ರಾಜ್ಯದ ಈ ಮಹಿಳೆಯರಿಗೆ 3 ಲಕ್ಷ ರೂಪಾಯಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ.! ಇಲ್ಲಿದೆ ವಿವರ 

Picsart 25 04 26 00 54 39 246

WhatsApp Group Telegram Group

ಆರ್ಥಿಕ ಸ್ವಾವಲಂಬನೆಗೆ ಹೊಸ ದಾರಿ: ಮಹಿಳೆಯರಿಗಾಗಿ ಕರ್ನಾಟಕ ಸರ್ಕಾರದ ‘ಉದ್ಯೋಗಿನಿ ಯೋಜನೆ’

ಇದೀಗ ಮಹಿಳೆಯರ ಸಬಲೀಕರಣ ಮತ್ತು ಆರ್ಥಿಕ ಸ್ವಾವಲಂಬನೆಗೆ (For women’s empowerment and economic self-reliance) ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರ ಮಹಿಳೆಯರಿಗಾಗಿ ರೂಪಿಸಿರುವ ‘ಉದ್ಯೋಗಿನಿ ಯೋಜನೆ’ (Udyogini Scheme) ಗಮನಸೆಳೆಯುತ್ತಿದೆ. ಈ ಯೋಜನೆ ಹೆಸರಿನಂತೆ ಮಹಿಳೆಯರನ್ನು ಉದ್ಯೋಗದ ಮೂಲಕ ಆರ್ಥಿಕವಾಗಿ ಸದೃಢಗೊಳಿಸುವ ಗುರಿಯನ್ನು ಹೊಂದಿದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಜೀವನದಲ್ಲಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು ಎಂಬ ದೃಷ್ಟಿಕೋನದಿಂದ 2015-16ರಲ್ಲಿ ಆರಂಭಿಸಲಾದ ಈ ಯೋಜನೆಯು, ನಿರುದ್ಯೋಗಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಆರಂಭಿಸಲು ನೆರವಾಗುತ್ತಿದೆ. ಹಾಗಿದ್ದರೆ ಈ ಉದ್ಯೋಗಿನಿ ಯೋಜನೆಯ ಉದ್ದೇಶವೇನು(Purpose)? ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಯಾವೆಲ್ಲ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗಿನಿ ಯೋಜನೆಯ ಉದ್ದೇಶವೇನು?:

ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ, ನಿರುದ್ಯೋಗಿ ಮಹಿಳೆಯರನ್ನು (Unemployed women) ಸ್ವ ಉದ್ಯೋಗಕ್ಕೆ ಪ್ರೇರಣೆ ಮಾಡುವುದು. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಉದ್ಯಮಗಳಲ್ಲಿ ತಮ್ಮದೇ ಆದ ಚಾಪು ಮೂಡಿಸುತ್ತಿದ್ದಾರೆ. ಆದರೆ ಆರಂಭಿಕ ಹಂತದಲ್ಲಿ ಮೂಲಧನದ ಕೊರತೆ, ಬ್ಯಾಂಕ್ ಸಾಲದ (Bank loan) ಪ್ರಕ್ರಿಯೆಯ, ಸರಿಯಾದ ಮಾರ್ಗದರ್ಶನದ ಅಭಾವ ಇವು ಎಲ್ಲಾ ಮಹಿಳೆಯರ ಉದ್ಯಮ ಪ್ರಯಾಣಕ್ಕೆ ತೊಂದರೆ ಆಗುತ್ತವೆ. ಈ ಹಿನ್ನೆಲೆಯಲ್ಲಿಯೇ ಉದ್ಯೋಗಿನಿ ಯೋಜನೆಯು ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸುತ್ತಿದೆ.

ಯೋಜನೆಯ ವಿವರಗಳು ಹೀಗಿವೆ:

ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು (Loan facility) ನೀಡಲಾಗುತ್ತದೆ. ಈ ಸಾಲವು ಬ್ಯಾಂಕ್‌ಗಳ ಮೂಲಕ ನೀಡಲಾಗುತ್ತಿದ್ದು, ಕೆಲವು ಶರತ್ತುಗಳನ್ನು ಪೂರೈಸಿದ ಬಳಿಕ ಸಬ್ಸಿಡಿ ಸಹ ದೊರೆಯುತ್ತದೆ.
ಎಸ್‌ಸಿ/ಎಸ್‌ಟಿ ವರ್ಗದ ಮಹಿಳೆಯರಿಗೆ (For SC/ST women) 50% ಅಥವಾ ಗರಿಷ್ಠ ರೂ.1,50,000ರಷ್ಟು ಸಬ್ಸಿಡಿ ನೀಡಲಾಗುತ್ತದೆ.
ಇತರ ವರ್ಗದ ಮಹಿಳೆಯರಿಗೆ 30% ಅಥವಾ ಗರಿಷ್ಠ ರೂ.90,000ರಷ್ಟು ಸಬ್ಸಿಡಿ ಲಭ್ಯವಿದೆ.

ಯಾವ ರೀತಿಯ ವ್ಯಾಪಾರಗಳಿಗೆ ಈ ಯೋಜನೆಯಿಂದ ಸಹಾಯ ದೊರೆಯುತ್ತದೆ?:

ಈ ಯೋಜನೆಯ ಅಡಿಯಲ್ಲಿ ಈ ಕೆಳಗಿನ ಲಾಭದಾಯಕ ಚಟುವಟಿಕೆಗಳಿಗೆ (For profitable activities) ಸಾಲ ದೊರೆಯುತ್ತದೆ,
ಬುಕ್‌ಬೈಂಡಿಂಗ್ ಮತ್ತು ನೋಟ್ಬುಕ್ ತಯಾರಿಕೆ.
ಸೀಮೆಸುಣ್ಣ ಮತ್ತು ಕ್ರಯೋನ್ ತಯಾರಿಕೆ.
ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಕೆ.
ಪಾಪಡ್ ತಯಾರಿಕೆ.
ಸೀರೆ ಮತ್ತು ಕಸೂತಿ ಕೆಲಸ
ಬಟ್ಟೆ ಮುದ್ರಣ ಮತ್ತು ಬಣ್ಣ ಹಾಕುವ ಕೆಲಸ.
ಉಣ್ಣೆಯ ನೇಯ್ದೆ ಮತ್ತು ಇತರ ಕೈಗಾರಿಕಾ ಚಟುವಟಿಕೆಗಳು ಈ ಯೋಜನೆ ಯಿಂದ ಸಹಾಯ (help) ದೊರೆಯುತ್ತದೆ.

ಈ ಯೋಜನೆಗೆ ಅರ್ಜಿ (Apllication) ಸಲ್ಲಿಸಲು ಬೇಕಾಗುವ ಅರ್ಹತೆಗಳು ಏನು?:

ಈ ಯೋಜನೆಗೆ ಅರ್ಹತೆ ಹೊಂದಿರುವವರು,
ಮಹಿಳೆಯರಾಗಿರಬೇಕು.
ವಾರ್ಷಿಕ ಕುಟುಂಬದ ಆದಾಯ ರೂ.1,50,000 ಗಿಂತ ಕಡಿಮೆ ಇರಬೇಕು.
ಎಸ್‌ಸಿ/ಎಸ್‌ಟಿ ಮಹಿಳೆಯರಿಗಾಗಿ ಈ ಮಿತಿಯನ್ನು ರೂ.2 ಲಕ್ಷದವರೆಗೆ ವಿಸ್ತರಿಸಲಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲೆಗಳು (Documents) ಬೇಕು?

ಆಧಾರ್ ಕಾರ್ಡ್.
ಆದಾಯ ಪ್ರಮಾಣಪತ್ರ.
ಜಾತಿ ಪ್ರಮಾಣಪತ್ರ (ಅರ್ಹ ವರ್ಗದವರಿಗೆ).
ಡೊಮಿಸೈಲ್/ ನಿವಾಸ ಪ್ರಮಾಣಪತ್ರ.
ಪಾಸ್‌ಪೋರ್ಟ್ ಫೋಟೋ.
ಬ್ಯಾಂಕ್ ಖಾತೆ ವಿವರಗಳು.
ಯೋಜನೆಯ ಸ್ವರೂಪ ವಿವರ (ಬಿಸಿನೆಸ್ ಪ್ಲಾನ್).

ಉದ್ಯೋಗಿನಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸ ಬೇಕು?:

ಈ ಯೋಜನೆಗೆ ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸುವ ಅವಕಾಶ ಇಲ್ಲ. ಅರ್ಹ ಮಹಿಳೆಯರು ಸಂಬಂಧಿತ ಜಿಲ್ಲೆ ಅಥವಾ ತಾಲ್ಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ (In the district or taluk level Women and Child Development Department) ಅರ್ಜಿ ಸಲ್ಲಿಸಬಹುದು. ಅಲ್ಲದೆ, ಕೆಲವೊಂದು ಮಾನ್ಯತೆ ಪಡೆದ ಬ್ಯಾಂಕುಗಳು ಮತ್ತು ಸಂಸ್ಥೆಗಳ ಮುಖಾಂತರವೂ ಈ ಪ್ರಕ್ರಿಯೆ ಮುಗಿಸಬಹುದಾಗಿದೆ.

ಉದ್ಯೋಗಿನಿ ಯೋಜನೆ ಮಹಿಳೆಯರನ್ನು ಕೇವಲ ಸಾಲ ನೀಡುವ ಮೂಲಕವಷ್ಟೇ ಅಲ್ಲ, ಅವರು ತಮ್ಮದೇ ಉದ್ಯಮಗಳನ್ನು ಆರಂಭಿಸಿ ಯಶಸ್ವಿಯಾದ ಉದ್ಯಮಿಗಳಾಗುವಂತೆ ಪ್ರೇರೇಪಿಸುತ್ತದೆ. ಈ ಯೋಜನೆಯ ಸಹಾಯದಿಂದ ಅನೇಕ ಮಹಿಳೆಯರು ಜೀವನದಲ್ಲಿ ಹೊಸ ಪ್ರಾರಂಭವನ್ನು ಕಂಡು ಯಶಸ್ಸು ಸಾಧಿಸುತ್ತಿದ್ದಾರೆ. ತಮ್ಮ ಕನಸುಗಳನ್ನು (Dreams) ಸಾಕಾರಗೊಳಿಸಲು ಬಯಸುವ ಪ್ರತಿ ಮಹಿಳೆಯೂ ಈ ಯೋಜನೆಯನ್ನು ಬಳಸಿಕೊಳ್ಳುವುದು ಅವಶ್ಯಕ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!