ಚಿನ್ನದ ಬೆಲೆ (gold price) ಒಂದೇ ದಿನದಲ್ಲಿ ಬರೋಬ್ಬರಿ 2,500 ರೂಪಾಯಿ ಕುಸಿತ!
ಚಿನ್ನ (gold) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಇಷ್ಟ. ಮುಖ್ಯವಾಗಿ ಹೆಣ್ಣುಮಕ್ಕಳು ಚಿನ್ನವನ್ನು ತುಂಬಾನೆ ಇಷ್ಟಪಡುತ್ತಾರೆ. ಯಾವುದೇ ಸಂಭ್ರಮಗಳಲ್ಲಿ ಹೆಣ್ಣು ಮಕ್ಕಳು ಚಿನ್ನವನ್ನು ಧರಿಸಿ ಆ ಸಂಭ್ರಮಕ್ಕೆ ಹೋಗುವುದು ಸರ್ವೇಸಾಮಾನ್ಯ. ಹಣ ಇರುವಂತಹ ಕುಟುಂಬದ ಮಹಿಳೆಯರು ಪ್ರತಿ ತಿಂಗಳು ಚಿನ್ನವನ್ನು ಖರೀದಿಸುತ್ತಾರೆ. ಆದರೆ ಹಣ ಇರದೆ ಇರುವಂತಹ ಹೆಣ್ಣು ಮಕ್ಕಳು ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತದೆಯೋ ಅಂದೆ ಚಿನ್ನವನ್ನು ಖರೀದಿಸಿರುತ್ತಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನವು ಹೆಚ್ಚಿನ ಮೌಲ್ಯದ (valuable thing) ಸರಕಾಗಿದ್ದು, ಚಿನ್ನದ ಬೆಲೆಯಲ್ಲಿ ಆಗಾಗ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಶುಭ ಸಮಾರಂಭವಿದ್ದಾಗ ಬಂಗಾರದ ಅವಶ್ಯಕತೆ ಬಹಳ ಇರುತ್ತದೆ. ಚಿನ್ನದ ಬೆಲೆ ಅಗ್ಗವಾಗಿದ್ದಾಗ, ಯಾವಾಗ ಬೆಲೆಯು ಕಡಿಮೆ ಆಗುತ್ತದೆ ಎಂದು ಕಾಯುತ್ತಿರುತ್ತಾರೆ.
ಚಿನ್ನ ಕೊಂಡು ಕೊಳ್ಳುವವರಿಗೆ ಇದೊಂದು ಗುಡ್ ನ್ಯೂಸ್ ಎನ್ನಬಹುದು. ಯಾಕೆಂದರೆ, ಚಿನ್ನದ ಬೆಲೆಯಲ್ಲಿ ಇದೀಗ ಕುಸಿತ ಕಂಡಿದ್ದು, ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಒಂದೇ ದಿನದಲ್ಲಿ ಬಹಳ ಕುಸಿತ ಕಂಡಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ ಎಷ್ಟಿದೆ? ಚಿನ್ನದ ಬೆಲೆ ಕುಸಿತಕ್ಕೆ ಪ್ರಮುಖವಾದ ಕಾರಣ ಏನು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ.
ಚಿನ್ನದ ಬೆಲೆ ಭಾರಿ ಕುಸಿತ ಕಂಡಿದೆ (gold rate decreased) :
ಒಡವೆ ಚಿನ್ನದ ಬೆಲೆ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಭಾರಿ ಕುಸಿತ ಕಂಡು ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ 2,500 ರೂಪಾಯಿ ಕುಸಿತ ಕಂಡಿದೆ. ಹಾಗೇ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 250 ರೂಪಾಯಿ ಕಡಿತವಾಗಿದ್ದು, ಆಭರಣ ಚಿನ್ನದ ಬೆಲೆಯು ಕುಸಿತದ ನಂತರ 10 ಗ್ರಾಂಗೆ 66,000 ರೂಪಾಯಿ ರೀತಿ ಮಾರಾಟ ಆಗುತ್ತಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿದು ಬಿದ್ದಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,300 ರೂಪಾಯಿ ಕುಸಿತ ಕಂಡಿದೆ.
ಬೆಳ್ಳಿಯ ಬೆಲೆಯಲ್ಲೂ ಕುಸಿತ (silver price also decreased) :
24 ಕ್ಯಾರೆಟ್ ಚಿನ್ನದ ಬೆಲೆ 72,000 ರೂಪಾಯಿ ಆಗಿದ್ದು,18 ಕ್ಯಾರೆಟ್ ಚಿನ್ನದ ಬೆಲೆ ಕೂಡ ಕುಸಿತ ಕಂಡು ಹಳದಿ ಲೋಹದ ಬೆಲೆ ಕುಸಿತದ ಹಾದಿ ಹಿಡಿದಿದೆ. ಇದು ಸಾಲದು ಎಂಬಂತೆ ಬೆಳ್ಳಿ ಬೆಲೆ ಕೂಡ 1000 ರೂಪಾಯಿ ಕುಸಿತ ಕಂಡಿದೆ. ಆದರೆ ಹೀಗಿದ್ದಾಗಲೇ ಮತ್ತೊಂದು ಕಡೆ ಷೇರು ಪೇಟೆ ಇಂದು ಭರ್ಜರಿ ಏರಿಕೆ ಕಂಡಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ನಿಫ್ಟಿ-50 ಸುಮಾರು 147 ಅಂಕ ಏರಿಕೆ ಕಂಡಿದ್ದು, 23,868 ಅಂಕದ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದ್ದು.
ಇನ್ನುಳಿದಂತೆ ಸೆನ್ಸೆಕ್ಸ್ 620 ಪಾಯಿಂಟ್ಸ್ ಏರಿಕೆ ಕಂಡು 78,674 ಅಂಕದಲ್ಲಿ ವಹಿವಾಟು ಮುಗಿಸಿದೆ. ಬ್ಯಾಂಕ್ ನಿಫ್ಟಿ ಕೂಡ 264 ಅಂಕ ಏರಿಕೆ ಕಂಡಿದೆ. ಆದರೆ ಇದೇ ವೇಳೆಗೆ, ಚಿನ್ನ & ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡುಬಂದಿದ್ದು ಹೂಡಿಕೆ ಮಾಡಿದವರಿಗೆ ತಲೆ ನೋವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆ ಆಗುವ ನಿರೀಕ್ಷೆ ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.