ಸರ್ಕಾರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.! ವಿದ್ಯಾರ್ಥಿಗಳು ತಪ್ಪದೆ ಅಪ್ಲೈ ಮಾಡಿ !

IMG 20240729 WA0003

ಐಎಎಸ್‌ (IAS), ಕೆಎಎಸ್‌ (KAS) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಗೆ (competitive exams)ಸಿದ್ದರಾಗುತ್ತಿದ್ದೀರಾ? ಸರ್ಕಾರದಿಂದ ವಸತಿ ಸಹಿತ ಉಚಿತ ತರಬೇತಿ(Free training)ಗೆ ಅರ್ಜಿ ಆಹ್ವಾನಿಸಲಾಗಿದೆ.

ಇಂದು ನಮ್ಮ ಭಾರತ (India) ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆದಿದೆ. ಹಾಗೆ ನೋಡುವುದಾದರೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವು ಹಲವು ಯೋಜನೆಗಳನ್ನೂ ಕೂಡ ಬಿಡುಗಡೆ ಮಾಡುತ್ತಿದೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುವುದರ ಜೊತೆಗೆ, ಒಳ್ಳೆಯ ವಿದ್ಯಾಭ್ಯಾಸವನ್ನು ಕೂಡ ತೆಗೆದುಕೊಂಡು ಶೈಕ್ಷಣಿಕವಾಗಿಯೂ ಕೂಡ ನಮ್ಮ ಯುವಕ ಯುವತಿಯರು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಲವನ್ನು ತೋರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಲವು ಅಡಚಣೆಗಳು ಎದುರಾಗುತ್ತಿವೆ. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (competitive exams) ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಸರಿಯಾದ ತರಬೇತಿ ಹಾಗೂ  ಒಳ್ಳೆಯ ಮೆಂಟರ್ ಸಿಗದೇ  ಈ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗುವ ಕನಸನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ. ಆದ್ದರಿಂದ ಇದೀಗ ಕರ್ನಾಟಕ ಸರ್ಕಾರ ಐಎಎಸ್‌ (IAS), ಕೆಎಎಸ್‌ (KAS) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಸರ್ಕಾರದಿಂದ ವಸತಿ (Accommodation) ಸಹಿತ ಉಚಿತ ತರಬೇತಿಯನ್ನು (free training) ನೀಡುತ್ತಿದೆ. ಇದೀಗ ಅದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ಯಾವುದಾದರೂ ಒಂದು ಡಿಗ್ರಿಯನ್ನು ಮುಗಿಸಿದ್ದರೆ, ಅಂತಹ ಅಭ್ಯರ್ಥಿಗಳು ದೇಶದ ಹಾಗೂ ರಾಜ್ಯದ ನಾಗರೀಕ ಸೇವೆಗಳಾದ ಐಎಎಸ್‌, ಕೆಎಎಸ್‌ ಪರೀಕ್ಷೆಗಳನ್ನು ಬರೆಯಲು ಅರ್ಹರಾಗಿರುತ್ತಾರೆ. ಇಂತಹ ಪರೀಕ್ಷೆಗಳನ್ನು ಬರೆಯಲು ಆಸಕ್ತಿ ಪಡುವಂತಹ ವಿದ್ಯಾರ್ಥಿಗಳಿಗಾಗಿ ವಸತಿಯೊಂದಿಗೆ ಉಚಿತ ಕೋಚಿಂಗ್ ಗೆ ಅರ್ಜಿ ಆಹ್ವಾನಿಸಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಸಹಾಯವಾಗುವಂತೆ  ಈ ಯೋಜನೆಯನ್ನು ಜಾರಿಗೆ ತಂದಿದೆ. ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಯುಪಿಎಸ್ಸಿ(UPSC) ಹಾಗೂ ಕೆಪಿಎಸ್ಸಿ(KPSC) ಪರೀಕ್ಷೆಗಳಿಗೆ ಉಚಿತ ತರಬೇತಿಯನ್ನು 10 ತಿಂಗಳ ವಸತಿ ಸಹಿತ ಪ್ರತಿಷ್ಠಿತ ಸಂಸ್ಥೆಗಳಿಂದ ನೀಡಲಾಗುತ್ತದೆ.

ತರಬೇತಿ ಎಲ್ಲಿ ನೆಡೆಯುತ್ತದೆ?

ಈ ತರಬೇತಿಗೆ ಅಭ್ಯರ್ಥಿಗಳು ಈಗಾಗಲೇ ಆನ್ಲೈನ್ ನೋಂದಣಿ (Online application) ಮಾಡಿಕೊಳ್ಳುತ್ತಿದ್ದು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2024-25ನೇ ಸಾಲಿನಲ್ಲಿ ಕರ್ನಾಟಕ ಹಜ್‌ ಭವನ, ಬೆಂಗಳೂರು ಇಲ್ಲಿ ಐಎಎಸ್‌ / ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ಉಚಿತ ತರಬೇತಿ ನೀಡಲಿದೆ. ಆದ್ದರಿಂದ ಉಚಿತ ತರಬೇತಿಗಾಗಿ ಕಾಯುತ್ತಿರುವಂತಹ ಅಲ್ಪಸಂಖ್ಯಾತರ ಸಮುದಾಯದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಉಚಿತ ತರಬೇತಿಗೆ ಅರ್ಜಿಗಳನ್ನು ಹಾಕಲು ಯಾವೆಲ್ಲ ಅರ್ಹತೆಗಳು (Qualifications) ಇರಬೇಕು?

ಮೊದಲಿಗೆ ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿರಬೇಕು ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿರಬೇಕು.
ಸರ್ಕಾರದಿಂದ ಮಾನ್ಯತೆ ಪಡೆದಿರುವಂತಹ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದುಕೊಂಡಿರಬೇಕು.
ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದೊಳಗೆ ಅಭ್ಯರ್ಥಿಯ ವಯೋಮಿತಿ ಕನಿಷ್ಠ 21 ರಿಂದ ಗರಿಷ್ಠ 35 ವರ್ಷಗಳು ಮೀರಿರಬಾರದು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಸರ್ಕಾರಿ ನೌಕರಿಯಲ್ಲಿರುವ ಅಭ್ಯರ್ಥಿಗಳು ಈ ಒಂದು ತರಬೇತಿಗೆ ಅರ್ಜಿಗಳನ್ನು ಹಾಕಲು ಅರ್ಹರಿರುವುದಿಲ್ಲ.

ಅರ್ಜಿಗಳನ್ನು ಸಲ್ಲಿಸಲು ಬೇಕಾಗುವ ದಾಖಲೆಗಳು (Documents) :

ವೈಯಕ್ತಿಕ ಮಾಹಿತಿಗಳೊಂದಿಗೆ ಈ ಕೆಳಗಿನ ಎಲ್ಲಾ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವೇಳೆ ಸಲ್ಲಿಸಬೇಕಾಗುತ್ತದೆ.
ಆಧಾರ್ ಕಾರ್ಡ್‌.
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ.
ಗುರುತಿನ ಚೀಟಿ.
ವಿದ್ಯಾರ್ಹತೆ ದಾಖಲೆಗಳು.
ಜನ್ಮ ದಿನಾಂಕದ ಪ್ರಮಾಣ ಪತ್ರ.
ಆದಾಯ ಪ್ರಮಾಣ ಪತ್ರ.
ಅಲ್ಪಸಂಖ್ಯಾತರ ಸಮುದಾಯದ ಪ್ರಮಾಣ ಪತ್ರ.

ಪ್ರಮುಖ ದಿನಾಂಕಗಳು (important dates) :

ಆನ್ಲೈನ್ ನೋಂದಣಿಗೆ ಆರಂಭದ ದಿನಾಂಕ – 24 ಜುಲೈ 2024
ಆನ್ಲೈನ್ ನೋಂದಣಿಗೆ ಕೊನೆಯ ದಿನಾಂಕ – 31 ಆಗಸ್ಟ್ 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ (How to Apply Application) :

ಈ ತರಬೇತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ : https://sevasindhu.karnataka.gov.in/Sevasindhu/Departmentservices ವೆಬ್‌ಸೈಟ್‌ಗೆ ಭೇಟಿ ನೀಡುವುದರ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಸಂಬಂಧಪಟ್ಟ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ 8277799990 ಇವರನ್ನು ಸಂಪರ್ಕಿಸಬಹುದು.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!