ಕೇಂದ್ರ ಸರ್ಕಾರವು “ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ(Pradhan Mantri Suryodaya yojana)” ಎಂಬ ಹೊಸ ಯೋಜನೆಯನ್ನು ಘೋಷಿಸುವ ಸುದ್ದಿಗಳು ಭಾರೀ ಸದ್ದು ಮಾಡುತ್ತಿವೆ. ಈ ಯೋಜನೆಯ ಪ್ರಕಾರ, ಭಾರತದ ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್ ಉಚಿತ(Free Electricity)ವಾಗಿ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ. ಬನ್ನಿ, ಈ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ಈ ನಮ್ಮ ವರದಿಯಲ್ಲಿ ನೋಡೋಣ. ವರದಿ ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್ ಖಚಿತ :
2024ರ ಬಜೆಟ್‌ನಲ್ಲಿ ಭಾರತ ಸರ್ಕಾರವು ಜನರಿಗೆ ಒಂದು ಅದ್ಭುತವಾದ ಉಡುಗೊರೆಯನ್ನು ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಯು ಭಾರತದ ಪ್ರತಿ ಮನೆಗೆ ಸ್ವಚ್ಛ, ನವೀಕರಣೀಯ ಉರ್ಜೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕು ಸ್ಥಾಪನೆ ಸಮಾರಂಭದ ಶುಭದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕೋಟಿ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಘಟಕ(Solar Panels) ಸ್ಥಾಪಿಸುವ ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ಯನ್ನು ಘೋಷಿಸಿದರು.
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ :
ಈ ಯೋಜನೆಯು ದೇಶದ ಉಜ್ವಲ ಭವಿಷ್ಯಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದೆ. ಸೂರ್ಯನ ಬೆಳಕಿನ ಶಕ್ತಿಯನ್ನು ಬಳಸಿಕೊಂಡು, ಭಾರತವು ಶಕ್ತಿ ಸ್ವಾವಲಂಬನೆಯತ್ತ ಒಂದು ಭಾರಿ ಲಾಂಗ್ ಜಂಪ್ ಮಾಡಲಿದೆ. ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ‘ಸೂರ್ಯವಂಶದ ರಾಮನ ಬೆಳಕು ಪಡೆದು ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ’ ಕರೆ ನೀಡಿದರು.
ಸೌರ ಶಕ್ತಿಯು ಭವಿಷ್ಯದ ಶಕ್ತಿಯಾಗಿದೆ. ಇದು ಪರಿಸರ ಸ್ನೇಹಿ, ಉಳಿತಾಯದಾಯಕ ಮತ್ತು ಲಾಭದಾಯಕವಾಗಿದೆ. ಸೌರ ಫಲಕಗಳನ್ನು ನಿಮ್ಮ ಮನೆಯ ಮೇಲ್ಛಾವಣಿ(Rooftop)ಯ ಮೇಲೆ ಅಳವಡಿಸುವ ಮೂಲಕ, ನೀವು ಈ ಅದ್ಭುತ ಅವಕಾಶಗಳನ್ನು ಪಡೆಯಬಹುದು.
ಸ್ವಂತವಾಗಿ ವಿದ್ಯುತ್ ಉತ್ಪಾದಿಸುವ ಮೂಲಕ, ವಿದ್ಯುತ್ ಕಂಪನಿಗಳ ಮೇಲಿನ ನಿಮ್ಮ ಅವಲಂಬನೆಯನ್ನು ಕಡಿಮೆ ಮಾಡಬಹುದು. ಉಳಿತಾಯವಾದ ಹಣವನ್ನು ನಿಮ್ಮ ಇತರ ಅಗತ್ಯತೆಗಳಿಗೆ ಬಳಸಬಹುದು. ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ನ್ನು ವಿದ್ಯುತ್ ಕಂಪೆನಿಗಳಿಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದು.ಇದು ಒಂದು ಉತ್ತಮವಾದ ಹೆಚ್ಚುವರಿ ಆದಾಯದ ಮೂಲವನ್ನು ಪಡೆಯಬಹುದು. ಎಲೆಕ್ಟ್ರಿಕ್ ವಾಹನಗಳ(electric vehicles) ಚಾರ್ಜಿಂಗ್, ಪೂರೈಕೆ ಮತ್ತು ಅನುಸ್ಥಾಪನೆಯಲ್ಲಿ ಉದ್ಯಮಗಳನ್ನು ಪ್ರಾರಂಭಿಸಬಹುದು. ಇದು ಉದ್ಯೋಗ ಸೃಷ್ಟಿಗೆ ಕಾರಣವಾಗಬಹುದು ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಬಹುದು. ಇಷ್ಟೇ ಅಲ್ಲಾ, ಸೌರ ಫಲಕಗಳ ಉತ್ಪಾದನೆ, ಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಸೌರ ಫಲಕಗಳು ನಿಮ್ಮ ಮನೆಯನ್ನು ಸ್ವಾವಲಂಬಿ ಶಕ್ತಿ ಕೇಂದ್ರವಾಗಿ ಪರಿವರ್ತಿಸುತ್ತವೆ. ಗ್ರಿಡ್‌ನಿಂದ ವಿದ್ಯುಚ್ಛಕ್ತಿ ಖರೀದಿಸುವ ಅಗತ್ಯವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ, ನಿಮ್ಮ ವಿದ್ಯುತ್ ಬಿಲ್(Electricity bill)ಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ.
ಮನೆಯ ಛಾವಣಿಯ ಮೇಲೆ 3KW ರಿಂದ 5KW ವರೆಗೆ ವಿದ್ಯುತ್ ಅಳವಡಿಸಲು ಸಾಧ್ಯ. ಈ ಯೋಜನೆಯಡಿ, ನಿಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುವುದು ಮತ್ತು ಅವು ಸೂರ್ಯನ ಬೆಳಕನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುತ್ತವೆ. ಮೇಲ್ಚಾವಣೆಯ ವೆಚ್ಚವು ಸುಮಾರು 2.20 – 3.5 ಲಕ್ಷದವರೆಗೆ ಬರುತ್ತದೆ. ಈ ಯೋಜನೆಯಲ್ಲಿ ಭಾಗವಹಿಸಲು, ನೀವು ರೂ. 9,000 ರಿಂದ ರೂ. 12,000 ವರೆಗೆ ಠೇವಣಿ ಪಾವತಿಸಬೇಕಾಗುತ್ತದೆ. ಉಳಿದ ವೆಚ್ಚವನ್ನು ನೀವು ಇಎಂಐ(EMI) ಮೂಲಕ ಪಾವತಿಸಬಹುದು. ರೂಫ್‌ಟಾಪ್ ಸೋಲಾರ್ ಪ್ರೋಗ್ರಾಂ ಹಂತ – Ⅱ ಅಡಿಯಲ್ಲಿ 10kW ವರೆಗೆ ರೂಫ್‌ಟಾಪ್ ಸೋಲಾರ್ ಸಿಸ್ಟಮ್‌ಗಳನ್ನು ಅಳವಡಿಸಲು ಅವಕಾಶವಿದೆ.
2016 ರಿಂದ, ಭಾರತದಲ್ಲಿ ಛಾವಣಿಯ ಮೇಲೆ ಸೌರ (RTS) ಯೋಜನೆಯು ಭಾರೀ ಪ್ರಗತಿಯನ್ನು ಕಂಡಿದೆ. ಈಗಾಗಲೇ 2.7 GW ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ ಮತ್ತು 40 GW ಗುರಿಯನ್ನು 2025 ರ ವೇಳೆಗೆ ಸಾಧಿಸಲು ಯೋಜಿಸಲಾಗಿದೆ. ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ (PMSY) ಯ ಉಡಾವಣೆಯೊಂದಿಗೆ, ಈ ಗುರಿಯನ್ನು ಸಾಧಿಸಲು ಉತ್ತೇಜನ ಸಿಗುವ ನಿರೀಕ್ಷೆಯಿದೆ.
2030ರ ವೇಳೆಗೆ 500 ಗಿಗಾವಾಟ್ ಪಳೆಯುಳಿಕೆ ರಹಿತ ಇಂಧನ ಉತ್ಪಾದನೆಯ ಗುರಿಯತ್ತ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ! ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕ 40 ಗಿಗಾವಾಟ್ ಸೌರ ವಿದ್ಯುತ್ ಉತ್ಪಾದನೆಯ ಗುರಿಯನ್ನು ಸರ್ಕಾರವು ನಿಗದಿಪಡಿಸಿದೆ. ಈ ಗುರಿ ಭಾರತದ ಪ್ರತಿ ಮನೆಗೂ ಶಾಶ್ವತ, ಪರಿಸರ ಸ್ನೇಹಿ ವಿದ್ಯುತ್ ಪೂರೈಕೆ ಖಚಿತಪಡಿಸಲಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ಸಾಲಕ್ಕೆ ಅರ್ಜಿ ಸಲ್ಲಿಸುವಾಗ, ಸಿಬಿಲ್ ಸ್ಕೋರ್ ಹೆಚ್ಚು ಮಾಡುವ ಸೀಕ್ರೆಟ್ ಟ್ರಿಕ್ಸ್ ಇಲ್ಲಿದೆ
- ಬಂಪರ್ ಬೆಲೆಯಲ್ಲಿ ಸೋಲಾರ್ ಹಾಕಿಸಿ, ಉಚಿತ 300 ಯೂನಿಟ್ ವಿದ್ಯುತ್ ಪಡೆಯಿರಿ.
- ಯಾವುದೇ ಗ್ಯಾರಂಟಿ ಇಲ್ಲದೇ ಸಿಗಲಿದೆ 2 ಲಕ್ಷ ರೂ.ವರೆಗೆ ಸಾಲ..! ಮೋದಿ ಸರ್ಕಾರದ ಹೊಸ ಯೋಜನೆ
- ರಾಜ್ಯಾದ್ಯಂತ ರೈತರ ಜಮೀನಿನ ಪಹಣಿಯಲ್ಲಿನ ಲೋಪದೋಷ ಸರಿಪಡಿಸಲು ಕಂದಾಯ ಅದಾಲತ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.