ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಿಮ್ಮ ಮೌಲ್ಯವಾದ ಗುರುತಿನ ಆಧಾರ್ ಕಾರ್ಡ್ ಅನ್ನು ನೀವೇನಾದರೂ ಮರೆತು ಇಟ್ಟಿದ್ದರೆ ಅಥವಾ ಕಳೆದುಕೊಂಡಲ್ಲಿ ಅದರ ಪರ್ಯಾಯವಾಗಿ ನಕಲಿ ಆಧಾರ್ ಕಾರ್ಡ್ಅನ್ನು ಹೇಗೆ ಪಡೆಯಬೇಕು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಈಗ ಕಳೆದುಹೋದ ಆಧಾರ್ ಕಾರ್ಡ್ ಪಡೆಯುವುದು ಸುಲಭ (Now its easy to get lost Aadhaar card) :
ಆಧಾರ್ ಕಾರ್ಡ್ ಭಾರತೀಯರಿಗೆ ಪ್ರಮುಖ ಗುರುತಿನ ಪುರಾವೆಯಾಗಿದ್ದು, 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ.ಆಧಾರ್ ಕಾರ್ಡ್ ಇಲ್ಲದೆ ಯಾವುದೇ ರೀತಿಯ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ. ಹೀಗಿದ್ದಾಗ ನೀವೇನಾದರು ನಿಮ್ಮ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡಿದ್ದಲ್ಲಿ, ಚಿಂತೆ ಮಾಡುವ ಅವಶ್ಯಕತೆ ಇಲ್ಲಾ. ನಿಮ್ಮ ಆಧಾರ್ ಕಳೆದಿದ್ದರೆ ಅದರ ಪರ್ಯಾಯವಾಗಿ ನಕಲಿ(Duplicate) ಆಧಾರ್ ಕಾರ್ಡ್ ಅನ್ನು ಒದಗಿಸಿಕೊಡಲಾಗುತ್ತದೆ. ಈ ಕೆಳಗೆ ನೀಡಿರುವ ವಿಧಾನಗಳನ್ನು ಅನುಸರಿಸಿರಿ.
ನಕಲಿ ಆಧಾರ್ ಕಾರ್ಡ್ ಅನ್ನು ಆನ್‌ಲೈನ್ ಮೂಲಕ ಹೇಗೆ ಪಡೆಯಬೇಕು?:
ಹಂತ 1: ಮೊದಲಿಗೆ, UIDAI ನ ಅಧಿಕೃತ ವೆಬ್‌ಸೈಟ್‌ಗೆ ತೆರೆಯಿರಿ: https://resident.uidai.in/
ಹಂತ 2: ‘ಆಧಾರ್ ಸಂಖ್ಯೆ (UID)’ ಅಥವಾ ‘ಎನ್ರೋಲ್ಮೆಂಟ್ ಸಂಖ್ಯೆ (EID)’ ಯನ್ನು ಆಯ್ಕೆಮಾಡಿಕೊಳ್ಳಿ.
ಹಂತ 3: ನಂತರ, ನೀವು ಆಧಾರ್ ಸಂಖ್ಯೆಯೊಂದಿಗೆ ನೋಂದಾಯಿಸಲಾದ ಹೆಸರು ಅಥವಾ ಮೊಬೈಲ್ ಸಂಖ್ಯೆ ಮತ್ತು ಇನ್ನಿತರೆ ಕೇಳಿರುವ ವಿವರಗಳನ್ನು ನಮೂದಿಸಿ.
ಹಂತ 4: ತದನಂತರ, ಪರದೆಯ ಮೇಲೆ ಪ್ರದರ್ಶಿಸಲಾದ ಭದ್ರತಾ(captcha) ಕೋಡ್ ನಮೂದಿಸಿ.
ಹಂತ 5 : ‘Send OTP’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 6: ನಿಮ್ಮ ನೋಂದಾಯಿಸದ ಮೊಬೈಲ್ ಸಂಖ್ಯೆಗೆ OTP ಅನ್ನು ಪಡೆಯುತ್ತೀರಿ.
ಹಂತ 7: ಬಂದಿರುವ OTP ಯನ್ನು ನಮೂದಿಸಿ, “ಸಲ್ಲಿಸು” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಪಡೆಯುತ್ತಿರಿ.
ಉಚಿತ ವಿದ್ಯಾರ್ಥಿವೇತನ | Click Here |
ಉಚಿತ ಸರ್ಕಾರಿ ಯೋಜನೆ | Click Here |
ಸರ್ಕಾರಿ ಉದ್ಯೋಗ | Click Here |
ಆಫ್‌ಲೈನ್ ಮೂಲಕ ಕಳೆದುಹೋದ ಆಧಾರ್ ಕಾರ್ಡ್ ಅನ್ನು ಹಿಂಪಡೆಯುವ ವಿಧಾನ ಇಲ್ಲಿದೆ :
ಆಧಾರ್ ಅನ್ನು ಹಿಂಪಡೆಯಲು ಬಯಸುವ ಅರ್ಜಿದಾರರು ಖುದ್ದಾಗಿ ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ ನಕಲಿ ಆಧಾರ್‌ಗಾಗಿ ವಿನಂತಿಸಿಕೊಳ್ಳಬೇಕಾಗುತ್ತದೆ.
ಹಂತ 1: ಮೊದಲನೆಯದಾಗಿ, UIDAI ನ ಟೋಲ್-ಫ್ರೀ(Toll – free)ಸಂಖ್ಯೆ 1800-180-1947 ಅಥವಾ 1947 ಗೆ ಕರೆ ಮಾಡಿ.
ಹಂತ 2: ಅರ್ಜಿದಾರರು IVR(ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್) ಆಯ್ಕೆಯನ್ನು ಅನುಸರಿಸಿ.
ಹಂತ 3: ಕಾರ್ಯನಿರ್ವಾಹಕರೊಂದಿಗೆ ಮಾತನಾಡಲು ಎಂಬ ಆಯ್ಕೆಯನ್ನು ಆರಿಸಿಕೊಳ್ಳಬೇಕು.
ಹಂತ 4: ಅರ್ಜಿದಾರರು ಕಳೆದುಹೋದ ಆಧಾರ್ ಕಾರ್ಡ್‌ನ ನಕಲು ಪ್ರತಿಗಾಗಿ ಕಾರ್ಯನಿರ್ವಾಹಕರಲ್ಲಿ ವಿನಂತಿಸಿಕೊಳ್ಳಬೇಕು .
ಹಂತ 5: ಅರ್ಜಿದಾರರ ಗುರುತುಗಳನ್ನು ಪರಿಶೀಲಿಸಲು ಕಾರ್ಯನಿರ್ವಾಹಕರು ಕೇಳಿರುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ.
ಹಂತ 6: ಪರಿಶೀಲನೆಯ ನಂತರ, ಕಾರ್ಯನಿರ್ವಾಹಕರು ಅರ್ಜಿದಾರರ ವಿನಂತಿಯನ್ನು ಸ್ವೀಕರಿಸಿ ಮುಂದಿನ ಪ್ರಕ್ರಿಯೆಯನ್ನು ಮುಂದುವರಿಸುತ್ತಾರೆ.
ಕಳೆದುಕೊಂಡ ಆಧಾರ್ ಕಾರ್ಡ್ ಹಿಂಪಡೆಯಲು ಬೇಕಾದ ದಾಖಲೆಗಳು :
ನಕಲಿ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಯಾವುದೇ ಹೆಚ್ಚುವರಿ ಆಧಾರ್ ಕಾರ್ಡ್ ದಾಖಲೆಗಳನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ. ಮಾಹಿತಿಯನ್ನು ಈಗಾಗಲೇ ವೆಬ್‌ಸೈಟ್ ಹೊಂದಿರುತ್ತದೆ. ಚಾಲ್ತಿಯಾಗಿರುವ ಆಧಾರ್ ಸಂಖ್ಯೆ ಇದ್ದರೆ ಸಾಕು. ಪರ್ಯಾಯವಾಗಿ, ನಿಮ್ಮ ದಾಖಲಾತಿ ಸಂಖ್ಯೆ( Registration Number) ಮತ್ತು ಐಡಿಯನ್ನು ಸಹ ನೀವು ನಮೂದಿಸಬಹುದು.
ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ ? ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro
ಪ್ರಮುಖ ಲಿಂಕುಗಳು |
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್ | Download App |
ಟೆಲಿಗ್ರಾಂ ಚಾನೆಲ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ವಾಟ್ಸಪ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ