ನಗರದ ಪ್ರದೇಶದ ಬಡ ಜನರಿಗೆ ಉಚಿತ ಮನೆ ಭಾಗ್ಯ.! ಕೇಂದ್ರದ ಬಂಪರ್ ಗುಡ್ ನ್ಯೂಸ್!

Picsart 24 08 11 17 10 44 385 1

ಬಡವರಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ ಬಡವರಿಗೆ 1 ಕೋಟಿ ಮನೆ ನಿರ್ಮಾಣಕ್ಕೆ ಅಸ್ತು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (Pradhan Mantri Awas Yojana) ಗ್ರಾಮೀಣಾಭಿವೃದ್ಧಿ ಸಚಿವಾಲಯದ (MORD) ಪ್ರಮುಖ ಮಿಷನ್ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA), PMAY ಜಾರಿಗೆ ತಂದಿದ್ದು, ಅರ್ಹ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಮನೆಯನ್ನು ಒದಗಿಸುವ ಯೋಜನೆಯಾಗಿದೆ. ಈ ಯೋಜನೆಗೆ ಆರ್ಥಿಕವಾಗಿ ದುರ್ಬಲ ವಿಭಾಗ (EWS), ಕಡಿಮೆ ಆದಾಯದ ಗುಂಪು (LIG), ಮತ್ತು ಮಧ್ಯಮ-ಆದಾಯದ ಗುಂಪು (MIG) ವರ್ಗಗಳ ಕುಟುಂಬಗಳು ಮತ್ತು ಸ್ಲಂ ನಿವಾಸಿಗಳು ಸೇರಿದ್ದಾರೆ. ಇದು ಸುರಕ್ಷಿತ ಮತ್ತು ಕ್ರಿಯಾತ್ಮಕ ಎಲ್ಲಾ ಹವಾಮಾನದ ಮನೆಯನ್ನು ಕೈಗೆಟುಕುವ ರೀತಿಯಲ್ಲಿ ನಿರ್ಮಿಸಲು ಸಹಾಯ ಮಾಡುವ ವಸತಿ ಯೋಜನೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಮಂತ್ರಿ ಆವಾಸ್‌ ಯೋಜನೆ- ನಗರ 2.0 ಜಾರಿ :

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ- ನಗರ 2.0 ಜಾರಿಗೆ (PMAY 2.0) ಕೇಂದ್ರ ಸಚಿವ ಸಂಪುಟ ಸಭೆಯು ಸಮ್ಮತಿ ಸೂಚಿಸಿದ್ದು, ನಗರ ಪ್ರದೇಶಗಳ 1 ಕೋಟಿ ಬಡವರು ಹಾಗೂ ಮಧ್ಯಮವರ್ಗದವರು ಇದರ ಪ್ರಯೋಜನ ಪಡೆಯಲಿದ್ದಾರೆ.

ಮೋದಿ ಸರ್ಕಾರದಿಂದ ಬಡವರಿಗೆ ಆವಾಸ್ ಭಾಗ್ಯ :

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆ ಜಾರಿಗೆ ತಂದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಪಿಎಂಎವೈ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ(Home construction) ಅನುಮೋದನೆ ನೀಡಿದ್ದರು.

ಪಿಎಂಎವೈ ಯೋಜನೆ ಅಡಿಯಲ್ಲಿ ನಗರ ಪ್ರದೇಶಗಳಲ್ಲಿ 1 ಕೋಟಿ ಮನೆಗಳ ನಿರ್ಮಾಣ :

ಈಗಾಗಲೇ ತಿಳಿಸಿರುವಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ಸಹಾಯವಾಗುವಂತೆ 1 ಕೋಟಿ ಮನೆಗಳ ನಿರ್ಮಾಣದ ತಯಾರಿ ನಡೆಯುತ್ತಿದೆ. ಈ ಒಂದು ಪ್ರಯೋಜನವನ್ನು ಎಲ್ಲರೂ ಪಡೆದು ತಮ್ಮ ಸ್ವಂತ ಸೂರಿನ ಅಡಿಯಲ್ಲಿ ಜೀವನ ಸಾಗಿಸಬಹುದಾಗಿದೆ. ಕೇಂದ್ರ ಸರ್ಕಾರದಿಂದ ಒಂದು ಉತ್ತಮ ಕಾರ್ಯಕ್ರಮ ಇದಾಗಿದೆ.

ಕೇಂದ್ರ ಸರ್ಕಾರದ ಈ ಯೋಜನೆಯಿಂದ 1 ಚದರ ಅಡಿಗೆ 3 ಸಾವಿರ ರೂ. ಲಭ್ಯ :

ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, 1 ಕೋಟಿ ಕುಟುಂಬಗಳಿಗೆ ಹಣಕಾಸು ನೆರವು ನೀಡಲಿದೆ. ನಗರ ಪ್ರದೇಶಗಳಲ್ಲಿ ಸುಸಜ್ಜಿತ ಮನೆ ನಿರ್ಮಿಸುವವರಿಗೆ ಕೇಂದ್ರ ಸರ್ಕಾರವು 1 ಚದರ ಅಡಿಗೆ 3 ಸಾವಿರ ರೂ. ನೆರವು ನೀಡಲಿದೆ.

ಇಂಟರೆಸ್ಟ್‌ ಸಬ್ಸಿಡಿ ಯೋಜನೆ (Interest Subsidy Scheme) ಅಡಿಯಲ್ಲಿ ಸಹಾಯ ಧನ :

ಇಂಟರೆಸ್ಟ್‌ ಸಬ್ಸಿಡಿ(subsidy) ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ 25-35 ಲಕ್ಷ ರೂ.ವರೆಗೆ ಶೇ.4ರ ಬಡ್ಡಿದರ(interest)ದೊಂದಿಗೆ ಸಾಲ(loan) ನೀಡುತ್ತದೆ. 1.8 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು 2.3 ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ. ಹಾಗೆಯೇ, ಪಿಎಂಎವೈ 2.0 ಯೋಜನೆಗೆ 10 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ.

ಅರ್ಜಿ ಸಲ್ಲಿಸಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು (Qualifications) ಹೊಂದಿರಬೇಕು:

ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು.
ಅರ್ಜಿದಾರರು ಶಾಶ್ವತ ಮನೆ ಹೊಂದಿರಬಾರದು.
ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
ಅರ್ಜಿದಾರರ ವಾರ್ಷಿಕ ಆದಾಯ ರೂ.03 ಲಕ್ಷದಿಂದ ರೂ.06 ಲಕ್ಷದ ನಡುವೆ ಇರಬೇಕು.
ಅರ್ಜಿದಾರರ ಹೆಸರು ಪಡಿತರ ಚೀಟಿ ಅಥವಾ ಪಿಬಿಎಲ್ ಪಟ್ಟಿಯಲ್ಲಿರಬೇಕು.
ಅರ್ಜಿದಾರರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ.
ಅಲ್ಲದೆ ಯಾವುದೇ ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಗತ್ಯ ದಾಖಲೆಗಳು (Documents) :

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ನೀವು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.

ಆಧಾ‌ರ್ ಕಾರ್ಡ್‌(Aadhar Card)ಅಥವಾ ಆಧಾರ್ ಸಂಖ್ಯೆ(Aadhar number)
ಫೋಟೋ
ಫಲಾನುಭವಿಯ ಜಾಬ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಸಂಖ್ಯೆ(Job card or Job card number)
ಬ್ಯಾಂಕ್ ಪಾಸ್ ಬುಕ್(Bank Passbook)
ಸ್ವಚ್ಛ ಭಾರತ್‌ ಮಿಷನ್‌ (SBM) ನೋಂದಣಿ ಸಂಖ್ಯೆ
ಮೊಬೈಲ್ ನಂಬ‌ರ್

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್‌ನಲ್ಲಿ (Online) ಅರ್ಜಿ ಸಲ್ಲಿಸುವ ವಿಧಾನ (how to apply application) :

ಪ್ರಧಾನ ಮಂತ್ರಿ ಆವಾಸ್‌ ಯೋಜನೆ (PMAY) 2024 ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಈ ಹಂತಗಳನ್ನು ಅನುಸರಿಸಿ:

ಅಧಿಕೃತ PMAY ವೆಬ್‌ಸೈಟ್‌ಗೆ ಭೇಟಿ ನೀಡಿ: https://pmaymis.gov.in/
ಮುಖಪುಟದಲ್ಲಿ “ನಾಗರಿಕರ ಮೌಲ್ಯಮಾಪನ” ಆಯ್ಕೆಯನ್ನು ಆರಿಸಿ.
“ಆನ್‌ಲೈನ್‌ನಲ್ಲಿ ಅನ್ವಯಿಸು” ಆಯ್ಕೆಯನ್ನು ಹುಡುಕಲು ಕೆಳಗೆ ಸ್ಮಾಲ್ ಮಾಡಿ, ಅದರ ಮೇಲೆ ಮಾಡಿ, ತದನಂತರ “ಇನ್-ಸಿಟು ಸ್ಲಂ ರಿಡೆವಲಪ್‌ಮೆಂಟ್ (ISSR)” ಆಯ್ಕೆಮಾಡಿ.
ಒದಗಿಸಿದ ಕ್ಷೇತ್ರಗಳಲ್ಲಿ ನಿಮ್ಮ ಹೆಸರು ಮತ್ತು ಆಧಾ‌ರ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ಆಧಾ‌ರ್ ಅನ್ನು ಪರಿಶೀಲಿಸಲು “ಚೆಕ್” ಕ್ಲಿಕ್ ಮಾಡಿ. ಪರಿಶೀಲಿಸಿದರೆ, ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಕುಟುಂಬದ ಹೆಸರು, ನಗರ ಮತ್ತು ರಾಜ್ಯ ತಂದೆಯ ಹೆಸರು ಮತ್ತು ಪ್ರಸ್ತುತ ವಸತಿ ವಿಳಾಸದಂತಹ ವಿವರವಾದ ಮಾಹಿತಿಯೊಂದಿಗೆ ಫಾರ್ಮ್ ಅನ್ನು ಪೂರ್ಣಗೊಳಿಸಿ.
ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಗಾಗಿ ನಿಮ್ಮ ಆನ್‌ಲೈನ್ ಅರ್ಜಿಯನ್ನು ಪೂರ್ಣಗೊಳಿಸಲು “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!