ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಗೆ AI ಮತ್ತು ML ಉನ್ನತ ತರಬೇತಿ – ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ
ಇಂಜಿನಿಯರಿಂಗ್ ಪದವೀಧರರಿಗೆ (For engineering graduates) ಎಐ ಹಾಗೂ ಮಷಿನ್ ಲರ್ನಿಂಗ್ ತರಬೇತಿ ಮೂಲಕ ಭವಿಷ್ಯದ ತಂತ್ರಜ್ಞಾನ ಕ್ಷೇತ್ರದಲ್ಲಿ ಉಜ್ವಲ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ (Social welfare department) ಮಹತ್ವಾಕಾಂಕ್ಷಿ ಯೋಜನೆ ಕೈಗೊಂಡಿದೆ. 2024-25ನೇ ಸಾಲಿನ ಆಯವ್ಯಯ ಭಾಷಣದ (ಕಂಡಿಕೆ-174) ಅನ್ವಯ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ತಾಂತ್ರಿಕ ತರಬೇತಿಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪುಗೊಂಡಿದೆ. ಇದರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISc), ಭಾರತೀಯ ತಾಂತ್ರಿಕ ಸಂಸ್ಥೆ (IIT), ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (NIT) ಮುಂತಾದ ರಾಷ್ಟ್ರಮಟ್ಟದ ಪ್ರಖ್ಯಾತ ಸಂಸ್ಥೆಗಳ ಮೂಲಕ ಆರ್‌ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಮಷಿನ್ ಲರ್ನಿಂಗ್ (ML) ವಿಷಯಗಳಲ್ಲಿ ಶಿಷ್ಯವೇತನ ಸಹಿತ ಉನ್ನತ ಮಟ್ಟದ ತರಬೇತಿ ನೀಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ತರಬೇತಿ ಮೂಲಕ ಅಭ್ಯರ್ಥಿಗಳು ಕೇವಲ ತಾಂತ್ರಿಕ ಜ್ಞಾನವನ್ನಷ್ಟೇ ಪಡೆಯುವುದಿಲ್ಲ, ಬದಲಿಗೆ ಉದ್ಯೋಗ ಜಗತ್ತಿನಲ್ಲಿ ತಮ್ಮ ಸ್ಪರ್ಧಾತ್ಮಕತೆಯನ್ನು (Competitiveness) ಹೆಚ್ಚಿಸಿಕೊಳ್ಳುವ ಅವಕಾಶವನ್ನೂ ಪಡೆಯುತ್ತಾರೆ. ತರಬೇತಿ ಅವಧಿ ಗರಿಷ್ಠ ಎರಡು ವಾರಗಳಿದ್ದು, ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಾಸಿಕ ರೂ.15,000 ಶಿಷ್ಯವೇತನವನ್ನು (stipend) ಸಹ ನೀಡಲಾಗುತ್ತದೆ. ಈ ಕ್ರಮದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಕಾರ ದೊರೆಯುವುದು ಮಾತ್ರವಲ್ಲದೇ, ತಂತ್ರಜ್ಞಾನ ಕ್ಷೇತ್ರದಲ್ಲಿ ನೂತನ ಅವಕಾಶಗಳನ್ನು ಪತ್ತೆಹಚ್ಚಲು ಸಹಾಯವಾಗಲಿದೆ.
ತರಬೇತಿ ವಿಷಯಗಳು ಯಾವುವು?:
ಆರ್‌ಟಿಫಿಶಿಯಲ್ ಇಂಟೆಲಿಜೆನ್ಸ್ (AI)
ಮಷಿನ್ ಲರ್ನಿಂಗ್ (ML)
ತರಬೇತಿ ಸಂಸ್ಥೆಗಳು ಯಾವುವು?:
IISc ಬೆಂಗಳೂರು
IIT
NIT ಮುಂತಾದ ಪ್ರಖ್ಯಾತ ತಾಂತ್ರಿಕ ಸಂಸ್ಥೆಗಳು
ಈ ತರಬೇತಿಗೆ ಬೇಕಾದ ಅರ್ಹತಾ ಮಾನದಂಡಗಳು ಏನು?:
BE/B.Tech ಪದವಿ ಹೊಂದಿರಬೇಕು.
ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
ಅಭ್ಯರ್ಥಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು.
ತರಬೇತಿ ಅವಧಿಯಲ್ಲಿ ಸಿಗುವ ಸೌಲಭ್ಯಗಳು (facilities) ಯಾವುವು?:
ಉಚಿತ ತರಬೇತಿ.
ಮಾಸಿಕ ರೂ.15,000 ಶಿಷ್ಯವೇತನ.
ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ತರಬೇತಿಯ ಅವಕಾಶ.
ಈ ತರಬೇತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Documents) ಯಾವುವು?:
ಆಧಾರ್ ಕಾರ್ಡ್ ಪ್ರತಿ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಪಾಸ್‌ಪೋರ್ಟ್ ಗಾತ್ರದ ಫೋಟೋ.
ಪದವಿಯ ಅಂಕಪಟ್ಟಿಗಳು.
ಬ್ಯಾಂಕ್ ಪಾಸ್ ಬುಕ್ ಪ್ರತಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 13, 2025
ಹೆಚ್ಚಿನ ಮಾಹಿತಿಗಾಗಿ ಹೀಗೆ ಮಾಡಿ:
ದೂರವಾಣಿ ಸಂಪರ್ಕ: 080-26711096
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬನಶಂಕರಿ, ಬೆಂಗಳೂರು ಗೆ ಭೇಟಿ ನೀಡಬಹುದು.
ಈ ತರಬೇತಿ ಯೋಜನೆ ಪರಿಶಿಷ್ಟ ಪಂಗಡದ (Scheduled cast) ಯುವ ತಾಂತ್ರಿಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವಂತೆ ರೂಪುಗೊಂಡಿದ್ದು, ಭಾರತದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ (Technology fileds) ಅವರ ತೊಡಗಿಸಿಕೊಳ್ಳುವಿಕೆಯನ್ನು ಗುರಿಯಾಗಿಟ್ಟುಕೊಂಡಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.