ಚಿನ್ನದ ಬೆಲೆ (gold price) ಒಂದೇ ದಿನದಲ್ಲಿ ಬರೋಬ್ಬರಿ 2,500 ರೂಪಾಯಿ ಕುಸಿತ!
ಚಿನ್ನ (gold) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಇಷ್ಟ. ಮುಖ್ಯವಾಗಿ ಹೆಣ್ಣುಮಕ್ಕಳು ಚಿನ್ನವನ್ನು ತುಂಬಾನೆ ಇಷ್ಟಪಡುತ್ತಾರೆ. ಯಾವುದೇ ಸಂಭ್ರಮಗಳಲ್ಲಿ ಹೆಣ್ಣು ಮಕ್ಕಳು ಚಿನ್ನವನ್ನು ಧರಿಸಿ ಸಂಭ್ರಮಕ್ಕೆ ಹೋಗುವುದು ಸರ್ವೇಸಾಮಾನ್ಯ. ಹಣ ಇರುವಂತಹ ಕುಟುಂಬದ ಮಹಿಳೆಯರು ಪ್ರತಿ ತಿಂಗಳು ಚಿನ್ನವನ್ನು ಖರೀದಿಸುತ್ತಾರೆ. ಆದರೆ ಹಣ ಇರದೆ ಇರುವಂತಹ ಹೆಣ್ಣು ಮಕ್ಕಳು ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತದೆ ಎಂದು ನೋಡಿಕೊಂಡು ಚಿನ್ನವನ್ನು ಖರೀದಿಸಿರುತ್ತಾರೆ.
ಚಿನ್ನವು ಹೆಚ್ಚಿನ ಮೌಲ್ಯದ (valuable thing) ಸರಕಾಗಿದ್ದು, ಚಿನ್ನದ ಬೆಲೆಯಲ್ಲಿ ಆಗಾಗ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಶುಭ ಸಮಾರಂಭವಿದ್ದಾಗ ಬಂಗಾರದ ಅವಶ್ಯಕತೆ ಬಹಳ ಇರುತ್ತದೆ. ಚಿನ್ನದ ಬೆಲೆ ಅಗ್ಗವಾಗಿದ್ದಾಗ, ಯಾವಾಗ ಬೆಲೆಯು ಕಡಿಮೆ ಆಗುತ್ತದೆ ಎಂದು ಕಾಯುತ್ತಿರುತ್ತಾರೆ.
ಚಿನ್ನ ಕೊಂಡುಕೊಳ್ಳುವವರಿಗೆ ಇದೊಂದು ಗುಡ್ ನ್ಯೂಸ್ ಎನ್ನಬಹುದು. ಯಾಕೆಂದರೆ, ಚಿನ್ನದ ಬೆಲೆಯಲ್ಲಿ ಇದೀಗ ಕುಸಿತ (Gold rate decreased) ಕಂಡಿದ್ದು, ಮೂರು ದಿನದ ಹಿಂದೆ ಏರಿಕೆ ಕಂಡಿದ್ದ ಚಿನ್ನ ಇದೀಗ ಬಹಳ ಕುಸಿತ ಕಂಡಿದೆ. ಹಾಗಾದ್ರೆ ಇದೀಗ ಚಿನ್ನದ ಬೆಲೆ ಎಷ್ಟಿದೆ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ ಬೆಲೆ ಭಾರಿ ಕುಸಿತ ಕಂಡಿದೆ (gold rate decreased) :
ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 200 ರೂಪಾಯಿ ಇಳಿಕೆಗೊಂಡಿದ್ದು ಒಟ್ಟು 73,800 ರೂಪಾಯಿಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 160 ರೂಪಾಯಿ ಇಳಿಕೆಗೊಂಡಿದ್ದು ಒಟ್ಟು 80,400 ರೂಪಾಯಿಗಳಷ್ಟಿದೆ. ಹಾಗಾದರೇ ವಿವಿಧ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂದು ನೋಡೋಣ.
24 ಕ್ಯಾರೆಟ್ ಚಿನ್ನದ ಬೆಲೆ ಹೈದರಾಬಾದ್, ವಿಜಯವಾಡ, ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ ದಲ್ಲಿ ರೂ.80,550 ರಷ್ಟಿದೆ. ಇನ್ನು ನವದೆಹಲಿಯಲ್ಲಿ 80,700 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ ಹೈದರಾಬಾದ್, ವಿಜಯವಾಡ, ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ ದಲ್ಲಿ ರೂ. 73,840 ನಷ್ಟಿದೆ. ಹಾಗೆ ದೆಹಲಿಯಲ್ಲಿ 73,990 ರೂ. ಇದೆ.
ಬೆಳ್ಳಿಯ ಬೆಲೆಯಲ್ಲೂ ಕುಸಿತ (silver price also decreased) :
ಕೇವಲ ಚಿನ್ನದ ಬೆಲೆಯಲ್ಲದೆ ಬೆಳ್ಳಿ ಬೆಲೆ ಕೂಡ ಕುಸಿತ ಕಂಡಿದೆ. ಕೆಜಿಗೆ 100 ರೂ ಇಳಿಕೆಯಾಗಿದೆ. ನಿನ್ನ 97,000 ರೂ. ಇದ್ದ ಬೆಳ್ಳಿ ಬೆಲೆ ಇಂದು 96,900 ರೂ. ಆಗಿದೆ. ಒಟ್ಟಾರೆಯಾಗಿ ಕಳೆದ ಎರಡು ದಿನಗಳಲ್ಲಿ 3100 ಇಳಿಕೆಯಾಗಿದೆ. ಹೈದರಾಬಾದ್, ವಿಜಯವಾಡ, ಚೆನ್ನೈನಲ್ಲಿ ರೂ. 1,05,900 ನಷ್ಟಿದೆ. ಇನ್ನು ಮುಂಬೈ, ಬೆಂಗಳೂರು, ಕೋಲ್ಕತ್ತಾ ದೆಹಲಿಯಲ್ಲಿ 96,900 ರೂ. ಇದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಹಾಗೂ ಬೆಳ್ಳಿಯ ಬೆಲೆ ಮತ್ತೆ ಏರಿಕೆ ಆಗುವ ನಿರೀಕ್ಷೆ ಇದೆ.
ಚಿನ್ನದ ಬೆಲೆ ಇಳಿಕೆಗೆ ನಿಜವಾದ ಕಾರಣ ಇಲ್ಲಿದೆ :
ಚಿನ್ನದ ಬೆಲೆ ಕಡಿಮೆಯಾಗಲು ಹಲವಾರು ಕಾರಣಗಳಿದ್ದು, ಅವುಗಳಲ್ಲಿ ಮುಖ್ಯವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಅಸಮಾನತೆ, ವಿವಿಧ ದೇಶಗಳ ನಡುವಿನ ಆರ್ಥಿಕ ಕುಸಿತದ ಸಮಸ್ಯೆಗಳು, ಷೇರು ಮಾರುಕಟ್ಟೆಗಳಲ್ಲಿನ ಬದಲಾವಣೆಗಳು, ವಿದೇಶಿ ಬ್ಯಾಂಕ್ ಹೂಡಿಕೆಯ ಬಡ್ಡಿದರಗಳಲ್ಲಿನ ಬದಲಾವಣೆಗಳು. ಇವೆಲ್ಲಾ ಕಾರಣಗಳಿಂದ ಇದೀಗ ದೇಶೀಯ ಮಾರುಕಟ್ಟೆಯಲ್ಲಿ ಅಂದರೆ, ವಿವಿಧ ರಾಜ್ಯಗಳಲ್ಲಿ ಚಿನ್ನದ ದರಗಳು ಕುಸಿತಕಂಡಿವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.