Gold rate today : ಚಿನ್ನ ಬೆಳ್ಳಿ ದರದಲ್ಲಿ ಭಾರಿ ಇಳಿಕೆ, ಇಂದಿನ ದರ ಎಷ್ಟು ಇಲ್ಲಿದೆ ಮಾಹಿತಿ
ಚಿನ್ನ, ಭಾರತೀಯ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಹಬ್ಬ-ಹರಿದಿನಗಳು, ವಿವಾಹಗಳು ಮತ್ತು ಪ್ರಮುಖ ಉತ್ಸವಗಳಲ್ಲಿ ಚಿನ್ನದ ಖರೀದಿ ನಮ್ಮ ಸಂಪ್ರದಾಯದ ಭಾಗವಾಗಿದೆ. ಹೀಗಿರುವಾಗ, ಕಳೆದ ಒಂದು ತಿಂಗಳಿನಿಂದ ಭಾರಿ ಏರಿಕೆ ಕಾಣುತ್ತಿದ್ದು, ಚಿನ್ನಾಭರಣ ಪ್ರಿಯರಿಗೆ ನಿರಾಸೆಯಾಗುತ್ತಿದೆ. ಹಲವಾರು ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಯಾಗುತ್ತಿದ್ದು, ಹೂಡಿಕೆದಾರಾರಿಗೆ(investors) ಸಂತೋಷವಾದರೆ, ಚಿನ್ನ ಕೊಂಡುಕೊಳ್ಳುವವರು ಕೊಂಚ ಚಿಂತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಏರಿಕೆಗಳ ನಡುವೆ ಈ ದಿನದ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಇಂದಿನ ಚಿನ್ನದ ಬೆಲೆ, 7, ಫೆಬ್ರವರಿ 2025 : gold price today
ಇಂದು, 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,931 ಆಗಿದ್ದು, 10 ಗ್ರಾಂಗೆ ₹79,301 ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,652 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6489 ಆಗಿದ್ದು, 10 ಗ್ರಾಂಗೆ ₹86,511 ಆಗಿದೆ. ಇದು ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ 10 ಗ್ರಾಂಗೆ ₹251 ಏರಿಕೆಯನ್ನು ನೋಡಬಹುದು.
ಫೆಬ್ರವರಿ 6, 2025ರ(February 6, 2025) ಗುರುವಾರದಂದು, ಚಿನ್ನದ ಬೆಲೆ ಎಷ್ಟಿತ್ತು?:
ಫೆಬ್ರವರಿ 6, 2025ರ ಗುರುವಾರದಂದು(Thursday), ಬೆಂಗಳೂರಿನಲ್ಲಿ(Bangalore) ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,906 ಆಗಿತ್ತು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,625 ಆಗಿತ್ತು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6469 ಆಗಿತ್ತು, ಇದೀಗ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದು, ಆಭರಣ ಪ್ರಿಯರಿಗೆ ನಿರಾಸೆ ಯಾಗಿದೆ.
ನಂತರದ ವಾರದ ಲೆಕ್ಕಾಚಾರದ ಪ್ರಕಾರ, 22 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ಬೆಲೆ ₹7,930 ಕ್ಕೆ ತಲುಪಿದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ₹8,651 ಆಗಿದೆ. ಇದರೊಂದಿಗೆ, 100 ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹7,93,000 ಆಗಿದ್ದು, 100 ಗ್ರಾಂ ಅಪರಂಜಿ ಚಿನ್ನ ₹8,65,100 ಕ್ಕೆ ತಲುಪಿದೆ. ಹೂಡಿಕೆದಾರರು ಮತ್ತು ಆಭರಣ ಖರೀದಿದಾರರು ಈ ಬೆಲೆಯ ಏರಿಕೆಯನ್ನು ಊಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಚಿನ್ನದ ಬೆಲೆಯ ಏರಿಕೆಯ ಹಿಂದೆ ಇರುವ ಕಾರಣಗಳೇನು?:
ಅಂತರಾಷ್ಟ್ರೀಯ ಮಾರುಕಟ್ಟೆಯ(international market) ಪ್ರಭಾವ:
ಚಿನ್ನದ ಬೆಲೆ ಮೂಲತಃ ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಆಧಾರಿತವಾಗಿರುತ್ತದೆ. ಡಾಲರ್ ಸೂಚ್ಯಂಕದ ಕುಸಿತ, ವ್ಯಾಪಾರ, ಯುದ್ಧ ಮತ್ತು ಜಾಗತಿಕ ಅಸ್ಥಿರತೆಯು ಬಂಗಾರದ ಬೆಲೆಯ ಏರಿಕೆ ಇಳಿಕೆಗೆ ಪ್ರಮುಖ ಕಾರಣಗಳಾಗಿರುತ್ತವೆ.
ಭಾರತೀಯ ಮಾರುಕಟ್ಟೆಯ ಬಂಡವಾಳ ಹೂಡಿಕೆ(Investing in the Indian market) ಪ್ರೇರಣೆ:
ಭಾರತದಲ್ಲಿ ಚಿನ್ನದ ಮೇಲಿನ ಹೂಡಿಕೆಯು ನಿರಂತರವಾಗಿ ಹೆಚ್ಚಾಗುತ್ತಿದೆ. ಹೂಡಿಕೆದಾರರು ಬಂಡವಾಳವನ್ನು ಚಿನ್ನದಲ್ಲಿ ಸುರಕ್ಷಿತವಾಗಿ ಉಳಿಸಿಕೊಳ್ಳಲು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಈ ಕಾರಣದಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರಬಹುದು.
ಹೆಚ್ಚಿದ ಬೇಡಿಕೆ ಮತ್ತು ಹಬ್ಬದ ಹಂಗಾಮಾ:
ಮದುವೆ ಮತ್ತು ಹಬ್ಬದ ಋತು ಆರಂಭಗೊಳ್ಳುತ್ತಿರುವುದರಿಂದ, ಚಿನ್ನದ ಖರೀದಿಗೆ ಮಹತ್ತರವಾದ ಬೇಡಿಕೆ ಉಂಟಾಗಿದೆ. ಇದು ಕೂಡಾ ಬೆಲೆಯ ಏರಿಕೆಗೆ ಕಾರಣವಾಗಿರಬಹುದು.
ಬೆಳ್ಳಿಯ ಬೆಲೆಯ ಸ್ಥಿತಿ ಹೀಗಿದೆ :
ಇನ್ನು ಎಲ್ಲಾದರ ನಡುವೆ ಇಳಿಕೆಯಾಗಿದ್ದ ಬೆಳ್ಳಿ ದರ ಕೂಡ ಏರಿಕೆಯಾಗಿದೆ. ಬೆಲೆಯಲ್ಲಿ ಸಣ್ಣ ಮಟ್ಟದ ಏರಿಕೆ ಕಂಡುಬಂದಿದ್ದು, ಬೆಂಗಳೂರಿನಲ್ಲಿ(Bangalore) ಪ್ರತಿ ಕಿಲೋಗ್ರಾಂ ಬೆಳ್ಳಿ ₹99,400 ಗೆ ವ್ಯಾಪಾರವಾಗುತ್ತಿದ್ದು, ಹೋಲಿಕೆಯಲ್ಲಿ ₹1,000 ರಷ್ಟು ಹೆಚ್ಚಳವಾಗಿದೆ. ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹99.40 ಆಗಿದ್ದು, 10 ಗ್ರಾಂ ಬೆಳ್ಳಿ ₹895, 100 ಗ್ರಾಂ ಬೆಳ್ಳಿ ₹9,850 ಕ್ಕೆ ತಲುಪಿದೆ.
MCX ಮಾರುಕಟ್ಟೆಯಲ್ಲಿ, ಗೋಲ್ಡ್ ನಿರಂತರವಾಗಿ ಆರು ದಿನಗಳಿಂದ ಏರಿಕೆಯನ್ನು ಮುಂದುವರಿಸಿದ್ದು, 84,600 ಗಿಂತ ಮೇಲಾದರೆ 85,000-85,300 ಮಟ್ಟವನ್ನು ಮುಟ್ಟಬಹುದು. ಇನ್ನು ಈ ಸಮಯ ಹೂಡಿಕೆದಾರರಿಗೆ ಉತ್ತಮ ಸಮಯವಾಗಿದೆ ಎನ್ನಬಹುದು.
ಜಾಗತಿಕ ಮಟ್ಟದಲ್ಲಿ, ಸ್ಪಾಟ್ ಚಿನ್ನದ ಬೆಲೆ $2,870.16 ಆಗಿದ್ದು, ಯುಎಸ್ ಚಿನ್ನದ ಭವಿಷ್ಯ ದರವು $2,888.30 ಕ್ಕೆ ತಲುಪಿದೆ. ಇನ್ನು, ಪಲ್ಲಾಡಿಯಂ ಶೇ.0.5 ರಷ್ಟು ಏರಿಕೆಯಾಗಿದ್ದು, ಪ್ಲಾಟಿನಂ ಶೇ.0.4ರಷ್ಟು ಹೆಚ್ಚಳ ಕಂಡಿದೆ, ಆದರೆ ಬೆಳ್ಳಿಯು ಶೇ.0.2ರಷ್ಟು ಕುಸಿತ ತಲುಪಿದೆ.
ಚಿನ್ನದ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವ ವ್ಯತ್ಯಾಸ ಇರಲಿವೆ ಎಂಬುದನ್ನು ಹೇಳಲು ಅಸಾಧ್ಯವಾಗಿದ್ದು, ಜಾಗತಿಕ ರಾಜಕೀಯ ಮತ್ತು ಹೂಡಿಕೆದಾರರ ನಿರ್ಧಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ, ಚಿನ್ನ ಖರೀದಿಸಲು ಯೋಚಿಸುವವರು, ಹೂಡಿಕೆದಾರರು ಮತ್ತು ಆಭರಣ ಪ್ರಿಯರು, ಮುಂದಿನ ಬೆಳವಣಿಗೆಗಳ ಬಗ್ಗೆ ತಜ್ಞರ ಸಲಹೆಯನ್ನು ಪಡೆದು ನಿರ್ಧಾರ ಕೈಗೊಳ್ಳುವುದು ಉತ್ತಮ.
ಈ ದಿನಗಳ ಬಂಗಾರದ ಏರಿಕೆ ಆಭರಣ ಪ್ರಿಯರಿಗೆ ನಿರಾಸೆಯನ್ನು ತಂದಿದ್ದರೂ, ಹೂಡಿಕೆದಾರರಿಗೆ ಇದು ಮಿಶ್ರ ಪ್ರತಿಕ್ರಿಯೆಯನ್ನುಂಟು ಮಾಡಿದೆ. ಬೆಲೆಯ ಈ ಏರಿಕೆ ಮುಂದುವರಿದರೆ, ಜನರು ತಮ್ಮ ಖರೀದಿಯ ನಿರ್ಧಾರವನ್ನು ಪುನರ್ವಿಚಾರಿಸಬೇಕಾಗಬಹುದು.
ಸೂಚನೆ:
ಮೇಲ್ಕಾಣಿಸಿರುವ ದರಗಳು ಮಾರುಕಟ್ಟೆ ಬೆಲೆಗಳನ್ನು(Market prices) ಮಾತ್ರ ಪ್ರತಿನಿಧಿಸುತ್ತವೆ. ಈ ದರಗಳಲ್ಲಿ ಜಿಎಸ್ಟಿ(GST), ಟಿಸಿಎಸ್(TCS) ಮತ್ತು ಇತರ ಶುಲ್ಕಗಳು ಸೇರಿಲ್ಲ. ನಿಖರ ಬೆಲೆಗಾಗಿ ಹತ್ತಿರದ ಆಭರಣ ಅಂಗಡಿಗಳೊಂದಿಗೆ ಸಂಪರ್ಕಿಸಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.