Gold Rate : ಚಿನ್ನದ ಬೆಲೆ ದಿಢೀರ್‌ ಕುಸಿತ, ಬೆಳ್ಳಿ ಬೆಲೆ ಏರಿಕೆ ; ಇಂದಿನ ಗೋಲ್ಡ್‌ ರೇಟ್ ಎಷ್ಟು ? ಇಲ್ಲಿದೆ ವಿವರ 

Picsart 25 02 16 11 23 19 409 1

WhatsApp Group Telegram Group

ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆ: ದರ ಇಳಿಕೆ ಮತ್ತು ಏರಿಕೆನಾಂಶಗಳ ವಿಶ್ಲೇಷಣೆ

ಭಾರತೀಯ ಸಂಸ್ಕೃತಿಯಲ್ಲಿ (Indian Culture) ಚಿನ್ನಕ್ಕೆ ಇರುವ ಪ್ರಾಮುಖ್ಯತೆ ಅಪ್ರತಿಮ. ಹಬ್ಬ-ಹರಿದಿನಗಳು, ವೈವಾಹಿಕ ಸಮಾರಂಭಗಳು, ಮತ್ತು ಹೂಡಿಕೆಗಾಗಿಯೂ ಚಿನ್ನವನ್ನು ಪ್ರೀತಿಯಿಂದ ಖರೀದಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಕಂಡುಬರುತ್ತಿರುವ ಏರುಪೇರುಗಳು ಗ್ರಾಹಕರಲ್ಲಿ ಮತ್ತು ಚಿನ್ನ ವ್ಯಾಪಾರದಲ್ಲಿ ಹೊಸ ಸದ್ದು ಹುಟ್ಟುಹಾಕಿವೆ. 2025ರಲ್ಲಿ ಚಿನ್ನದ ಬೆಲೆ ಉಲ್ಬಣಗೊಳ್ಳುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಅದೇ ಗತಿಯಲ್ಲೇ ಕುಸಿತವಾಗುತ್ತಿರುವುದು ಹೊಸ ಬೆಳವಣಿಗೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, 2025ರ ಪ್ರಾರಂಭದಿಂದಲೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಾ (Increased) ಬಂದಿದೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಶುದ್ಧ ಚಿನ್ನದ (24 ಕ್ಯಾರೆಟ್) ಬೆಲೆ ₹10,000 ಕ್ಕಿಂತಲೂ ಹೆಚ್ಚು ಹೆಚ್ಚಾಗಿತ್ತು. ಆದರೆ, ಇದೀಗ ಚಿನ್ನದ ಮೌಲ್ಯದಲ್ಲಿ ₹1000 ದಿಢೀರ್‌ ಇಳಿಕೆ ಕಂಡುಬಂದಿದ್ದು, ಚಿನ್ನಾಭರಣ ಮಾರುಕಟ್ಟೆಯಲ್ಲಿ ಹೊಸ ತಿರುವು ತಂದಿದೆ.

ಚಿನ್ನ-ಬೆಳ್ಳಿ ಬೆಲೆ ಇಂದು, 16, ಫೆಬ್ರವರಿ 2025: Gold Price Today

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 13, 2025 ರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದಾವೆ. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಚಿನ್ನದ ಬೆಲೆ ಇದೀಗ ಮತ್ತೆ ಇಳಿಕೆಯಾಗಿದೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,890 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,607ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6456 ಆಗಿದೆ. ಇನ್ನು ಬೆಳ್ಳಿಯ ಬೆಲೆಯೂ ಕೂಡ ಏರಿಕೆಯಾಗಿದ್ದು ಬರೋಬ್ಬರಿ 1200 ರೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ: 1,00,500 ತಲುಪಿದೆ. ಆದರೆ ನಿನ್ನೆಗೆ ಹೋಲಿಸಿದರೆ 100 ರೂಪಾಯಿ ಕಡಿಮೆಯಾಗಿದೆ.

ಚಿನ್ನದ ದರ ಕುಸಿತ: ಬೆಂಗಳೂರಿನಲ್ಲಿ ಚಿನ್ನದ ಬೆಲೆ ಏರಿಕೆ ಯಾವ ರೀತಿಯಿದೆ?:

ಫೆಬ್ರವರಿ 14 -2025 (ಪ್ರೇಮಿಗಳ ದಿನ) ಚಿನ್ನದ ಬೆಲೆಯಲ್ಲಿ ಚಿಕ್ಕ ಮಟ್ಟದ ಏರಿಕೆ ಕಂಡುಬಂದಿತ್ತು. ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹110 ಏರಿಕೆಯಾಗಿ ₹87,160 ರಾಗಿತ್ತು. ಇದೇ ರೀತಿ, 22 ಕ್ಯಾರೆಟ್ ಚಿನ್ನದ ದರ ₹100 ಏರಿಕೆಯಾಗಿ ₹79,900 ತಲುಪಿತ್ತು.

ಆದರೆ, ಫೆಬ್ರವರಿ 15 -2025 ( ಶನಿವಾರ), ಚಿನ್ನದ ಮೌಲ್ಯದಲ್ಲಿ ಹಠಾತ್ ಕುಸಿತ (Decreased) ಕಂಡುಬಂದಿತ್ತು. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ₹1000 ಇಳಿಕೆಯಾಗಿದ್ದು, ಪ್ರತಿ 10 ಗ್ರಾಂಗೆ ₹78,900 ನಷ್ಟಾಗಿತ್ತು . ಇದೇ ರೀತಿ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ₹1090 ಕುಸಿತ ಕಂಡು ಪ್ರತಿ 10 ಗ್ರಾಂಗೆ ₹86,070 ತಲುಪಿದೆ.

ದೆಹಲಿಯಲ್ಲಿ ಚಿನ್ನದ ಕುಸಿತದಿಂದಾಗಿ ಇತರ ನಗರಗಳ ಮೇಲೆ ಪರಿಣಾಮ ಬೀರಿದೆ :

ದೆಹಲಿಯಲ್ಲಿಯೂ (Dehli) ಚಿನ್ನದ ದರ ಕುಸಿದಿದ್ದು, 22 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂಗೆ ₹79,050 ರಾಗಿದೆ, ಅದೇ ರೀತಿ 24 ಕ್ಯಾರೆಟ್ ಚಿನ್ನ ₹86,220 ಕ್ಕೆ ವಹಿವಾಟು ನಡೆಯುತ್ತಿದೆ. ಸ್ಥಳೀಯ ತೆರಿಗೆಗಳು, ಹೋಲ್ಸೇಲ್‌ (Holesale) ಮಾರುಕಟ್ಟೆ ಬೇಡಿಕೆ ಹಾಗೂ ಅಂತಾರಾಷ್ಟ್ರೀಯ ಮೌಲ್ಯದ ಆಧಾರದ ಮೇಲೆ ಪ್ರತಿ ನಗರದಲ್ಲಿ ದರದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಬೆಳ್ಳಿಯ ಬೆಲೆ ₹1 ಲಕ್ಷ ದಾಟಿತು!:

ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಾಗ, ಬೆಳ್ಳಿಯ (Silver) ಮೌಲ್ಯ ಮಾತ್ರ ಏರಿಕೆಯಾಗಿದೆ. ಕಳೆದ 10 ದಿನಗಳಿಂದ ಸ್ಥಿರವಾಗಿದ್ದ ಬೆಳ್ಳಿ ಮೌಲ್ಯ, ಶುಕ್ರವಾರದಂದು (ಫೆ. 14) ₹1000 ಏರಿಕೆ ಕಂಡು, ಪ್ರತಿ ಕೆ.ಜಿ ಬೆಳ್ಳಿ ₹1,00,500 ತಲುಪಿದೆ.  (ಫೆ. 15) ಸಹ ಬೆಳ್ಳಿ ಮೌಲ್ಯವು ಇದೇ ಮಟ್ಟದಲ್ಲಿಯೇ ಮುಂದುವರಿದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಬೆಳವಣಿಗೆ ಹೇಗಿದೆ :

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಮೌಲ್ಯ ಕುಸಿತ ಕಂಡಿದೆ. ಪ್ರಸ್ತುತ, ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್‌ಗೆ $2882 ತಲುಪಿದ್ದು, ಕೇವಲ ಒಂದು ದಿನದಲ್ಲಿ $40 ಹಿಂಜರಿಕೆಯಾಗಿದೆ. ಈ ಮಧ್ಯೆ, ಸ್ಪಾಟ್ ಬೆಳ್ಳಿ $32 ಕ್ಕಿಂತ ಹೆಚ್ಚಿನ ದರದಲ್ಲಿ ವಹಿವಾಟು ಕಾಣುತ್ತಿದೆ.
ಇದಕ್ಕೂ ಹೆಚ್ಚಿನ ಪರಿಣಾಮ ರೂಪಾಯಿ ಮೌಲ್ಯದ ಮೇಲೂ ಕಾಣಿಸಿಕೊಂಡಿದೆ. ಪ್ರಸ್ತುತ 1 ಡಾಲರ್ (Dollar) = ₹86.76 ನಷ್ಟದೆ ವಿನಿಮಯ ದರದಲ್ಲಿ ರೂಪಾಯಿ ವಹಿವಾಟು ನಡೆಯುತ್ತಿದೆ. ರೂಪಾಯಿ ಸ್ವಲ್ಪ ಚೇತರಿಸಿಕೊಂಡಿರುವುದರಿಂದ ಹೂಡಿಕೆದಾರರು ಹೆಚ್ಚಿನ ಲಾಭ ಪಡೆಯಲು ನಿರೀಕ್ಷಿಸುತ್ತಿದ್ದಾರೆ.

ಚಿನ್ನದ ದರ ಏರಿಕೆ ನಂತರ, ಚಿನ್ನಾಭರಣ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಅದರ ಬದಲು ಗ್ರಾಹಕರು 18 ಕ್ಯಾರೆಟ್ ಚಿನ್ನದ ಆಭರಣಗಳತ್ತ ತಿರುಗುತ್ತಿದ್ದಾರೆ. ಅದರಲ್ಲೂ ಗೋಲ್ಡ್‌-ಕೋಟೆಡ್ ಬೆಳ್ಳಿ (Gold coated Silver) ಆಭರಣಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿವೆ. ಇದರ ಪ್ರಮುಖ ಕಾರಣವೆಂದರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಆಕರ್ಷಕ ವಿನ್ಯಾಸಗಳು.
ವ್ಯಾಪಾರಿಗಳ ಪ್ರಕಾರ, ಹೂಡಿಕೆದಾರರು ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ಪ್ರಮುಖ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಬೆಳ್ಳಿಯ ಮೌಲ್ಯ ಏರಿಕೆಯಾಗಿರುವುದರಿಂದ ಕೆಲವು ಹೂಡಿಕೆದಾರರು ಬೆಳ್ಳಿಯತ್ತ ಮುಖಮಾಡುತ್ತಿದ್ದಾರೆ.

ಭವಿಷ್ಯದಲ್ಲಿ ಚಿನ್ನದ ಮೌಲ್ಯ ಏನಾಗಲಿದೆ?:

ಹಲವು ಅರ್ಥಶಾಸ್ತ್ರಜ್ಞರು, ಚಿನ್ನದ ದರ ಹತ್ತಿರದ ಭವಿಷ್ಯದಲ್ಲಿ ಮತ್ತಷ್ಟು ಏರಿಕೆ ಕಾಣಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಜಾಗತಿಕ ಮಾರುಕಟ್ಟೆ ಚಲನೆ, ರೂಪಾಯಿ-ಡಾಲರ್ (Rupees and Dollar) ವಿನಿಮಯ ದರ, ವಿದೇಶಿ ಹೂಡಿಕೆ ನೀತಿ ಹಾಗೂ ಮಧ್ಯಪ್ರಾಚ್ಯದ ರಾಜಕೀಯ ಸ್ಥಿತಿಯು ಚಿನ್ನದ ದರದ ಮೇಲೆ ಪ್ರಮುಖವಾಗಿ ಪರಿಣಾಮ ಬೀರುತ್ತವೆ.
ಇದು ಹೂಡಿಕೆದಾರರು, ಚಿನ್ನಾಭರಣ ಖರೀದಿಯ ಆಸಕ್ತಿದಾರರು ಮತ್ತು ಚಿನ್ನದ ವ್ಯಾಪಾರಿಗಳಿಗೆ (Gold Sellers) ಅತ್ಯಂತ ಮಹತ್ವದ ಸಮಯ. ಮುಂದೆ ಈ ದರದಲ್ಲಿ ಏರುಪೇರುಗಳು ಕಂಡುಬರುವ ಸಾಧ್ಯತೆ ಇದೆ. ಆದ್ದರಿಂದ, ಖರೀದಿಸುವ ಮೊದಲು ಮುನ್ಸೂಚನೆಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳುವುದು ಒಳಿತು.

ಚಿನ್ನದ ದರ ಏರಿಕೆ ಇಳಿಕೆಯ ಮುಖ್ಯಾಂಶಗಳು :

ಚಿನ್ನದ ದರ ಶನಿವಾರ ₹1000 ದಿಢೀರ್ ಕುಸಿತ.
ಬೆಳ್ಳಿಯ ಮೌಲ್ಯ ₹1 ಲಕ್ಷ ದಾಟಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಔನ್ಸ್ $2882ಕ್ಕೆ ಇಳಿಕೆ.
ರೂಪಾಯಿ ವಿನಿಮಯ ದರ ₹86.76, ಡಾಲರ್ ಎದುರು ಸ್ವಲ್ಪ ಚೇತರಿಕೆ.
ಚಿನ್ನದ ಮೌಲ್ಯ ಭವಿಷ್ಯದಲ್ಲಿ ಮತ್ತೆ ಏರವ ಸಾಧ್ಯತೆಯಿದೆ.

ಇಂತಹ ಪರಿಸ್ಥಿತಿಯಲ್ಲಿ ಚಿನ್ನ-ಬೆಳ್ಳಿ ಖರೀದಿಯ ಕುರಿತಾಗಿ ಎಚ್ಚರಿಕೆಯಿಂದ ಮತ್ತು ಯೋಜಿತ ಹೂಡಿಕೆ ಮಾಡುವುದು ಉತ್ತಮ.

ಈ ಮಾಹಿತಿಗಳನ್ನು ಓದಿ:

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!