ಏಪ್ರಿಲ್ 2, 2025: ಚಿನ್ನ-ಬೆಳ್ಳಿ ದರದಲ್ಲಿ ಹೊಸ ಏರಿಕೆ! ಇಂದು ಬೆಲೆ ಎಷ್ಟು?
ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆಯ (Gold rate) ಏರಿಕೆ ನಿರಂತರ ಚರ್ಚೆಯ ವಿಷಯವಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನೇದಿನೇ ಹೊಸ ಉನ್ನತ ಮಟ್ಟ ತಲುಪುತ್ತಿದೆ, ಇದರಿಂದಾಗಿ ಸಾಮಾನ್ಯ ಜನತೆ ಹಾಗೂ ಹೂಡಿಕೆದಾರರು (Investmenters) ಚಿನ್ನ ಖರೀದಿಯಲ್ಲಿ ಮತ್ತಷ್ಟು ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರಂತೂ ಚಿನ್ನ ದುಬಾರಿಯಾಗುತ್ತಿರುವುದರಿಂದ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 2, 2025: Gold Price Today
ಭಾರತದಲ್ಲಿ ಚಿನ್ನವು ಆಭರಣ ಹಾಗೂ ಹೂಡಿಕೆಯ ಪ್ರಮುಖ ಆಯ್ಕೆಯಾಗಿದ್ದು, ಅದರ ಬೆಲೆಯಲ್ಲಿ ಇತ್ತೀಚೆಗೆ ನಿರಂತರ ಏರಿಕೆ ಕಂಡುಬಂದಿದೆ. ಏಪ್ರಿಲ್ ತಿಂಗಳ (April month) ಮೊದಲ ದಿನ ಚಿನ್ನದ ದರ ಇಳಿಯಬಹುದೆಂದು ನಿರೀಕ್ಷಿಸಿದ್ದ ಜನರಿಗೆ ನಿನ್ನೆ ಚಿನ್ನದ ಬೆಲೆಯಲ್ಲಿ ಆದ ಏರಿಕೆ ಮತ್ತಷ್ಟು ಆತಂಕವನ್ನುಂಟುಮಾಡಿದೆ. ಹಾಗಿದ್ದರೆ, ಏಪ್ರಿಲ್ 2, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 511 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9.285 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 6,964 ಆಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ 85 ರೂನಷ್ಟು ಏರಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,05,100 ರೂ ನಷ್ಟಿದೆ. ನಿನ್ನಗೆ ಹೋಲಿಸಿದರೆ ಇಂದು ಒಂದೇ ದಿನ ಬೆಳ್ಳಿಯ ಬೆಲೆಯಲ್ಲಿ 1,253 ರೂ. ಏರಿಕೆಯಾಗಿದೆ.
ಚಿನ್ನದ ಬೆಲೆ ಏರಿಕೆಯು ಅನೇಕ ಆರ್ಥಿಕ, ರಾಜಕೀಯ ಹಾಗೂ ಜಾಗತಿಕ ಅಂಶಗಳಿಂದ ಪ್ರೇರಿತವಾಗಿರುತ್ತದೆ. ಆರ್ಥಿಕ ಅಸ್ಥಿರತೆ, ಹಣದುಬ್ಬರ (ಇನ್‌ಫ್ಲೇಶನ್), ಜಾಗತಿಕ ಆರ್ಥಿಕ ಬಿಕ್ಕಟ್ಟು, ರಾಜಕೀಯ ಅಶಾಂತಿ, ಮಾರುಕಟ್ಟೆಯ ಬೇಡಿಕೆ, ಹಾಗೂ ಹೂಡಿಕೆದಾರರ ಭಾವನಾತ್ಮಕ ನಿರ್ಧಾರಗಳು ಇದರ ಪ್ರಮುಖ ಕಾರಣಗಳಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ (Global market) ಚಿನ್ನದ ಬೇಡಿಕೆ ಹೆಚ್ಚಾದಾಗ, ಅದರ ಬೆಲೆ ಸ್ವಾಭಾವಿಕವಾಗಿ ಏರಿಕೆ ಕಾಣುತ್ತದೆ. ಅಮೆರಿಕದ ಫೆಡೆರಲ್ ರಿಸರ್ವ್ ಅಥವಾ ಭಾರತದ ರಿಸರ್ವ್ ಬ್ಯಾಂಕ್ (American Federal Reserve or Indian Reserve bank) ಬಡ್ಡಿದರಗಳಲ್ಲಿ ಬದಲಾವಣೆ ಮಾಡಿದಾಗ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಚಿನ್ನದತ್ತ ಕೊಂಡೊಯ್ಯುತ್ತಾರೆ. ಇದರಿಂದಾಗಿ ಚಿನ್ನದ ಮೌಲ್ಯ ಹೆಚ್ಚಾಗುತ್ತದೆ.
ಇನ್ನು, ಕಳೆದ ಮೂರ್ನಾಲ್ಕು ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ತೂಕದ ಮಟ್ಟದಲ್ಲಿ ಏರಿಕೆ ಕಂಡಿದ್ದ ಚಿನ್ನ ಇಂದು ಮತ್ತಷ್ಟು ದುಬಾರಿಯಾಗಿದೆ. ಏಪ್ರಿಲ್ ತಿಂಗಳ ಮೊದಲ ದಿನವೇ ಈ ರೀತಿಯ ದರ ಏರಿಕೆ ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದೆ.
ಏಪ್ರಿಲ್ 1, 2025ರಂದು ಚಿನ್ನದ ದರ ಯಾವರೀತಿಯಿದೆ?:
22 ಕ್ಯಾರಟ್ ಚಿನ್ನದ ದರ:
1 ಗ್ರಾಂ – ₹8,510 (₹85 ಹೆಚ್ಚಳ)
10 ಗ್ರಾಂ – ₹85,100 (₹850 ಹೆಚ್ಚಳ)
100 ಗ್ರಾಂ – ₹8,51,000 (₹8,500 ಹೆಚ್ಚಳ)
24 ಕ್ಯಾರಟ್ ಚಿನ್ನದ ದರ:
1 ಗ್ರಾಂ – ₹9,284 (₹93 ಹೆಚ್ಚಳ)
10 ಗ್ರಾಂ – ₹92,840 (₹930 ಹೆಚ್ಚಳ)
100 ಗ್ರಾಂ – ₹9,28,400 (₹9,300 ಹೆಚ್ಚಳ)
18 ಕ್ಯಾರಟ್ ಚಿನ್ನದ ದರ:
1 ಗ್ರಾಂ – ₹6,963 (₹69 ಹೆಚ್ಚಳ)
10 ಗ್ರಾಂ – ₹69,630 (₹690 ಹೆಚ್ಚಳ)
100 ಗ್ರಾಂ – ₹6,96,300 (₹6,900 ಹೆಚ್ಚಳ)
ಬೆಳ್ಳಿ ಬೆಲೆ ಕೂಡಾ ಏರಿಕೆ!
ಚಿನ್ನದಂತೆ ಬೆಳ್ಳಿಯ ಬೆಲೆಯೂ ಏರಿಕೆಯಾಗಿದೆ. ಪ್ರತಿ 1 ಗ್ರಾಂ ಬೆಳ್ಳಿಯ ಬೆಲೆ ₹105 ಆಗಿದ್ದು, ಇದು ₹1 ಹೆಚ್ಚಳವಾಗಿದೆ. 1 ಕೆ.ಜಿ ಬೆಳ್ಳಿ ಬೆಲೆಯು ₹1,05,000 ಆಗಿದ್ದು, ನಿನ್ನೆಗೆ ಹೋಲಿಸಿದರೆ ₹1,000 ಹೆಚ್ಚಳವಾಗಿದೆ.
ಪ್ರಮುಖ ನಗರಗಳಲ್ಲಿ 1 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು:
22K – ₹8,510,
24K – ₹9,284,
18K – ₹6,963
ಚೆನ್ನೈ:
22K – ₹8,510,
24K – ₹9,284,
18K – ₹7,020
ಮುಂಬೈ:
22K – ₹8,510,
24K – ₹9,284,
18K -₹6,963
ದೆಹಲಿ:
22K – ₹8,525,
24K – ₹9,299,
18K -₹6,975
ಕೊಲ್ಕತ್ತಾ:
22K – ₹8,510,
24K – ₹9,284,
18K -₹6,963
ಹೈದರಾಬಾದ್:
22K – ₹8,510,
24K – ₹9,284,
18K -₹6,963
ಕೇರಳ:
22K – ₹8,510,
24K – ₹9,284,
18K -₹6,963
ಪುಣೆ:
22K – ₹8,510,
24K – ₹9,284,
18K -₹6,963
ಬರೋಡಾ:
22K – ₹8,515,
24K – ₹9,289,
18K -₹6,967
ಅಹಮದಾಬಾದ್:
22K – ₹8,515,
24K – ₹9,289,
18K -₹6,967
ಚಿನ್ನದ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನತೆಗೆ ಆರ್ಥಿಕ ಹೊರೆ (Economic problem) ಹೆಚ್ಚಾಗಿದೆ. ಇದರಿಂದಾಗಿ ಚಿನ್ನದ ಹೂಡಿಕೆ ಮಾಡಲು ಬಯಸುವವರೂ ಮತ್ತಷ್ಟು ಯೋಚನೆ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಬಹುದಾ? ಅಥವಾ ಇಳಿಕೆಯಾಗುವ ನಿರೀಕ್ಷೆ ಇದೆಯಾ? ಈ ಬೆಳವಣಿಗೆಗಳಿಗೆ ಜಾಗತಿಕ ಆರ್ಥಿಕತೆಯ (Global economic) ಪಾತ್ರ ಮಹತ್ವದ್ದಾಗಿದೆ. ಚಿನ್ನದ ಮೌಲ್ಯ ನಿರ್ಧಾರವಾಗುವುದಕ್ಕೆ ಹಲವು ಅಂಶಗಳಾದ ರಾಜಕೀಯ, ಆರ್ಥಿಕ, ವಾಣಿಜ್ಯ ಮತ್ತು ಹೂಡಿಕೆದಾರರ ತೀರ್ಮಾನಗಳು ಪ್ರಮುಖ ಪಾತ್ರ ವಹಿಸುತ್ತವೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.