಕ್ಷತೆಯನ್ನು ಮಾತ್ರವಲ್ಲ, ಇತರರಿಗೂ ಭದ್ರತೆಯನ್ನು ಒದಗಿಸುತ್ತದೆ.
ನಮ್ಮ ದೇಶದಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸಲು ಸರ್ಕಾರ (Government) ಮತ್ತು ಸಂಚಾರ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿವೆ. ಈ ನಿಯಮಗಳು ಕೇವಲ ಕಾನೂನುಬದ್ಧ ಜವಾಬ್ದಾರಿಯಷ್ಟೇ ಅಲ್ಲ, ನಿಮ್ಮ ಜೀವನ ಮತ್ತು ಇತರರ ಜೀವ ಉಳಿಸುವಲ್ಲಿ ಸಹಾಯ ಮಾಡುತ್ತವೆ. ಆದ್ದರಿಂದ, ಪ್ರತಿಯೊಬ್ಬರೂ ರಸ್ತೆ ಸುರಕ್ಷತೆಗೆ ಮಹತ್ವ ನೀಡಬೇಕು.
ಸಂಚಾರ ನಿಯಮಗಳನ್ನು (Traffic rules) ಗೌರವಿಸಿ, ಸುರಕ್ಷಿತವಾಗಿ ಪ್ರಯಾಣಿಸಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.