ನಿರಂತರ ಏರಿಕೆಯಲ್ಲಿ ಚಿನ್ನ(gold): ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಹೊಸ ಸವಾಲು!
ಭಾರತದಲ್ಲಿ ಚಿನ್ನಕ್ಕೆ ಇರುವ ಅಪಾರ ಬೇಡಿಕೆ ಮತ್ತು ಶ್ರದ್ದೆ ವಿಶ್ವದ ಬೇರೆ ಯಾವುದೇ ದೇಶದಲ್ಲಿಲ್ಲ. ಹಬ್ಬ-ಹರಿದಿನಗಳು, ಮದುವೆ ಸಮಾರಂಭಗಳು, ಧಾರ್ಮಿಕ ಆಚರಣೆಗಳು, ಪ್ರತಿ ಘಟ್ಟದಲ್ಲಿಯೂ ಚಿನ್ನವು ಭಾರತೀಯ ಸಂಸ್ಕೃತಿಯ ಪ್ರಮುಖ ಅಂಗವಾಗಿದೆ. ಹೀಗಾಗಿ, ಚಿನ್ನದ ದರದಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಯು ನೇರವಾಗಿ ಗ್ರಾಹಕರ ಮತ್ತು ಹೂಡಿಕೆದಾರರ(investors) ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ, ಚಿನ್ನದ ದರದಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಇದು ಆಭರಣಪ್ರಿಯರು ಹಾಗೂ ಹೂಡಿಕೆದಾರರಿಗೆ ಹೊಸ ತಲೆನೋವಾಗುತ್ತಿದೆ. ಕಳೆದ ಒಂದೇ ವರ್ಷದಲ್ಲಿ ಚಿನ್ನದ ಬೆಲೆ ಶೇಕಡಾ 35ರಷ್ಟು ಏರಿಕೆಯಾಗಿದೆ. ಚಿನ್ನದ ದರ ಇದೇ ರೀತಿ ಮುಂದುವರಿದರೆ, 2025ರ ಅಂತ್ಯದೊಳಗೆ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹1 ಲಕ್ಷದ ಗಡಿಯನ್ನು ದಾಟುವ ಸಾಧ್ಯತೆ ಎನ್ನಲಾಗುತ್ತಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ ಬೆಲೆ ಏರಿಕೆಯಾಗಲು ಪ್ರಮುಖ ಕಾರಣಗಳೇನು(Cause of increased gold rate)?:
ಡಾಲರ್ ಸೂಚ್ಯಂಕದ ಕುಸಿತ
ಜಾಗತಿಕ ಆರ್ಥಿಕ ಬಿಕ್ಕಟ್ಟು
ಹೂಡಿಕೆದಾರರಿಂದ ಹೆಚ್ಚಿದ ಬೇಡಿಕ
ಆಭರಣ ಮಾರುಕಟ್ಟೆಯಲ್ಲಿ ಹೆಚ್ಚಿದ ಹೂಡಿಕೆ
ಚಿನ್ನದ ದರ ಏರಿಕೆಯ ಬದಲಾವಣೆಗಳು :
2023ರ ಅಕ್ಟೋಬರ್ನಲ್ಲಿ: 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹61,000
2024ರ ಅಕ್ಟೋಬರ್ನಲ್ಲಿ: ₹82,000 (ಶೇಕಡಾ 35ರಷ್ಟು ಏರಿಕೆ)
ಫೆಬ್ರವರಿ 09, 2025: ₹86,670 (ಪ್ರಸ್ತುತ ದರ)
ಮುಂದಿನ ತಿಂಗಳುಗಳಲ್ಲಿ ದರ ₹90,000 ತಲುಪುವ ನಿರೀಕ್ಷೆ ಇದೆ, ಮತ್ತು ಈ ವರ್ಷಾಂತ್ಯಕ್ಕೆ ₹1,00,000 ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಇಂದಿನ ಚಿನ್ನದ ಬೆಲೆ, ಫೆಬ್ರವರಿ, 09, 2025 : gold price today
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,945 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,660 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6501 ಆಗಿದೆ. ಬೆಳ್ಳಿ ಬೆಲೆ 1 ಕೆಜಿ: 99,500.
ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ?:
ಚಿನ್ನದ ದರ ನಿರಂತರ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ, ಹೂಡಿಕೆದಾರರು ಮತ್ತು ಗ್ರಾಹಕರು ಈಗಲೇ ಖರೀದಿಯನ್ನು ಪರಿಗಣಿಸಬಹುದು. ದೀಪಾವಳಿ ಅಥವಾ ಹಬ್ಬ-ಹರಿದಿನ ಹೊತ್ತಿಗೆ ಚಿನ್ನದ ಬೆಲೆಯು ₹1 ಲಕ್ಷದ ಗಡಿ ದಾಟಬಹುದಾದ್ದರಿಂದ, ಮುಂಚಿನ ಹಂತದಲ್ಲಿಯೇ ಚಿನ್ನ ಖರೀದಿಸುವುದು ಆರ್ಥಿಕವಾಗಿ ಸೂಕ್ತ ತೀರ್ಮಾನ.
ಚಿನ್ನದ ಬೆಲೆ ₹1 ಲಕ್ಷಕ್ಕೆ ಏರಿಕೆ ಸಾಧ್ಯತೆ!:
ಚಿನ್ನದ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದು ಚಿನ್ನ ಪ್ರಿಯರಿಗೆ ಆಘಾತವನ್ನುಂಟುಮಾಡುವ ಸಾಧ್ಯತೆ ಇದೆ. 2023ರ ಅಕ್ಟೋಬರ್ನಿಂದ 2024ರ ಅಕ್ಟೋಬರ್ ತನಕ ಚಿನ್ನದ ಬೆಲೆಯಲ್ಲಿ 35% ಏರಿಕೆ ಕಂಡುಬಂದಿದ್ದು, ₹61,000 ಆಗಿದ್ದ 10 ಗ್ರಾಂ 24 ಕ್ಯಾರಟ್ ಚಿನ್ನ ₹82,000ಕ್ಕೆ ಏರಿಕೆಯಾಯಿತು. ಸದ್ಯ, ಇದು ₹86,000ಕ್ಕೆ ತಲುಪಿದ್ದು, ಪ್ರತಿಮಾಸ ಸುಮಾರು ₹1,000-₹2,000 ವರೆಗೆ ಹೆಚ್ಚಳ ಕಾಣುತ್ತಿದೆ.
ಮದುವೆ ಮತ್ತು ಧಾರ್ಮಿಕ ಉತ್ಸವಗಳಲ್ಲಿ ಚಿನ್ನದ ಖರೀದಿ ಹೆಚ್ಚಾಗುತ್ತಿರುವುದರಿಂದ ಬೇಡಿಕೆ ವೃದ್ಧಿಯಾಗಿದೆ. ಇದೇ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಹ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿ ಮಾಡುತ್ತಿದೆ. ಈ ದಶೆಯಂತೆ ಮುಂದುವರೆದರೆ 2025 ರ ಅಂತ್ಯದೊಳಗೆ ಚಿನ್ನದ ಬೆಲೆ ₹1 ಲಕ್ಷ ತಲುಪುವ ನಿರೀಕ್ಷೆ ಇದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.