Gold Rate Today : ಚಿನ್ನದ ಬೆಲೆ ಬಂಪರ್ ಇಳಿಕೆ.! ಇಂದಿನ ಬೆಲೆ ಎಷ್ಟು..? ಇಲ್ಲಿದೆ ವಿವರ 

Picsart 25 02 13 07 37 50 798

WhatsApp Group Telegram Group

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆ: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ

ಭಾರತದ ಚಿನಿವಾರ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ದರಗಳಲ್ಲಿ ಮಹತ್ವದ ಬದಲಾವಣೆ (Update) ಕಂಡು ಬಂದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಕುಸಿತ ಕಂಡರೆ, ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗಿದೆ. ಚಿನ್ನದ ದರ ಎಷ್ಟಕ್ಕೆ ಕುಸಿತ ಕಂಡಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ ಬೆಲೆ ಇಂದು, 13, ಫೆಬ್ರವರಿ 2025: Gold Price Today

ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 12, 2025 ರಂದು  ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದವು. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.


ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,939 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,666ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6496 ಆಗಿದೆ. ಬೆಳ್ಳಿ ಬೆಲೆ 1 ಕೆಜಿ: 99,400.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಹಳದಿ ಲೋಹದ ದರ ಕುಸಿದಿರುವುದಾಗಿ ಅಖಿಲ ಭಾರತ ಸರಾಫ್ ಅಸೋಸಿಯೇಷನ್ (Indian Sarafa Association) ಮಾಹಿತಿ ನೀಡಿದೆ. ಮತ್ತೊಂದೆಡೆ, ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದ್ದು, ವಹಿವಾಟು ಮಾಡುತ್ತಿರುವ ವಲಯಗಳಿಗೆ ಇದು ಗಮನಾರ್ಹ ಬೆಳವಣಿಗೆಯಾಗಿದೆ.

ಚಿನ್ನದ ದರ ಇಳಿಕೆ:

ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳ ಚಿನ್ನ ಮಾರುಕಟ್ಟೆಯಲ್ಲಿ ಬುಧವಾರ (ಫೆಬ್ರವರಿ 12) ಹಳದಿ ಲೋಹದ (yellow Gold) ಬೆಲೆ ಕುಸಿತ ಕಂಡಿತು. ದೆಹಲಿಯ ಚಿನಿವಾರ ಪೇಟೆಯಲ್ಲಿ 10 ಗ್ರಾಂ (99.9% ಶುದ್ಧತೆ) ಚಿನ್ನದ ದರವು ₹340 ಕಡಿಮೆಯಾಗಿ ₹87,960 ಆಗಿದ್ದು, ಆಭರಣ ಚಿನ್ನದ (99.5% ಶುದ್ಧತೆ) ದರವು ಇದೇ ಪ್ರಮಾಣದಲ್ಲಿ ಇಳಿಯುತ್ತಾ ₹340 ಕಡಿಮೆಯಾಗಿ ₹87,560 ಕ್ಕೆ ತಲುಪಿದೆ.

ಬೆಳ್ಳಿ ದರ ಏರಿಕೆ:

ಈ ನಡುವೆಯೇ ಬೆಳ್ಳಿಯ ಮೌಲ್ಯದಲ್ಲಿ ಲಘು ಏರಿಕೆ ಕಂಡು ಬಂದಿದ್ದು, 1 ಕೆ.ಜಿ. ಬೆಳ್ಳಿ ಬೆಲೆಯು ₹600 ಹೆಚ್ಚಳಗೊಂಡು ₹97,200 ತಲುಪಿದೆ. ಹೂಡಿಕೆದಾರರು ಹಾಗೂ ಕೈಗಾರಿಕಾ ಬಳಕೆದಾರರ ಬೇಡಿಕೆ ಹೆಚ್ಚಿದ ಪರಿಣಾಮ ಬೆಳ್ಳಿಯ ದರ ಏರಿಕೆಯಾಗಿದೆ.

ಚಿನ್ನದ ಮೌಲ್ಯ ಕುಸಿತಕ್ಕೆ ಕಾರಣಗಳೇನು (Causes) ?

ಅಖಿಲ ಭಾರತ ಸರಾಫ್ ಅಸೋಸಿಯೇಷನ್ (All India Sarafa Association) ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿದಿರುವುದು ದೇಶೀಯ ಮಾರುಕಟ್ಟೆಯಲ್ಲಿಯೂ ಪರಿಣಾಮ ಬೀರಿದೆ. ಅಮೇರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್ (American Central Bank Federal Reserve) ಬಡ್ಡಿದರದ ನೀತಿ, ಡಾಲರ್ ಮೌಲ್ಯದ ಸ್ಥಿರತೆ, ಚೀನಾದ ಆರ್ಥಿಕ ಬೆಳವಣಿಗೆ, ಕಚ್ಚಾ ತೈಲ ಬೆಲೆಯ ಅಸ್ಥಿರತೆ ಮುಂತಾದ ಅಂಶಗಳು ಚಿನ್ನದ ದರದ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

ಈ ಮಾಹಿತಿಗಳನ್ನು ಓದಿ

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!