ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಇಂದಿನ ಚಿನ್ನದ ದರ(today gold price)ದ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ .
ಚಿನ್ನ ವೆಂದರೆ ಯಾರಿಗೆ ಇಷ್ಟಾ ಇಲ್ಲಾ ಹೇಳಿ, ನಮಗೆಲ್ಲ ತಿಳಿದಿರುವಂತೆ ಪ್ರತಿ ಒಬ್ಬ ಮನುಷ್ಯನಿಗು ಚಿನ್ನದ ಮೇಲೆ ಮೋಹ ಇದ್ದೆ ಇರುತ್ತದೆ ಅಲ್ಲವೇ, ಅದರಲ್ಲೂ ನಮ್ಮ ಭಾರತದಲ್ಲಿ, ಚಿನ್ನಕ್ಕೆ ಸಂಬಂಧಿಸಿದ ಒಂದು ಭಾವನಾತ್ಮಕ ಮೌಲ್ಯವಿದೆ. ಹಳದಿ ಲೋಹವು ಸಮೃದ್ಧಿ ಮತ್ತು ಸಂಪತ್ತನ್ನು ಸಂಕೇತಿಸುತ್ತದೆ. ಚಿನ್ನದ ಆಭರಣಗಳು ಮಹಿಳೆಯರಿಗೆ ಎಷ್ಟು ಪ್ರಿಯವಾದುದೆಂದರೆ ಅದನ್ನು ಹೇಳುವುದಕ್ಕೆ ಸಾಕಾಗುವುದಿಲ್ಲ. ಚಿನ್ನವು ಮಂಗಳಕರ ಆಚರಣೆಗಳ ಪ್ರಮುಖ ಭಾಗವಾಗಿರುವುದರಿಂದ , ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಚಿನ್ನದ ಮಾರಾಟವು ತೀವ್ರವಾಗಿ ಹೆಚ್ಚಾಗುತ್ತದೆ. ಮತ್ತು ಚಿನ್ನದ ದರವು ಕೂಡಾ ಪ್ರತಿದಿನ ಬದಲಾಗುತ್ತಿರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಇಂದಿನ ಚಿನ್ನದ ಬೆಲೆ :
ಚಿನ್ನವು ಮಹಿಳೆಯರನ್ನು ಎಷ್ಟು ಆಕರ್ಷಿಸುತ್ತದೆಯೋ, ಅಷ್ಟೇ ಸಮಾನವಾಗಿ ಹೂಡಿಕೆದಾರರನ್ನು ಕೂಡಾ ಆಕರ್ಷಿಸುತ್ತದೆ. ಹೂಡಿಕೆ ಉದ್ದೇಶಗಳಿಗಾಗಿ, ಹೂಡಿಕೆದಾರರು ಚಿನ್ನದ ನಾಣ್ಯಗಳು, ಮತ್ತು ತಮಗೆ ಅನುಕೂಲದಂತೆ ಚಿನ್ನದ ಇತ್ಯಾದಿಗಳನ್ನು ಖರೀದಿಸುತ್ತಾರೆ. ಏಕೆಂದರೆ ಚಿನ್ನದ ಆಭರಣಗಳನ್ನು ಖರೀದಿಸಿದಾಗ ಇದು ಶುಲ್ಕಗಳ ರೂಪದಲ್ಲಿ ಹೆಚ್ಚುವರಿ ಶುಲ್ಕಗಳನ್ನು ಆಕರ್ಷಿಸುತ್ತದೆ ಎಂದು ಒಂದು ಯೋಚನೆ ಮಾಡಿ ಖರೀದಿ ಮಾಡಿರುತ್ತಾರೆ.
ಇಂದು ಚಿನ್ನದ ಬೆಲೆಯು ಬೇಡಿಕೆ ಮತ್ತು ಪೂರೈಕೆ, ಜಗತ್ತಿನಾದ್ಯಂತ ಮಾರುಕಟ್ಟೆಯ ಸನ್ನಿವೇಶಗಳು ಮತ್ತು US ಡಾಲರ್‌ನ ಸಾಮರ್ಥ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಂದ ಪ್ರಭಾವಿತವಾಗಿದೆ. ಹೆಚ್ಚುವರಿಯಾಗಿ, ಭಾರತದಾದ್ಯಂತ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯು ವಿಭಿನ್ನವಾಗಿದೆ. ತೆರಿಗೆಗಳು, ಬೇಡಿಕೆ, ಸಾಗಣೆ, ಸ್ಥಳೀಯ ಸಂಘಗಳು ಮುಂತಾದ ವಿವಿಧ ಅಂಶಗಳು ವಿವಿಧ ನಗರಗಳಲ್ಲಿನ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.
ದಸರಾ ಹಬ್ಬದ ಸಮಯದಲ್ಲಿ ಏರಿಕೆ ಕಂಡಿರುವ ಚಿನ್ನದ ಬೆಲೆ :
ಈಗ ಮುಂದೆ ಬರುವ ಹಬ್ಬ ದಸರಾ(Dasara festival) ಇರುವುದರಿಂದ ಚಿನ್ನದ ಬೆಲೆಯ ಯಲ್ಲಿ ಏರಿಕೆ ಇದಿಯೋ ಕಡಿಮೆ ಇದೆಯೇ ಬೆಲೆ ಎಷ್ಟು ಎನ್ನುವದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.
ಚಿನ್ನಾಭರಣ ಬೆಲೆಯ ಹಾವು ಏಣಿ ಆಟದಂತೆ ಆರಂಭವಾಗಿದ್ದು, ಸೆಪ್ಟೆಂಬರ್‌ನಲ್ಲಿ ಭಾರೀ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಅಕ್ಟೋಬರ್‌ನಲ್ಲಿ ನಿರಂತರವಾಗಿ ಏರಿಕೆಯಾಗಿದೆ. ಡಾಲರ್ ಸೂಚ್ಯಂಕದಲ್ಲಿ ಕುಸಿತ ಕಂಡಿರುವುದು ಕೂಡಾ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ತಿಳಿದಿದೆ.
ಭಾರತದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹ 5,640 ಮತ್ತು 24 ಕ್ಯಾರೆಟ್ ಚಿನ್ನಕ್ಕೆ ₹ 6,153 (ಇದನ್ನು 999 ಚಿನ್ನ ಎಂದೂ ಕರೆಯಲಾಗುತ್ತದೆ).
ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 55,450 ಕ್ಕೆ ಏರಿಕೆ ಆಗಿದೆ. ಮಾರುಕಟ್ಟೆ ಬೆಲೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನ ಮಂಗಳವಾರದಿಂದ ಬುಧವಾರಕ್ಕೆ 50 ರುಪಾಯಿ ಏರಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿಯೂ ಕೂಡಾ 54 ರುಪಾಯಿ ಏರಿಕೆಯಾಗಿದೆ.
ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಕೂಡಾ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,545 ರೂ ಇದ್ದು,10 ಗ್ರಾಂ ಬೆಲೆ 55,450 ರೂಪಾಯಿ ಇದೆ. ಇನ್ನು 22 ಕ್ಯಾರೆಟ್ 1 ಗ್ರಾಂ ಬೆಲೆಯಲ್ಲಿ 50 ರುಪಾಯಿ ಏರಿಕೆ ಕಂಡುಬಂದಿದ್ದು, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿಯೂ ಕಳೆದ 24 ಗಂಟೆಗೆ ಹೋಲಿಸಿದರೆ ಇಂದು 54 ರುಪಾಯಿ ಏರಿಕೆ ಕಂಡುಬಂದಿದೆ.
ಏಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ?:
ಇಸ್ರೇಲ್-ಹಮಾಸ್ ಬಿಕ್ಕಟ್ಟಿನಿಂದಾಗಿ ಚಿನ್ನದ ಬೆಲೆ ಏರಿಕೆ ಆಗುತ್ತಿದೆ. ಮತ್ತು ಡಾಲರ್ ಸೂಚ್ಯಂಕವೂ ಇಳಿಕೆ ಆಗಿರುವ ಕಾರಣ ಹೂಡಿಕೆದಾರರು ಸುರಕ್ಷಿತ ಸಾಧನವಾಗಿ ಚಿನ್ನದತ್ತ ಒಲವು ತೋರಿದ್ದಾರೆ. ಅದೇ ಸಮಯದಲ್ಲಿ, US ಫೆಡ್ ರಿಸರ್ವ್ ಬಡ್ಡಿ ಇಳಿಕೆ ಮಾಡುವ ಸೂಚನೆ ಕೂಡಾ ಇದೆ. ಇದು ಚಿನ್ನದ ಬೆಲೆ ಲ್ಲೂ ಏರಿಕೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಆದರೆ ಈಗ ಹಾವು ಏಣಿ ಆಟ ಆರಂಭವಾಗಿದ್ದು, 1 ವಾರದಿಂದ ನಿರಂತರವಾಗಿ ಏರಿಕೆಯಾಗಿದ್ದ ಬೆಲೆ ಏರಿಕೆಯ ಹಂತದಲ್ಲೇ ಇದೆ.
ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ ಎಂದು ನೀವು ತಿಳಿಯಬಹುದು. ನೀವೂ ಏನಾದರೂ ಮುಂದೆ ಬರುತ್ತಿರುವ ದಸರಾ ಹಬ್ಬಕ್ಕೆ ಬಂಗಾರ ಖರೀದಿ ಮಾಡುವದಕ್ಕೆ ಯೋಚನೆ ಮಾಡುತ್ತಿದ್ದರೆ, ಬಂಗಾರದ ಬೆಲೆಯನ್ನು ಈ ವರದಿಯ ಮೂಲಕ ತಿಳಿದುಕೊಂಡು ಖರೀದಿ ಮಾಡಬಹುದು.
ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ