ಚಿನ್ನದ ಬೆಲೆ ಏರಿಕೆ ಹಿನ್ನೆಲೆ: RBI ಯಾಕೆ ಗೋಲ್ಡ್ ಸಂಗ್ರಹಿಸುತ್ತಿದೆ? ಸೀತಾರಾಮನ್ ನೀಡಿದ ಸ್ಪಷ್ಟನೆ
ಇತ್ತೀಚಿನ ದಿನಗಳಲ್ಲಿ ಚಿನ್ನದ ಮೌಲ್ಯ (Gold rate) ಗಗನಕ್ಕೇರಿದ್ದು, ಹೂಡಿಕೆದಾರರು ಮತ್ತು ಆರ್ಥಿಕ ತಜ್ಞರಲ್ಲಿ ಕುತೂಹಲ ಮೂಡಿಸಿದೆ. 2025ರ ಪ್ರಾರಂಭದಿಂದಲೇ ಚಿನ್ನದ ಬೆಲೆಯಲ್ಲಿ ಶೇ. 10ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಿದ್ದು, ಇದನ್ನು ಜಾಗತಿಕ ಆರ್ಥಿಕ, ರಾಜಕೀಯ ಬಿಕ್ಕಟ್ಟಿನ ಪರಿಣಾಮ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ ಹೊಸ ಆಮದು ಸುಂಕಗಳು, ಗ್ಲೋಬಲ್ ಟ್ರೇಡ್ ವಾರ್ನ ಭೀತಿ ಹೆಚ್ಚಿಸಿವೆ. ಹೀಗಾಗಿ, ಚಿನ್ನದ ಬೇಡಿಕೆ ಹಾಗೂ ಅದರ ಮೌಲ್ಯ ದಿನೇ ದಿನೇ ಏರಿಕೆಯಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇಂತಹ ಸ್ಥಿತಿಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಕೂಡ ಚಿನ್ನದ ಖರೀದಿಯಲ್ಲಿ ತೊಡಗಿಸಿಕೊಂಡಿದ್ದು, ಇದರಿಂದ ಹಲವು ಆರ್ಥಿಕ ಅಂಶಗಳು ಬೆಳಕಿಗೆ ಬರುತ್ತಿವೆ. ಚಿನ್ನದ ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಸಂಸದ ಮನೀಶ್ ತಿವಾರಿ(MP Manish Tiwari) ಪ್ರಶ್ನೆ ಮಾಡಿದಕ್ಕೆ , ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman)ಸ್ಪಷ್ಟನೆ ನೀಡಿದ್ದಾರೆ. RBI ಯಾಕೆ ಚಿನ್ನವನ್ನು ಸಂಗ್ರಹಿಸುತ್ತಿದೆ? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ & ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ-ಬೆಳ್ಳಿ ಬೆಲೆ ಇಂದು, 12, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಫೆಬ್ರವರಿ 12, 2025 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪವೂ ಬದಲಾವಣೆ ಕಂಡುಬಂದಿಲ್ಲ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 011 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,739ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6555 ಆಗಿದೆ. ಬೆಳ್ಳಿ ಬೆಲೆ 1 ಕೆಜಿ: 99,400.
ಟ್ರಂಪ್ ನೀತಿಗಳು ಮತ್ತು ಚಿನ್ನದ ಮೌಲ್ಯದ ಏರಿಕೆ:
ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ಹೊಸ ಆರ್ಥಿಕ ತೀರ್ಮಾನಗಳ (Economic Conclusion) ಪರಿಣಾಮ ಎಂಬುದು ಸ್ಪಷ್ಟವಾಗಿದೆ. ಅಮೆರಿಕವು ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ನಿರ್ಧಾರ ಪ್ರಕಟಿಸಿದೆ. ಇದು ಜಾಗತಿಕ ವ್ಯಾಪಾರ ಬಿಕ್ಕಟ್ಟನ್ನು ಉಲ್ಬಣಗೊಳಿಸಬಹುದು ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದೆ.
ಆರ್ಥಿಕತೆಯಲ್ಲಿ ಹೂಡಿಕೆದಾರರು ಸದಾ ಸುರಕ್ಷಿತ ಪರ್ಯಾಯಗಳನ್ನು ಹುಡುಕುತ್ತಾರೆ. ಚಿನ್ನವು ಇತರ ಆಸ್ತಿ ವರ್ಗಗಳಿಗಿಂತ ಹೆಚ್ಚು ಭದ್ರತೆಯನ್ನು ಒದಗಿಸುವ ಹೂಡಿಕೆ ಆಯ್ಕೆಯಾಗಿದ್ದು, ಅಂತಾರಾಷ್ಟ್ರೀಯ (International) ಬಿಕ್ಕಟ್ಟಿನ ಸಂದರ್ಭದಲ್ಲಿ ಇದನ್ನು ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಈ ಕಾರಣದಿಂದಾಗಿ, ಚಿನ್ನದ ಬೇಡಿಕೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ,ಇದರ ಪರಿಣಾಮವಾಗಿ ಚಿನ್ನದ ಬೆಲೆ ನಿರಂತರ ಏರಿಕೆಯಾಗುತ್ತಿದೆ.
RBI ಯಾಕೆ ಚಿನ್ನ ಖರೀದಿಸುತ್ತಿದೆ?:
ಭಾರತೀಯ ರಿಸರ್ವ್ ಬ್ಯಾಂಕ್ (RBI) ಸತತವಾಗಿ ಚಿನ್ನ ಖರೀದಿಸುತ್ತಿರುವುದರ ಹಿಂದೆ ಹಲವು ಆರ್ಥಿಕ ಕಾರಣಗಳಿವೆ. ಲೋಕಸಭೆಯಲ್ಲಿ (Loksabha)ಈ ಬಗ್ಗೆ ಪ್ರಶ್ನೆ ಬಂದಾಗ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಸ್ಪಷ್ಟನೆ ನೀಡಿದರು.
RBI ಭದ್ರ ಮೀಸಲು ಬಂಡವಾಳವನ್ನು (Reserves in Balance Sheet) ಕಾಯ್ದುಕೊಳ್ಳಲು ಚಿನ್ನವನ್ನು ಸಂಗ್ರಹಿಸುತ್ತಿದೆ. ಚಿನ್ನವು ತನ್ನ ಮೌಲ್ಯವನ್ನು ನಿರಂತರವಾಗಿ ಕಾಪಾಡಿಕೊಳ್ಳುವ ಆಸ್ತಿ ವಿಭಾಗವಾಗಿರುವುದರಿಂದ, ಭವಿಷ್ಯದ ಆರ್ಥಿಕ ಏರುಪೇರುಗಳಿಗೆ ತಯಾರಾಗಲು ಇದು ಸಹಕಾರಿಯಾಗಿರುತ್ತದೆ.
ಇನ್ನು ಅದೇ ರೀತಿ, ಭಾರತವು ಮುಖ್ಯವಾಗಿ ವಿದೇಶಿ ವಿನಿಮಯ ಮೀಸಲುಗಳನ್ನು ಡಾಲರ್ (Dollar) ನಲ್ಲಿ ಇಡುತ್ತದೆ. ಆದರೆ, ಕರೆನ್ಸಿಗಳ ಮೌಲ್ಯದಲ್ಲಿ ಆಗುವ ಏರುಪೇರುಗಳಿಂದ ಬಚಾವಾಗಲು ಚಿನ್ನವನ್ನು ಸಂಗ್ರಹಿಸಲಾಗುತ್ತಿದೆ. RBI ಈ ತಂತ್ರವನ್ನು ಅಳವಡಿಸಿಕೊಂಡಿದ್ದು, ಇದು ದೇಶದ ವಿದೇಶಿ ವಿನಿಮಯ ನೀತಿಯ ಮಹತ್ವದ ಭಾಗವಾಗಿದೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನಲ್ಲಿ ಡಾಲರ್ ಅಥವಾ ಇತರ ಕರೆನ್ಸಿಗಳ (Currency) ಮೌಲ್ಯ ಕುಸಿಯಬಹುದು. ಆದರೆ ಚಿನ್ನವು ಸಾಮಾನ್ಯವಾಗಿ ಸುದೀರ್ಘಾವಧಿಯಲ್ಲಿ ಅದರ ಮೌಲ್ಯವನ್ನು ಉಳಿಸಿಕೊಂಡಿರುತ್ತದೆ. ಈ ಕಾರಣದಿಂದ, RBI ತನ್ನ ಮೀಸಲುಗಳನ್ನು ಚಿನ್ನದಲ್ಲಿಯೂ ಉಳಿಸಿಕೊಳ್ಳಲು ತೀರ್ಮಾನಿಸಿದೆ.
RBI ವರ್ಷಕ್ಕೊಮ್ಮೆ ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿದ್ದು, ಇದು ದೇಶದ ಆರ್ಥಿಕ ಪ್ರಬಲತೆಗೆ ಒಂದು ಸೂಚನೆಯಾಗಿದೆ. ದೇಶದ ಆರ್ಥಿಕತೆಯಲ್ಲಿ ಸ್ಥಿರತೆಯನ್ನು ಕಾಯ್ದಿರೀಸಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಭವಿಷ್ಯದಲ್ಲಿ ಚಿನ್ನದ ಮೌಲ್ಯ ಏನಾಗಬಹುದು?:
ಭಾರತದಲ್ಲಿ ಚಿನ್ನದ ಬೆಲೆಯ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ. ಹೂಡಿಕೆದಾರರು, ಬ್ಯಾಂಕುಗಳು ಮತ್ತು ಕೇಂದ್ರ ಬ್ಯಾಂಕ್‌ಗಳ (Central Banks) ಹೂಡಿಕೆ ನೀತಿಯು ಚಿನ್ನದ ಬೆಲೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ಮುಂದುವರಿದರೆ, ಚಿನ್ನದ ಬೇಡಿಕೆ ಇನ್ನು ಹೆಚ್ಚುವ ನಿರೀಕ್ಷೆ ಇದೆ.
RBIನ ಚಿನ್ನದ ಖರೀದಿಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳುಲು ಆಗುವುದಿಲ್ಲ. ಇದು ಭಾರತದ ವಿದೇಶಿ ವಿನಿಮಯ ನೀತಿಯ ಬದಲಾವಣೆಯ ಸಂಕೇತವಾಗಬಹುದು, ಜಾಗತಿಕ ಆರ್ಥಿಕ ಅಸ್ಥಿರತೆಯಿಂದ ರಕ್ಷಣೆ ಪಡೆಯುವ ಪ್ರಯತ್ನವಾಗಬಹುದು ಅಥವಾ ಭವಿಷ್ಯದ (Future) ಹಣಕಾಸು ತಂತ್ರವನ್ನು ಬಲಪಡಿಸುವ ಯತ್ನವಾಗಬಹುದು. ಚಿನ್ನದ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ, ಭಾರತದ ಹಣಕಾಸು ನೀತಿಗಳಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸಲಿದೆ.
ಮುಂದಿನ ದಿನಗಳಲ್ಲಿ ಚಿನ್ನದ ಮೌಲ್ಯ ಹೇಗೆ ರೂಪುಗೊಳ್ಳುತ್ತದೆಯೆಂಬುದನ್ನು ಗಮನಿಸಬೇಕಾಗಿದ್ದು, RBIನ ಈ ತೀರ್ಮಾನ ದೇಶದ ಆರ್ಥಿಕ ಭದ್ರತೆಗೆ ಎಷ್ಟು ಸಹಾಯಕವಾಗುತ್ತದೆಯೆಂಬುದನ್ನು ಕಾಲವೇ ತೀರ್ಮಾನಿಸಬೇಕು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.