Gold Price : ಚಿನ್ನದ ಬೆಲೆಯಲ್ಲಿ ಸತತ ಇಳಿಕೆ.! ಚಿನ್ನಾಭರಣ ಪ್ರಿಯರಿಗೆ ಶಿವರಾತ್ರಿ ಗುಡ್ ನ್ಯೂಸ್.!

Picsart 25 02 23 06 27 18 117

WhatsApp Group Telegram Group

ಚಿನ್ನಾಭರಣ ಪ್ರಿಯರ ಗಮನಕ್ಕೆ! ಚಿನ್ನದ ಬೆಲೆಯಲ್ಲಿ ನಿರಂತರ  ಬದಲಾವಣೆ – ಭಾರತದಂತೆ ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಬದಲಾವಣೆ

ಚಿನ್ನ (Gold) ಎಂದಾಕ್ಷಣ ಅದರ ಮೌಲ್ಯ, ಅಂದ ಮತ್ತು ಹೂಡಿಕೆಯ ಮಹತ್ವ ನಮ್ಮ ಮನಸ್ಸಿಗೆ ಒಂಥರಾ ಆಕರ್ಷಣೆಯಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ (Indian Culture) ಚಿನ್ನವು ಸಂಪ್ರದಾಯ ಹಾಗೂ ಹೂಡಿಕೆಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಂಡುಬರುತ್ತಿದೆ. ಈ ಬೆಳವಣಿಗೆಯು ಹೂಡಿಕೆದಾರರು, ಆಭರಣ ಪ್ರಿಯರಿಗೆ ಆತಂಕ ಪಡುತ್ತಿದ್ದಾರೆ. ಹಾಗಿದ್ದರೆ ಭಾರತ ಹೊರತುಪಡಿಸಿ ಬೇರೆ ದೇಶಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಹಾಗೂ ಇಂದಿನ ಚಿನ್ನದ ಬೆಲೆ ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 14, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದಾವೆ. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು (Gold Buyers) ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಅದೇ ರೀತಿ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಇಳಿಕೆ ಕಂಡಿದೆ. ನಿನ್ನಗೆ ಹೋಲಿಸಿದರೆ ₹28 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,045ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,777ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,582 ಆಗಿದೆ. ಇನ್ನು, 1 ಕೆಜಿ ಬೆಳ್ಳಿ ಬೆಲೆ:1,00,500 ತಲುಪಿದೆ. ಬೆಳ್ಳಿಯ ಬೆಲೆ ನಿನ್ನೆಗೆ ಹೋಲಿಸಿದರೆ ಇಂದು ₹200 ಏರಿಕೆಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಕಳೆದ 2-3 ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆಯು 5,000 ರಿಂದ 7,000 ರೂಪಾಯಿಗಳಷ್ಟು ಹೆಚ್ಚಳ ಕಂಡಿದೆ. ಫೆಬ್ರವರಿ 22, 2025ರ ಹೊತ್ತಿಗೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ರೂ. 87,600 ಆಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ ರೂ. 80,300 ಆಗಿದೆ. 18 ಕ್ಯಾರೆಟ್ ಚಿನ್ನದ ದರ ಕೂಡ ಹೆಚ್ಚಳ ಕಾಣುತ್ತಿದ್ದು, ಪ್ರಸ್ತುತ 10 ಗ್ರಾಂ ಚಿನ್ನದ ಬೆಲೆ ರೂ. 66,070 ಆಗಿದೆ.

ಚಿನ್ನದ ಜೊತೆಗೆ ಬೆಳ್ಳಿಯ ಮಾರುಕಟ್ಟೆಯಲ್ಲಿಯೂ ಬದಲಾವಣೆಗಳಿವೆ. ಫೆಬ್ರವರಿ 13ರ ವೇಳೆಗೆ 1 ಕಿಲೋ ಬೆಳ್ಳಿಯ ಬೆಲೆ ರೂ. 99,000 ಇದ್ದರೆ, ಈಗ ಅದು 1 ಲಕ್ಷ ರೂಪಾಯಿಗಳಿಗೂ ಅಧಿಕ ಏರಿಕೆಯಾಗಿದೆ. ಈ ದರದಲ್ಲಿ ಮುಂದುವರೆದ ಬದಲಾವಣೆಗಳು ಹೂಡಿಕೆದಾರರಿಗೆ ಮಹತ್ವದ ಪ್ರಭಾವ ಬೀರುತ್ತವೆ.

ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯ ಗತಿ ಗಮನಾರ್ಹವಾಗಿದೆ. ಚೀನಾ, ಅಮೆರಿಕ ಮತ್ತು ಪಾಕಿಸ್ತಾನದಲ್ಲಿಯೂ ಈ ದರ ನಿರಂತರವಾಗಿ ಬದಲಾಗುತ್ತಿದೆ.

ಹಮರಿವೆಬ್‌ನ (Hamariweb) ಪ್ರಕಾರ, ಚೀನಾದ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ CNY 5,471.46, ಇದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ರೂ. 65,271.07 ಆಗುತ್ತದೆ. 22 ಕ್ಯಾರೆಟ್ ಚಿನ್ನದ ಬೆಲೆ CNY 5,015.50 ಆಗಿದ್ದು, ಇದು ರೂ. 59,831.76 ಗೆ ಸಮಾನವಾಗಿದೆ.

ಪಾಕಿಸ್ತಾನದಲ್ಲಿ ಚಿನ್ನದ ದರವು ಭಾರತಕ್ಕಿಂತಲೂ ಮೂರು ಪಟ್ಟು ಹೆಚ್ಚು. ಅಲ್ಲಿನ 24 ಕ್ಯಾರೆಟ್ ಚಿನ್ನದ ಪ್ರತಿ ಗ್ರಾಂ ದರ 25,949.30 ಪಾಕಿಸ್ತಾನಿ ರೂಪಾಯಿ, 10 ಗ್ರಾಂ ಚಿನ್ನದ ಬೆಲೆ 2,59,493.00 ಪಾಕಿಸ್ತಾನಿ ರೂಪಾಯಿ ಆಗಿದೆ. ಭಾರತದಲ್ಲಿ ಒಂದೇ ಪ್ರಮಾಣದ ಚಿನ್ನ ರೂ. 87,600 ಗೆ ಲಭ್ಯವಿರುವುದರಿಂದ, ಪಾಕಿಸ್ತಾನದ ದರವು ಎಷ್ಟು ಹೆಚ್ಚಿನದಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಜಾಗತಿಕ ಆರ್ಥಿಕ ಕುಸಿತ ಮತ್ತು ವಾಣಿಜ್ಯ ಯುದ್ಧ:
ಅಮೆರಿಕಾ ಮತ್ತು ಚೀನಾದ ನಡುವಿನ ವ್ಯಾಪಾರ ಯುದ್ಧದ ಪರಿಣಾಮವಾಗಿ ಚಿನ್ನದ ಬೆಲೆ ಸ್ಥಿರವಾಗಿ ಏರುತ್ತಿದೆ.

ಭಾರತದಲ್ಲಿ ಆಭರಣ ಕ್ಷೇತ್ರದ (jewellery field) ಬೇಡಿಕೆ:
ಮದುವೆ ಮತ್ತು ಹಬ್ಬ ಹಂಚಿಕೆಯ ಸಮಯದಲ್ಲಿ ಚಿನ್ನದ ಖರೀದಿ ಹೆಚ್ಚಾಗುವುದರಿಂದ ದರ ಹೆಚ್ಚಳ ಕಾಣಿಸುತ್ತದೆ.

ವೃತ್ತಿಪರ ಆರ್ಥಿಕ ತಜ್ಞರ ಅಭಿಪ್ರಾಯದ ಪ್ರಕಾರ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಸಂಭವಿಸಬಹುದು. ಹೂಡಿಕೆದಾರರು ಮತ್ತು ಗ್ರಾಹಕರು ತಮ್ಮ ಆರ್ಥಿಕ ಯೋಜನೆಗಳಲ್ಲಿ ಈ ಬದಲಾವಣೆಯನ್ನು ಗಮನದಲ್ಲಿಡುವುದು ಅವಶ್ಯಕ.
ಚಿನ್ನದ ಬೆಲೆಯು ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ನಿಖರವಾಗಿ ಊಹಿಸಲು ಕಷ್ಟವಿದ್ದರೂ, ಜಾಗತಿಕ ಹಾಗೂ ದೇಶೀಯ ಆರ್ಥಿಕ (Global and Local Economic) ಪರಿಸ್ಥಿತಿಯನ್ನು ಪರಿಗಣಿಸಿ ಖರೀದಿಯನ್ನು ಯೋಜನೆ ಬದ್ಧವಾಗಿ ಮಾಡುವುದೇ ಸೂಕ್ತ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!