ಚಿನ್ನದ ಬೆಲೆ ಗಗನಕ್ಕೆ, ಬೆಳ್ಳಿಯ ದರ ಕುಸಿತ, ಒಂದೇ ದಿನ ದಾಖಲೆ ಮುರಿದ ಬೆಲೆ!
ಭಾರತೀಯರು ಚಿನ್ನವನ್ನು ಕೇವಲ ಆಭರಣಕ್ಕೆ ಮಾತ್ರ ಸೀಮಿತಗೊಳಿಸುವುದಿಲ್ಲ, ಅದನ್ನು ಒಂದು ನಂಬಿಕೆಯ ರೂಪದಲ್ಲಿಯೂ ಪರಿಗಣಿಸುತ್ತಾರೆ. ಹಬ್ಬಗಳು, ಮದುವೆ ಸಮಾರಂಭಗಳು, ಹೂಡಿಕೆ(investment) ಮತ್ತು ಆರ್ಥಿಕ ಭದ್ರತೆ(Financial security) ಈ ಎಲ್ಲಾ ವಿಚಾರದಲ್ಲೂ ಚಿನ್ನದ ಪಾತ್ರ ಬಹು ದೊಡ್ಡದು. ಆದ್ದರಿಂದಲೇ, ಚಿನ್ನದ ದರದಲ್ಲಿ ಏರುಪೇರಾಗುವ ಪ್ರತಿ ಬೆಳವಣಿಗೆಯೂ ಜನರ ಗಮನ ಸೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಇದು ಬಂಗಾರದ ಬಂಡವಾಳ ಹೂಡಿಕೆದಾರರು ಮತ್ತು ಆಭರಣ ಪ್ರಿಯರಲ್ಲಿ ಗೊಂದಲಗಳು ಸೃಷ್ಟಿಯಾಗಿವೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಒಂದೇ ದಿನ 1,313 ರೂ ಏರಿಕೆ:
ಭಾರತದಲ್ಲಿ ಚಿನ್ನದ ದರವು ಹೊಸ ದಾಖಲೆ ಮುರಿದಿದ್ದು, ಕೇವಲ ಒಂದು ದಿನದಲ್ಲಿ 1,313 ರೂ. ಹೆಚ್ಚಳ ಕಂಡಿದೆ. ಸೋಮವಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹83,010 ಇದ್ದರೆ, ಮಂಗಳವಾರ ಅದು ₹84,313 ತಲುಪಿದೆ. ಈ ಏರಿಕೆ ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಶ್ರೇಣಿಯ ಮಟ್ಟ ತಲುಪಿದ್ದು, ಮುಂಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಏರಲಿದೆಯೋ ಎಂಬ ಆತಂಕವನ್ನು ಹೂಡಿಕೆದಾರರಲ್ಲಿ ಮೂಡಿಸಿದೆ.
ಒಂದು ತಿಂಗಳಲ್ಲಿ ₹8,161 ಹೆಚ್ಚಳ!:
ಒಂದೇ ದಿನದಲ್ಲೇ ಈ ಮಟ್ಟದ ಏರಿಕೆ ಕಂಡುಬಂದಿರುವ ಈ ಚಿನ್ನದ ಬೆಲೆ, ಕಳೆದ ಒಂದು ತಿಂಗಳಲ್ಲಿಯೂ ₹8,161 ರೂ. ಹೆಚ್ಚಳ ಕಂಡಿದೆ. ಅಂದರೆ, ಜನವರಿ(January) ಕೊನೆಯ ವಾರದಲ್ಲಿ 10 ಗ್ರಾಂ ಚಿನ್ನದ ದರ ಸುಮಾರು ₹76,000 ಇತ್ತು, ಆದರೆ ಇಂದು ಅದು ₹84,313 ರೂ ನಷ್ಟು ಹೆಚ್ಚಿದೆ.
ಬಜೆಟ್ ನಿರೀಕ್ಷೆ ಹುಸಿಯಾಯಿತೇ?:
2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ( financial Minister Nirmala Sitharaman) ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 15% ನಿಂದ 6% ಗೆ ಇಳಿಸುವ ಘೋಷಣೆ ಮಾಡಿದ್ದರು. ಇದರಿಂದಾಗಿ, ಚಿನ್ನದ ಬೆಲೆ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈ ಏರಿಕೆಯ ಶಾಕ್ ತಟ್ಟಿದೆ. ಸುಂಕ ಕಡಿತವಾದರೂ, ಚಿನ್ನದ ಅಂತಾರಾಷ್ಟ್ರೀಯ ಮಾರುಕಟ್ಟೆಯ(International market) ಪರಿಣಾಮವಾಗಿ ಬೆಲೆ ಮತ್ತಷ್ಟು ಏರಿಕೆ ಕಂಡಿದೆ.
ನಿನ್ನಯ ಚಿನ್ನದ ದರ ವಿವರ:
ಫೆಬ್ರವರಿ 5, 2025 ಅಂದರೆ ನಿನ್ನ , ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,905 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,624 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6468 ಆಗಿದೆ. ಇದು ಹಿಂದಿನ ದಿನಕ್ಕೆ ಹೋಲಿಸಿದರೆ ಕ್ರಮವಾಗಿ ₹95 ಮತ್ತು ₹104 ರಷ್ಟು ಏರಿಕೆಯನ್ನು ಸೂಚಿಸುತ್ತದೆ.
ಬೆಳ್ಳಿ(Silver) ದರದಲ್ಲಿ ಇಳಿಕೆ!
ಚಿನ್ನದ ದರ ಭಾರೀ ಏರಿಕೆ ಕಂಡಿರುವಾಗ, ಬೆಳ್ಳಿ ದರದಲ್ಲಿ ಮಾತ್ರ ₹1,000 ಇಳಿಕೆ ಕಂಡುಬಂದಿದೆ. ಪ್ರಸ್ತುತ 1 ಕೆಜಿ ಬೆಳ್ಳಿಯ ದರ ₹98,500 ಆಗಿದ್ದು, ಇದು ಹೂಡಿಕೆದಾರರಿಗೆ ಚಿನ್ನದ ಬೆಲೆ ಏರಿಕೆಯ ನಡುವೆಯೂ ಆರ್ಥಿಕ ಸಮತೋಲನವನ್ನು ಒದಗಿಸಬಹುದಾದ ಏಕೈಕ ಅಂಶವಾಗಿದೆ .
ಚಿನ್ನದ ಬೆಲೆ ಏಕೆ ಏರುತ್ತಿದೆ?:
ಚಿನ್ನದ ಮೌಲ್ಯದಲ್ಲಿ ಏರಿಕೆ ಸಾಮಾನ್ಯವಾಗಿ ಆರ್ಥಿಕ ಅಸ್ಥಿರತೆ, ಹೂಡಿಕೆದಾರರ ಆತಂಕ, ರೂಪಾಯಿ ಮೌಲ್ಯ ಕುಸಿತ, ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ, ಹಾಗೂ ಮಧ್ಯಪ್ರಾಚ್ಯ ಮತ್ತು ರಷ್ಯಾ-ಉಕ್ರೇನ್ ಘರ್ಷಣೆಯಿಂದ(Russia-Ukraine conflict) ಉಂಟಾದ ನಿರ್ಣಾಯಕ ಪರಿಣಾಮಗಳು ಎಂಬ ಪ್ರಮುಖ ಅಂಶಗಳಿಂದ ಸಂಭವಿಸುತ್ತದೆ. ಹೀಗಾಗಿ, ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಚಿನ್ನ ಹೂಡಿಕೆಗಾಗಿ ಇದು ಸೂಕ್ತ ಸಮಯ:
ಚಿನ್ನದ ಹೂಡಿಕೆಗೆ ಇದು ಉತ್ತಮ ಸಮಯವೇ ಎಂಬ ಪ್ರಶ್ನೆ ಬಹುತೇಕ ಹೂಡಿಕೆದಾರರ ಮನಸ್ಸಿನಲ್ಲಿ ಮೂಡಿದೆ. ಹೀಗಿರುವಾಗ, ಚಿನ್ನದ ಬೆಲೆ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯೊಂದಿಗೆ ಜನರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮುಂದುವರಿಸುತ್ತಿದ್ದಾರೆ. ಆಭರಣ ಖರೀದಿ ಮಾಡುವವರಿಗೆ ಈ ಏರಿಕೆ ಆಘಾತ ನೀಡಿದರೂ, ಹೂಡಿಕೆ ದೃಷ್ಟಿಯಿಂದ ಚಿನ್ನದ ಮೌಲ್ಯ ಇನ್ನಷ್ಟು ಏರಬಹುದಾದ ಕಾರಣ, ಚಿನ್ನ ಹೂಡಿಕೆ ಮಾಡಲು ಇದೊಂದು ಅವಕಾಶವೂ ಹೌದು.
ಗಮನಿಸಿ (Notice) : ಇಂದಿನ ಚಿನ್ನ ಬೆಲೆ
ಚಿನ್ನದ ಬೆಲೆಯಲ್ಲಿ ಏರಿಕೆ: ಫೆಬ್ರವರಿ 6, 2025 ರಂದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,906 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,625 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹6469 ಆಗಿದೆ.
ಚಿನ್ನದ ಬೆಲೆಗಳು ನಿರಂತರ ಏರಿಕೆಯನ್ನು ಅನುಭವಿಸುತ್ತಿದ್ದು, ಇದರಿಂದಾಗಿ ಮಧ್ಯಮವರ್ಗದ ಗ್ರಾಹಕರಿಗೆ ಹೂಡಿಕೆಯ ಸಾಧ್ಯತೆ ಕಡಿಮೆಯಾಗಬಹುದು. ಚಿನ್ನದ ಬೆಲೆಗಳ ಏರಿಕೆ ಮತ್ತು ಬೆಳ್ಳಿಯ ಬೆಲೆ ಇಳಿಕೆಯ ಮಧ್ಯೆ, ಹೂಡಿಕೆದಾರರು (Investor’s) ಸೂಕ್ತ ಸಮಯ ಮತ್ತು ಯೋಜನೆ ಮಾಡಿಕೊಂಡು ಹೂಡಿಕೆ ಮಾಡುವುದು ಒಳಿತು. ಚಿನ್ನ ಖರೀದಿಸಲು ಬಯಸುವವರು ಏಪ್ರಿಲ್‌ನಿಂದ ಬೆಲೆ ಇಳಿಯುವ ನಿರೀಕ್ಷೆ ಇದ್ದು ಕಾಯಬಹುದು. ಬೆಳ್ಳಿ ಹೂಡಿಕೆ ಬಯಸುವವರಿಗೆ ಇಂದೇ ಉತ್ತಮ ಅವಕಾಶವಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.