LPG Cylinder- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ

LPG free connection

ಮನೆಯನ್ನು ನಡೆಸುವವರು ಮನೆಯ ಹೆಣ್ಣು ಮಕ್ಕಳು. ಹೌದು, ಮನೆಯ ಎಲ್ಲ ಜವಾಬ್ದಾರಿ ಅಂದರೆ, ಅಡುಗೆ ಕೆಲಸ , ಬಟ್ಟೆ ಒಗೆಯುವುದು ಮುಂತಾದ ಕೆಲಸಗಳನ್ನು ಮನೆಯ ಹೆಣ್ಣು ಮಕ್ಕಳು ಮಾಡುತ್ತಾರೆ. ಆದರೆ ಅಡುಗೆ ವಿಷಯ ಬಂದಾಗ ಅವರಿಗೆ ಗ್ಯಾಸ್ ( Gas ) ಅಥವಾ ಕಟ್ಟಿಗೆಯ ಅವಶ್ಯಕತೆ ಇರುತ್ತದೆ. ಇಂದು ಸಾಮಾನ್ಯವಾಗಿ ಎಲ್ಲರೂ ಗ್ಯಾಸ್ ಬಳಸಿ ಅಡುಗೆ ಮಾಡುತ್ತಾರೆ. ಆದರೆ ತೀರಾ ಬಡತನದಲ್ಲಿ ಇದ್ದವರು ಏನು ಮಾಡಬೇಕು ? ಅಲ್ಲವೇ ? ಹೌದು, ಈಗ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ಗುಡ್ ನ್ಯೂಸ್ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉಚಿತ ಗ್ಯಾಸ್ ಕನೆಕ್ಷನ್ ನೀಡುತ್ತಿದೆ ಸರ್ಕಾರ :

ಈಗಾಗಲೇ ಸರ್ಕಾರ ಬಡತನ ರೇಖೆಗಿಂತ ಕೆಳಗಿನ (below poverty line) ಮಹಿಳೆಯರಿಗೆ ಉಚಿತ ಗ್ಯಾಸ್ ಕನೆಕ್ಷನ್ (free gas connection) ನೀಡುತ್ತಿದೆ. ಈ ಒಂದು ಮಹತ್ವ ಕೆಲಸ ಹಲವಾರು ಮಹಿಳೆಯರಿಗೆ ಮತ್ತು ಅವರ ಕುಟುಂಬದವರಿಗೆ ದಾರಿ ದೀಪವಾಗಲಿದೆ. ಹಾಗೂ ಅವರ ಆರ್ಥಿಕ ಪರಿಸ್ಥಿಯನ್ನು ದೂರ ಮಾಡಿ ಉಚಿತ ಗ್ಯಾಸ್ ನೀಡುವುದು ಸರ್ಕಾರದ ಉತ್ತಮ ಕೆಲಸವಾಗಿದೆ.

whatss

ಉಚಿತ ಗ್ಯಾಸ್ ( Free Gas ) ನೀಡುತ್ತಿರುವ ಮುಖ್ಯ ಉದ್ದೇಶ ( Purpose ) :

ಈ ಒಂದು ಯೋಜನೆ ಯಿಂದ ಬಡ ಹೆಣ್ಣು ಮಕ್ಕಳಿಗೆ ಮನೆ ನಡೆಸಲು ಅನುಕೂಲವಾಗುತ್ತದೆ. ಈ ಹಿಂದೆ ಮಹಿಳೆಯರು ಮನೆಯಲ್ಲಿ ಬೆಂಕಿ ಹೊತ್ತಿಸಿ ಅಡುಗೆ ಮಾಡುತ್ತಿದ್ದರ. ಇದರಿಂದ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಎಲ್ಲ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಸರ್ಕಾರ ಇದೊಂದು ಪ್ರಮುಖ ಯೋಜನೆಯನ್ನು (government scheme) ಜಾರಿಗೆ ತಂದಿದೆ. ಇದರಿಂದ ಎಲ್ಲ ಮಹಿಳೆಯರಿಗೆ ಸಂತೋಷ ತಂದಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಉಪಯೋಗ (Pradhanmantri Ujjwala Yojana) :

ಇಂದು ದೇಶದಲ್ಲಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಕುಟುಂಬಗಳಿಗೆ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ದೊರೆಯುತ್ತಿದೆ. ಹಾಗೆಯೇ ಇದರ ಜೊತೆಗೆ ವರ್ಷದಲ್ಲಿ 12 ಸಿಲಿಂಡರ್ ಗಳಿಗೆ 300 ಗಳ ಸಬ್ಸಿಡಿ ಕೂಡ ನೀಡಲಾಗುತ್ತದೆ. ಹಾಗಾಗಿ ದೇಶದಲ್ಲಿ ಉಜ್ವಲ ಯೋಜನೆಯ ಅಡಿಯಲ್ಲಿ ಎಲ್ ಪಿ ಜಿ ಸಿಲಿಂಡರ್ (LPG cylinder) ಖರೀದಿ ಮಾಡಿದ್ರೆ ಕೇವಲ 603 ರೂಪಾಯಿಗಳಿಗೆ ಗ್ಯಾಸ್ ದೊರೆಯುತ್ತದೆ. ಇಂದೊಂದು ಸಂತೋಷದ ವಿಷಯ ಆಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳ ವಿವರ ಈ ಕೆಳಗಿನಂತೆ ಇದೆ (Eligibility to get free gas connection) :

18 ವರ್ಷ ಮೀರಿದವರು ಅರ್ಜಿ ಸಲ್ಲಿಸಬಹುದು.
ಈಗಾಗಲೇ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಇರುವವರಿಗೆ ಈ ಸೌಲಭ್ಯ ಸಿಗುವುದಿಲ್ಲ.
ಎಸ್ ಎಸ್ ಸಿ ಎಸ್ ಟಿ ವರ್ಗಕ್ಕೆ ಸೇರಿದ ಮಹಿಳೆಯರು, ಹಿಂದುಳಿದ ವರ್ಗದವರು, ಬುಡಕಟ್ಟು ಜನಾಂಗ, ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್ ಹೊಂದಿದವರು ಅರ್ಹರು.
ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರು ಮೊದಲಾದ ಹಿಂದುಳಿದ ವರ್ಗದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ( Documents ) :

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅರ್ಜಿದಾರರು ಹೊಂದಿರಬೇಕು. ಆಗ ಮಾತ್ರ ಅರ್ಜಿದಾರರು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಕೆಳಗಿನವು ಎಲ್ಲಾ ಅಗತ್ಯ ದಾಖಲೆಗಳ ಪಟ್ಟಿಯಾಗಿದೆ.

ಅರ್ಜಿದಾರರ ಆಧಾರ್ ಕಾರ್ಡ್
ಮತದಾರರ ಗುರುತಿನ ಚೀಟಿ
ವಿಳಾಸ ಪುರಾವೆ
ಬಿಪಿಎಲ್ ಪಡಿತರ ಚೀಟಿ
ಮೊಬೈಲ್ ನಂಬರ್
ಪಾಸ್ಪೋರ್ಟ್ ಗಾತ್ರದ ಫೋಟೋ
ರೇಷನ್ ಕಾರ್ಡ್
ಬ್ಯಾಂಕ ಖಾತೆಯ ವಿವರ – ಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು.

tel share transformed

ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

https://www.pmuy.gov.in/ujjwala2.html ಸರ್ಕಾರದ ಈ ಅಧಿಕೃತ ವೆಬ್ಸೈಟ್ಗೆ ಹೋಗಿ ಉಜ್ವಲಾ 2.0 ಯೋಜನೆಯನ್ನು ಆಯ್ದುಕೊಳ್ಳಿ.
ಇಲ್ಲಿ ನೀವು ಯಾವ ಗ್ಯಾಸ್ ಏಜೆನ್ಸಿಯ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಬಯಸುತ್ತೀರಿ ಎಂಬುದನ್ನು ನೋಡಿ ಅದರ ಮೇಲೆ click here to apply ಆಯ್ಕೆಯನ್ನು ಒತ್ತಿ. ಈಗ ನೀವು ನಿಮ್ಮ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಫಾರಂ ನಲ್ಲಿ ಬೇಕಾಗಿರುವ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ :

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಹಾಗೆ ಮಾಡಲು, ಅವರು ಕೆಳಗೆ ವಿವರಿಸಿದ ಹಂತಗಳನ್ನು ಅನುಸರಿಸಬಹುದು.

ಪಿಎಂ ಉಜ್ವಲ ಯೋಜನೆ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಗ್ಯಾಸ್ ಪೂರೈಕೆದಾರ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ನೀವು ಭಾರತ್ ಗ್ಯಾಸ್ ಅನ್ನು ಬಳಸುತ್ತಿದ್ದರೆ, ಭಾರತ್ ಗ್ಯಾಸ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
ಮುಖಪುಟದಲ್ಲಿ ಉಜ್ವಲಾ ಫಲಾನುಭವಿಯ ಲಿಂಕ್‌ಗಾಗಿ ನೋಡಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
ಮುಂದಿನ ಪುಟದಲ್ಲಿ ನಿಮ್ಮ ರಾಜ್ಯ ಮತ್ತು ಜಿಲ್ಲೆಯನ್ನು ಆಯ್ಕೆಮಾಡಿ.
ನೀಡಿರುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಪರದೆಯ ಮೇಲೆ ಗೋಚರಿಸುತ್ತದೆ, ನಿಮ್ಮ ಉಜ್ವಲ ಯೋಜನೆ ಗ್ಯಾಸ್ ಸಂಪರ್ಕದ ಸ್ಥಿತಿಯನ್ನು ಪರಿಶೀಲಿಸಲು ನಿಮಗೆ ಅವಕಾಶ ನೀಡುತ್ತದೆ.

ಗ್ಯಾಸ್ ಕನೆಕ್ಷನ್ ಗೂ ಕೂಡ ಕೆವೈಸಿ ( KYC ) ಕಡ್ಡಾಯ :

ಗ್ಯಾಸ್ ಕನೆಕ್ಷನ್ ಗು ಕೂಡ ಕೆವೈಸಿ ಕಡ್ಡಾಯವಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ. ಹಾಗಾಗಿ ನೀವು ಆನ್ಲೈನ್ ( Online ) ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಕೂಡ ಪೂರ್ಣಗೊಳಿಸಬಹುದು ಅಥವಾ ನೀವು ಈಗಾಗಲೇ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿದ್ದರೆ ನಿಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ. ಎಂದು ತಿಳಿಸಿದ್ದಾರೆ. ಹಾಗಾಗಿ ಆದಷ್ಟು ಬೇಗ ಉಚಿತ ಗ್ಯಾಸ್ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!