ಚಿನ್ನದ ದರ ಕುಸಿತ: ಬೆಳ್ಳಿ ಬೆಲೆಯಲ್ಲಿ ಏರಿಕೆ—ಮಾರುಕಟ್ಟೆಯ ಇಂದಿನ ಸ್ಥಿತಿಗತಿ ಏನು?:
ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಪ್ರತಿದಿನವೂ ಹೊಸ ಏರಿಳಿತಗಳು ಕಂಡುಬರುತ್ತವೆ. ಆರ್ಥಿಕ ಸ್ಥಿತಿಗತಿ, ಅಂತಾರಾಷ್ಟ್ರೀಯ ಮಾರುಕಟ್ಟೆಯ (International market) ತೊಡಕುಗಳು, ರೂಪಾಯಿ-ಡಾಲರ್ ವಿನಿಮಯ ದರ, ಹಾಗೂ ಬೇಡಿಕೆ-ಪೂರೈಕೆ ಸಂಭಂದಿತ ಅಂಶಗಳು ಬೆಲೆಗಳಲ್ಲಿ ಪ್ರಭಾವ ಬೀರುತ್ತವೆ. ಈ ಹಿನ್ನಲೆಯಲ್ಲಿ, ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ದರ ಕುಸಿದಿದ್ದರೆ, ಬೆಳ್ಳಿಯ ದರ ಏರಿಕೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and Silver) ಬೆಲೆ ಇಂದು, ಮಾರ್ಚ್ 8, 2025: Gold Price Today
ಕಳೆದ ಕೆಲವು ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ (Increased) ಇತ್ತು, ಆದರೆ ಈ ತಿಂಗಳ ಮೊದಲ ದಿನದಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡುಬರುತ್ತಿದ್ದವು, ಇನ್ನು ಈ ಬದಲಾವಣೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ (Gold and silver rate) ಸ್ವಲ್ಪ ಇಳಿಕೆಯಾಗಿರುವುದನ್ನು ನಾವು ಗಮನಿಸಿರುತ್ತೇವೆ. ಆದರೆ ಸೋಮವಾರದಿಂದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿರುವುದು ನಮಗೆ ತಿಳಿದಿದೆ. ಆದರೆ ಎರಡು ದಿನಗಳಿಂದ ಮತ್ತೆ ಚಿನ್ನ ಇಳಿಕೆಯಾಗಿದ್ದು, ಗ್ರಾಹಕರು ಸ್ವಲ್ಪ ಮಟ್ಟಿನ ಖುಷಿಯನ್ನು ಕಾಣುತ್ತಿದ್ದಾರೆ. ಹಾಗಿದ್ದರೆ, ಇಂದಿನ ಚಿನ್ನದ ಬೆಲೆಯಲ್ಲಿ ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,989 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,715 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,537 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99, 200 ತಲುಪಿದೆ. ಒಟ್ಟಾರೆಯಾಗಿ ನಿನ್ನೆಗೆ ಹೋಲಿಸಿದರೆಬೆಳ್ಳಿ ಬೆಲೆಯಲ್ಲಿ 100 ರೂನಷ್ಟು ಏರಿಕೆಯನ್ನು ಕಾಣಬಹುದು.
ಚಿನ್ನದ ದರದಲ್ಲಿ ಇಳಿಕೆ:
ಚಿನ್ನದ ಶೇ 99.9 ಪರಿಶುದ್ಧತೆಯ 10 ಗ್ರಾಂ ದರ ₹200 ಕಡಿಮೆಯಾಗಿದ್ದು, ₹88,900ಕ್ಕೆ ತಲುಪಿದೆ. ಆಭರಣ ಚಿನ್ನ (ಶೇ 99.5 ಪರಿಶುದ್ಧತೆ) ದರವೂ ಇದೇ ಪ್ರಮಾಣದಲ್ಲಿ ಇಳಿಕೆಯಾಗಿ ₹88,500 ಕ್ಕಿಳಿದಿದೆ. ಮಾರುಕಟ್ಟೆ ತಜ್ಞರ ಪ್ರಕಾರ (Market specialist), ಸ್ಥಳೀಯ ಚಿನ್ನಾಭರಣ ತಯಾರಕರು ಮತ್ತು ಚಿಲ್ಲರೆ ಖರೀದಿದಾರರಿಂದ ಬೇಡಿಕೆ ಕಡಿಮೆಯಾಗಿರುವುದು ಈ ಇಳಿಕೆಯ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಬೆಳ್ಳಿಯ ಬೆಲೆ (Silver rate) ಏರಿಕೆ :
ಮತ್ತೊಂದೆಡೆ, ಬೆಳ್ಳಿ ಮೌಲ್ಯವು ಕೆ.ಜಿಗೆ ₹500 ಏರಿಕೆಯಾಗಿ ₹99,500 ಆಗಿದೆ. ಚಿನ್ನವನ್ನು ಹೋಲಿಕೆ ಮಾಡಿದರೆ, ಕೈಗೆಟುಕುವ ಹೂಡಿಕೆ ಆಯ್ಕೆ ಎಂದು ಪರಿಗಣಿಸಲಾಗುವ ಬೆಳ್ಳಿ, ಉದ್ಯಮ ಹಾಗೂ ನಾಣ್ಯ ವಲಯದಲ್ಲಿ ವ್ಯಾಪಕ ಬಳಕೆಯಲ್ಲಿರುವ ಕಾರಣಕ್ಕೆ ನಿರಂತರ ಬೇಡಿಕೆಯಿರುತ್ತದೆ.
ಚಿನ್ನದ ಮತ್ತು ಬೆಳ್ಳಿಯ ದರದಲ್ಲಿ (Gold and Silver) ಬರುವ ಈ ಬದಲಾವಣೆಗಳು ಹೂಡಿಕೆದಾರರು, ಆಭರಣ ತಯಾರಕರು ಹಾಗೂ ಗ್ರಾಹಕರ ಮೇಲೆ ಪರಿಣಾಮ ಬೀರುತ್ತವೆ. ಚಿನ್ನದ ಬೆಲೆಯ ಇಳಿಕೆಯಿಂದ ಗ್ರಾಹಕರು ಹೆಚ್ಚಿನ ಖರೀದಿಗೆ ಮುಂದಾಗಬಹುದು. ಆದರೆ ಬೆಳ್ಳಿಯ ದರ ಏರಿಕೆಯಿಂದ ಅದರ ಹೂಡಿಕೆಯ ಮೇಲೆ ಪ್ರಭಾವ ಬೀಳಬಹುದು.
ಇಂದಿನ ಮಾರುಕಟ್ಟೆ ಸ್ಥಿತಿಯನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರುಪೇರಿ ಸಂಭವಿಸುವ ಸಾಧ್ಯತೆಗಳಿದ್ದು, ಮಾರುಕಟ್ಟೆ ಸ್ಥಿತಿಯನ್ನು (Market situation) ಸಂಪೂರ್ಣವಾಗಿ ವಿಶ್ಲೇಷಿಸಿ ಬುದ್ಧಿವಂತಿಕೆಯಿಂದ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.