ಮಹಾಶಿವರಾತ್ರಿ ವಿಶೇಷ: ಚಿನ್ನ-ಬೆಳ್ಳಿ ದರ ಇಳಿಕೆಯಿಂದ ಗ್ರಾಹಕರಿಗೆ ಸಂತೋಷ!
ಮಹಾಶಿವರಾತ್ರಿ (Mahashivarathri) ಹಬ್ಬದ ಪ್ರಯುಕ್ತ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕೆಲವು ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ದರವು ಹೆಚ್ಚಾಗುತ್ತಿದ್ದರಿಂದ ಖರೀದಿದಾರರು ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆ ಕಂಡಿದೆ. ಹಬ್ಬದ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ (Gold and Silver) ಖರೀದಿಸಲು ಆಸಕ್ತರಾಗಿರುವ ಗ್ರಾಹಕರಿಗೆ ಈ ಬದಲಾವಣೆಗಳು ಬಹಳ ಖುಷಿ ಕೊಡುತ್ತವೆ ಎಂದರೆ ತಪ್ಪಾಗಲಾರದು. ಹಾಗಿದ್ದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಚಿನ್ನದ ಬೆಲೆಗಳಲ್ಲಿ ಇತ್ತೀಚೆಗೆ ಸ್ವಲ್ಪ ಮಟ್ಟಿನ ಇಳಿಕೆ ಕಂಡುಬಂದಿದ್ದು, ಹಬ್ಬದ ಹೊತ್ತಿಗೆ ಚಿನ್ನದ ಬೆಲೆಯ ಕುಸಿತದಿಂದ (Decreased) ಖರೀದಿದಾರರಿಗೆ ಉಪಯೋಗವಾಗಬಹುದಾದರೂ, ಹೂಡಿಕೆದಾರರು ದೀರ್ಘಕಾಲದ ಬಂಡವಾಳ ಹೂಡಿಕೆಯಲ್ಲಿ ಎಚ್ಚರಿಕೆಯಿಂದ ಇರಬೇಕಾಗಿದೆ. ಬೆಳ್ಳಿ ಕೂಡ ಚಿನ್ನದಂತೆ ಪ್ರಭಾವಿತಗೊಂಡಿದ್ದು, ಅಲ್ಪ ಇಳಿಕೆ ಕಂಡುಬಂದಿದೆ.
ಚಿನ್ನ-ಬೆಳ್ಳಿ ಬೆಲೆ ಇಂದು, 17, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 14, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಆಗಿರುವುದನ್ನು ನಾವು ಗಮನಿಸಬೇಕು. ಹೌದು ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,889 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,606ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6455 ಆಗಿದೆ. ಇನ್ನು ಬೆಳ್ಳಿಯ ಬೆಲೆಯೂ ಕೂಡ ಏರಿಕೆಯಾಗಿದ್ದು ಬರೋಬ್ಬರಿ 1200 ರೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ: 1,00,400 ತಲುಪಿದೆ. ಆದರೆ ನಿನ್ನೆಗೆ ಹೋಲಿಸಿದರೆ 100 ರೂಪಾಯಿ ಇಳಿಕೆಯಾಗಿದೆ.
ಫೆಬ್ರವರಿ 16, 2025 ರಂದು ಭಾರತದಲ್ಲಿ ಚಿನ್ನದ ದರ ಹೀಗಿದೆ :
24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂ ₹8,624.3, ಶನಿವಾರಕ್ಕೆ ಹೋಲಿಸಿದರೆ ₹1,100.0 ಇಳಿಕೆ.
22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂ ₹7,907.3, ಶನಿವಾರಕ್ಕೆ ಹೋಲಿಸಿದರೆ ₹1,010.0 ಇಳಿಕೆ.
ಕಳೆದ ವಾರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 0.46% ರಷ್ಟು ಏರಿಳಿತ ಕಂಡುಬಂದಿದ್ದು, ಕಳೆದ ತಿಂಗಳ ಹೋಲಿಕೆಯಲ್ಲಿ 6.63% ಕುಸಿತವಾಗಿರುವುದು ಗಮನಾರ್ಹವಾಗಿದೆ.
ಮುಖ್ಯ ನಗರಗಳಲ್ಲಿ ಚಿನ್ನದ ದರಗಳು ಹೀಗಿವೆ (10 ಗ್ರಾಂ):
ದೆಹಲಿ (Dehli) :
ಭಾನುವಾರ ₹86,243.0
ಶನಿವಾರ ₹86,243.0
ಕಳೆದ ವಾರ ₹86,833.0
ಜೈಪುರ (Jaipur) :
ಭಾನುವಾರ ₹86,236.0
ಶನಿವಾರ ₹87,226.0
ಕಳೆದ ವಾರ ₹86,826.0
ಲಕ್ನೋ (Lucknow) :
ಭಾನುವಾರ ₹86,259.0
ಶನಿವಾರ ₹87,249.0
ಕಳೆದ ವಾರ ₹86,849.0
ಚಂಡೀಗಢ (Chandighar) :
ಭಾನುವಾರ ₹86,252.0
ಶನಿವಾರ ₹87,242.0
ಕಳೆದ ವಾರ ₹86,842.0
ಅಮೃತಸರ (Amruthsar) :
ಭಾನುವಾರ ₹86,270.0
ಶನಿವಾರ ₹87,260.0
ಕಳೆದ ವಾರ ₹86,860.0
ಬೆಂಗಳೂರು (Bangalore) :
ಭಾನುವಾರದಂದು 22 ಕ್ಯಾರೆಟ್ ಚಿನ್ನದ ಬೆಲೆ ₹78,900 ಇದ್ದರೆ, ಶನಿವಾರ ₹78,900ರೂ ಇತ್ತು.
ಭಾನುವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ ₹86,070 ಇದ್ದರೆ, ಶನಿವಾರ ₹86,070 ಇತ್ತು.
ಫೆಬ್ರವರಿ 16, 2025 ರಂದು ಭಾರತದಲ್ಲಿ ಬೆಳ್ಳಿ ದರ :
ಭಾರತದಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ₹1,03,600.0, ಈ ದರವು ಶನಿವಾರಕ್ಕೆ ಹೋಲಿಸಿದರೆ ₹100.0 ಕಡಿಮೆಯಾಗಿದೆ.
ಮುಖ್ಯ ನಗರಗಳಲ್ಲಿ ಬೆಳ್ಳಿ ದರಗಳು (1 ಕೆಜಿಗೆ):
ದೆಹಲಿ (Dehli) :
ಭಾನುವಾರ ₹1,03,600.0
ಶನಿವಾರ ₹1,02,500.0
ಕಳೆದ ವಾರ ₹1,02,500.0
ಜೈಪುರ (Jaipur) :
ಭಾನುವಾರ ₹1,04,000.0
ಶನಿವಾರ ₹1,02,900.0
ಕಳೆದ ವಾರ ₹1,02,900.0
ಲಕ್ನೋ (Lucknow) :
ಭಾನುವಾರ ₹1,04,500.0
ಶನಿವಾರ ₹1,03,400.0
ಕಳೆದ ವಾರ ₹1,03,400.0
ಚಂಡೀಗಢ (Chandigarh) :
ಭಾನುವಾರ ₹1,03,000.0
ಶನಿವಾರ ₹1,01,900.0
ಕಳೆದ ವಾರ ₹1,01,900.0
ಪಾಟ್ನಾ (Patna) :
ಭಾನುವಾರ ₹1,03,700.0
ಶನಿವಾರ ₹1,02,600.0
ಕಳೆದ ವಾರ ₹1,02,600.0
ಬೆಂಗಳೂರು (Bangalore) :
ಭಾನುವಾರ ₹1,00,500.0
ಶನಿವಾರ ₹1,00,500.0
ಕಳೆದ ವಾರ ₹99,500.0
ಚಿನ್ನದ ದರವು ಬಹಳ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಅವಲಂಬಿತವಾಗಿದೆ. ಅಮೆರಿಕದ ಫೆಡರಲ್ ರಿಸರ್ವ್ (American Federal Reserve) ಬಡ್ಡಿ ದರ ನೀತಿಗಳು, ಭೂರಾಜಕೀಯ ಸ್ಥಿರತೆ, ಡಾಲರ್‌ನ ಬಲ ಹಾಗೂ ಬಂಡವಾಳ ಹೂಡಿಕೆಯ ಸ್ವರೂಪವು ಚಿನ್ನದ ಬೆಲೆಗೆ ತೀವ್ರ ಪ್ರಭಾವ ಬೀರುತ್ತವೆ.
ಈ ಹಿನ್ನಲೆಯಲ್ಲಿ, ಹೂಡಿಕೆದಾರರು ಚಿನ್ನವನ್ನು ಖರೀದಿಸುವ ಮೊದಲು ಮಾರುಕಟ್ಟೆಯ ಚಲನೆಗಳನ್ನು ಸಮೀಕ್ಷಿಸಿ, ಮುಂದಿನ ತಿಂಗಳಲ್ಲಿ ಬೆಲೆಯ ಹೇಗಿರಬಹುದು ಎಂಬುದರ ಬಗ್ಗೆ ತಜ್ಞರ ಸಲಹೆ ಪಡೆಯುವುದು ಸೂಕ್ತ.
ಅದೇ ರೀತಿಯಾಗಿ, ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರು ದರಗಳ ಚಲನೆಗಳನ್ನು ಪರಿಗಣಿಸಿ ಸೂಕ್ತ ಸಮಯದಲ್ಲಿ ಹೂಡಿಕೆ ಮಾಡುವುದು ಉತ್ತಮ. ಮಹಾಶಿವರಾತ್ರಿಯಂತೆ ಹಬ್ಬದ ಸಮಯದಲ್ಲಿ ಚಿನ್ನದ ದರ ಏರಿಕೆಯಾಗುವುದು ಸಾಮಾನ್ಯವಾಗಿದ್ದರೂ, ಈ ಬಾರಿ ಸ್ವಲ್ಪ ಇಳಿಕೆಯಾಗಿರುವುದರಿಂದ, ಖರೀದಿದಾರರು ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು.
ಸೂಚನೆ :
ಚಿನ್ನ ಮತ್ತು ಬೆಳ್ಳಿ ದರಗಳು ದಿನನಿತ್ಯವೂ ಬದಲಾಗುತ್ತಿದ್ದು, ಖರೀದಿಗೆ ಮುನ್ನ ದೈನಂದಿನ ಬೆಲೆ ಪರಿಶೀಲಿಸುವುದು ಮುಖ್ಯ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ