ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಉಚಿತ ಮನೆ ಪಡೆಯಲು ಅರ್ಜಿ ಸಲ್ಲಿಸಿ.!

house in benglore for less price

ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು ಇಂದು ಯಾರಿಗೆ ಮನೆ ಕೊಂಡು ಕೊಳ್ಳಲು ಅಥವಾ ಮನೆ ಕಟ್ಟಲು ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಕೂಡ ಆಸೆ ಇದ್ದೇ ಇರುತ್ತದೆ. ಆರ್ಥಿಕ ಸಮಸ್ಯೆ, ಬಡತನ ಅಥವಾ ಹಲವಾರು ಕಾರಣಗಳಿಂದ ಕೆಲವರಿಗೆ ಮನೆ ಕಟ್ಟಲು ಆಗುವುದಿಲ್ಲ. ಅಂಥವರು ಚಿಂತಿಸಬೇಕಾಗಿಲ್ಲ. ಇದೀಗ ಅವರಿಗೆ ರಾಜೀವ್ ವಸತಿ ಯೋಜನೆಗೆ ( Rajiv Gandhi Housing Scheme ) ಅಡಿಯಲ್ಲಿ ಮನೆಗಳ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಸ್ವಂತ ಮನೆ ಭಾಗ್ಯ ( Housing Scheme ) :

ಇದು ಎಲ್ಲರೂ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುತ್ತಾರೆ. ಹಾಗೆಯೇ ಅಲ್ಲಿಯೇ ಇರಲು ಮನೆಯನ್ನು ಕಟ್ಟಿಕೊಳ್ಳಲು ಅಥವಾ ಹುಡುಕಲು ಶುರುಮಾಡುತ್ತಾರೆ. ಆದರೆ ಬೆಂಗಳೂರಿನಲ್ಲಿ ಮನೆ ಹುಡುಕುವುದು ಕಷ್ಟ ಸಾಧ್ಯ ಅದರಲ್ಲೂ ಬಡವರಿಗೆ ಮತ್ತು ಆರ್ಥಿಕ ಕಷ್ಟದಲ್ಲಿ ಇರುವರಿಗೂ ಅಸಾಧ್ಯದ ಮಾತು. ಆದರೆ ಈಗ ಮನೆ ಹುಡುಕಲು ಯಾವುದೇ ಸಮಸ್ಯೆ ಇಲ್ಲ. ಇಂಥವರಿಗಾಗಿಯೇ ಇದೀಗ ಸರ್ಕಾರ ( Government ) ಈಗ ಸ್ವಂತ ಮನೆಯನ್ನು ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದು, 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ (Housing Scheme) ಚಾಲನೆ ನೀಡಿದೆ. ಈ ಯೋಜನೆಗೆ ಈಗ ನೋಂದಣಿ ಪ್ರಕ್ರಿಯೆಯೂ ಕೂಡ ಆರಂಭವಾಗಿದೆ.

ಈಗಾಗಲೇ ಮೊದಲ ಹಂತಕ್ಕೆ ಅರ್ಜಿ ಆಹ್ವಾನ :

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 5 ತಾಲೂಕುಗಳಲ್ಲಿ ಬರುವ ಸರ್ಕಾರಿ ಜಮೀನುಗಳಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ 2 ಬಿಎಚ್‌ಕೆಯ ಒಟ್ಟು 8096 ಫ್ಲಾಟ್/ಮನೆಗಳನ್ನು ( Flat or Home ) ನಿರ್ಮಾಣ ಮಾಡಲಾಗಿದೆ. ಈ ಮನೆಗಳನ್ನು ಶೇರ್‌ ವಾಲ್‌ (Shear Wall) ತಂತ್ರಜ್ಞಾನದ ಮೂಲಕ ನಿರ್ಮಿಸಲಾಗಿದೆ. ಇವುಗಳ ಪೈಕಿ ಮೊದಲ ಹಂತದಲ್ಲಿ 3138 ಫ್ಲಾಟ್/ಮನೆಗಳ ಹಂಚಿಕೆಗಾಗಿ ಆನ್‌ಲೈನ್ ( Online ) ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರತಿ ಮನೆ ಫ್ಲಾಟ್‌ನ ಕಾರ್ಪೆಟ್ ಏರಿಯಾ ( Flat Carpet Area ) 45 25.00. (485 Sq.ft.) ಇರಲಿದೆ.

whatss

ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಹೇಗೆ ಅರ್ಜಿ ವಿಧಾನ :

ಬೆಂಗಳೂರು ನಗರದಲ್ಲಿ ಸರ್ಕಾರದ ವತಿಯಿಂದ ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆಯನ್ನು (1 lakh multi storeyed Bangalore housing project) ಆರಂಭಿಸಲಾಗಿದೆ.

ಈಗಾಗಲೇ ವಸತಿ ಸಮುಚ್ಛಯಗಳು ನಿರ್ಮಾಣವಾಗಿವೆ. ಇದರಲ್ಲಿ 2 ಬಿಎಚ್‌ಕೆ (2BHK ) ಮನೆಗಳನ್ನು ನಿರ್ಮಿಸಲಾಗಿದೆ.

ಅಷ್ಟೇ ಅಲ್ಲದೆ ಕೇವಲ 14 ಲಕ್ಷ ರೂಪಾಯಿಯನ್ನು ಈ ಮನೆಗಳಿಗೆ ನಿಗದಿ ಪಡಿಸಲಾಗಿದೆ.

ಈ 2 ಬಿಎಚ್‌ಕೆ ಮನೆಯಲ್ಲಿ ಇರುವ ಸೌಲಭ್ಯಗಳು :
ಎರಡು ಬೆಡ್ ರೂಮ್ ವಿತ್ ಅಟ್ಯಾಚ್ ಬಾತ್‌ ರೂಂ, ( Bed Room With Attach Bathroom ) ಒಂದು ಹಾಲ್ ( Hall ) ಮತ್ತು ಒಂದು ಕಿಚನ್ ( Kitchen ) ಅನ್ನು ಒಲಗೊಂಡಿರುತ್ತದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವ ಮುಖ್ಯ ದಾಖಲೆಗಳು ( Documents ) :

ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ ಸಂಖ್ಯೆ
ಕುಟುಂಬದ ಪಡಿತರ ಚೀಟಿ ಸಂಖ್ಯೆ
ಕುಟುಂಬದ ಆದಾಯ ಪ್ರಮಾಣ ಪತ್ರ ಸಂಖ್ಯೆ
ಬೆಂಗಳೂರು ನಗರ ಜಿಲ್ಲೆ, ವ್ಯಾಪ್ತಿಯಲ್ಲಿ ಕನಿಷ್ಠ 1 ವರ್ಷಕ್ಕಿಂತ ಮೇಲ್ಪಟ್ಟು ವಾಸವಾಗಿರುವ ವಾಸ ದೃಢೀಕರಣ ಪತ್ರ ಸಂಖ್ಯೆ
ಬ್ಯಾಂಕ್ ಖಾತೆ ಸಂಖ್ಯೆ
ದಿವ್ಯಾಂಗ ಚೇತನ ಗುರುತಿನ ಚೀಟಿ (ಸರ್ಕಾರದ ಅಧಿಕೃತ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿ)

tel share transformed

ಅರ್ಜಿ ಸಲ್ಲಿಸುವ ವಿಧಾನ ( Steps for Application ) :

ಹಂತ 1 : ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮಂಡಳಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ : https://ashraya.karnataka.gov.in/BeneficiaryStatusNew.aspx

ಹಂತ 2 : ಬಳಿಕ ನಿಮಗೆ ನಿಮ್ಮ ಕನಸಿನ ಮನೆ ಬೇಕೆ ಎಂಬ ಆಯ್ಕೆ ಕಾಣಿಸುತ್ತದೆ. ಅಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3 : ನಂತರ ನಿಮ್ಮ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಬೇಕು. ಅಲ್ಲಿ ತಾಲೂಕು, ಹೋಬಳಿ ಹೀಗೆ ಕೇಳಲಾದ ಎಲ್ಲ ವಿವರಗಳನ್ನು ಆಯ್ಕೆ ಮಾಡಬೇಕು.

ಹಂತ 4 : ಹೀಗೆ ಎಲ್ಲ ವಿವರಗಳನ್ನು ಆಯ್ಕೆ ಮಾಡಿದ ಮೇಲೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

ಹಾಗೆಯೇ ಇದರಲ್ಲಿ ಒಂದು ಲಕ್ಷ ರೂಪಾಯಿಯನ್ನು ಪಾವತಿಸಿ ಫ್ಲಾಟ್ ಅನ್ನು ಬುಕ್ ಕೂಡ ಮಾಡಬಹುದಾಗಿದೆ.

ವಿಶೇಷ ಸೂಚನೆ ( Important Notice ) :

ಈ ಒಂದು ಸೌಲಭ್ಯದ ಅಡಿಯಲ್ಲಿ ನೀವೇನಾದರೂ ಪ್ಲಾಟ್ ಅಥವಾ ಮನೆ ಕೊಂಡು ಕೊಳ್ಳಲು ಬಯಸಿದರೆ ಅದಕ್ಕಾಗಿ 3 ಹಂತದಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ.
ಹಾಗೆಯೇ ಇದಕ್ಕೆ ಕಾಲಮಿತಿಯನ್ನು ಸಹ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ( For More Information ) :

ಹೆಚ್ಚಿನ ವಿವರಕ್ಕೆ “ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ, 8/9ನೇ ಮಹಡಿ, ಇ ಬ್ಲಾಕ್, ಕ.ಮಂ, ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು- 560009” ಇಲ್ಲಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಲ್ಲವೇ ದೂರವಾಣಿ ಸಂಖ್ಯೆ 91-080-23118888ಗೆ ಸಂಪರ್ಕಿಸಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!