ಇಂದು ಮತ್ತೆ ಏರಿಕೆ ಕಂಡ ಚಿನ್ನದ ಮಾರುಕಟ್ಟೆ – ಹೂಡಿಕೆದಾರರಿಗೆ ಒಳ್ಳೆಯ ಅವಕಾಶ!
ಚಿನ್ನದ ಬೆಲೆ (Gold rate) ಸದಾ ಬದಲಾಗುತ್ತಲೇ ಇರುತ್ತದೆ. ಹೀಗಾಗಿ ಚಿನ್ನ ಖರೀದಿ ಮಾಡಲು ಯೋಜನೆ ಇಟ್ಟಿರುವವರು ನಿರ್ಧಾರ ಮಾಡುವ ಮುನ್ನ ಇಂದಿನ ದರವನ್ನು ತಿಳಿದುಕೊಳ್ಳುವುದು ಅವಶ್ಯಕ. ಚಿನ್ನವು ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ (Economic and Culture) ಹಿನ್ನೆಲೆಯಲ್ಲೇ ಪ್ರಮುಖ ಸ್ಥಾನವನ್ನು ಹೊಂದಿದ್ದು, ಮದುವೆ, ಹಬ್ಬ-ಹರಿದಿನ ಮತ್ತು ಹೂಡಿಕೆ ಉದ್ದೇಶಕ್ಕಾಗಿ ಜನರು ಚಿನ್ನ ಖರೀದಿಸುವುದು ಸಾಮಾನ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಭಾರತೀಯರು ಚಿನ್ನವನ್ನು ಸಂಪತ್ತು, ಸುರಕ್ಷತೆ ಮತ್ತು ಸಂಪ್ರದಾಯದ ಸಂಕೇತವೆಂದು ಪರಿಗಣಿಸುತ್ತಾರೆ. ಹಬ್ಬಗಳು, ಮದುವೆಗಳು, ಹೂಡಿಕೆ ಮತ್ತು ಭವಿಷ್ಯದ ಭದ್ರತೆಯ (Future safety) ದೃಷ್ಟಿಯಿಂದ ಚಿನ್ನದ ಖರೀದಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಚಿನ್ನದ ಮಾರುಕಟ್ಟೆಯಲ್ಲಿ ದಿನನಿತ್ಯ ಬದಲಾವಣೆಗಳಾಗುತ್ತಿದ್ದು, ಅದರ ಬೆಲೆ ಏರಿಕೆ ಅಥವಾ ಇಳಿಕೆಯಿಂದ ಗ್ರಾಹಕರು ಗೊಂದಲಕ್ಕೂಳಗಾಗಿದ್ದಾರೆ. ಇನ್ನು ಗ್ರಾಹಾಕರು ಸರಿಯಾದ ಸಮಯದಲ್ಲಿ ಚಿನ್ನ ಖರೀದಿ ಮಾಡಿದರೆ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಯಾವ ರೀತಿಯಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಚಿನ್ನ-ಬೆಳ್ಳಿ ಬೆಲೆ ಇಂದು, 15, ಫೆಬ್ರವರಿ 2025: Gold Price Today
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇದೆ. ಆದರೆ ಫೆಬ್ರವರಿ 13, 2025 ರಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬಂದಿದ್ದವು. ಅಂದರೆ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ನಿನ್ನ ಮೊನ್ನೆಯಲ್ಲಾ ಇಳಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಇರಿಕೆಯಾಗಿದೆ. ಅದೇ ರೀತಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,991 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,717ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6539 ಆಗಿದೆ. ಇನ್ನು ಬೆಳ್ಳಿಯ ಬೆಲೆಯೂ ಕೂಡ ಏರಿಕೆಯಾಗಿದ್ದು ಬರೋಬ್ಬರಿ 1200 ರೂ ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ: 99,400.1,00,600.
ಫೆಬ್ರವರಿ 14, 2025: ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ದೇಶದ ಪ್ರಮುಖ ನಗರಗಳಲ್ಲಿ ಫೆಬ್ರವರಿ 14, 2025 ರಂದು ಚಿನ್ನದ ಬೆಲೆ ಸ್ವಲ್ಪ ಏರಿಕೆಯಾಗಿದೆ.
ವಿವಿಧ ನಗರಗಳಲ್ಲಿನ 22ಕ್ಯಾರೆಟ್ ಚಿನ್ನದ ಬೆಲೆ :
ಬೆಂಗಳೂರು – ₹79,810
ಚೆನ್ನೈ – ₹79,810
ಮುಂಬೈ – ₹79,810
ದೆಹಲಿ – ₹79,960
ಹೈದರಾಬಾದ್ – ₹79,810
ವಿಜಯವಾಡ – ₹79,810
ಕೋಲ್ಕತಾ – ₹79,810
ಕೇರಳ: – ₹79,810
ವಿವಿಧ ನಗರಗಳಲ್ಲಿನ 24K ಕ್ಯಾರೆಟ್ ಚಿನ್ನದ ಬೆಲೆ :
ಬೆಂಗಳೂರು – ₹87,060
ಚೆನ್ನೈ – ₹87,060
ಮುಂಬೈ – ₹87,060
ದೆಹಲಿ – ₹87,210
ಹೈದರಾಬಾದ್ – ₹87,060
ವಿಜಯವಾಡ – ₹87,060
ಕೋಲ್ಕತಾ – ₹87,060
ಕೇರಳ – ₹87,060
ಚಿನ್ನದ ಮಾರುಕಟ್ಟೆ ಎಂದೂ ಸ್ಥಿರವಿಲ್ಲ. ಕೆಲವೊಮ್ಮೆ ಬೆಲೆ ಏರುತ್ತದೆ, ಕೆಲವೊಮ್ಮೆ ಇಳಿಯುತ್ತದೆ. ಹಬ್ಬಗಳ ಸಮಯದಲ್ಲಿ ಹಾಗೂ ಬೇಡಿಕೆ ಹೆಚ್ಚಾದಾಗ ದರ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ಅಸ್ಥಿರತೆ, ಬಂಡವಾಳ ಹೂಡಿಕೆದಾರರ ತೀರ್ಮಾನಗಳು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯ (International Market) ಬೆಳವಣಿಗೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರುತ್ತವೆ.
ಹಿರಿಯರು ಸದಾ “ಕೈಯಲ್ಲಿ ನಾಲ್ಕು ಕಾಸಿದ್ದರೆ ಚಿನ್ನ ಮಾಡಿಸಿಕೋ” ಎಂದು ಸಲಹೆ ನೀಡುತ್ತಾರೆ. ಇದು ಸುರಕ್ಷಿತ ಹೂಡಿಕೆಯಾಗಿರುವುದರಿಂದ ಚಿನ್ನವನ್ನು ದೀರ್ಘಕಾಲದವರೆಗೆ ಇಟ್ಟು, ಉತ್ತಮ ಬಂಡವಾಳ ಹೂಡಿಕೆ (Investment) ಆಯ್ಕೆಯಾಗಿ ಪರಿಗಣಿಸಬಹುದು. ಆದ್ದರಿಂದ, ಚಿನ್ನ ಖರೀದಿ ಮಾಡಲು ಯೋಚಿಸುತ್ತಿದ್ದರೆ, ಮಾರುಕಟ್ಟೆ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ, ತಕ್ಕ ಸಮಯದಲ್ಲಿ ನಿರ್ಧಾರ ಮಾಡುವುದು ಒಳ್ಳೆಯದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.