ಈ ವರದಿಯಲ್ಲಿ ಗ್ಯಾಸ್ಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ನೇಮಕಾತಿ 2024 ರ (GAIL Recruitment 2024 ) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗ್ಯಾಸ್ಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ ತಮ್ಮ 2024 ನೇಮಕಾತಿ ಪ್ರಕ್ರಿಯೆಯನ್ನು ಘೋಷಿಸಿದೆ, 275 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ (Online) ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ವ್ಯಾಪ್ತಿಗೆ ಸೀನಿಯರ್ ಎಂಜಿನಿಯರ್ (Senior Engineer) ಮತ್ತು ಚೀಫ್ ಮ್ಯಾನೇಜರ್ (Chief manager) ಹುದ್ದೆಗಳು ಬರುತ್ತವೆ, ಮತ್ತು ವಿವಿಧ ತಾಂತ್ರಿಕ ಹಾಗೂ ಆಡಳಿತ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರಗಳು ಮತ್ತು ವಿದ್ಯಾರ್ಹತೆ:
ಪ್ರಮುಖ ಹುದ್ದೆಗಳಲ್ಲಿ, ಸೀನಿಯರ್ ಇಂಜಿನಿಯರ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ನವೀಕರಿಸಬಹುದಾದ ಇಂಧನ, ಮತ್ತು ಇತರ) ಹುದ್ದೆಗಳಿದ್ದು, ಆಯಾ ವಿಭಾಗದಲ್ಲಿ ಬಿ.ಇ ಅಥವಾ ಬಿ.ಟೆಕ್ ಪದವಿ ಹೊಂದಿದವರಿಗೆ ಅವಕಾಶವಿದೆ. ಅಷ್ಟೇ ಅಲ್ಲದೆ, ಸೀನಿಯರ್ ಆಫೀಸರ್ (ಮಾರ್ಕೆಟಿಂಗ್, ಹ್ಯೂಮನ್ ರಿಸೋರ್ಸಸ್, ಕಾನೂನು, ಮೆಡಿಕಲ್ ಸರ್ವೀಸಸ್) ಹುದ್ದೆಗಳಿಗೂ ಪದವಿ, ಸ್ನಾತಕೋತ್ತರ ಪದವಿ, ಮತ್ತು ಮುಂತಾದ ವಿದ್ಯಾರ್ಹತೆಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಪ್ರಮುಖ ಪಟ್ಟಿ:
ಸೀನಿಯರ್ ಇಂಜಿನಿಯರ್ (ನವೀಕರಿಸಬಹುದಾದ ಇಂಧನ) – 6 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಬಾಯ್ಲರ್ ಆಪರೇಷನ್ಸ್) – 3 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) – 30 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 6 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಇನ್ಸ್ಟ್ರುಮೆಂಟೇಶನ್) – 1 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಕೆಮಿಕಲ್) – 36 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಎಂಜಿನಿಯರ್ (ಗೇಲ್ಟೆಲ್ ಟಿಸಿ / ಟಿಎಂ) – 5 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಫೈರ್ & ಸೇಫ್ಟಿ) – 20 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಸಿ & ಪಿ) – 22 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಇಂಜಿನಿಯರ್ (ಸಿವಿಲ್) – 11 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಮಾರ್ಕೆಟಿಂಗ್) – 22 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಎಫ್ & ಎ) – 36 ಹುದ್ದೆ, ವಿದ್ಯಾರ್ಹತೆ: ಸಿಎ, ಬಿಎ, ಬಿ.ಎಸ್‌ಸಿ, ಬಿ.ಕಾಂ, ಬಿ.ಇ ಅಥವಾ ಬಿ.ಟೆಕ್
ಸೀನಿಯರ್ ಆಫೀಸರ್ (ಹ್ಯೂಮನ್ ರಿಸೋರ್ಸಸ್) – 23 ಹುದ್ದೆ, ವಿದ್ಯಾರ್ಹತೆ: ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ಸೀನಿಯರ್ ಆಫೀಸರ್ (ಕಾನೂನು) – 2 ಹುದ್ದೆ, ವಿದ್ಯಾರ್ಹತೆ: ಎಲ್‌ಎಲ್‌ಬಿ, ಪದವಿ
ಸೀನಿಯರ್ ಆಫೀಸರ್ (ಮೆಡಿಕಲ್ ಸರ್ವೀಸಸ್) – 1
ಹುದ್ದೆ, ವಿದ್ಯಾರ್ಹತೆ: ಪದವಿ, ಎಂಬಿಬಿಎಸ್
ಸೀನಿಯರ್ ಆಫೀಸರ್ (ಕಾರ್ಪೊರೇಟ್ ಕಮ್ಯುನಿಕೇಷನ್) – 4 ಹುದ್ದೆ, ವಿದ್ಯಾರ್ಹತೆ: ಪದವಿ, ಸ್ನಾತಕೋತ್ತರ ಪದವಿ
ಆಫೀಸರ್ (ಲ್ಯಾಬೊರೇಟರಿ) – 16 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ, ಎಂ.ಎಸ್‌ಸಿ
ಆಫೀಸರ್ (ಸೆಕ್ಯುರಿಟಿ) – 4 ಹುದ್ದೆ, ವಿದ್ಯಾರ್ಹತೆ: ಪದವಿ
ಆಫೀಸರ್ (ಅಧಿಕೃತ ಭಾಷೆ) – 13 ಹುದ್ದೆ, ವಿದ್ಯಾರ್ಹತೆ: ಸ್ನಾತಕೊತ್ತರ ಪದವಿ
ಚೀಫ್ ಮ್ಯಾನೇಜರ್ (ನವೀಕರಿಸಬಹುದಾದ ಇಂಧನ) – 4 ಹುದ್ದೆ, ವಿದ್ಯಾರ್ಹತೆ: ಪದವಿ, ಬಿ.ಇ ಅಥವಾ ಬಿ.ಟೆಕ್
ಚೀಫ್ ಮ್ಯಾನೇಜರ್ (ಎಕನಾಮಿಸ್ಟ್) – 4 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಚೀಫ್ ಮ್ಯಾನೇಜರ್ (ಕಾನೂನು)- 1 ಹುದ್ದೆ, ವಿದ್ಯಾರ್ಹತೆ: ಎಲ್‌ಎಲ್‌ಬಿ
ಚೀಫ್ ಮ್ಯಾನೇಜರ್ (ಮೆಡಿಕಲ್ ಸರ್ವೀಸಸ್) – 2 ಹುದ್ದೆ, ವಿದ್ಯಾರ್ಹತೆ: ಎಂಎಬಿಬಿಎಸ್, ಎಂ.ಡಿ, DNB
ಚೀಫ್ ಮ್ಯಾನೇಜರ್ (ಎಚ್‌ಆರ್) – 3 ಹುದ್ದೆ, ವಿದ್ಯಾರ್ಹತೆ: ಪದವಿ,ಎಂಬಿಎ, ಸ್ನಾತಕೋತ್ತರ ಪದವಿ
ವಯೋಮಿತಿ:
28ರಿಂದ 45 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು.
ಮೀಸಲಾತಿಗೆ ಅನುಗುಣವಾಗಿ:
ಒಬಿಸಿ(OBC): 3 ವರ್ಷ
ಎಸ್‌ಸಿ/ಎಸ್‌ಟಿ(Sc/St): 5 ವರ್ಷ
ಪಿಡಬ್ಲ್ಯುಬಿಡಿ(PWBD): 10 ವರ್ಷಗಳ ಸಡಿಲಿಕೆ ಲಭ್ಯವಿದೆ.
ಅರ್ಜಿ ಶುಲ್ಕ:
ಸಾಮಾನ್ಯ(General), ಇಡಬ್ಲ್ಯುಎಸ್ (EWS) ಮತ್ತು ಒಬಿಸಿ (OBC) ಅಭ್ಯರ್ಥಿಗಳಿಗೆ 250 ರೂ. ಶುಲ್ಕವಿದೆ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಆಯ್ಕೆಗೆ ಸ್ಕಿಲ್ ಟೆಸ್ಟ್(Skill test), ದೈಹಿಕ ಪರೀಕ್ಷೆ (Physical test), ಗ್ರೂಪ್ ಡಿಸ್ಕಷನ್ (Group discussion) ಮತ್ತು ಸಂದರ್ಶನ (Interview) ಪ್ರಕ್ರಿಯೆಗಳನ್ನು ಒಳಗೊಂಡಂತೆ ಪೂರ್ಣ ಪ್ರಮಾಣದ ವಿಶ್ಲೇಷಣೆ ಮಾಡಲಾಗುತ್ತದೆ. ಇದು ಕೇವಲ ತಾಂತ್ರಿಕ ಮತ್ತು ಆಡಳಿತ ವಿಭಾಗಗಳಲ್ಲದೆ, ಅಭ್ಯರ್ಥಿಗಳ ಸಾಮಾನ್ಯ ಕೌಶಲ್ಯಗಳನ್ನು ಪರೀಕ್ಷಿಸಲು ಸಹ ಕೈಗೊಳ್ಳಲ್ಪಡುವುದು.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು:
ಹಂತ 1: ಮೊದಲು, ಅಧಿಕೃತ ವೆಬ್‌ಸೈಟ್ ಗೆ (Official Website) ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
https://gailebank.gail.co.in/recruitmentSystem/user/er_login.aspx
ಹಂತ 2: ನಂತರ ನೋಂದಣಿಯನ್ನು ಮಾಡಿಕೊಳ್ಳಿ. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ಹಂತ 3: ಅಭ್ಯರ್ಥಿಗಳು ಫೋಟೋ, ಸಹಿ, ಹುಟ್ಟಿದ ದಿನಾಂಕದ ದಾಖಲೆ, ಗುರುತಿನ ಪುರಾವೆ, ಅಗತ್ಯ ಅರ್ಹತೆಯ ಮಾರ್ಕ್‌ಶೀಟ್, ವರ್ಗ ಪ್ರಮಾಣಪತ್ರ (ಅನ್ವಯಿಸಿದರೆ). ಹೀಗೆ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ 4: ಅರ್ಜಿ ಶುಲ್ಕವನ್ನು ಪಾವತಿಸಿ.(ಅನ್ವಯಿಸಿದಲ್ಲಿ)
ಹಂತ 5: ಸಂಪೂರ್ಣ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಲು ಮತ್ತು ಪರಿಶೀಲಿಸಲು ಪೂರ್ವವೀಕ್ಷಣೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 6: ಅಂತಿಮ ಸಲ್ಲಿಕೆ ಮೊದಲು, ಅಗತ್ಯವಿದ್ದಲ್ಲಿ ವಿವರಗಳನ್ನು ಮಾರ್ಪಡಿಸಿ ಮತ್ತು ನೀವು ಭರ್ತಿ ಮಾಡಿದ ಫೋಟೋ, ಸಹಿ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ ನಂತರ ಮತ್ತು ಖಚಿತಪಡಿಸಿದ ನಂತರವೇ ಅಂತಿಮ ಸಲ್ಲಿಕೆ ಮಾಡಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 11, 2024.
Note: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ವಿದ್ಯಾರ್ಹತೆ, ವಯೋಮಿತಿ, ಮತ್ತು ಅರ್ಜಿ ಸಲ್ಲಿಕೆ ಕುರಿತ ಎಲ್ಲಾ ಮಾಹಿತಿಯನ್ನು ಪರಿಶೀಲಿಸುವುದು ಅಗತ್ಯ.
ಈ ಉದ್ಯೋಗಾವಕಾಶ ನಿಮ್ಮ ಭವಿಷ್ಯವನ್ನು ಉತ್ತಮಗೊಳಿಸುವಲ್ಲಿ ಸಹಾಯಕವಾಗಬಹುದು. ಸಮರ್ಪಕ ಅರ್ಹತೆ ಇದ್ದರೆ, ನಿಮ್ಮ ಆಕಾಂಕ್ಷೆಯನ್ನು ಸಾಧಿಸಲು ಈಗಲೇ ಮೊದಲಿಗೆ ಹೆಜ್ಜೆ ಹಾಕಿ.
ಮತ್ತು ನೀವೇನಾದರೂ, ಮೇಲಿನ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈಗಿನಿಂದಲೇ ಅದಕ್ಕಾಗಿ ತಯಾರಿಯನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ, ನೇಮಕಾತಿಯ ಅಧಿಸೂಚನೆಗಳಿಗಾಗಿ ಪ್ರತಿದಿನ ಅಧಿಕೃತ ಜಾಲತಾಣಕ್ಕೆ ತೆರಳಿ ಪರಿಶೀಲಿಸಿ. ಹಾಗೆಯೇ ಈ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.