ಉಚಿತ ಹೊಲಿಗೆ ಯಂತ್ರ ಮತ್ತು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ :
ಕೇಂದ್ರ ಸರ್ಕಾರವು ಮಹಿಳೆಯರ ಸ್ವಾವಲಂಬನೆ ಮತ್ತು ಆರ್ಥಿಕ ಪ್ರಗತಿಯ ಮೇಲೆ ಹೆಚ್ಚು ಒತ್ತು ನೀಡುತ್ತಿದೆ. ಈ ಹಿನ್ನೆಲೆ, ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆ ಪರಿಚಯಿಸಲಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರು ಸ್ವಯಂ ಉದ್ಯೋಗವನ್ನು ಅಳವಡಿಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವುದು.ಇದೀಗ ಉಚಿತ ಹೊಲಿಗೆ ಯಂತ್ರದ (free Sewing Machine) ಜೊತೆಗೆ 1 ಲಕ್ಷ ರೂ ಸಾಲ(loan)ವನ್ನು ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ :
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಒಂದು ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಇದು ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ವಿಶೇಷ ಉಪಕರಣಗಳು ಮತ್ತು ಯಂತ್ರಗಳನ್ನು ಒದಗಿಸುತ್ತದೆ. ಈ ಯೋಜನೆಯಡಿ ಹೊಲಿಗೆ ಯಂತ್ರಗಳನ್ನು ಮಹಿಳೆಯರು ಹಾಗೂ ಪುರುಷರು ಎರಡೂ ಪಡೆದುಕೊಳ್ಳಬಹುದು.
ಯೋಜನೆಯ ಮುಖ್ಯಾಂಶಗಳು:
ಆರ್ಥಿಕ ನೆರವು: ಯೋಜನೆಯಡಿ, ಹೊಲಿಗೆ ಯಂತ್ರವನ್ನು ಖರೀದಿಸಲು 15,000 ರೂ.ಗಳ ಸಹಾಯಧನವನ್ನು ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಡಿಜಿಟಲ್ ತರಬೇತಿ: ಒಬ್ಬ ಮಹಿಳೆಯರು ಒಂದೊಮ್ಮೆ ತರಬೇತಿಯಲ್ಲಿ ಭಾಗವಹಿಸುವ ಮೂಲಕ ದಿನಕ್ಕೆ 500 ರೂ.ಗಳ ಪಾವತಿಯನ್ನು ಪಡೆದುಕೊಳ್ಳಬಹುದು.
ಸಾಲ ವ್ಯವಸ್ಥೆ: ಯೋಜನೆಯಡಿ ಮೊದಲ ಬಾರಿಗೆ 1 ಲಕ್ಷ ರೂ.ಗಳ ಸಾಲವನ್ನು 18 ತಿಂಗಳಲ್ಲಿ ಮರುಪಾವತಿ ಮಾಡುವ ವ್ಯವಸ್ಥೆ ಇದೆ. ಮರುಪಾವತಿಯನ್ನು ಯಶಸ್ವಿಯಾಗಿ ಮಾಡಿದ ನಂತರ ಇನ್ನೂ 2 ಲಕ್ಷ ರೂ.ಗಳವರೆಗೆ ಸಾಲವನ್ನು ಪಡೆಯಬಹುದು, ಇದನ್ನು 30 ತಿಂಗಳಲ್ಲಿ ಪಾವತಿಸಬೇಕು.
ಕಡಿಮೆ ಬಡ್ಡಿ: ಈ ಸಾಲಗಳ ಮೇಲಿನ ಬಡ್ಡಿದರ ತುಂಬಾ ಕಡಿಮೆ ಇರುತ್ತದೆ ಮತ್ತು ಸರ್ಕಾರವು ಕ್ರೆಡಿಟ್ ಗ್ಯಾರಂಟಿ ಶುಲ್ಕಗಳನ್ನು ಪಾವತಿಸುತ್ತದೆ.
ಅರ್ಹತಾ ನಿಯಮಗಳು :
ಯಾರ್ಯಾರು ಅರ್ಜಿ ಸಲ್ಲಿಸಬಹುದು?
ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.
18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಅರ್ಜಿ ಸಲ್ಲಿಸಬಹುದು.
ಈಗಾಗಲೇ ಹೊಲಿಗೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರು.
ಟೈಲರ್ ಆಗಿ ಕೆಲಸ ಮಾಡುವ ಯಾವುದೇ ವ್ಯಕ್ತಿಯು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಯು ಸಲ್ಲಿಸಲು ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್
ವಿಳಾಸ ಪುರಾವೆ
ಗುರುತಿನ ಚೀಟಿ
ಜಾತಿ ಪ್ರಮಾಣಪತ್ರ
ಪಾಸ್ಪೋರ್ಟ್ ಗಾತ್ರದ ಫೋಟೋ
ಮೊಬೈಲ್ ಸಂಖ್ಯೆ
ಬ್ಯಾಂಕ್ ಪಾಸ್ಬುಕ್
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತೆ:
ಅರ್ಜಿದಾರರು ಮೊದಲನೆಯದಾಗಿ pmvishwakarma.gov.in ಅಧಿಕೃತ ವೆಬ್ಸೈಟ್ಗೆ ಹೋಗಿ, ಅಲ್ಲಿ ನೀವು ನೋಂದಾಯಿಸಿಕೊಳ್ಳಬಹುದು.
ಆನ್‌ಲೈನ್‌ನಲ್ಲಿ (Online) ನೋಂದಾಯಿಸಲು ಸಾಧ್ಯವಾಗದಿದ್ದಲ್ಲಿ, ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸಹಾಯ ಪಡೆಯಬಹುದು.
ಈ ಯೋಜನೆಯಡಿ ಕೇಂದ್ರ ಸರ್ಕಾರವು ಮಹಿಳೆಯರ ಬದುಕಿಗೆ ಹೊಸ ಆದಾಯದ ಹಾದಿಯನ್ನು ನೀಡುತ್ತಿದೆ. ಇದರಿಂದ ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ತಮ್ಮ ಆರ್ಥಿಕ ಸ್ಥಿರತೆ ಮತ್ತು ಸಶಕ್ತಿಕರಣವನ್ನು ಸುಧಾರಿಸಿಕೊಳ್ಳಬಹುದು. ಮತ್ತು
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ವರದಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Mujhe silai machine chaiye